ಮಾನವ ಘನತೆಯನ್ನೇ ಕಿತ್ತುಕೊಳ್ಳುವ ಬಂಡವಾಳ ಶಾಹಿ ಅಡಿಯಲ್ಲಿನ ಬಡತನ

 -ಪ್ರೊ. ಪ್ರಭಾತ್ಪಟ್ನಾಯಕ್

ಬಡತನ ಎಂದರೆ ಜೀವನಕ್ಕೆ ಅತ್ಯಗತ್ಯವಾದ ಉಪಯೋಗ -ಮೌಲ್ಯಗಳ ಲಭ್ಯತೆಯ ಕೊರತೆ ಎಂದು ವ್ಯಾಖ್ಯಾನಿಸಿದರೂ ಸಹ, ಈ ಕೊರತೆಯು ಬಂಡವಾಳ ಶಾಹಿಯ ಅಡಿಯಲ್ಲಿ ಅದಕ್ಕೇ ವಿಶಿಷ್ಟವಾದ ಸಾಮಾಜಿಕ ಸಂಬಂಧಗಳೊಂದಿಗೆ ಹೆಣೆದು ಕೊಂಡಿದೆ ಮತ್ತು ಬಂಡವಾಳ ಶಾಹಿ-ಪೂರ್ವದ ಸಮಾಜಗಳಲ್ಲಿನ ಬಡತನಕ್ಕಿಂತ ಭಿನ್ನವಾಗಿದೆ. ಬಂಡವಾಳ ಶಾಹಿಯ ಅಡಿಯಲ್ಲಿ ಬಡತನವು ಮಾನವ ಘನತೆಯನ್ನೇ ಕಿತ್ತುಕೊಳ್ಳುವ ನಿರ್ದಿಷ್ಟ ಸ್ವರೂಪವನ್ನು ತಳೆದು, ಇನ್ನಷ್ಟು ಅಸಹನೀಯಗೊಳ್ಳುತ್ತದೆ, ಇದನ್ನು ಬಡವರಿಗೆ ಸಾಕಷ್ಟು ಬಜೆಟ್ ವರ್ಗಾವಣೆಗಳ ಮೂಲಕ ನಿವಾರಿಸ ಬಹುದು ಎಂದು ಯಾರಾದರೂ ಭಾವಿಸಿದ್ದರೆ, ಅದು ತಪ್ಪು ಎಂದೇ ಹೇಳಬೇಕಾಗುತ್ತದೆ.

ಈಗ ನಿಜವಾಗಿಯೂ ಬೇಕಾಗಿರುವುದು ಜನತೆಗೆ ಉದ್ಯೋಗ, ಶಿಕ್ಷಣ, ಆರೋಗ್ಯ, ವೃದ್ಧಾ ಪ್ಯಭದ್ರತೆ ಮತ್ತು ಆಹಾರವನ್ನು ಸಾರ್ವತ್ರಿಕವಾಗಿ ಒದಗಿಸಿ ಅವರು ಒಂದು ಪ್ರಜಾಪ್ರಭುತ್ವ ಸಮಾಜದ ನಾಗರಿಕರು ಎಂಬ ಘನತೆಯನ್ನು ಮರು ಸ್ಥಾಪಿಸುವ ಕ್ರಮ; ಆದರೆ ಅದು ನವ-ಉದಾರವಾದಿ ಬಂಡವಾಳ ಶಾಹಿಯನ್ನು ಮೀರಿ ಹೋದಾಗ ಮಾತ್ರವೇ ಸಾಧ್ಯ. ಮಾನವ

ಬಡತನ ಎಂಬುದು ಎಲ್ಲ ಉತ್ಪಾದನಾ ವಿಧಾನಗಳಲ್ಲಿ ಇರುವ ಒಂದು ಏಕ ರೂಪದ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ. ಹೆಸರಾಂತ ಅರ್ಥಶಾಸ್ತ್ರಜ್ಞರು ಸಹ ಬಡತನದ ಈ ಏಕರೂಪದ ಪರಿಕಲ್ಪನೆಯನ್ನು ನಂಬುತ್ತಾರೆ. ಆದರೆ ವಾಸ್ತವವಾಗಿ, ಬಂಡವಾಳ ಶಾಹಿಯ ಅಡಿಯಲ್ಲಿ ಬಡತನವು ಬಂಡವಾಳ ಶಾಹಿಪೂರ್ವದ ಬಡತನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಸಂಖ್ಯಾ ಶಾಸ್ತ್ರೀಯವಾಗಿ ಹೇಳುವುದಾದರೆ ಬಡತನ ಎಂದರೆ ಜೀವನಕ್ಕೆ ಅತ್ಯಗತ್ಯವಾದ ಉಪಯೋಗ-ಮೌಲ್ಯಗಳ ಲಭ್ಯತೆಯ ಕೊರತೆ ಎಂದು ವ್ಯಾಖ್ಯಾನಿಸಿದರೂ ಸಹ, ಈ ಕೊರತೆಯು ಬಂಡವಾಳ ಶಾಹಿಯ ಅಡಿಯಲ್ಲಿ ಅದಕ್ಕೇ ವಿಶಿಷ್ಟವಾದ ಸಾಮಾಜಿಕ ಸಂಬಂಧಗಳೊಂದಿಗೆ ಹೆಣೆದುಕೊಂಡಿದೆ ಮತ್ತುಹಿಂದಿನದಕ್ಕಿಂತ ಭಿನ್ನವಾಗಿದೆ. ಬಂಡವಾಳ ಶಾಹಿಯ ಅಡಿಯಲ್ಲಿ ಬಡತನವು ನಿರ್ದಿಷ್ಟವಾಗಿ ಅಭದ್ರತೆ ಮತ್ತು ಅವಮಾನದ ನಿರ್ದಿಷ್ಟ ಸ್ವರೂಪವನ್ನು ತಳೆಯುತ್ತದೆ. ಇದು ಅದನ್ನು ಇನ್ನಷ್ಟು ಅಸಹನೀಯಗೊಳಿಸುತ್ತದೆ. ಮಾನವ 

