‘ಮಿಷನ್ ಮೋಡ್’ನಲ್ಲಿ 18 ತಿಂಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ – ಪ್ರಧಾನಿ ಮೋದಿ ಸೂಚನೆ, ಅದರೆ ಖಾಲಿ ಇರುವುದು ಕೋಟಿ ಕೋಟಿ ಹುದ್ದೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಮಾನವ ಸಂಪನ್ಮೂಲಗಳ ಸ್ಥಿತಿ-ಗತಿಯನ್ನು  ಾಮರ್ಶಿಸಿದರು ಮತ್ತು ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಜನಗಳ ನೇಮಕಾತಿಯನ್ನು ಮಿಷನ್‍ ವಿಧಾನದಲ್ಲಿ ಮಾಡಬೇಕೆಂದು ಸೂಚನೆ ನೀಡಿದ್ದಾರೆ” ಎಂದು ಜೂನ್‍ 14ರ ಬೆಳಿಗ್ಯೆ ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್‍ ಮಾಡಿದೆ. ಈ ಸೂಚನೆಯ ಬೆನ್ನ ಹಿಂದೆಯೇ. ಆಗಲೇ ಗೃಹ ಮಂತ್ರಾಲಯದಲ್ಲಿ ಈ ‘ಮಿಷನ್’ ಆರಂಭವಾಗಿದೆ ಎಂದೂ ಸುದ್ದಿ ಬಂದಿದೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಬರುತ್ತಿರುವ ವಿಶ್ಲೇಷಣೆ-ವಿಮರ್ಶೆಗಳು  ಮತ್ತು ಈ ಬಗ್ಗೆ ಪ್ರತಿಪಕ್ಷಗಳ ಸತತ ಟೀಕೆ-ಟಿಪ್ಪಣಿಗಳ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಈ ನಿರ್ದೇಶನ ಬಂದಿದೆ; ಅಂದರೆ, 2024ರ ಲೋಕಸಭೆ ಚುನಾವಣೆಯ ಸಮಯದಲ್ಲಿ ನಿರುದ್ಯೋಗ ಸಮಸ್ಯೆಯ ಕುರಿತು ತನ್ನ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಟೀಕೆಗಳನ್ನು ಎದುರಿಸಲು ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ಏನಾದರೂ ಗಟ್ಟಿಯಾಗಬೇಕೆಂದು ಆಶಿಸುತ್ತಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.

ಸಹಜವಾಗಿಯೇ ಇದಕ್ಕೆ ಪ್ರತಿಪಕ್ಷಗಳ ತೀಕ್ಷ್ಣ ಟಿಪ್ಪಣಿಗಳು ಬಂದಿವೆ. 2014ರಲ್ಲಿ ಬಿಜೆಪಿ ನೀಡಿದ ಆಶ್ವಾಸನೆಯ ಪ್ರಕಾರ ಪ್ರತಿವರ್ಷಕ್ಕೆ  2 ಕೋಟಿಯಂತೆ ಇದುವರೆಗೆ 16 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಈಗ ಒಂದೂವರೆ ರ್ಷದಲ್ಲಿ 10ಲಕ್ಷ ಉದ್ಯೋಗಗಳ ಮಾತಾಡುತ್ತಿದ್ದಾರೆ. ಸರಕಾರೀ ಕಚೇರಿಗಳಲ್ಲಿ 60ಕ್ಷ ಹುದ್ದೆಗಳು ಖಾಲಿಯಿವೆ. ಕೇಂದ್ರ ಸರಕಾರದಲ್ಲೇ 30 ಲಕ್ಷ ುದ್ಯೋಗಗಳು ಖಾಲಿಯಿವೆ. ಎಂದಿನ ವರೆಗೆ  ಈ ‘ಜುಮ್ಲಾಬಾಜಿ’ ಎಂದು ಕಾಂಗ್ರೆಸ್‍ ವಕ್ತಾರ ಹೇಳಿದ್ದಾರೆ.

ಪ್ರತಿವರ್ಷ ಕೋಟ್ಯಂತರ ಉದ್ಯೋಗಳ ತನ್ನ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗಿರುವ ಮೋದಿ ಈಗ, ದಾಖಲೆ ಮಟ್ಟದ ನಿರುದ್ಯೋಗದ ಎದುರಲ್ಲಿ ತನ್ನ ಶೋಚನೀಯ ದಾಖಲೆಯಿಂದ ಟೀಕೆಯನ್ನು ತಿರುಗಿಸಲಿಕ್ಕಾಗಿ ಇದನ್ನು ಪ್ರಕಟಿಸಿದ್ದಾರೆ ಎಂದು ಸಿಪಿಐ(ಎಂ) ಟೀಕಿಸಿದೆ.

