ಈ ಹಿಂದೆ ಗುಹೆಗೆ, ಈಗ ನೀರಿಗೆ, ಮುಂದಿನ ಬಾರಿ ಚಂದ್ರನಲ್ಲಿಗೆ – ಪ್ರಕಾಶ ರೈ

ಕಲಾವಿದ ಮೌನವಾದರೆ ಸಮಾಜವೇ ಮೌನವಾಗುತ್ತದೆ  ಈ ಹಿಂದೆ

ಮಂಗಳೂರು :ನಮ್ಮ ದೇಶದಲ್ಲೊಬ್ಬ ನಟನಿದ್ದಾನೆ. 2019 ರಲ್ಲಿ ಗುಹೆಗೆ ಹೋಗಿದ್ದರು. ಈ ಬಾರಿ ನೀರಿಗೆ ಹೋದರು. ಮುಂದಿನ ಬಾರಿ ಚಂದ್ರನ ಮೇಲೆ ನಿಲ್ಲುತ್ತಾರೆ. ಇನ್ನಷ್ಟು ಆಳಕ್ಕೆ ಇಳಿದರೆ ಭಾರತದ ಸಮಸ್ಯೆಗಳು ಕಾಣುತ್ತಿದ್ದವು ಎಂದು ಬಹುಬಾಷಾ ನಟ ಪಕ್ರಾಶ್ ರೈ ಮೋದಿ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಂಗಳೂರಿನ ತೊಕ್ಕೂಟ್ಟಿನ ಯುನಿಟಿ ಹಾಲ್‌ನ ಮೈದಾನದಲ್ಲಿ ಫೆಬ್ರವರಿ 27 ರಂದು ನಡೆದ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ನ 12 ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಪ್ರಕಾಶ್ ರೈ ಮಾತನಾಡಿದರು.

ನಾನು ಜನರ ಪಕ್ಷ ಯಾಕೆಂದರೆ ನಾನು ಕಲಾವಿದ. ಕಲಾವಿದನಾಗಿ ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಿದೆ. ಕಲಾವಿದ ಮಾತನಾಡಬೇಕು, ಕಲಾವಿದ ಮೌನವದರೆ ಸಮಾಜವೇ ಮೌನವಾದಂತೆ
ಹಾಗಾಗಿ ನಾನು ಮಾತನಾಡುತ್ತೇನೆ.‌ ಜನರ ಸಹೃದಯ ಸಿಕ್ಕಿದೆ ಎಂದರು.

ಆರ್‌ಎಸ್‌ಎಸ್‌, ಬಿಜೆಪಿ ಕಿಡ್ನಾಪ್ ಪಕ್ಷಗಳು.‌ ಭಗತ್ ಸಿಂಗ್‌ನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದರು. ವಲ್ಲಭ ಬಾಯಿ ಪಟೇಲ್‌ರನ್ನು ಕಿಡ್ನಾಪ್ ಮಾಡಿ ಮೂರ್ತಿಯನ್ನಾಗಿಸಿದ್ದಾರೆ. ಕೋಟಿ ಚೆನ್ನಯರನ್ನು ರಾಮ ಲಕ್ಷ್ಮಣ ಎಂದು ಕಿಡ್ನ್ಯಾಪ್ ಮಾಡಲು ಬಂದರು ಕರಾವಳಿಯ ಜನ ಅವರಿಗೆ ಒದ್ದು ಬಿದ್ದು ಕಲಿಸಿದರು ಎಂದರು.

ದೇಹಕ್ಕಾದ ಗಾಯ ಗುಣವಾಗುತ್ತದೆ. ಆದರೆ ಸಮಾಜಕ್ಕಾದ ಗಾಯ ಗುಣವಾಗದು. ನಾವು ಸುಮ್ಮನಿದ್ದಷ್ಟು ಸಮಾಜದ ಗಾಯ ಹೆಚ್ಚಾಗುತ್ತೆ. ಅದರಲ್ಲೂ ದನಿ ಇಲ್ಲದವರಿಗೆ, ಅಲ್ಪಸಂಖ್ಯಾತರಿಗೆ ಆಗುವ ಗಾಯಗಳು ಅಧಿಕವಾಗುತ್ತದೆ. ಯಾಕೆಂದರೆ ನಮ್ಮ ಬೆರಳು ಕಡಿದರೆ ಅದು ನಮ್ಮ ದೇಹಕ್ಕಾಗುವ ನೋವು ಆದರೆ ಏಕಲವ್ಯನ ಬೆರಳು ಕಡಿದರೆ ಅದು ಸಮಾಜಕ್ಕಾಗುವ ನೋವು ಎಂದು ಹೇಳಿದರು. ಈ ಹಿಂದೆ