ಇದನ್ನೂ ಓದಿ: ಮೋದಿ-3 ಸರಕಾರದ ಪೂರ್ಣ ಬಜೆಟ್ 2024-25 ಹೇಗಿರಬೇಕು ?

ಬಂಡವಾಳ ಶಾಹಿ ಬಡತನದ ಸರಿ ಸುಮಾರು ನಾಲ್ಕು ನಿಕಟ ಲಕ್ಷಣಗಳಿವೆ. ಮೊದಲನೆಯದು, ಪರಿಸ್ಥಿತಿಗಳೇನೇ ಇರಲಿ, ಒಪ್ಪಂದಗಳು ಅನುಲ್ಲಂಘನೀಯ ಎಂಬುದರಿಂದ ಉದ್ಭವಿಸುವಂತದ್ದು, ಅಂದರೆ ಬಡವರು ತೆರಬೇಕಾದ್ದನ್ನು ತೆರಲೇ ಬೇಕು; ಅದು ಆಸ್ತಿಗಳ ನಷ್ಟ ಅಥವಾ ನಿರ್ಗತಿಕತೆಗೆ ಕಾರಣವಾಗುತ್ತದೆ. ಬಂಡವಾಳ ಶಾಹಿ ಪೂರ್ವದ ಕಾಲದಲ್ಲಿ, ಉದಾಹರಣೆಗೆ ಮೊಘಲ್ಭಾರತದಲ್ಲಿ**, ಕಂದಾಯ ಉತ್ಪನ್ನಕ್ಕೆ ಅನುಗುಣವಾಗಿತ್ತು. ಇದರರ್ಥಕೊಯ್ಲು ಚೆನ್ನಾಗಿರದ ವರ್ಷಗಳಲ್ಲಿ, ರೈತರಿಂದ ಕಂದಾಯ ವಸೂಲಿಗಳು ತಂತಾನೇ ಕಡಿಮೆಯಾಗುತ್ತಿದ್ದವು; ಬೇರೆ ರೀತಿಯಲ್ಲಿ ಹೇಳುವುದಾದರೆ, ಬೆಳೆ ಚೆನ್ನಾಗಿಲ್ಲದ ವರ್ಷಗಳಲ್ಲಿ ರೈತರು ತೆರಬೇಕಾದ ಸುಂಕಗಳು ತಂತಾನೇ ಕಡಿಮೆಯಾಗುತ್ತಿದ್ದವು. ಮಾನವ 

