ನೇಮಕಾತಿಗೆ ಆಗ್ರಹ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೋಲೀಸರು

ಧಾರವಾಡ: ನೇಮಕಾತಿಗೆ ಆಗ್ರಹಿಸಿ ಶ್ರೀನಗರ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆಗೆ ಮುಂದಾದ ಜನ ಸಾಮಾನ್ಯರ ವೇದಿಕೆಯವರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದ ಘಟನೆ ಡಿಸೆಂಬರ್‌ 1ರಂದು ನಡೆದಿದೆ. ಪ್ರತಿಭಟನಕಾರರನ್ನು ಪೋಲೀಸರು ಎರಡು ವಾಹನಗಳಲ್ಲಿ ಕರೆದೊಯ್ದರು.

ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

ಉದ್ಯೋಗಕ್ಕಾಗಿ ಆಗ್ರಹಿಸಿದರೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಿದರು ಎಂದು ಪ್ರತಿಭಟನಕಾರರು ದೂರಿದರು.

ಇದನ್ನೂ ಓದಿ: ಒಳಮೀಸಲಾತಿ: ನೇಮಕಾತಿ‌ ಮುಂದುವರಿಸಲು ಷರತ್ತುಬದ್ಧ ಅನುಮತಿ – ಹೈಕೋರ್ಟ್

ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಲು ಆಗ್ರಹ

ಪೊಲೀಸರು ವಶಕ್ಕೆ ಪಡೆದಿರುವ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಿ ಶ್ರೀನಗರ ವೃತ್ತಕ್ಕೆ ಕರೆ ತರಬೇಕು ಎಂದು ರೈತ ಸಂಘ ಸಹಿತ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಶ್ರೀನಗರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟ ಹತ್ತಿಕ್ಕುವುದು ಸರಿಯಲ್ಲ. ಪ್ರತಿಭಟನಕಾರರನ್ನ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ರೈತ ಮುಖಂಡ ಶಂಕರಪ್ಪ ಅಂಬಲಿ ಒತ್ತಾಯಿಸಿದರು.

ಶರಣು ಗೊನವರ, ಎಐಎಂಎಸ್‌ಎಸ್ ಸಂಘಟನೆಯ ಅನಸೂಯಾ, ಬಸವರಾಜ ಧರ್ಮ ಇದ್ದರು.

ಇದನ್ನೂ ನೋಡಿ: ಮತದಾರರ ವಿಶೇಷ ಪರಿಷ್ಕರಣೆ ಅಂದರೆ ಹಿಂದೂ ರಾಷ್ಟ್ರ ನಿರ್ಮಾಣವಾ?! – ಡಾ.ಕೆ.ಪ್ರಕಾಶ್ Janashakthi Media

 

Donate Janashakthi Media

Leave a Reply

Your email address will not be published. Required fields are marked *