ಮಂಗಳೂರು: ಕರ್ನಾಟಕ ರಾಜ್ಯದ ಹೆಸರಾಂತ ಹಾಗೂ ರಾಜ್ಯದ ಅತಿ ದೊಡ್ಡ ಬಂದರು ಉಡುಪಿಯ ಕ್ರಷ್ಣ ನಗರಿಯಲ್ಲಿರುವ ಮಲ್ಪೆ ಬಂದರು ಈ ಬಂದರಿಗೆ ಹೊರ ರಾಜ್ಯದಿಂದ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಯಿಂದ ಮತ್ತು ನಮ್ಮ ಕರಾವಳಿ ಭಾಗದ ಸಾವಿರಾರು ಕಾರ್ಮಿಕರು ಮೀನುಗಾರಿಕೆಯ ಬೇರೆ ಬೇರೆ ಕೆಲಸಗಳಲ್ಲಿ (ಬೋಟ್ ಕಲಾಸಿ, ಬೊಟ್ ನಲ್ಲಿ ತಂದ ಮೀನು ಕಾಲಿಮಾಡುವುದು,ಲಾರಿಗೆ ಮೀನು ಲೊಡ್,ಮಂಜುಗಡ್ಡೆ ಲೊಡ್ , ಇನ್ನಿತರ ಹಲವು ಮೀನುಗಾರಿಕೆ ಕೆಲಸಗಳಲ್ಲಿ ) ತೊಡಗಿಸಿ ಕೊಂಡಿದ್ದಾರೆ.
ಹಲವಾರು ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಕಾರ್ಮಿಕರ ಮೇಲೆ ದಾಳಿ ,ದಬ್ಬಾಳಿಕೆ, ಮಾರಣಾಂತಿಕ ಹಲ್ಲೆ ಗಳು ಮಹಿಳೆಯರ ಮೇಲೆ ಹಲ್ಲೆ ಅತ್ಯಾಚಾರ ನಡೆಯುತ್ತಿದ್ದು ಸಾಕ್ಷಿಗಳು ಇಲ್ಲದೆ,ದೂರು ದಾಖಲಿಸಲು ಇಲ್ಲದವರು ಇರುವುದರಿಂದ ರಾಜಕಾರಣಿ ,ಪ್ರಬಲ ವ್ಯಕ್ತಿಗಳ ,ಹಾಗೂ ಪ್ರಬಲ ಬೋಟ್ ಮಾಲಿಕರ ಒತ್ತಡ ದಿಂದಾಗಿ ಕೇಸು ದಾಖಲಾಗದೆ ಮುಚ್ಚಿ ಹಾಕುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದ ರಾಜಕೀಯ ಶಕ್ತಿಯಿಂದ ಮಲ್ಪೆ ಬಂದರಿನಲ್ಲಿ ಹೊರ ಜಿಲ್ಲೆಯ, ರಾಜ್ಯದ ಕಾರ್ಮಿಕರು ಮತ್ತು ಮಹಿಳೆಯರ ಮೇಲೆ ಹಲ್ಲೆ ಗಳು ಹೆಚ್ಚಾಗುತ್ತಿದೆ ಸಾವನ್ನಪ್ಪಿದರೆ ಯಾವ ರಾಜಕೀಯ ವ್ಯಕ್ತಿಗಳು, ಪೋಲಿಸ್ ಇಲಾಖೆ ಅಧಿಕಾರಿಗಳು ಮಾತಾನಾಡುತ್ತಿಲ್ಲ ಇದರಿಂದ ಕಾನೂನು ಕೈಗೆತ್ತಿಕೊಳ್ಳುವ ಗೂಂಡಾಗಳಿಗೆ ಯಾವ ಭಯವೂ ಇಲ್ಲದಂತಾಗಿ ಬಡಪಾಯಿ ಶ್ರಮಿಕರ ಮೇಲೆ ಮನಸೋಇಚ್ಛೆ ಹೊಡೆದು ಬಡಿದು ಬೆದರಿಕೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಇರಾನ್ ಮೇಲೆ ಯು.ಎಸ್-ಇಸ್ರೇಲಿ ಯುದ್ಧದ ವಿರುದ್ಧ ಜಗದಗಲಕ್ಕೂ ಭಾರೀ ಪ್ರದರ್ಶನಗಳು
ಇದೇ ಬಂದರಿನಲ್ಲಿ ಮೀನು ಕದ್ದಳು ಎಂಬ ಆರೋಪದಲ್ಲಿ ಲಂಬಾಣಿ ದಲಿತ ಮಹಿಳೆ ಮೇಲೆ ಮರಕ್ಕೆ ಕಟ್ಟಿ ಅನಾಗರಿಕ ವರ್ತನೆ ತೋರಿ ದೈಹಿಕ ಹಲ್ಲೆ ನಡೆಸಲಾಗಿತ್ತು.