ಬೇರೆ ರೀತಿಯಲ್ಲಿ ಹೇಳುವುದಾದರೆ, ಬೆಳೆ ಚೆನ್ನಾಗಿಲ್ಲದಾಗ ಅದರ ಹೊರೆ ಉತ್ಪಾದಕರು ಮತ್ತು ಧಣಿಗಳ ನಡುವೆ ಹಂಚಿಕೆಯಾಗುತ್ತಿದ್ದವು. ಆದರೆ ವಸಾಹತು ಶಾಹಿ ಭಾರತದಲ್ಲಿ, ಅದರ ಬಂಡವಾಳ ಶಾಹಿ ಸ್ವರೂಪಕ್ಕೆ ಅನುಸಾರವಾಗಿ, ತೆರಿಗೆಯನ್ನು ಭೂಮಿಯ ಮೇಲೆ ವಿಧಿಸಲಾಯಿತು; ಉತ್ಪಾದಕರು ಮತ್ತು ಧಣಿಯ ನಡುವಿನ ಒಪ್ಪಂದವು ಬದಲಾಯಿತು. ಉತ್ಪಾದಕನು ಕೃಷಿ ಮಾಡಬೇಕಾದರೆ ಪ್ರಭುತ್ವಕ್ಕೆ ನಿರ್ದಿಷ್ಟ ಪ್ರಮಾಣದ ಕಂದಾಯವನ್ನು ಪಾವತಿಸಬೇಕು. ಇದರರ್ಥ ಬೆಳೆ ಚೆನ್ನಾಗಿರದ ವರ್ಷದಲ್ಲಿ, ಅದರ ಹೊರೆ ಹಂಚಿಕೆ ಯಾಗುವುದಿಲ್ಲ,  ಅದು ಉತ್ಪಾದಕರ ಮೇಲೆ ಮಾತ್ರ ಬೀಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಪ್ಪಂದವು, ಉತ್ಪನ್ನದ ಪಾಲಿನ ರೂಪದಲ್ಲಿ ಅಥವಾ ಅದರ ಹಣದ ರೂಪದಲ್ಲಿ ನಿಗದಿತ ಮೊತ್ತದ ಹಣಪಾವತಿಗೆ ಆಗಿತ್ತು. ರೈತರ ದಾರಿದ್ರ್ಯ, ಅಂದರೆ, ರೈತರ ಆಸ್ತಿಲೇ ವಾದೇವಿದಾರರಿಗೆ ವರ್ಗಾವಣೆಯಾಗುವುದನ್ನು ಇದು ಸೂಚಿಸುತ್ತದೆ. ಸಂಕ್ಷಿಪ್ತವಾಗಿ ಬಡತನವು ನಿರ್ಗತಿಕತೆಗೆ ಸಂಬಂಧಿಸಿದ್ದಾಗಿರುತ್ತದೆ, ಆದ್ದರಿಂದ ಉತ್ಪಾದಕರ ಮೇಲೆ ಸಂಚಿತ ಪರಿಣಾಮವನ್ನು ಉಂಟು ಮಾಡುತ್ತದೆ. ಮಾನವ 

ಬೇರೆ ರೀತಿಯಲ್ಲಿ ಹೇಳುವುದಾದರೆ, ಉತ್ಪಾದಕರಿಗೆ ಉಪಯೋಗ-ಮೌಲ್ಯಗಳಿಗೆ ಲಭ್ಯತೆಯ ಕೊರತೆಯ “ಹರಿವು” ಅವರ ಸ್ವತ್ತುಗಳನ್ನು ವಂಚಿಸುವ “ದಾಸ್ತಾನು” ಪ್ರಕ್ರಿಯೆಯೊಂದಿಗೆ ಇರುತ್ತದೆ, ಇದು ಕ್ರಮೇಣ ಅವರ ದುರ್ಬಲತೆಯನ್ನು ಹೆಚ್ಚಿಸುತ್ತದೆ. ಹೀಗೆ ಬಡತನಕ್ಕೆ ಒಂದು ಚಲನೆಯನ್ನು ಸೇರಿಸಲಾಯಿತು. ಮಾನವ 

ಬಂಡವಾಳ ಶಾಹಿ ಬಡತನದ ಇತರ ಲಕ್ಷಣಗಳು

ಬಂಡವಾಳ ಶಾಹಿ ಬಡತನದ ಎರಡನೆಯ ಲಕ್ಷಣವೆಂದರೆ ಅದನ್ನು, ವ್ಯಕ್ತಿಗಳಾಗಲಿ ಅಥವಾ ಕುಟುಂಬಗಳಾಗಲಿ ಬಿಡಿಯಾಗಿ ಅನುಭವಿಸುತ್ತಾರೆ. ಜನರು ಸಮುದಾಯಗಳಲ್ಲಿ ವಾಸಿಸುತ್ತಿದ್ದ ಬಂಡವಾಳ ಶಾಹಿ-ಪೂರ್ವ ಸಮಾಜದಲ್ಲಿ, ಸಮುದಾಯದ ಇತರ ಸದಸ್ಯರು, ಒಂದೇ ಜಾತಿ-ಗುಂಪಿಗೆ ಅಥವಾ ಒಂದೇ ಹಳ್ಳಿಗೆ ಸೇರಿದವರು ಬೆಳೆ ಚೆನ್ನಾಗಿರದಾಗ ಅಥವಾ ನೈಸರ್ಗಿಕ ವಿಪತ್ತುಗಳಲ್ಲಿ, ನಿರ್ದಿಷ್ಟ ವರ್ಷಗಳಲ್ಲಿ ಬಡವರ ಸಹಾಯಕ್ಕೆ ಬರುತ್ತಿದ್ದರು. ಬೇರೆ ರೀತಿಯಲ್ಲಿ ಹೇಳುವುದಾದರೆ ,ಅವರು ಕಷ್ಟಕಾಲದಲ್ಲಿ ಒಂಟಿಯಾಗಿರುತ್ತಿರಲಿಲ್ಲ. ಬಂಡವಾಳ ಶಾಹಿಯ ಅಡಿಯಲ್ಲಿ, ವ್ಯವಸ್ಥೆಯ ಅನಿವಾರ್ಯತರ್ಕದಿಂದಾಗಿ ಸಮುದಾಯಗಳು ಒಡೆದು ಹೋದಾಗ ಮತ್ತು ವ್ಯಕ್ತಿಯು ಪ್ರಾಥಮಿಕ ಆರ್ಥಿಕ ವರ್ಗವಾಗಿ ಹೊರ ಹೊಮ್ಮಿದಾಗ, ಈ ವ್ಯಕ್ತಿಯು ಒಂಟಿಯಾಗಿ ಕಷ್ಟವನ್ನು ಅನುಭವಿಸುತ್ತಾನೆ. ಮಾನವ

