ಹಾಸನ : ಕೇಂದ್ರ ಸರಕಾರವು ಕಳೆದ 5 ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಒಟ್ಟು ರೂ. 21877 ಕೋಟಿಗಳಲ್ಲಿ ಇದುವರೆಗೂ ಕೇವಲ ₹7247 ಕೋಟಿ ರೂಪಾಯಿಗಳನ್ನು ಮಾತ್ರ ನೀಡಿ ಇನ್ನೂ ₹14630 ಕೋಟಿ ಬಾಕಿ ಉಳಿಸಿಕೊಂಡು ಕರ್ನಾಟಕ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ನೀಡದೆ ಜನರಿಗೆ ಸ್ಥಳೀಯವಾಗಿ ಅಲ್ಪಸ್ವಲ್ಪ ಇದ್ದ ಸೇವೆಯನ್ನು ಕಿತ್ತುಕೊಳ್ಳುತ್ತಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಆರೋಪಿಸಿದ್ದಾರೆ.ಪ್ರತಿಭಟನಾ
ಸಂಸದರ ಕಚೇರಿ ಮುಂದೆ ನಡೆದ ಮೂರು ದಿನಗಳ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ರಾಜ್ಯಗಳಿಂದ ಸಂಗ್ರಹಿಸುವ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳಲ್ಲಿ ರಾಜ್ಯಕ್ಕೆ ನೀಡಬೇಕಾದ 15ನೇ ಹಣಕಾಸು ಆಯೋಗವು ನಿಗದಿ ಮಾಡಿದ ಪಾಲಿನಲ್ಲಿ ಈ ಹಿಂದೆ 14ನೇ ಹಣಕಾಸಿನ ಆಯೋಗವು ಶೇ. 4.74% ರಷ್ಟೂ ಪಾಲು ಸಂದಾಯವಾಗಬೇಕು ಎಂಬುದನ್ನು 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ. 3.64% ಕ್ಕೆ ಇಳಿಸಿತು. ಹಣಕಾಸು ಆಯೋಗವು ಕಡಿಮೆ ಮಾಡುವುದಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನೀತಿಯಿಂದ ಕರ್ನಾಟಕ ರಾಜ್ಯಕ್ಕೆ ರೂ. 36,945 ಕೋಟಿ ಕೊಡದೆ ರಾಜ್ಯದ ಜನತೆಯನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.ಪ್ರತಿಭಟನಾ
ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿ ನೌಕರರಿಗೆ ದಿನಾಂಕ 28/07/2022ರಲ್ಲಿ ನಿಗಧಿಪಡಿಸಿದ ಕನಿಷ್ಠ ವೇತನವನ್ನು ದಿನಾಂಕ 26/09/2023 ರಂದು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದು ಮಾಡಿ, ರಪ್ತಕೋಶ್‌ಬೆಟ್ ಕೇಸಿನಲ್ಲಿ ಸುಪ್ರಿಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಕನಿಷ್ಠ ವೇತನ ನಿಗಧಿಪಡಿಸಬೇಕೆಂದು ನ್ಯಾಯಾಲಯ ಆದೇಶಿಸಿತು. ಸಂಘವು ನ್ಯಾಯಾಲಯದ ಆದೇಶವನ್ನು ಜಾರಿ ಮಾಡುವಂತೆ ಹೋರಾಟ ರೂಪಿಸಿದ ಮೇಲೆ ಕಾರ್ಮಿಕ ಸಚಿವರು ಮತ್ತು ಅಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಆದರೂ ಸರಕಾರ ಮೀನಾ ಮೇಷ ಎಣಿಸುತ್ತಿದೆ ತಕ್ಷಣವೇ ಸರ್ಕಾರ ಕನಿಷ್ಟ ವೇತನ ರೂ. 