ಮೋದಿ ತಿನ್ನುವ ಅಣಬೆ, ಹಾಕುವ ಬಟ್ಟೆ, ತಿರುಗಾಟ ಎಲ್ಲವೂ ನಾವು ಕಟ್ಟುತ್ತಿರುವ ತೆರಗೆಯಿಂದ. ಯುವಜನರಿಗೆಗೆ ಕೆಲಸ ಇಲ್ಲ, ಹಾಗಾಗಿ ಪ್ರಧಾನಿಯವರ ವಿರುದ್ದ ಯುವಜನತೆ ಪ್ರತಿಭಟಿಸುತ್ತಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಎಂದರೆ ಹೊಸ ನಾಯಕನ ಹುಟ್ಟಿಗೆ ಕಾರಣ ಆಗಬೇಕು. ನಾವು ಪ್ರಶ್ನಿಸಿದಿದ್ದರೆ, ಬದಲಾಗದಿದ್ದರೆ, ಅವರು ಮಂಗಗಳಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಹಾಗಾಗಿ ಯುವಕರ ಮೇಲೆ ದೊಡ್ಡ ಜವಬ್ದಾರಿ ಇದೆ. ಬದಲಾವಣೆ ಆರಂಭಿಸಿ, ಇವರು ನನ್ನ ಜನ, ಇವರಿಗಾಗಿ ದುಡಿಯೋಣ ಎಂಬ ಪಣತೊಡಿ, ನಂಬಿಕೆಯಿಂದ ಜನರಿಗಾಗಿ ಹೋರಾಡಿ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಈ ಹಿಂದೆ ನಾಯಕರು ಉಪವಾಸ ಮಾಡಿದ್ದರು. ಆದರೆ ಈಗ ದೇವಸ್ಥಾನ ಉದ್ಘಾಟನೆಗಾಗಿ ಉಪವಾಸ ಮಾಡುವ ನಾಯಕರು ಈಗ ಇದ್ದಾರೆ ಎಂದು ಪ್ರಧಾನಿ ಮೋದಿಗೆ ಟಾಂಗ್ ನೀಡಿದರು.

ಒಂದು ದೇಶದಲ್ಲಿ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುವುದು, ಕಾಪಾಡುವುದೇ ಬಹು ಸಂಖ್ಯಾತರ ಹೊಣೆ. ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು. ಎಲ್ಲರೂ ಜೊತೆಯಾಗಿ ದಡ ಸೇರಿದರೆಯೇ ಮೆರವಣಿಗೆ ಎಂದರು.

ರಾಜ್ಯ ಸಭಾ ಸದಸ್ಯ, ಡಿವೈಎಫ್‌ಐ ರಾಷ್ಟ್ರಧ್ಯಕ್ಷ ಎಎ ರಹೀಮ್ ಮಾತನಾಡಿ, ಆರ್‌ಎಸ್‌ಎಸ್‌ನ ಅಜೆಂಡಾವಾದ ‘ಒಂದು ರಾಷ್ಟ್ರ, ಒಂದು ಭಾಷೆ, ಒಂದು ಸಂಸ್ಕೃತಿ’ ಎಂಬುವುದನ್ನು ನಾವೆಲ್ಲರೂ ವಿರುದ್ಧ ಮಾಡುವ ಅಗತ್ಯವಿದೆ. ಇದು ಬಹುತ್ವವನ್ನು ಸಾರುವ, ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುವ ನಮ್ಮ ಸಂವಿಧಾನಕ್ಕೆ ವಿರುದ್ಧವಾದುದ್ದು ಎಂದರು.

ಈ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಸಾಧನೆ ಎಂದು ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಅಪನಗದೀಕರಣ ಅವರ ದೊಡ್ಡ ಸಾಧನೆಯೇ ಅಥವಾ ಕೋವಿಡ್‌ನಿಂದಾದ ದೊಡ್ಡ ಪ್ರಮಾಣದ ಸಾವು ಅವರ ಸಾಧನೆಯೇ? ಅಥವಾ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ನಮ್ಮ ನೆರೆಹೊರೆಯ ದೇಶಗಳು ನಮಗಿಂತ ಉತ್ತಮ ಸ್ಥಿತಿಯಲ್ಲಿರುವಾಗ ನಾವು 111 ಸ್ಥಾನದಲ್ಲಿರುವುದು ನಮ್ಮ ಸಾಧನೆಯೇ ಎಂದು ಪ್ರಶ್ನಿಸಿದರು.

