ಕೊಪ್ಪಳ: ಯಲಬುರ್ಗಾದ ಮಲಕ ಸಮುದ್ರ ರಸ್ತೆಗೆ ಇರುವ ಶ್ರೀ ಸಿದ್ದರಾಮಯ್ಯ ನಗರದ ಸರ್ವೇ ನಂಬರ್ 222 ಮತ್ತು ಸರ್ವೆ ನಂಬರ್ 224 ರಲ್ಲಿ ಹಾಲುಮತ ಸಮಾಜದ ಹೆಸರಿನಲ್ಲಿ ಪ್ಲಾಟುಗಳು ಮಾಯವಾಗಿವೆ ಭ್ರಷ್ಡಚಾರದಲ್ಲಿ ಭಾಗಿಯಾದ ತಪಿತಸ್ಥರ ಮೇಲೆ ಬೆಂಗಳೂರಿನ ಉಪ ಲೋಕಯುಕ್ತರು ದಾಳಿನಡೆಸಿ ತನಿಖೆಮಾಡಿ ಹಾಲುಮತ ಸಮಾಜದ ಸಂಘ, ಸಂಸ್ಥೆಗಳಿಗೆ ಹಾಗು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗು ರಾಜ್ಯ ರೈತ ಸಂಘ (ವಾಸುದೇವ ಮೇಟಿ ಬಣದ) ಯಲಬುರ್ಗಾ ತಾಲೂಕಿನ ಅದ್ಯಕ್ಷ ಶರಣಬಸಪ್ಪ ದಾನದಕೈ ಅಕ್ಟೋಬರ್ 30 ರಂದು ಉಪ ಲೋಕಯುಕ್ತರಿಗೆ ದೂರನ್ನು ಸಲ್ಲಿಸಿದ್ದಾರೆ.
ದೂರಿನಲ್ಲಿ ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಮತ್ತು ಸಮಾಜದ ಸಂಘ ಸಂಸ್ಥೆಗಳಿಗೆ ಪ್ಲಾಟುಗಳನ್ನು ವಿತರಿಸಿ ಉಳಿದ ಸದಸ್ಯರಿಗೆ ಹಣ ಕೊಟ್ಟಿರುವ ಸದಸ್ಯರಿಗೆ 30×40 ಸೈಜ್ ಪ್ಲಾಟುಗಳನ್ನು ಹಂಚಿಕೆ ಮಾಡಿಕೊಡಬೇಕು ಎಂದು ನಿರ್ಧಾರ ಮಾಡಲಾಗಿತ್ತು. ಈ ವ್ಯವಹಾರದಲ್ಲಿ ಭಾಗವಹಿಸಿದ ಹನುಮಂತಪ್ಪ ಕೊಂಡಗುರಿ ಶಿಕ್ಷಕರು ಸಾ/ ಹಿರೇ ಅರಳಿಹಳ್ಳಿ ಇವರು ತಮ್ಮ ಸಹೋದರ ಶರಣಪ್ಪ ಕೊಂಡುಗುರಿ ಇವರ ಹೆಸರಿಗೆ 222 ರ ಸರ್ವೇ ನಂಬರ ಜಮೀನು ಮತ್ತು 224 ರ ಸರ್ವೇ ನಂಬರ್ ಜಮೀನನ್ನು ಕೆರಿಬಸಪ್ಪ ನಿಡುಗುಂದಿ ಇವರ ಹೆಸರಿಗೆ ಖರಿದಿ ಮಾಡಿ ಎನ್.ಎ ಮಾಡಿಸಿ ಪ್ಲಾಟುಗಳನ್ನು ವಿತರಿಸಬೇಕೆಂದು ತೀರ್ಮಾನಿಸಿ, ಇದರ ಮುಂದಾಳತ್ವವನ್ಬು ಸೋಮಶೇಖರ ಹರ್ತಿ ನಿವೃತ್ತ ಶಿಕ್ಷಕರು ಭಾಗ್ಯನಗರ ಹಾಗು ಮಲ್ಲಪ್ಪ ಜೋಗಿನ ಇವರು ವಹಿಸಿದ್ದರು.
