ನಮ್ಮ ಕೆಲವು ಬೇಡಿಕೆಯನ್ನು ಈಡೇರಿಸಿ : ಖಾಸಗಿ ಬಸ್‌ ಮಾಲೀಕರ ಸಂಘ

ಬೆಂಗಳೂರು: ಎರಡನೇ ದಿನಕ್ಕೆ ಮುಂದುವರೆದಿರುವ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್​ ಸೇವೆ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜನರಿಗೆ ತೊಂದರೆ ಆಗದಂತೆ ಸರ್ಕಾರ ಖಾಸಗಿ ಬಸ್​ಗಳನ್ನು ಓಡಿಸಲು ಮುಂದಾಗಿದೆ. ಆದರೆ, ನಮ್ಮದು  ಕೆಲವು ಸಮಸ್ಯೆಗಳಿವೆ ಎಂದು ಸರ್ಕಾರದ ವಿರುದ್ಧ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ಹೊರಹಾಕಿವೆ.

ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೊಮ್ಮೆ ನೆನ್ನೆಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಇದರಿಂದಾಗಿ ಸರಕಾರಿ ಬಸ್​ ಸೇವೆಗಳು ಸ್ಥಗಿತಗೊಂಡಿದೆ. ಖಾಸಗಿ ಬಸ್ ಮಾಲೀಕರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಕೆಲವನ್ನು ಈಡೇರಿಸುವುದಾಗಿಯೂ ಸರ್ಕಾರ ಭರವಸೆ ನೀಡಿದೆ.

ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ : ಕ್ವಾಟ್ರಸ್‌ ಖಾಲಿ ಮಾಡುವಂತೆ ನೋಟಿಸ್

ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಟೂರಿಸ್ಟ್ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಬೈರವ ಸಿದ್ದರಾಮಯ್ಯ ಅವರು, ಇನ್ಶುರೆನ್ಸ್ ಹಾಗೂ ಡಾಕ್ಯುಮೆಂಟ್ ಸರಿ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿ ಎಂದು ಸರ್ಕಾರ ಹೇಳಿದೆ. ಆದರೆ ಟ್ರಾಫಿಕ್ ಪೊಲೀಸರು ನಮ್ಮ ಮೇಲೆ ಫೈನ್ ಹಾಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಈ ಕುರಿತು ಪೊಲೀಸ್ ಇಲಾಖೆಯೊಂದಿಗೆ ಮಾತನಾಡಲು ಸರಕಾರವನ್ನು ಆಗ್ರಹಿಸಿದರು.

ರಾಜ್ಯ ಖಾಸಗಿ ಬಸ್ ಮಾಲೀಕರ ಕೂಟದ ಅಧ್ಯಕ್ಷ ನಟರಾಜ ಶರ್ಮಾ ಮಾತನಾಡಿ, ನಾವು ಇನ್ಶುರೆನ್ಸ್ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿಲ್ಲ. ನಮಗೆ ಒಂದು ತಿಂಗಳ ತೆರಿಗೆ ಮನ್ನಾ ಮಾಡಿ ಅಂತ ಕೇಳಿಕೊಂಡಿದ್ದೇವೆ. ಅದರ ಬಗ್ಗೆ ಮಾತುಕತೆ ನಡೆಸೋಣ ಎಂದು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಂತ ಸಾರಿಗೆ ಇಲಾಖೆ ಅಧಿಕಾರಿಗಳೂ ಮನವಿ ಮಾಡಿದ್ದರು. ಈ ವೇಳೆ ಖಾಸಗಿ ಬಸ್ ಮಾಲೀಕರು ಸಭೆಯನ್ನು ಸೇರಿದ್ದೇವು. ತೆರಿಗೆ ವಿನಾಯಿತಿ ಬಗ್ಗೆ ಮನವಿ ಮಾಡುವಂತೆ ನಿರ್ಧಾರ ಮಾಡಲಾಗಿತ್ತು. ಯಾರು ಇನ್ಸುರೆನ್ಸ್ ಇಲ್ಲದ ಗಾಡಿ ತೆಗೆಯೋದಿಲ್ಲ.  ಪ್ರಯಾಣಿಕರ ಜೀವ ನಮ್ಮ ಜವಾಬ್ದಾರಿ ಎಂದು ಹೇಳಿದರು.

ಇದನ್ನು ಓದಿ : ಸಾರಿಗೆ ಮುಷ್ಕರ : ನಿಧಾನಕ್ಕೆ ಸಂಚಾರ ಆರಂಭಿಸಿದ ಸಾರ್ವಜನಿಕ ಬಸ್

ಸರ್ಕಾರ ನಮ್ಮ ಮೂಗಿನ ಮೇಲೆ ಬೆಣ್ಣೆ ಇಟ್ಟಿದೆ. ಹೀಗಾಗಿ ನಾವು ಸರ್ಕಾರವನ್ನು ನೆಚ್ಚಿಕೊಂಡು ಎಲ್ಲಾ ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸಿಲ್ಲ. 2700 ಬಸ್ ಗಳನ್ನು ರಸ್ತೆಗೆ ಇಳಿಸಲು ಸಿದ್ಧರಿದ್ದೇವೆ ಎಂದು ನಟರಾಜ್ ಶರ್ಮಾ ತಿಳಿಸಿದರು.

ಖಾಸಗಿ ಬಸ್‌ ಸೇವೆಗಳ ಜೊತೆಗೆ ಸರ್ಕಾರ ಹೆಚ್ಚುವರಿ ರೈಲುಗಳನ್ನು ಸಹ ನೆನ್ನೆಯಿಂದ ಆರಂಭಿಸಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರವನ್ನು ಹೆಚ್ಚಳ ಮಾಡಿದೆ. ಆದಾಗ್ಯೂ ಸಾರಿಗೆ ಮುಷ್ಕರ ಹೀಗೆ ಮುಂದುವರೆದರೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತಯ ಉಂಟಾಗಬಹುದು.

Donate Janashakthi Media

Leave a Reply

Your email address will not be published. Required fields are marked *