ಪ್ರಸಕ್ತ ದೇಶದಲ್ಲಿ ನಿವೇಶನ ರಹಿತರ ಸಂಖ್ಯೆಯು ಅಧಿಕವಾಗುತ್ತಿದೆ. ಅದರೊಂದಿಗೆ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಈ ನಡುವೆಯೇ ನಮ್ಮ ದೇಶದಲ್ಲಿ ಜಾತ್ಯಾತೀತೆಯು ಈ ಜಿಲ್ಲೆಯಲ್ಲಿ ಅಪಾಯದಲ್ಲಿದೆ ಎಂದರು.

ಬಿಜೆಪಿಯು ಶ್ರೀ ರಾಮನನ್ನು ತನ್ನ ರಾಜಕೀಯ ಆಯುಧವಾಗಿ ಬಳಸಿಕೊಳ್ಳುತ್ತಿದೆ. ಭಾರತದಲ್ಲಿ ನಡೆದ ಮೊದಲ ಹೇಯ ಅಪರಾಧ ಮಹಾತ್ಮ ಗಾಂಧಿಯ ಹತ್ಯೆ ಮತ್ತು ಎರಡನೆಯದು ಬಾಬ್ರಿ ಮಸೀದಿ ಧ್ವಂಸ. ದುರದೃಷ್ಟವಶಾತ್ ಶ್ರೀ ರಾಮ್‌ ಎರಡರಲ್ಲೂ ಸಾಕ್ಷಿಯಾಗಿದ್ದರು. ಅವರೀಗ ಇತಿಹಾಸದಿಂದ ಗಾಂಧಿಯ ಹೆಸರನ್ನು ಅಳಿಸುವ, ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ನೀಡಲಾರೆವು ಎಂದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಡಿವೈಎಫ್‌ಐ ರಾಜ್ಯಮುಖಂಡ ಮುನೀರ್ ಕಾಟಿಪಳ್ಳ, ಒಎಂಪಿಎಲ್‌ನಲ್ಲಿ ಉದ್ಯೋಗಿಗಳು ವೇತನಕ್ಕಾಗಿ ಧರಣಿ ಕೂತಿದ್ರು, ಎಂಎಸ್‌ಇಝೆಡ್‌ನಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಆದರೆ ಅಲ್ಲಿಗೆ ನಮ್ಮ ಶಾಸಕರು, ಸಂಸದರು ಬಂದಿಲ್ಲ. ಆದರೆ ಅಮಾಯಕ ಶಿಕ್ಷಕರನ್ನು ಅಮಾನತು ಮಾಡಿ ಎಂದು ಈ ಶಾಸಕರು ಧರಣಿ ಕೂರುತ್ತಾರೆ ಎಂದು ಭರತ್ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೂಗಳು ಕ್ರೈಸ್ತ ಶಾಲೆಯನ್ನು ತೊರೆಯಿರಿ ಎಂದು ಕರೆ ನೀಡುತ್ತಾರೆ. ಹಾಗಾದರೆ ಇವರು ಪ್ರಭಾಕರ್ ಭಟ್‌ರ ಶಾಲೆಯಲ್ಲಿ ಹಿಂದೂಗಳಿಗೆ ಸೀಟು ನೀಡುತ್ತಾರಾ?, ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡುತ್ತಾರಾ? ಎಂದು ಪ್ರಶ್ನಿಸಿದ ಮುನೀರ್ ಕಾಟಿಪಳ್ಳ, ಹಿಂದೂ ಮುಸ್ಮಿಂ ಎಂಬ ಭೇದ ಕಾಯ ಮರೆತು ಮಾಯವಾದ ನಮ್ಮ ಆದರ್ಶ ಪುರುಷರಿಗೆ ಇರಲಿಲ್ಲ. ಹಾಗಿರುವಾಗ ನಮಗೆ ಯಾಕೆ ಕೋಮುವಾದ ಇರಬೇಕು ಎಂದರು.