ಆದರೆ ಫ್ಲಾಟುಗಳನ್ನು ಸರಿಯಾಗಿ ವಿತರಣೆ ಮಾಡಲಾರದೆ ಭ್ರಷ್ಟಾಚಾರ ಮಾಡಿದ್ದಾರೆ. ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೊಲೀಸ ಪಾಟೀಲ ಇವರು ಬಗೆ ಹರಿಸುವದಾಗಿ ಹೇಳಿ ತಾವು ಈಗ ನೂತನ ಮನೆ ನಿರ್ಮಿಸಿಕೊಂಡಿದ್ದಾರೆ ಆದರೆ ಈ ವಿಷಯದ ಬಗ್ಗೆ ಮೌನವಾಗಿದ್ದಾರೆ ಏಕೆ? ಭ್ರಷ್ಟಚಾರ ಯಾರಿಂದ ಆಗಿದೆ ಎಂಬುದನ್ನು ತನಿಖೆ ನಡೆಸಬೇಕು .
ಇದನ್ನೂ ಓದಿ: ವಿಜಯಪುರ | ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆದ ಹೋರಾಟಕ್ಕೆ 50 ದಿನ ಪೂರ್ಣ
ಇದರಲ್ಲಿ ಶ್ರೀ ಕನಕದಾಸ ಯುವಕ ಮಂಡಳ, ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘ, ಯಲಬುರ್ಗಾ ತಾಲೂಕು ಕುರುಬರ ಸಂಘ, ಕನಕ ಭವನ ಹಾಗು ಪ್ಲಾಟುದಾರರಾದ ಶರಣಬಸಪ್ಪ ದಾನದಕೈ ಯಲಬುರ್ಗಾ, ದೇವಪ್ಪ ಭೀಮಪ್ಪ ಬಾವಿಕಟ್ಟಿ ಭಟಪನಹಳ್ಳಿ ಪುಷ್ಪಲತಾ ಹನುಮಂತಪ್ಪ ದಾನಕೈ ಯಲಬುರ್ಗಾ ಹಾಗೂ ಇತರ ಜನರಿಗೆ ಮೋಸ ಮಾಡಿದ್ದಾರೆ.
ಸಮಾಜದಲ್ಲಿ ತಪ್ಪು ಮಾಡುವದು ತಪ್ಪಲ್ಲ ಮಾಡಿದ ತಪ್ಪನ್ನು ತಪ್ಪಿಲ್ಲ, ತಪ್ಲಿಲ್ಲಾ ಎಂದು ವಾದಿಸುತ್ತವೆ ಅದು ದೊಡ್ಡ ತಪ್ಪು. ಅಂತಹ ತಪ್ಪುಗಳನ್ನು ತಿದ್ದಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ ತಿಳಿದು ಬದುಕ ಬೇಕಾದವರು ತುಳಿದು ಬದುಕುತ್ತಿದ್ದಾರೆ. ಬೇಲಿಯೆ ಎದ್ದು ಹೊಲವನ್ನು ಮೆದಂತೆ ಆಗಿದೆ, ಕುರುಬ ಸಮಾಜದ ಮುಖಂಡರಿಂದ ಕುರುಬರಿಗೆ ಅನ್ಯಾಯವಾಗಿದೆ.
ಇವರು ಹಾಲುಮತ ಸಮಾಜದ ಸಂಘ ಸಂಸ್ಥೆಗಳ ಪ್ಲಾಟುಗಳನ್ನು ಗುಳುಂ ಮಾಡಿದ್ದಾರೆ, ಸಮಾಜಕ್ಕಾಗಿ ಉಳಿಸಿದ ಪ್ಲಾಟುಗಳನ್ನು ಬೇರೆಯವರಿಗೆ ಮಾರಿ ಹಂಚಿಕೆ ಮಾಡಲಾರದೆ ಮೊಸಮಾಡಿದ್ದಾರೆ, ತಪಿತಸ್ಥರ ಮೇಲೆ ಕ್ರಮ ತಗೆದುಕೊಂಡು ತನಿಖೆ ಮಾಡಿ ನಮ್ಮ ಸಮಾಜಕ್ಕೆ ಹಾಗು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಉಪಲೋಕಯುಕ್ತರಲ್ಲಿ ಶರಣಬಸಪ್ಪ ಕಲ್ಲಪ್ಪ ದಾನದಕೈ ಅವರು ದೂರು ಸಲ್ಲಿಸಿ ಮನವಿ ಸಲ್ಲಿಸಿದ್ದಾರೆ.
ಹಿನ್ನಲೆ ಎನು?
ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಸರ್ವೆ ನಂಬರ್ 224 ರ ಪೂಜಾರಪ್ಪ ಬಂಡಿಹಾಳ ಇವರ ಜಮೀನು ಒಂದು ಎಕರೆ ಹನ್ನೊಂದು ಗುಂಟೆ ಜಮೀನು ಹಾಗು ಸರ್ವೆ ನಂಬರ 222 ರ ರೇವಣೆಪ್ಪ ಹಿರೇಕುರಬರ ಇವರ ಒಂದು ಎಕರೆ ಜಮೀನು ಖರೀದಿ ಮಾಡಿ, ಎನ್.ಎ.ಮಾಡಿಸಿ ಅದರಲ್ಲಿ ಸಮಾಜಕ್ಕೆ ಪ್ರಥಮ ಪ್ರಾಮುಖ್ಯತೆ ಕೊಟ್ಟು ಇತರ ಪ್ಲಾಟುಗಳನ್ನು ಹಣ ಕೊಟ್ಟಿರುವ ಸದಸ್ಯರಿಗೆ ಡ್ರಾ ಮಾಡಿ ವಿತರಿಸಬೇಕು ಎಂದು ತಿರ್ಮಾನಿಸಿ ಹಿರಿಯರು ಮತ್ತು ಸದಸ್ಯರು ಕೂಡಿಕೊಂಡು ಅವರ ಹೆಸರಿಗೆ ಎನ್.ಎ ಮಾಡಿದ್ದಾರೆ.
ಇಲ್ಲಿಯವರೆಗೆ ಲೇಖ್ಖ ಪತ್ರಗಳನ್ನು ನಿಡಿಲ್ಲ, ಇದರ ಬಗ್ಗೆ ವಾರ ಪತ್ರಿಕೆ, ಪಾಕ್ಷಿಕ ಪತ್ರಿಕೆ, ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದರು ಸುಮ್ಮನಿದ್ದಾರೆ, ಸರ್ವೆ ನಂಬರ್ 222ರ ಜಮೀನು ಮಾಲಿಕರು ಇವರಿಗೆ ಸಂಚಾಗರ ಒಂದು ಲಕ್ಷ ರೂ ಕೊಟ್ಡವರು ಯಾರು? ಇದನ್ನು ತಿಳಿಯಲಾರದೆ ಪ್ರಥಮ ಹಂತದಲ್ಲಿ ನಯ ಪೈಸೆ ಕೊಡಲಾರದವರು ಪ್ಲಾಟುಗಳನ್ನು ನುಂಗಿ ನೀರು ಕುಡಿದ್ದಾರೆ.
ತಾಳಿದವನು ಬಾಳಿಯೆನು ಎನ್ನುವಂತೆ ತಾಳ್ಮೆಯಿಂದ ಸಹಿಸಿಕೊಂಡು ಬಂದಿರುವೆ, ಗುಬ್ಬಿ ಮೇಲೆ ಬ್ರಹ್ಮಷ್ತ್ರ ಬಿಡುತ್ತಾರೆ. ಇವರದು ತಪ್ಪಿಲ್ಲವೆಂದರೆ ಇದುವರೆಗೂ ಬಹಿರಂಗವಾಗಿ ಸಭೆ ಲೇಖ್ಖ ಪತ್ರಗಳನ್ನು ಏಕೆ ನೀಡಲಿಲ್ಲ? ಇಂತಹ ಭ್ರಷ್ಟಚಾರದಲ್ಲಿ ನಿರತರಾದ ವ್ಯಕ್ತಿ ಹಾಗು ಇವರ ಕುಟುಂಬದವರ ಮನೆಯನ್ನು ಲೋಕಯುಕ್ತರು ಸಮಯ ನೋಡಿ ದಾಳಿ ಮಾಡಿದಾಗ ಇವರ ಭ್ರಷ್ಡಚಾರ ಹೊರ ಬರಲು ಸಾದ್ಯವಾಗುತ್ತದೆ ಎಂದು ರೈತ ಮುಖಂಡ ಹೊರಾಟಗಾರ ಶರಣಬಸಪ್ಪ ದಾನಕೈ ಅವರು ಮಾದ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ನೋಡಿ: ನಿರಂಜನರ ಕಥನ ಸಾಹಿತ್ಯದಲ್ಲಿ ಮಹಿಳೆ – ಡಾ ಎನ್. ಗಾಯತ್ರಿ Janashakthi Media
