ಮೈಕ್ರೋ ಫೈನಾನ್ಸ್ ಕಿರುಕುಳ: 3 ವಿಧೇಯಕಗಳ ಮಂಡನೆ – ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಗಳಿಂದ ಅನೇಕ ಜನರು ಆತ್ಮಹತ್ಯೆ ಶರಣಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ, ನೆನ್ನೆ ಮಂಗಳವಾರಸಂಸು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಹಾವಳಿ ತಡೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಗೆ ಕಾನೂನು ರೂಪ ನೀಡಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಮೂರು ವಿಧೇಯಕಗಳನ್ನು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದರು.

ಸಾಲ ಪಡೆದವರ ವಿರುದ್ಧ ಲೇವಾದೇವಿದಾರ ಅಥವಾ ಲೇವಾದೇವಿ ಸಂಸ್ಥೆ ಬಲವಂತದ ಕ್ರಮ ಕೈಗೊಳ್ಳುವುದನ್ನು ತಡೆಯುವ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ 2025, ಜತೆಗೆ ದುಬಾರಿ ಬಡ್ಡಿ ವಿಧಿಸುವುದನ್ನು ತಡೆಯುವುದು ಹಾಗೂ ಗಿರವಿದಾರರಿಂದ ರಕ್ಷಿಸುವ ಕರ್ನಾಟಕ ಗಿರವಿದಾರರ (ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ವಿಧೇಯಕ 2025 ಅನ್ನು ಮಂಡಿಸಲಾಯಿತು.

ಇದನ್ನೂ ಓದಿ: ‘ಮಾಣಿಕ್ಯ’ ಸಿನಿಮಾ ನಟಿ ರನ್ಯಾ ರಾವ್ ಫ್ಲಾಟ್‌ ಮೇಲೆ ದಾಳಿ – ಕೋಟಿ ಕೋಟಿ ಮೌಲ್ಯದ ಚಿನ್ನ ವಶ

ಸಾಲ ವಸೂಲಾತಿ ವಿಚಾರದಲ್ಲಿ ಕಿರುಕುಳ ನೀಡುವವರಿಗೆ ಗರಿಷ್ಠ 10 ವರ್ಷಗಳ ಗರಿಷ್ಠ ಜೈಲು ಶಿಕ್ಷೆ ಹಾಗೂ 5 ಲಕ್ಷ ರು.ವರೆಗೆ ದಂಡ ವಿಧಿಸುವ ಕುರಿತ ತಿದ್ದುಪಡಿಯನ್ನು ಈ 3 ವಿಧೇಯಕಗಳಲ್ಲೂ ಮಾಡಲಾಗಿದೆ. ಈ ಮೂಲಕ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಡೆಗೆ ಇದೀಗ 3 ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ.

ಇದನ್ನೂ ನೋಡಿ: ನಾವು ನೀರು ಬಿಡ್ತಿವಿ, ಊರಿನ ಕಸ ತೆಗಿತೀವಿ ಆದ್ರೆ ನಮಗೆ ಪಿಂಚಣಿ ಇಲ್ಲ, ಕನಿಷ್ಠ ಕೂಲಿ ಇಲ್ಲ – ಎಂ.ಬಿ. ನಾಡಗೌಡ

Donate Janashakthi Media

Leave a Reply

Your email address will not be published. Required fields are marked *