ಇದು ಉಡುಪಿಯ ವಿದ್ಯಾವಂತ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿತ್ತು ಇಂತಹ ಸಂದರ್ಭದಲ್ಲಿಯೂ ಶಾಸಕರು ಸಂಕಷ್ಟಕ್ಕೋಳಗಾದವರ ಪರ ನಿಲ್ಲದೇ ಅನಾಗರಿಕ ವರ್ತನೆ ತೋರಿದವರಿಗೆ ಹಲ್ಲೆ ನಡೆಸಿದವರ ಪರ ನಿಂತು ಅನ್ಯಾಯವೆಸಗಿದರು.
ಇತ್ತೀಚೆಗೆ ಇದೇ ಬಂದರಿನಲ್ಲಿ ಮೀನು ಏಲಂ ಮಾಡುವ ಅಯ್ಯೂಬ್ ಶೇಖ್ ಎಂಬ ಅಲ್ಪ ಸಂಖ್ಯಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು ಅಲ್ಪ ಸಂಖ್ಯಾತ ಎಂಬ ಕಾರಣಕ್ಕೆ ಬಂದರಿನಲ್ಲಿದ್ದ ಎಲ್ಲರೂ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು ಎಂಬುವುದು ಆತಂಕಕಾರಿ ವಿಚಾರ ಹಲ್ಲೆ ನಡೆಸಿದ ಮಿಥುನ್ ಕರ್ಕೇರ ಮೇಲೆ ಪೋಲಿಸ್ ಇಲಾಖೆಗೆ ಸಂಬಂಧಪಟ್ಟ ಕುಟುಂಬದವರು ದೂರು ನೀಡಿದ ನಂತರವೇ ಕ್ರಮ ವಹಿಸಲಾಗಿತ್ತು. ಆದರೆ ಬಹುತೇಕ ಶ್ರಮಿಕರು ಬಂದರಿನಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಹಲ್ಲೆಗೆ ಒಳಗಾಗಿ ಬಲಾಡ್ಯರ ಮುಂದೆ ಮಾತನಾಡಲಾಗದೇ ಎದುರಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದರ ವಿರುದ್ಧ ಮಾರ್ಚ್ 4ರಂದು ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಇಂದು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದು ಕೊಂಡು ಶಿಕ್ಷೆಗ ವಿಧಿಸಬೇಕು, ಹಲ್ಲೆ ಒಳಗಾದ ವ್ಯಕ್ತಿಗೆ ಸೂಕ್ತ ಪರಿಹಾರ ನೀಡಬೇಕು, ಮಲ್ಪೆ ಧಕ್ಕೆ ಯಲ್ಲಿ ಪೋಲಿಸ್ ಔಟ್ ಪೊಸ್ಟ್ ಕೂಡಲೇ ನಿರ್ಮಾಣ ಮಾಡಬೇಕು, ಹೊರ ರಾಜ್ಯದ ,ಜಿಲ್ಲೆಯ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು.
ಮುಂದಿನ ದಿನಗಳಲ್ಲಿ ಮಲ್ಪೆ ಬಂದರಿನಲ್ಲಿ ಇಂತ ಪ್ರಕರಣಗಳು ನಡೆಯಬಾರದು,ಪೋಲಿಸ್ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸ ಬೇಕೆಂದು ಒತ್ತಾಯಿಸಿ ಇಂದು ಉಡುಪಿ ಜಿಲ್ಲಾ ಮೀನುಗಾರ ಮತ್ತು ಮೀನು ಕಾರ್ಮಿಕರ ಸಂಘ (ರಿ)ಸಿಐಟಿಯು, ದಲಿತ ಸಂಘರ್ಷ ಸಮಿತಿ, ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ,ಸಹಬಾಳ್ವೆ ಉಡುಪಿ, ಇನ್ನಿತರ ಸಹಭಾಗಿತ್ವ ಸಂಘಟನೆ ಸೇರಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿ ಮನವಿ ನೀಡಲಾಯಿತು.
ಇದನ್ನೂ ನೋಡಿ: ಭೂ ಹಕ್ಕಿನ ಹೋರಾಟದ ಧ್ವನಿ | ಮರಕುಂಬಿ ಹೋರಾಟದ ರೂವಾರಿ ನಿತ್ಯಾನಂದ ಸ್ವಾಮಿ Janashakthi Media