31,000 ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದ ಗ್ರಾಮ ಪಂಚಾಯಿತಿಂಗಳಲ್ಲಿ ಕರ ವಸೂಲಿಗಾರ, ಗುಮಾಸ್ತಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಜವಾನ, ನೀರುಗಂಟಿ, ಸ್ವಚ್ಛತಾಗಾರರು. ಇತ್ಯಾದಿ ನೌಕರರು ಗ್ರಾಮ ಪಂಚಾಯಿತಿಗಳು ಆರಂಭವಾದ ಕಾಲದಿಂದಲೂ ಕನಿಷ್ಠ ಕೂಲಿ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯವಿಲ್ಲದೆ ತಮ್ಮ ಜೀವಮಾನವೇ ದುಡಿದು ನಿವೃತ್ತಿಯಾದಾಗ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದಕ್ಕೆ ಬಹಳ ದುಃಸ್ಪರವಾಗಿರುವುದರಿಂದ ಸರ್ಕಾರವೇ ಪಿಂಚಣಿ ನೀಡಲು ಒಂದು ಆಯೋಗ ರಚನೆ ಮಾಡಿತ್ತು. ಆ ಸಮಿತಿಯು ವರದಿಯನ್ನು ಇಲಾಖೆಗೆ ನೀಡಿದೆ. ಆ ವರದಿ ಮೇಲೆ ಸಂಘದ ಜೊತೆ ಚರ್ಚೆ ನಡೆದಿದ್ದರು ಸಹ ಜಾರಿಯಾಗಿಲ್ಲ ತಕ್ಷಣ ಕನಿಷ್ಟ ರೂ.6000 ಪಿಂಚಣಿ ಜಾರಿ ಮಾಡಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿದರು ಪ್ರತಿಭಟನಾ
ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ನೇಮಕಗೊಂಡು ಕೆಲಸ ಮಾಡುವ ಬಿಲ್‌ಕಲೆಕ್ಟರ್, ಕ್ಲರ್ಕ್, ಡಿಇಒ, ವಾಟರ್‌ಮನ್, ಅಟೆಂಡರ್ ಮತ್ತಿತರೆ ನೌಕರರು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಅಡಿಯಲ್ಲಿ ಸಂಘಟಿತರಾಗಿ ನಿರಂತರವಾಗಿ ಹಲವು ವರ್ಷಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರ ಗ್ರಾ.ಪಂ. ನೌಕರರಿಗೆ ಕನಿಷ್ಟ ವೇತನ, ಅನುಮೋದನೆ, ಗ್ರಾಚ್ಯುಟಿ, ರಜಾ ಸೌಲಭ್ಯ, ಸೇವಾ ಮುಂಬಡ್ತಿ ಹಾಗೂ ಮತ್ತಿತರೆ ಸೇವಾ ಸೌಲಭ್ಯಗಳನ್ನು ನೀಡುವ ಆದೇಶಗಳನ್ನು ಹೊರಡಿಸಿದೆ. ಆದರೆ ಸರ್ಕಾರದ ಈ ಆದೇಶಗಳು ಹಾಸನ ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು. ಪ್ರತಿಭಟನಾ
ಇದನ್ನು ಓದಿ : ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ, ಟಿಎಂಸಿ ಏಕಾಂಗಿಯಾಗಿ ಸ್ಪರ್ಧೆ – ಮಮತಾ ಬ್ಯಾನರ್ಜಿ
