ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು 42ನೇ ಎಸಿಎಂಎಂ ಕೋರ್ಟ್ 6 ದಿನ ವಿಶೇಷ ತನಿಖಾ ತಂಡದ ಕಸ್ಟಡಿಗೆ ನೀಡಿದೆ.
ಮಧ್ಯಾಹ್ನ 3ರ ಹೊತ್ತಿಗೆ ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಾಗ, ಕೋರ್ಟ್ ಮುಂದೆ ಎಸ್ಐಟಿ ಟೀಂ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಎಸ್‌ಐಟಿ 24ಗಂಟೆಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು.
ಈ ವೇಳೆ ವಾದ ಮಾಡಿದ ಎಸ್ಐಟಿ ಪರ ವಕೀಲರು 15 ದಿನಗಳ ವಿಚಾರಣೆಗಾಗಿ ಕಸ್ಟಡಿಗೆ ಆರೋಪಿಯನ್ನು ನೀಡುವಂತೆ ಕೇಳಿದರು.
ನ್ಯಾಯಾಧೀಶರ ಮುಂದೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಬಗ್ಗೆ ಸರ್ಕಾರಿ ಪರ ವಕೀಲರು ವಾದ ಮಾಡಿ, ಇವನೊಬ್ಬ ವಿಕೃತ ಕಾಮಿಯಾಗಿರುವುದರಿಂದ ಬಹಳ ಅಪಾಯಕಾರಿ ಮನುಷ್ಯ. ಸಂತ್ರಸ್ತ ಮಹಿಳೆ ಹೇಳಿಕೆ ಪ್ರಕಾರ ಅತ್ಯಾಚಾರ ಮಾಡಿದ್ದಾನೆ. 100 ಕ್ಕೂ ಹೆಚ್ಚು ಸಂತ್ರಸ್ತೆಯರು ಇದ್ದಾರೆ. ಮೀಡಿಯಾದಲ್ಲಿ ಸುದ್ದಿ ಅಗಬಾರದು ಅಂತ ಸ್ಟೇ ತಂದಿದ್ದಾರೆ.
ವಾಟ್ ಆ್ಯಪ್ ಕಾಲ್ ಮಾಡಿ ಬಟ್ಟೆ ಬಿಚ್ಚಲು ಸಂತ್ರಸ್ತೆಯರಿಗೆ ಹೇಳಿದ್ದಾನೆ.ಹೀಗಾಗಿ ಪ್ರಜ್ವಲ್ ನ್ನ ತನಿಖೆ ಮಾಡಬೇಕಿದೆ ಎಂದು ಸರ್ಕಾರಿ ಪರ ವಕೀಲರು ವಾದ ಮಂಡಿಸಿದರು.15ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು.
ಇದನ್ನು ಓದಿ : ಅಷ್ಟಕ್ಕೂ ಕೇರಳದತ್ತ ಹೆಚ್.ಡಿ.ಕುಮಾರಸ್ವಾಮಿ ಇದ್ದಕ್ಕಿದ್ದಂತೆ ನಡೆದದ್ದೇಕೆ?
ವಿಡೀಯೋ ಮಾಡಿರುವ ಮೊಬೈಲ್ ಪತ್ತೆ ಮಾಡಬೇಕಿದೆ. ಜೊತೆಗೆ ಹಲವು ಸಾಕ್ಷಿಗಳನ್ನು ಪತ್ತೆ ಮಾಡಬೇಕಿದೆ.ದೇಶ ಬಿಟ್ಟು ಹೋಗಿದ್ದವನಿಗೆ ವಾಪಸು ಬರುವ ಉದ್ದೇಶ ಇರಲಿಲ್ಲ.ಇದನ್ನು ಎಲ್ಲಾ ತನಿಖೆ ಮಾಡಬೇಕಿದೆ ಎಂದು ಸರ್ಕಾರಿ ಪರ ವಕೀಲರು ವಾದ ಮಂಡಿಸಿದರು.
ವಿದೇಶಕ್ಕೆ ಹೋಗಿದ್ದು ಏಕೆಂದು ಇಲ್ಲಿಯವರೆಗೆ ಪ್ರಜ್ವಲ್ ಹೇಳಿಲ್ಲ. ಆರೋಪಿ ವಿಚಾರಣೆ ತುಂಬಾ ಅಗತ್ಯ ಇದೆ.ಸಂತ್ರಸ್ತರಿಗೆ ಹೆದರಿಸಿ ಕಿರುಕುಳ ನೀಡಿದ್ದಾನೆ.ಪ್ರಜ್ವಲ್ ರೇವಣ್ಣ ವಿರುದ್ಧ ನಿನ್ನೆ ಹಾಸನದಲ್ಲಿ ದೊಡ್ಡಮಟ್ಟದ ಬೃಹತ್ ಪ್ರತಿಭಟನೆ ಅಗಿದೆ.ಸುದೀರ್ಘವಾಗಿ ಪ್ರಜ್ವಲ್ ರೇವಣ್ಣ ವಿಚಾರಣೆ ಅಗತ್ಯ ಇದೆ ಎಂದರು.
ಆರೋಪಿ ಕೃತ್ಯದಿಂದ ತುಂಬಾ ಮನೆಗಳಲ್ಲಿ ಒಡಕು ಬಂದಿದೆ.ನೊಂದ ಮಹಿಳೆಯರ ಮನೆಗಳಲ್ಲಿ ಗಂಡಂದಿರು ಅನುಮಾನ ಪಡುತ್ತಿದ್ದಾರೆ.14 , 15 ದಿನ ಕಸ್ಟಡಿಗೆ ನೀಡಿ ಎಂದು ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು.
ಆರೋಪಿ ಕಿರಿಕಿರಿಯ ಬಗ್ಗೆ ಸಾಕ್ಷಿ ಇಲ್ಲ.ವಿಡೀಯೋ ಮಾಡಿದ್ದಾನೆ ಎನ್ನಲಾದ ಡಿವೈಸ್ ಇಲ್ಲ.ಆರೋಪಿ ಎಸ್ಐಟಿ ಮುಂದೆ ಶರಣಾಗಿದ್ದಾನೆ.15 ದಿನಗಳ ಕಸ್ಟಡಿಗೆ ಕೇಳುವುದು ನ್ಯಾಯ ಬದ್ದ ಅಲ್ಲ.ಕಸ್ಟಡಿಗೆ ಕೊಡುವುದಾದರೆ,ಒಂದು ದಿನ ಮಾತ್ರ ಕೊಡಿ ಎಂದು ಪ್ರಜ್ವಲ್ ಪರ ವಕೀಲ ಅರುಣ್ ಪ್ರತಿವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸಂಜೆ 4-15 ಕ್ಕೆ,ತೀರ್ಪು ಕಾಯ್ದಿರಿಸಿದರು. ಮಧ್ಯಾಹ್ನದ ನಂತರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ 6 ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು.
ಇದನ್ನು ನೋಡಿ : ಪ್ರಜ್ವಲ್ ರೇವಣ್ಣ – ಲೈಂಗಿಕ ಹತ್ಯಾಕಾಂಡ ಆರೋಪಿJanashakthi Media