ಆರ್ಥಿಕ ಸಿದ್ಧಾಂತದಲ್ಲಿನ ಮಾರ್ಕ್ಸ್‌ವಾದಿಯೇ ತರ ಸಂಪ್ರದಾಯಗಳು ಈ ಮೂಲಭೂತ ಬದಲಾವಣೆಯನ್ನು ನೋಡಲು ವಿಫಲವಾಗುತ್ತವೆ. ಏಕೆಂದರೆ ಅವುಗಳಿಗೆ ಯಾವುದೇ ಇತಿಹಾಸ ಪ್ರಜ್ಞೆ ಎಂಬುದು ಇರುವುದಿಲ್ಲ. ಇತಿಹಾಸದ ಬಗ್ಗೆ ಅವುಗಳ ಈ ಕುರುಡುತನವನ್ನು ಮಾರ್ಕ್ಸ್ ಟೀಕಿಸಿದ್ದರು: ಅವು ಇತಿಹಾಸದ ಒಂದು ನಿರ್ದಿಷ್ಟ ಹಂತದಲ್ಲಿ ಮಾತ್ರ ಹೊಮ್ಮಿದ ಬಡಿವ್ಯಕ್ತಿಯ ವಿದ್ಯಮಾನ ಎಂದು ತಿಳಿಯದೆ, ಅದು ಎಲ್ಲಾ ಕಾಲಕ್ಕೂ ಅಸ್ತಿತ್ವದಲ್ಲಿತ್ತು ಎಂದೇ ಭಾವಿಸುತ್ತವೆ. 1870 ರ ಸುಮಾರಿಗೆ ಪ್ರಾರಂಭವಾದ ಕಾರ್ಲ್ಮೆಂಗರ್ ಮತ್ತು ಸ್ಟಾನ್ಲಿಜೆವೊನ್ಸ್‌ ರಿಂದ ಪ್ರಾರಂಭವಾಗುವ ನವ-ಶಾಸ್ತ್ರೀಯ ಅರ್ಥಶಾಸ್ತ್ರಗಳಂತೂ ವ್ಯಕ್ತಿಯನ್ನು ದೈವತ್ವಕ್ಕೆ ಏರಿಸಿದವು, ವ್ಯಕ್ತಿಯನ್ನು ಶಾಶ್ವತ ಪ್ರವರ್ಗವಾಗಿಸಿದವು; ಇದೇ ಅವರ ವಿಶ್ಲೇಷಣೆಯ ನಿರ್ಗಮನದ ಬಿಂದುವಾಗಿತ್ತು. ಆದ್ದರಿಂದ ಈ ಎರಡೂ ತೊರೆಗಳಿಗೆ ಬಂಡವಾಳ ಶಾಹಿ ಬಡತನ ಮತ್ತು ಬಂಡವಾಳ ಶಾಹಿ-ಪೂರ್ವದ ಬಡತನದ ನಡುವಿನ ವ್ಯತ್ಯಾಸ ಕಾಣಿಸಲಿಲ್ಲ. ಮೊದಲನೆಯದನ್ನು ಬಿಡಿಯಾದ, ಪರಕೀಯಗೊಂಡ ವ್ಯಕ್ತಿಗಳು ಅನುಭವಿಸಿದರೆ, ಎರಡನೆಯದ್ದು ಸಮುದಾಯದೊಳಗೆ ಮಾತ್ರ ಅನುಭವಿಸಿದ ಅಭಾವವನ್ನು ಮತ್ತು ಅದರಿಂದಾಗಿ ಕೊರತೆಯನ್ನು ಹಂಚಿಕೊಂಡದ್ದನ್ನು ಸೂಚಿಸುತ್ತದೆ. ಮಾನವ 

ಪರಕೀಯಭಾವ

ಪರಕೀಯ ಭಾವಕ್ಕೊಳಗಾದ ವ್ಯಕ್ತಿಗಳು ಬಂಡವಾಳ ಶಾಹಿಯ ವಿಶಿಷ್ಟ ಲಕ್ಷಣ (ಈ ಭಾವ ಅವರು ವಿವಿಧ ’ಸಂಯೋಜನೆ’ ಗಳಲ್ಲಿ ಅಥವ ಕಾರ್ಮಿಕ ಸಂಘಗಳಲ್ಲಿ ಒಟ್ಟು ಸೇರಿ ವ್ಯವಸ್ಥೆಯ ವಿರುದ್ಧ ಹೋರಾಟಗಳಲ್ಲಿ ಒಂದಾಗುವವರೆಗೂ ಇರುತ್ತದೆ). ಬಡತನವನ್ನು ಅನುಭವಿಸುವ ಈ ವ್ಯಕ್ತಿಗಳೇ ಬಡತನಕ್ಕೆ ಹೆಚ್ಚುವರಿ ಆಯಾಮವನ್ನು ನೀಡುತ್ತಾರೆ; ಬಂಡವಾಳ ಶಾಹಿ ಬಡತನವನ್ನು ರೂಪಿಸುವುದು ಉಪಯೋಗ-ಮೌಲ್ಯಗಳ ಲಭ್ಯತೆಯ ಕೊರತೆಯಷ್ಟೇ ಅಲ್ಲ, ಈ ಲಭ್ಯತೆಯ ಕೊರತೆಯೊಂದಿಗೆ ಇರುವ ಮಾನಸಿಕ ವೇದನೆಯೂ ಅದರಲ್ಲಿ ಸೇರಿದೆ.

ಬಂಡವಾಳ ಶಾಹಿ ಬಡತನದ ಮೂರನೇ ಲಕ್ಷಣವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಇದು ಎರಡು ಕಾರಣಗಳಿಗಾಗಿ ಉದ್ಭವಿಸುತ್ತದೆ: ಒಂದು ಉದ್ಯೋಗಿಗಳ ಕಡಿಮೆ ವೇತನ, ಮತ್ತು ಇನ್ನೊಂದು ಉದ್ಯೋಗವೇ ಇಲ್ಲದಿರುವುದು. ಬಡತನದಿಂದ ವಿಶೇಷವಾಗಿ ಬಳಲುತ್ತಿರುವಂತದ್ದು ಈ ಕಾರ್ಮಿಕರ ಮೀಸಲು ಪಡೆಯೇ. ವಾಸ್ತವವಾಗಿ ನಮ್ಮಂತಹ ಅರ್ಥ ವ್ಯವಸ್ಥೆಗಳಲ್ಲಿ “ಉದ್ಯೋಗಿಗಳು” ಮತ್ತು “ನಿರುದ್ಯೋಗಿಗಳು” ಎರಡು ವಿಭಿನ್ನ ಪ್ರವರ್ಗಗಳಾಗಿರುವುದಿಲ್ಲ. ಒಂದು ಸಣ್ಣ ವಿಭಾಗವನ್ನು ಹೊರತುಪಡಿಸಿ, ಹೆಚ್ಚಿನ ಕಾರ್ಮಿಕರು ವಾರದಲ್ಲಿ ಹಲವಾರು ದಿನಗಳು ಅಥವಾ ದಿನದಲ್ಲಿ ಹಲವಾರು ಗಂಟೆಗಳ ಕಾಲ ನಿರುದ್ಯೋಗಿಗಳಾಗಿರುತ್ತಾರೆ, ಇದರಿಂದಾಗಿ ಉದ್ಯೋಗ ಪಡೆಯಲು ಅಸಮರ್ಥವಾಗಿರುವುದರಿಂದ ಉಂಟಾಗಿರುವ ಬಡತನಕ್ಕೆ ಸಂಬಂಧಿಸಿದ ಮಾನಸಿಕ ವೇದನೆ ಹೆಚ್ಚು ವ್ಯಾಪಕವಾಗಿದೆ. ಉದ್ಯೋಗದ ಕೊರತೆಯು ವೈಯಕ್ತಿಕ ವೈಫಲ್ಯವಾಗಿ ಕಾಡುತ್ತದೆ, ಇದು  ನಿರ್ದಿಷ್ಟವಾದ ಉಪಯೋಗ-ಮೌಲ್ಯಗಳ ಲಭ್ಯತೆಯ ಕೊರತೆಯೊಂದಿಗೇ ವ್ಯಕ್ತಿಯ ಆತ್ಮಸ್ಥೈರ್ಯವನ್ನು ಕೂಡ ಕುಗ್ಗಿಸುತ್ತದೆ.

ಬಂಡವಾಳ ಶಾಹಿ ಬಡತನದ ನಾಲ್ಕನೇ ಲಕ್ಷಣವೆಂದರೆ ಅದಕ್ಕೆ ಕಾರಣವಾಗುವ ಅಂಶಗಳು ಅದರಿಂದ ಪೀಡಿತರಾದವರಿಗೆ ಕಾಣದಿರುವುದು. ಬಂಡವಾಳ ಶಾಹಿ-ಪೂರ್ವಸ ಮಾಜದಲ್ಲಿ ಒಂದು ನಿರ್ದಿಷ್ಟ ಉಪಯೋಗ-ಮೌಲ್ಯಗಳ ಲಭ್ಯತೆಯ ಕೊರತೆ ಎಂಬ ಅರ್ಥದಲ್ಲಿ ಬಡತನದ ಬೇರು ಉತ್ಪನ್ನದ ಗಾತ್ರ ಮತ್ತು ಅದರಲ್ಲಿ ದಣಿಯು ತೆಗೆದುಕೊಂಡ ಪಾಲಿನಲ್ಲಿದ್ದು, ವಾಸ್ತವವಾಗಿ ಇದು ಎಲ್ಲರಿಗೂ ಗೋಚರಿಸುತ್ತದೆ: ಕೊಯ್ಲು ಒಳ್ಳೆಯದಾಗಿರದಿದ್ದರೆ, ಉತ್ಪನ್ನದ ಗಾತ್ರವನ್ನು ಕಡಿಮೆ ಮಾಡ ಬಹುದು, ಆ ಮೂಲಕ ಬಡತನವನ್ನು ಉಲ್ಬಣಗೊಳಿಸ ಬಹುದು (ಇದು ಕೊರತೆಯನ್ನು ಹಂಚಿ ಕೊಂಡಾಗಲೂ ಸಂಭವಿಸ ಬಹುದು). ಹಾಗೆಯೇ, ಒಬ್ಬ ಶೋಷಕ ದಣಿ ಸಾಮಾನ್ಯ ಕೊಯ್ಲಿನ ಸಮಯದಲ್ಲೂ ಉತ್ಪಾದಕರಿಂದ ಕಸಿದುಕೊಂಡು, ಅವರಲ್ಲಿ ಅನೇಕರನ್ನು ಬಡತನಕ್ಕಿಳಿಸ ಬಹುದು. ಆದರೆ ಬಂಡವಾಳ ಶಾಹಿ ಪರಿಸ್ಥಿತಿಗಳಲ್ಲಿ ಒಬ್ಬ ವ್ಯಕ್ತಿ ಏಕೆ ನಿರುದ್ಯೋಗಿಯಾಗಿ ಉಳಿಯುತ್ತಾನೆ ಮತ್ತು ಅದರಿಂದಾಗಿ ಬಡವನಾಗಿ ಉಳಿಯುತ್ತಾನೆ ಎಂಬುದು ಆ ವ್ಯಕ್ತಿಗೇ ರಹಸ್ಯವಾಗಿ ಉಳಿಯುತ್ತದೆ. ಅಂತೆಯೇ, ಬೆಲೆಗಳು ಹಠಾತ್ತಾಗಿ ಏಕೆ ಏರುತ್ತವೆ, ಹೆಚ್ಚು ಜನರನ್ನು ಬಡತನಕ್ಕೆ ತಳ್ಳುತ್ತವೆ ಎಂಬುದು ಪೀಡಿತರಿಗೆ ನಿಗೂಢವಾಗಿಯೇ ಉಳಿಯುತ್ತದೆ.

1943 ರ ಬಂಗಾಳದ ಕ್ಷಾಮದ ಕುರಿತಾದ ಸತ್ಯಜಿತ್ ರಾಯ್ ಅವರ ಚಲನಚಿತ್ರ (ಆಶನಿ ಸಂಕೇತ್-ದೂರದ ಗುಡುಗು) ಬರಗಾಲದ ಸಮಯದಲ್ಲಿ, ಜಪಾನಿನ ಪಡೆಗಳು ಸಿಂಗಾಪುರವನ್ನು ಆಕ್ರಮಿಸಿಕೊಳ್ಳುತ್ತಿರುವಂತೆ ಬಂಗಾಳದಲ್ಲಿ ಬೆಲೆಗಳು ಏರುತ್ತಿದ್ದುದನ್ನು ತೋರಿಸುತ್ತದೆ. ಇಂದು ಉಕ್ರೇನ್‌ನಲ್ಲಿನ ಯುದ್ಧವು ವಿಶ್ವಾದ್ಯಂತ ಆಹಾರದ ಬೆಲೆಗಳ ಏರಿಕೆಗೆ ನಿಸ್ಸಂಶಯವಾಗಿ ಕೊಡುಗೆ ನೀಡುತ್ತದೆ, ಇದು ದೂರದ ಆಫ್ರಿಕನ್ ಅಥವಾ ಭಾರತೀಯ ಹಳ್ಳಿಯಲ್ಲೂ ಬಡತನವನ್ನು ಉಲ್ಬಣಗೊಳಿಸುತ್ತದೆ. ಮೇಲ್ನೋಟಕ್ಕೆ ಕಾಣುವ ಬಂಡವಾಳ ಶಾಹಿ ಬಡತನದ ಬೇರುಗಳ ಅಪಾರ ದರ್ಶಕತೆಗೂ ಬಂಡವಾಳ ಶಾಹಿಯ ಅಡಿಯಲ್ಲಿ ಇಡೀ ಜಗತ್ತು ಅಂತರ-ಸಂಬಂಧ ಹೊಂದಿರುವ ವಿದ್ಯಮಾನಕ್ಕೂ ಪರಸ್ಪರ ನಂಟಿದೆ. ಅಂದರೆ, ಜಾಗತಿಕ ಬೆಳವಣಿಗೆಗಳು, ದೂರದ ದೇಶಗಳಲ್ಲಿನ ಬೆಳವಣಿಗೆಗಳು, ಎಷ್ಟೇ ದೂರದಲ್ಲಿದ್ದರೂ ಪ್ರತಿಹಳ್ಳಿಯ ಮೇಲೆ ಪ್ರಭಾವ ಬೀರುತ್ತವೆ.

ಬಜೆಟ್‍ ವರ್ಗಾವಣೆಗಳುಮತ್ತುಬಡತನನಿವಾರಣೆ

ಬಂಡವಾಳ ಶಾಹಿ ಬಡತನದ ಈ ನಿರ್ದಿಷ್ಟ ಲಕ್ಷಣಗಳು ಪ್ರಮುಖ ಪರಿಣಾಮಗಳನ್ನು ಹೊಂದಿವೆ, ಅವುಗಳಲ್ಲಿ ಒಂದರತ್ತ ಮಾತ್ರ ನಾನು ಗಮನ ಸೆಳೆಯುತ್ತೇನೆ. ಬಡತನವನ್ನು ಕಡಿಮೆ ಮಾಡಲು ಅಥವಾ ತೊಡೆದು ಹಾಕಲು ಬಯಸುವ ಅನೇಕ ಸದುದ್ದೇಶವುಳ್ಳ ವ್ಯಕ್ತಿಗಳು ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕನಿಷ್ಠ ಆದಾಯ ವಿರುವಂತೆ ಮಾಡಲು ಸರ್ಕಾರದ ಬಜೆಟ್‌ನಿಂದ ಹಣ ವರ್ಗಾವಣೆಯನ್ನು ಮಾಡಬೇಕೆಂದು ಸಲಹೆ ನೀಡುತ್ತಾರೆ, ನಿಜ, ಇದು ಎಲ್ಲಿಯೂ ಅಗತ್ಯ ಪ್ರಮಾಣದಲ್ಲಿ ಸಂಭವಿಸಿಲ್ಲ, ಇದರಿಂದಾಗಿ ಸಾಮಾಜಿಕ ವಿದ್ಯಮಾನವಾಗಿ ಬಡತನವು ಮುಂದುವರಿಯುತ್ತಿದೆ ಮತ್ತು ನವ-ಉದಾರವಾದಿ ಬಂಡವಾಳ ಶಾಹಿಯಿಂದ ಉಂಟಾದ ಆರ್ಥಿಕ ಹಿಂಜರಿತದ ಜೊತೆಗೆ ಪ್ರಪಂಚದಾದ್ಯಂತದ ಆಹಾರ ಬೆಲೆ ಹಣದುಬ್ಬರದಿಂದ ಇನ್ನಷ್ಟು ಉಲ್ಬಣಗೊಂಡಿದೆ; ವರ್ಗಾವಣೆಯ ಸಲಹೆಗಳು ಕೂಡ ಸಾಮಾನ್ಯವಾಗಿ ಅಲ್ಪ ಪ್ರಮಾಣದ ವರ್ಗಾವಣೆಗಳಿಗಷ್ಟೇ ಇರುತ್ತವೆ. ಆದರೆ ಇದೆಲ್ಲವೂ ಅಂದರೆ ಉಪಯೋಗ-ಮೌಲ್ಯಗಳ ಅಸಮರ್ಪಕ ಲಭ್ಯತೆ ಎಂಬರ್ಥದ ಬಡತನಕ್ಕೆ ಸಂಬಂಧಿಸಿದ್ದು, ನಿರ್ದಿಷ್ಟವಾಗಿ ಬಂಡವಾಳ ಶಾಹಿ ಬಡತನಕ್ಕೆ ಸಂಬಂಧ ಪಟ್ಟದ್ದಲ್ಲ.

ಸಾಕಷ್ಟು ವರ್ಗಾವಣೆಗಳನ್ನು ಮಾಡಿ ಮತ್ತು ಉಪಯೋಗ-ಮೌಲ್ಯಗಳ ಲಭ್ಯತೆಯ ಕೊರತೆ ಎಂಬರ್ಥದ ಬಡತನವನ್ನು ನಿವಾರಿಸಬಹುದಾದರೂ, ಬಂಡವಾಳ ಶಾಹಿ ಬಡತನವನ್ನು, ಮಾನಸಿಕ ವೇದನೆಯನ್ನೂ ನಿರುದ್ಯೋಗದ ಮೂಲಕ ಸ್ವಾಭಿಮಾನವನ್ನು ಕಿತ್ತುಕೊಳ್ಳುವ ಬಂಡವಾಳ ಶಾಹಿ ಬಡತನವನ್ನು ಅದು ನಿವಾರಿಸಲಾರದು. ನಿಜವಾದ ಅರ್ಥದಲ್ಲಿ ಬಂಡವಾಳ ಶಾಹಿ ಬಡತನವನ್ನು ತೊಡೆದು ಹಾಕಬೇಕಾದರೆ ಅದಕ್ಕೆ ಸಾರ್ವತ್ರಿಕ ಉದ್ಯೋಗವನ್ನು ಒದಗಿಸುವ ಅಗತ್ಯವಿದೆ. ಬಂಡವಾಳ ಶಾಹಿಯ ಅಡಿಯಲ್ಲಿ ಇದನ್ನು ಮಾಡಬಹುದೆಂದು ಕೇನ್ಸ್ ಭಸವಿಸಿದ್ದರು, ಆದರೆ ಅದು ತಪ್ಪು ಎಂದು ಸಾಬೀತಾಗಿದೆ. ಇದರರ್ಥ ವರ್ಗಾವಣೆ ಮಾಡಬಾರದು ಎಂದೇನೂ ಅಲ್ಲ; ಆದರೆ ಅದು ಖಂಡಿತವಾಗಿಯೂ ಸಾಲದು, ಅದು ಸಮಸ್ಯೆಯ ಮೂಲಕ್ಕೆ ಹೋಗದ ಉಪಶಮನಕಾರಿ ಕ್ರಮವಷ್ಟೇ.

ಭಾರತದಲ್ಲಿ ಅಂತೆಯೇ ಪ್ರಸ್ತುತ ಸುಮಾರು 80 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ ತಲಾ ಐದುಕಿ ಲೋಗ್ರಾಂಗಳಷ್ಟು ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಇದು ಅವರಿಗೆ ಎಷ್ಟು ತಲುಪುತ್ತದೆ, ಈ ಯೋಜನೆ ಎಷ್ಟು ಕಾಲ ಮುಂದುವರಿಯುತ್ತದೆ (ಸಾಂಕ್ರಾಮಿಕದಿಂದಾಗಿ ಇದನ್ನು ಪ್ರಾರಂಭಿಸಲಾಗಿತ್ತು) ಎಂಬುದು ಚರ್ಚಾಸ್ಪದ ವಿಷಯಗಳು. ಆದರೆ ಈ ರೀತಿಯ ಯೋಜನೆಗಳು ಸಮಕಾಲೀನ ಭಾರತದಲ್ಲಿ ಬಡತನಕ್ಕೆ ರಾಮಬಾಣವಾಗಿದೆ ಎಂದು ಯಾರಾದರೂ ನಂಬುತ್ತಿದ್ದರೆ, ಅದು ಖಂಡಿತವಾಗಿಯೂ ಸರಿಯಲ್ಲ ಎಂದು ಬೇಸರದಿಂದ ಹೇಳಬೇಕಾಗುತ್ತದೆ. ಬೇಕಾಗಿರುವುದು ಜನತೆಗೆ ಉದ್ಯೋಗ, ಶಿಕ್ಷಣ, ಆರೋಗ್ಯ, ವೃದ್ಧಾಪ್ಯ ಭದ್ರತೆ ಮತ್ತು ಆಹಾರವನ್ನು ಸಾರ್ವತ್ರಿಕವಾಗಿ ಒದಗಿಸಿ ಅವರು ಒಂದು ಪ್ರಜಾಪ್ರಭುತ್ವ ಸಮಾಜದ ನಾಗರಿಕರು ಎಂಬ ಘನತೆಯನ್ನು ಮರು ಸ್ಥಾಪಿಸುವುದು; ಆದರೆ ಹೀಗೆ ಮಾಡಲು ನವ-ಉದಾರವಾದಿ ಬಂಡವಾಳ ಶಾಹಿಯನ್ನು ಮೀರಿಹೋಗ ಬೇಕಾಗುತ್ತದೆ.

ಇದನ್ನೂ ನೋಡಿ: ಮೃಣಾಲ್ ಸೇನ್ ಉಪನ್ಯಾಸ : ಸಮಾನಾಂತರ ಸಿನಿಮಾ ಮತ್ತು ಮೃಣಾಲ್ ಸೇನ್ ಕೊಡುಗೆ

Donate Janashakthi Media

Leave a Reply

Your email address will not be published. Required fields are marked *