ಕಂದಾಯ ಇಲಾಖೆ ಅಂಕಿ ಅಂಶ ಬಿಡುಗಡೆ: ಜನಸಂಖ್ಯೆ 3 ಲಕ್ಷ; ಪಿಂಚಣಿದಾರರು 81.71 ಲಕ್ಷ

ಕುಷ್ಟಗಿ: ತಾಲ್ಲೂಕಿನ ಕಂದಾಯ ಇಲಾಖೆಯು ವಿವಿಧ ರೀತಿಯ ಮಾಸಾಶನಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ನೀಡಿರುವ ಅಂಕಿ ಅಂಶಗಳು ಅಚ್ಚರಿಗೆ ಕಾರಣವಾಗಿವೆ.

ಶಾಸಕ ದೊಡ್ಡನಗೌಡ ಪಾಟೀಲ ಜನವರಿ 4ರಂದು ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ಕಂದಾಯ ಇಲಾಖೆ ನೀಡಿರುವ ಪ್ರಗತಿ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಂದಾಯ

ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 40ರಷ್ಟು ಜನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆಯೇ ಎಂಬುದು ಅನುಮಾನಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಶಾಸಕರಿಗೆ ತಪ್ಪು ಮಾಹಿತಿ ಒದಗಿಸಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಲಾಸ್ ಏಂಜಲೀಸ್| ಕಾಡ್ಗಿಚ್ಚಿನಿಂದ 22,600 ಎಕರೆ ಪ್ರದೇಶ ಆಹುತಿ; ಅಧಿಕ ಕಟ್ಟಡಗಳು ಹಾನಿ

ಪಿಂಚಣಿದಾರರ ಪಟ್ಟಿ

ಪ್ರಗತಿ ವರದಿಯಲ್ಲಿನ ಮಾಹಿತಿಯ ಪ್ರಕಾರ 81.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದಾರೆ. ಅವರಲ್ಲಿ 20.79 ಲಕ್ಷ ಜನರು ವೃದ್ಧಾಪ್ಯ ಪಿಂಚಣಿದಾರರಾಗಿದ್ದಾರೆ. ವಿಧವೆಯರು 18.28 ಲಕ್ಷ, 9.8 ಲಕ್ಷ ಅಂಗವಿಕಲರು, ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 30.86 ಲಕ್ಷ, ಮನಸ್ವಿನಿ ಯೋಜನೆಯಲ್ಲಿನ ಅವಿವಾಹಿತರು ಮತ್ತು ವಿಚ್ಛೇದಿತ ಮಹಿಳೆಯರು 14.48 ಲಕ್ಷ, ಮಾಸಾಶನ ಪಡೆಯುವ ದೇವದಾಸಿಯರ ಸಂಖ್ಯೆಯೇ 25,625 ಇದೆ. ಅಚ್ಚರಿಯ ಸಂಗತಿಯಂದರೆ 6,809 ರೈತರು ಸಾಲಬಾಧೆಯಿಂದ ಆತ್ಯಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿಯರು ಮಾಸಾಶನ ಪಡೆಯುತ್ತಿದ್ದಾರೆ ಎಂಬ ವಿವರವಿದೆ. ಆದರೆ ತಾಲ್ಲೂಕಿನ ಜನಸಂಖ್ಯೆಯೇ ಮೂರು ಲಕ್ಷದಷ್ಟಿದೆ. ಈ ಅಂಕಿಅಂಶಗಳನ್ನು ಅವುಗಳನ್ನು ಮೀರಿ ಇದೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ದೊಡ್ಡನಗೌಡ ಪಾಟೀಲ, 2011ರ ಜನಗಣತಿ ಪ್ರಕಾರ ತಾಲ್ಲೂಕಿನ ಜನಸಂಖ್ಯೆಯೇ ಅಂದಾಜು 3 ಲಕ್ಷ ಇದೆ. ಅಧಿಕಾರಿಗಳು ನೀಡಿರುವ ಮಾಹಿತಿ ದೋಷಪೂರಿತವಾಗಿದೆ ಎಂದರು.