2017 ನವೆಂಬರ್ ತಿಂಗಳಿಗೂ ಮೊದಲು ಗ್ರಾ.ಪಂ.ಗಳಲ್ಲಿ ನೇಮಕಗೊಂಡು ಕೆಲಸ ಮಾಡುತ್ತಿರುವ ವಿದ್ಯಾರ್ಹತೆ ಹೊಂದಿರುವ ಮತ್ತು ವಿದ್ಯಾರ್ಹತೆ ಹೊಂದಿರದ ನೌಕರರಿಗೆ ನಿಯಮಾನುಸಾರ ಏಕಕಾಲಕ್ಕೆ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ನೀಡುವಂತೆ ಸರ್ಕಾರದ ಆದೇಶವಿದೆ. ಆದರೆ ಜಿಲ್ಲೆಯ ಗ್ರಾ.ಪಂ. ನೌಕರರ ನೇಮಕಾತಿಗಳಿಗೆ ನಿಯಮಾನುಸಾರ ಅನುಮೋದನೆ ನೀಡಲು ಸರ್ಕಾರದ ಈ ಆದೇಶ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕೆಲವು ಗ್ರಾ.ಪಂ.ಗಳಿಂದ ಇದುವರೆಗೂ ನೌಕರರ ಅನುಮೋದನೆಗೆ ನಿಯಮಾನುಸಾರ ಪ್ರಸ್ತಾವನೆಗಳನ್ನೇ ಕಳುಹಿಸಿಲ್ಲ. ಬಹುತೇಕ ಅನುಮೋದನೆ ಪ್ರಸ್ತಾವನೆಗಳು ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿಯೇ ಬಾಕಿ ಉಳಿದಿವೆ. ಬಡ ನೌಕರರ ನೇಮಕಾತಿಗೆ ಅನುಮೋದನೆ ನೀಡಲು ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಗ್ರಾ.ಪಂ. ಮಟ್ಟದಿಂದ ತಾ.ಪಂ. ಮತ್ತು ಜಿ.ಪಂ. ಮಟ್ಟದವರೆಗೂ ಕೇಳಿ ಬರುತ್ತಿವೆ. ಹಣ ನೀಡದ ನೌಕರರಿಗೆ ಸಮರ್ಪಕ ದಾಖಲೆಗಳನ್ನು ನೀಡದೆ ಮತ್ತು ದಾಖಲೆಗಳ ಕಾರಣ ನೀಡಿ ಅನುಮೋದನೆ ಪ್ರಸ್ತಾವನೆಗಳನ್ನು ಪರಿಗಣಿಸದೆ ನೌಕರರನ್ನು ಸತಾಯಿಸಲಾಗುತ್ತಿದೆ. ನಿರ್ಧಿಷ್ಟ ಕಾಲಮಿತಿಯೊಳಗೆ ಎಲ್ಲಾ ನೌಕರರಿಗೆ ಅನುಮೋದನೆ ನೀಡುವಂತೆ ಸರ್ಕಾರದ ಆದೇಶವಿದ್ದರೂ ನೌಕರರಿಗೆ ಅನುಮೋದನೆ ಸಿಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ಸರ್ಕಾರದ ಆದೇಶದಂತೆ 2017 ನವೆಂಬರ್ ತಿಂಗಳಿಗೂ ಮೊದಲು ನೇಮಕಗೊಂಡಿರುವ ಎಲ್ಲಾ ಗ್ರಾ.ಪಂ. ನೌಕರರಿಗೆ ಯಾವುದೇ ರೀತಿಯ ತಾರತಮ್ಯ ಮತ್ತು ವಿಳಂಬ ಮಾಡದೆ ಏಕಕಾಲದಲ್ಲಿ ನಿಯಮಾನುಸಾರ ಅನುಮೋದನೆ ನೀಡಿ ಘೋಷಣೆ ಮಾಡಬೇಕು. ಜೊತೆಗೆ ಅನುಕಂಪದ ಆದಾರದಲ್ಲಿ ನೇಮಕಗೊಂಡಿರುವವರಿಗೆ ಯಾವುದೇ ತಕರಾರು ಮಾಡದೆ ನೀಡಬೇಕು. ಹಾಗೂ ನೌಕರರ ಅನುಮೋದನೆ ಪ್ರಸ್ತಾವನೆಗಳನ್ನು ಸಮರ್ಪಕವಾಗಿ ಒದಗಿಸದೆ ಬಾಕಿ ಉಳಿಸಿಕೊಂಡಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಮನವಿ ಮಾಡಿದೆ. ಪ್ರತಿಭಟನಾ
ಪ್ರತಿಭಟನೆಯಲ್ಲಿ ಗ್ರಾ.ಪಂ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹೊನ್ನೇಗೌಡ ಮುಖಂಡರಾದ, ಕುಮಾರಸ್ವಾಮಿ, ಎಂ.ಬಿ. ಪುಷ್ಪ, ಕರಿಯಪ್ಪ, ಅಶೋಕ ಅತ್ನಿ, ನಂದೀಶ್ ಅರವಿಂದ್, ಸೌಮ್ಯ, ಜಿ.ಪಿ.ಸತ್ಯನಾರಾಯಣ, ಎಂ.ಜಿ. ಪೃಥ್ವಿ ಮತ್ತಿತರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟ
ನಾ
ಇದನ್ನು ನೋಡಿ :ಶ್ರಮಿಕರ ಬದುಕು ಉಳಿಸಿ – ಮೋದಿ ಸರ್ಕಾರದ ವಿರುದ್ಧ ಬೀದಿಗಿಳಿದ ಕಾರ್ಮಿಕರು Janashakthi Media