ಪ್ರಜ್ವಲ್‌ ರೇವಣ್ಣ ಸೋಲು

ಹಾಸನ : ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನವಾಗಿರುವ ಹಾಲಿ ಸಂಸದ ಪ್ರಜ್ವಲ್‍ಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದಾನೆ.

ಹಾಲಿ ಸಂಸದ ಪ್ರಜ್ವಲ್ ವಿರುದ್ಧ 42261 ಮತಗಳ ಅಂತರದಿಂದ ಶ್ರೇಯಸ್ ಗೆಲುವು ದಾಖಲಿಸಿದ್ದಾರೆ. ಶ್ರೇಯಸ್ 632090 ಮತಗಳನ್ನು ಪಡೆದರೆ, ಪ್ರಜ್ವಲ್ 589829 ಮತಗಳನ್ನು ಮಾಡಿದರು.

ಇದನ್ನೂ ಓದಿ: ವಿಶ್ವೇಶ್ವರ್‌ ಹೆಗಡೆ ಕಾಗೇರಿ ಗೆಲುವು

ಹಾಸನ ಲೋಕಸಭಾ ಕ್ಷೇತ್ರ ಮೊಮ್ಮಕ್ಕಳ ಕದನಕ್ಕೂ ಸಾಕ್ಷಿಯಾಗಿತ್ತು. 1999ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಸೋಲಿಸಿದ್ದ ಮಾಜಿ ಸಂಸದ ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಈಗ ಗೆಲುವು ಸಾಧಿಸಿದ್ದಾರೆ. ದೇವೇಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ ಜೆಡಿಎಸ್‍ನಿಂದ ಸ್ಪರ್ಧಿಸಿದ್ದರು.

ಇದನ್ನೂ ನೋಡಿ: ಇಂದಿನ ಬಂಡವಾಳಶಾಹಿಯನ್ನು ಅರ್ಥಮಾಡಿಕೊಳ್ಳಲು ಬಂಡವಾಳ ಪುಸ್ತಕವನ್ನು ಓದಲೇಬೇಕು -ಡಾ. ಜಿ.ರಾಮಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *