ಜನತೆಗೆ ಬೆಲೆ ಏರಿಕೆಯ ಬರೆ – ಸಿಪಿಐ(ಎಂ) ಆರೋಪ

ಬೆಂಗಳೂರು : ಕೇಂದ್ರ ಸರಕಾರವು ಅಡುಗೆ ಅನಿಲದ ಬೆಲೆಯನ್ನು ತೀವ್ರವಾಗಿ ಹೆಚ್ಚಳಗೊಳಿಸಿ ಜನತೆಯ ಮೇಲೆ ಬೆಲೆಯೇರಿಕೆಯ ಬರೆ ಎಳೆಯಲಾಗಿದೆ. ರೂ.50 ಪ್ರತಿ ಸಿಲಿಂಡರಿಗೆ ಹೆಚ್ಚಳಗೊಳಿಸಿರುವುದಕ್ಕೆ ಸಿಪಿಐ(ಎಂ) ರಾಜ್ಯ ಸಮಿತಿ ಖಂಡಿಸಿದೆ.  ಈ ಬೆಲೆಯೇರಿಕೆಯು ಸಾಮಾನ್ಯ ಮತ್ತು ರಿಯಾಯಿತಿದಾರರಿಗೂ ಇಬ್ಬರಿಗೂ ಅನ್ವಯಿಸಲಾಗಿದೆ. ಇದು ಜನರ ಮೇಲೆ ರೂ.7000 ಕೋಟಿ ಹೊರೆ ಹೊರೆಸಿದೆ. ಪೆಟ್ರೋಲ್ ಮತ್ತು ಡೀಸೇಲ್ ಎರಡರ ಮೇಲೂ ರೂ.32000 ಕೋಟಿಯಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಆರೋಪಿಸಿದೆ. ಬೆಲೆ ಏರಿಕೆ

ಈ ಕುರಿತು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ನೀಲಾ ಪ್ರಕಟಣೆ ನೀಡಿದ್ದು, ಹಣದುಬ್ಬರದಿಂದ ಈಗಾಗಲೇ ಜನರ ಜೀವನವು ಕಷ್ಟದಲ್ಲಿದೆ. ಈ ಬೆಲೆಯೇರಿಕೆಯಿಂದ ಜನತೆಯ ಬದುಕು ಮತ್ತಷ್ಟು ಕಷ್ಟಕ್ಕೆ ಈಡಾಗಲಿದೆ. ತೈಲ ಮತ್ತು ಅನಿಲದ ಅಂತರರಾಷ್ರ್ಟೀಯ ಬೆಲೆ ಕುಸಿತದ ಲಾಭವನ್ನು ಜನರಿಗೆ ಮಾಡುವ ಬದಲು ಸರಕಾರವು ಆ ಲಾಭವನ್ನು ತಾನು ಪಡೆದು ಜನರಿಗೆ ಇನ್ನಷ್ಟು ಹೆಚ್ಚುವರಿ ಬೆಲೆಯೇರಿಕೆಯ ಹೊರೆಯನ್ನು ಹಾಕುತ್ತಿದೆ. ವಿಶೇಷ ಅಬಕಾರಿ ಸುಂಕದ ಹೆಸರಿನಲ್ಲಿ ಒಕ್ಕೂಟದ ತತ್ವಗಳನ್ನು ಗಾಳಿಗೆ ತೂರಿ ತನ್ನ ಲಾಭವನ್ನು ಹೆಚ್ಚು ಮಾಡಿಕೊಳ್ಳುವ ಕೇಂದ್ರ ಸರಕಾರದು ಧೋರಣೆಯು ಜನವಿರೋಧಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರ ಚುನಾವಣೆಗಳಲ್ಲಿ ಇವಿಎಂ ದುರ್ಬಳಕೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಬೆಲೆ ಏರಿಕೆ

ರಾಜ್ಯ ಸರಕಾರವೂ ಹಾಲಿನ ಬೆಲೆಯನ್ನು ಏರಿಕೆ ಮಾಡಿದೆ. ಹಾಲು, ನೀರು, ತ್ಯಾಜ್ಯ ವಿಲೇವಾರಿ ಮತ್ತಿರ ನಾಗರೀಕ ಸೌಲಭ್ಯಗಳ ತೆರಿಗೆಯನ್ನು ಹೆಚ್ಚಳ ಮಾಡಿದೆ. ಈಗಾಗಲೆ ಮೆಟ್ರೊ ದರ ಹೆಚ್ಚಳ ಮಾಡಿದೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ನವ ಉದಾರವಾದಿ ನೀತಿಗಳನ್ನು ವೇಗವಾಗಿ ಜಾರಿ ಮಾಡುತ್ತಿವೆ. ಇದು ಜನತೆಯನ್ನು ಆರ್ಥಿಕವಾಗಿ ಸುಲಿಗೆ ಮಾಡುವ ಜನವಿರೋಧಿ ಕ್ರಮವಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಪರಸ್ಪರ ಬೆಲೆಯೇರಿಕೆಯ ಬಗ್ಗೆ ಕೆಸರೆರಚಾಟದಲ್ಲಿ ತಲ್ಲೀನವಾಗಿವೆ. ಮತ್ತು ಜನತೆಯ ಹಿತವನ್ನು ಮೂಲೆಗುಂಪು ಮಾಡುತ್ತಿವೆ. ಸಿಪಿಐಎಂ ಪಕ್ಷವು ಎರಡೂ ಪಕ್ಷಗಳ ಈ ಜನವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದು,  ಬೆಲೆ ಏರಿಕೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ : ಬ್ಯಾಟಿಂಗ್‌ ಪಿಚ್‌ನಲ್ಲಿ RR ಸೋತಿದ್ದ್ಯಾಕೆ? DC ಓಟಕ್ಕೆ ಬ್ರೇಕ್‌ ಹಾಕುತ್ತಾ RCB! #ipl2025 #RCB #DC ಬೆಲೆ ಏರಿಕೆ

Donate Janashakthi Media

Leave a Reply

Your email address will not be published. Required fields are marked *