– ದೊಡ್ಡನಗೌಡ ಪಾಟೀಲ, ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕಜನಸಂಖ್ಯೆಯ ಅಂದಾಜು 3ನೇ ಒಂದು ಭಾಗದಷ್ಟು ಜನರು ಪಿಂಚಣಿ ಫಲಾನುಭವಿಗಳೇ ಆಗಿದ್ದಾರೆಂಬುದು ಅವಾಸ್ತವ. ಈ ವಿಷಯ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಸೂಚಿಸುತ್ತೇನೆ.-ಶೇಖರಗೌಡ ಮಾಲಿಪಾಟೀಲ ಕೆಡಿಪಿ ಸದಸ್ಯತಪ್ಪು ಮಾಹಿತಿ ನೀಡಿರುವುದು ಅಕ್ಷಮ್ಯ. ಗಂಭೀರ ಲೋಪವಾಗಿದ್ದು ತಪ್ಪಿತಸ್ಥ ಅಧಿಕಾರಿಗಳು ಯಾರು ಎಂಬುದನ್ನು ಪತ್ತೆ ಮಾಡಿ ಶಾಸಕರು ಕ್ರಮಕೈಗೊಳ್ಳಬೇಕಿದೆ. -ಪಂಪಾಪತಿ ಹಿರೇಮಠ, ತಾ.ಪಂ ಇಒಇಲಾಖೆವಾರು ನೀಡುವ ಪ್ರಗತಿ ಮಾಹಿತಿ ಪ್ರತಿಗಳನ್ನು ಪಡೆದು ಪುಸ್ತಕದ ರೂಪದಲ್ಲಿ ಸಭೆಗೆ ನೀಡುವುದಷ್ಟೇ ನಮ್ಮ ಕೆಲಸ. ಇದರಲ್ಲಿ ನಮ್ಮ ತಪ್ಪು ಇಲ್ಲ.-ಅಶೋಕ, ಶಿಗ್ಗಾವಿ ತಹಶೀಲ್ದಾರ್ಕಂದಾಯ ಸಿಬ್ಬಂದಿ ಅವಸರದಲ್ಲಿ ತಪ್ಪು ಮಾಹಿತಿ ನೀಡಿದ್ದು ನಿಜ ಆದರೆ ಅಧಿಕಾರಿ ಸಹಿ ಇರುವ ಮಾಹಿತಿ ಪ್ರತಿಯನ್ನು ಮಾತ್ರ ಪ್ರಗತಿ ವರದಿಯಲ್ಲಿ ಸೇರಿಸಬೇಕು. ಈ ವಿಷಯದಲ್ಲಿ ತಾ.ಪಂ ಸಿಬ್ಬಂದಿ ಜವಾಬ್ದಾರಿಯೂ ಇದೆ.

69 ಮಹಿಳೆಯರ ಮೇಲೆ ಆಯಸಿಡ್‌ ದಾಳಿ?

ಆಯಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಸರ್ಕಾರ ಮಾಸಿಕ ₹ 10000 ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಿತ್ತು. ಕೆಡಿಪಿ ಪ್ರಗತಿ ವರದಿಯಲ್ಲಿ 59 ಮಹಿಳೆಯರು ಆಯಸಿಡ್‌ ದಾಳಿಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ತಹಶೀಲ್ದಾರ್ ಕಚೇರಿ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಕೇವಲ ಒಬ್ಬ ಮಹಿಳೆ ಮಾತ್ರ ಇದ್ದಾರೆ. 2432 ಜನ ಸ್ವಾತಂತ್ರ್ಯ ಹೋರಾಟಗಾರರು ಅಥವಾ ಅವರ ಕುಟುಂಬದವರು ಪಿಂಚಣಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಅಷ್ಟೇ ಏಕೆ ಗೋವಾ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಪಡೆಯುವವರ ಪಟ್ಟಿಯಲ್ಲಿ 576 ಜನ ಇರುವುದನ್ನು ನಮೂದಿಸಲಾಗಿದೆ. ಎಂಡೋಸಲ್ಫಾನ್‌ ಸಂತ್ರಸ್ತರೂ ಇದ್ದಾರೆ! ಉಡುಪಿ ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಿಂದೆ ಗೋಡಂಬಿ ಬೆಳೆ ಸಂರಕ್ಷಣೆಗೆ ನಿಷೇಧಿತ ಎಂಡೋಸಲ್ಫಾನ್‌ ಕ್ರಿಮಿನಾಶಕ ಬಳಸಿದ್ದರಿಂದ ದೈಹಿಕ ಅಂಗವೈಕಲ್ಯಕ್ಕೆ ಒಳಗಾದವರನ್ನು ಎಂಡೋಸಲ್ಫಾನ್‌ ಸಂತ್ರಸ್ತರು ಎಂದು ಗುರುತಿಸಲಾಗಿತ್ತು. ಕುಷ್ಟಗಿ ತಾಲ್ಲೂಕಿನ ತಹಶೀಲ್ದಾರ್‌ ನೀಡಿರುವ ಮಾಹಿತಿಯಲ್ಲಿ 6984 ಜನ ಮಾಸಾಶನ ಫಲಾನುಭವಿಗಳ ಸಂಖ್ಯೆ ಇದೆ.

ಇದನ್ನೂ ನೋಡಿ: ದೇಶದ ಮೊದಲ ಮುಸ್ಲಿಂ ಶಿಕ್ಷಕಿ | ಫಾತಿಮಾ ಶೇಖ್ : ಶಿಕ್ಷಣಕ್ಕೆ ಅವರ ಕೊಡುಗೆಗಳೇನು? ವಿಶ್ಲೇಷಣೆ : ಕೆ. ಪರೀಫಾ

Donate Janashakthi Media

Leave a Reply

Your email address will not be published. Required fields are marked *