ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಟೆಲಿಪ್ರಾಂಪ್ಟರ್ ಸಹಾಯವಿಲ್ಲದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲಾರರು ಎಂದು ಕರ್ನಾಟಕ ಕಾಂಗ್ರೆಸ್ ಎಕ್ಸ್‌ನಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದೆ. ಸಹಾಯ
ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಶಬ್ದ ಕೂಡ ಮಾತಾಡಲು ಸಾಧ್ಯವೇ ಇಲ್ಲ ಎಂದು ಮೋದಿ ದೆಹಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿರುವ ವಿಡಿಯೊವನ್ನು ಹಂಚಿಕೊಂಡಿದೆ.
‘ದೆಹಲಿಯಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಕೈಕೊಟ್ಟಾಗ ಮೋದಿಯಿಂದ ‘ಮೌನವೃತ’ ಆಚರಣೆ.. ನರೇಂದ್ರ ಮೋದಿ ಅವರು ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಶಬ್ದ ಕೂಡ ಮಾತಾಡಲು ಸಾಧ್ಯವೇ ಇಲ್ಲ… ಏಕೆಂದರೆ ‘ಒಳಗಡೆ’ ಏನೂ ಇಲ್ಲ. ಎಂದು ಕುಹಕವಾಡಿದೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಮನೆ ಮುಂದೆ ಬಿಜೆಪಿ ಪ್ರತಿಭಟನೆ: ರೆಡ್ ಕಾರ್ಪೆಟ್ ಹಾಸಿ ಪಾನಿಯ ವ್ಯವಸ್ಥೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು
ರೋಹಿಣಿ ಬಡಾವಣೆಯಲ್ಲಿ ದೆಹಲಿ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಎಎಪಿ ಸರ್ಕಾರ ದೆಹಲಿಯ ಪಾಲಿಗೆ ‘ವಿಪತ್ತು’. ದೆಹಲಿಯು ಈ ‘ವಿಪತ್ತಿ’ನಿಂದ ಪಾರಾದ ನಂತರವೇ ಅಭಿವೃದ್ಧಿಯ ಡಬಲ್ ಎಂಜಿನ್ ಇಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿದ್ದರು.
‘ಎಎಪಿ ಸರ್ಕಾರ ರಾಜಧಾನಿಯಲ್ಲಿ ಕೇಂದ್ರದ ಜೊತೆಗೆ ಸಂಘರ್ಷ ಮಾಡುತ್ತಲೇ ಒಂದು ದಶಕ ಪೋಲು ಮಾಡಿತು. ಇಲ್ಲಿ ಅಭಿವೃದ್ಧಿ ಯೋಜನೆಗಳ ಸಾಕಾರಕ್ಕಾಗಿ ಬಿಜೆಪಿಗೆ ಒಂದು ಅವಕಾಶ ಕಲ್ಪಿಸಬೇಕು’ ಎಂದು ಹೇಳಿದ್ದರು.
ಇದನ್ನೂ ನೋಡಿ: ಬಯ್ಯಾರೆಡ್ಡಿಯವರ ಹೃದಯ ಸದಾ ಹೋರಾಟಗಳಿಗೆ ಮಿಡಿಯುತ್ತಿತ್ತು – ಸಿಎಂ ಸಿದ್ದರಾಮಯ್ಯ Janashakthi Media