ಆಗಾಗ ನಿರುದ್ಯೋಗದ ಪ್ರಶ್ನೆಯನ್ನು ಎತ್ತುತ್ತಿರುವ ಬಿಜೆಪಿಯ ನಾಯಕ ವರುಣ್‍ ಗಾಂಧಿ ಕೂಡ ನಿರುದ್ಯೋಗಿ ಯುವಜನರ “ನೋವು ಮತ್ತು ವೇದನೆ”ಯನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಈ ಪ್ರಕಟಣೆಯನ್ನು ಸ್ವಾಗತಿಸುತ್ತಲೇ , ನಿರುದ್ಯೋಗವು ದೇಶದ ಅತ್ಯಂತ ಜ್ವಲಂತ ಸಮಸ್ಯೆಯಾಗಿರುವುದರಿಂದ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಒಂದು ಕೋಟಿಗೂ ಹೆಚ್ಚು “ಮಂಜೂರಾದ” ಖಾಲಿಹುದ್ದೆಗಳನ್ನು ಭರ್ತಿ ಮಾಡಲು ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಅಂಕಿಅಂಶಗಳ ಪ್ರಕಾರ- ಭಾರತದಲ್ಲಿ ಕೊವಿಡ್‍ ಮಹಾಸೋಂಕಿನಿಂದಾಗಿ ಉದ್ಯೋಗ ಕಳೆದುಕೊಂಡ ಒಟ್ಟು ಸಂಬಳದಾರರ ಸಂಖ್ಯೆ 1.89 ಕೋಟಿ. ಸಿ.ಎಂ.ಐ.ಇ. ಪ್ರಕಾರ, ಮುಖ್ಯವಾಗಿ ಅನೌಪಚಾರಿಕ ವಲಯದ ಚಟುವಟಿಕೆಗಳಿಂದಾಗಿ, ಒಟ್ಟಾರೆ ಉದ್ಯೋಗ ದರದಲ್ಲಿ ಚೇತರಿಕೆಯ ಹೊರತಾಗಿಯೂ ಇದು ಸಂಭವಿಸಿದೆ.

ಸುಮಾರು  80% ಕಾರ್ಮಿಕರು ನಗರ ಪ್ರದೇಶಗಳಲ್ಲಿ ಮತ್ತು 56% ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ‘ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯ್ಮೆಂಟ್‌’ ನ ಮತ್ತೊಂದು ಅಧ್ಯಯನವು ಹೇಳುತ್ತದೆ.

ವೇತನ ಮತ್ತು ಭತ್ಯೆಗಳ ಮೇಲಿನ ವೆಚ್ಚದ ಇಲಾಖೆಯ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 1, 2020 ರಂತೆ ಸ್ಥಾನದಲ್ಲಿರುವ ಒಟ್ಟು ಸಾಮಾನ್ಯ ಕೇಂದ್ರ ಸರ್ಕಾರಿ ಸಿವಿಲಿಯನ್ ಉದ್ಯೋಗಿಗಳ ಸಂಖ್ಯೆ 31.91 ಲಕ್ಷ. ಆದರೆ  ಮಂಜೂರಾಗಿರುವ ಉದ್ಯೋಗಳ ಸಂಖ್ಯೆ 40.78 ಲಕ್ಷ. ಅಂದರೆ  21.75% ಹುದ್ದೆಗಳು ಖಾಲಿ ಇವೆ.

ಈ ವರದಿಯ ಪ್ರಕಾರ ಒಟ್ಟು ಮಾನವಶಕ್ತಿಯ ಸುಮಾರು 92% ರೈಲ್ವೇ, ರಕ್ಷಣಾ (ಸಿವಿಲಿಯನ್), ಗೃಹ ವ್ಯವಹಾರಗಳು, ಅಂಚೆ  ಮತ್ತು ರೆವಿನ್ಯೂ ಈ ಐದು ಪ್ರಮುಖ ಸಚಿವಾಲಯಗಳು ಅಥವಾ ಇಲಾಖೆಗಳಲ್ಲೇ ಇವೆ.

ಒಟ್ಟು 31.33 ಲಕ್ಷ (ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ) ಉದ್ಯೋಗಳಲ್ಲಿ,  ರೈಲ್ವೆಯ ಶೇಕಡಾವಾರು ಪಾಲು 40.55, ಗೃಹ ವ್ಯವಹಾರಗಳು 30.5, ರಕ್ಷಣಾ (ಸಿವಿಲಿಯನ್‍) 12.31, ಹುದ್ದೆಗಳು 5.66, ಕಂದಾಯ 3.26 ಮತ್ತು ಇತರ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು 7.72.

ಕೇಂದ್ರಾಡಳಿತ ಪ್ರದೇಶಗಳು ಮತ್ತು ಮಿಷನ್‌ಗಳ ನೌಕರರು ಸೇರಿದಂತೆ ಕೇಂದ್ರ ಸರ್ಕಾರದ ನಿಯಮಿತ ನಾಗರಿಕ ಉದ್ಯೋಗಿಗಳಿಗೆ ವೇತನ ಮತ್ತು ಭತ್ಯೆಗಳ (ಉತ್ಪಾದಕತಾ ಬೋನಸ್ ಅಥವಾ ತಾತ್ಕಾಲಿಕ ಬೋನಸ್, ಗೌರವಧನ, ಗಳಿಸಿದ ರಜೆಯ ನಗದೀಕರಣ ಮತ್ತು ಪ್ರಯಾಣ ಭತ್ಯೆಯನ್ನು ಹೊರತುಪಡಿಸಿ) ಒಟ್ಟು ವೆಚ್ಚವು 2019-20 ರಲ್ಲಿ  ರೂ 2,25,744.7 ಕೋಟಿ ಆಗಿತ್ತು. 2018-19 ರಲ್ಲಿ 2,08,960.17 ಕೋಟಿ ಇತ್ತು.

ಈ ವರದಿಯ ಪ್ರಕಾರ, ಕೇಂದ್ರ ಪೊಲೀಸ್ ಪಡೆಗಳಲ್ಲಿ ಮಾರ್ಚ್ 1, 2020 ರ ವೇಳೆಗೆ  10.16 ಲಕ್ಷದ ಮಂಜೂರಾದ ಬಲದ ಪ್ರತಿಯಾಗಿ 9.05 ಲಕ್ಷ ಉದ್ಯೋಗಿಗಳು ಇದ್ದಾರೆ.

Donate Janashakthi Media

Leave a Reply

Your email address will not be published. Required fields are marked *