ಮೇಲ್ಸುತೇವೆ ನಿರ್ಮಿಸಲು 12 ವರ್ಷ ಕಳೆದವು, ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರ ಮೇಲೆ ನಡೆಯುವ ದೌರ್ಜನ್ಯ ನಿಲ್ಲಸಲು ಆಗುತ್ತಿಲ್ಲ. ಯುವಜನರ ಬಗ್ಗೆ ಇಲ್ಲಿನ‌ ಶಾಸಕರು, ಸಂಸದರು ಬಾಯಿ‌ಬಿಡುತ್ತಿಲ್ಲ. ಯರಾದರೂ ಬೀದಿ ಹೆಣವಾದರೆ ಇದು ಯಾರ ಹೆಣ ಎಂದು ತಿಳಿದು ಧರ್ಮ ದಂಗಲ್ ನಡೆಸುವ ಇವರಿಗೆ ಯವಕರ ಸಮಸ್ಯೆಗಳು ಕಾಣುತ್ತಿಲ್ಲ ಎಂದರು. ಈ ಹಿಂದೆ

ಕೂಳೂರು ಸೇತುವೆ ಅರ್ಧಕ್ಕೆ ನಿಂತಿವೆ. ವಿಮಾನ‌ ನಿಲ್ದಾಣವನ್ನು ಆದಾನಿಗೆ ಮಾರಾಟ ಮಾಡಿದರು. ಇಲ್ಲಿನ
ಬ್ಯಾಂಕ್‌ಗಳನ್ನು ಮೋದಿಯವರ ಗೆಳೆಯರು ಕೊಂಡುಕೊಂಡಿದ್ದಾರೆ. ಇವೆಲ್ಲವನ್ನು ತುಳುನಾಡಿನ ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕಲ್ಲಡ್ಕ್ ಪ್ರಭಾಕರನ ಭಾಷಣಕ್ಕೆ ಕುಣಿದು ಕುಪ್ಪಳಿಸಿದ ತಕ್ಷಣ, ನಮ್ಮ ಸಮಸ್ಯೆ ನಿವಾರಣೆಯಗುವುದಿಲ್ಲ, ಶಿಕ್ಷಣ ಸಿಗಲಿಲ್ಲ, ಆರೋಗ್ಯ ಕ್ಷೇತ್ರ ದಿವಾಳಿಯಾಲಿದೆ. ಹಾಗಿ ಅವರ ಅಮಲಿನ ಭಾಷಣಕ್ಕೆ ಚಪ್ಪಾಳೆ ಹೊಡೆಯುವ ಬದಲು ಪ್ರಶ್ನಿಸಲು ಆರಂಭಿಸಿ, ಅವರು ಹೆದರಿ ಓಡಿಹೋಗುತ್ತಾರೆ ಎಂದು ತಿಳಿಸಿದರು.

ಉದ್ಯೋಗದ ಹಕ್ಕಿಗಾಗಿ ಐಕ್ಯತೆಯಿಂದ ಹೋರಾಡಬೇಕಿದೆ. ಆತ್ಮಗೌರವ, ಭದ್ರತೆ ಇಲ್ಲದ ಬದುಕು ಸಾಕು, ನೆಮ್ಮದಿಯ ಜೀವನ ನಡೆಸಲು ನಮಗೆ ಉದ್ಯೋಗ ಕೊಡಿ ಎಂದು ಹೋರಾಡಲು ಸಜ್ಜಾಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಜಾಕ್ ಸಿ ಥಾಮಸ್, ಸ್ವಾಗತ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ರಾಜ್ಯ ಸಮಿತಿ ನಾಯಕರಾದ ಲವಿತ್ರ ಕಲ್ಬುರ್ಗಿ, ರೇಣುಕಾ ಕಹಾರ್, ಸ್ವಾಗತಿ ಸಮಿತಿ ಸದಸ್ಯರಾದ ರಾಮಚಂದ್ರ ಬಬ್ಬುಕಟ್ಟೆ, ಡಾ. ಜೀವನ್ ರಾಜ್ ಕುತ್ತಾರ್, ಡಾ, ಕೃಷ್ಣಪ್ಪ ಕೊಂಚಾಡಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಸಂತೋಷ್ ಬಜಾಲ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಿಕೆ ಇಮ್ತಿಯಾಜ್ ಉಪಸ್ಥಿತರಿದ್ದರು.

 

Donate Janashakthi Media

Leave a Reply

Your email address will not be published. Required fields are marked *