ಭೂಪಾಲ್: ಮಹಿಳೆಯೊಬ್ಬಳಿಗೆ ಗಂಡ, ಅತ್ತೆ, ಮಾವ ಸೇರಿಕೊಂಡು ಆಕೆಯ ಗುಪ್ತಾಂಗಕ್ಕೆ ಮೆಣಸಿನಕಾಯಿ ಪುಡಿ, ಕಾದ ಕಬ್ಬಿಣದ ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗುಪ್ತಾಂಗ
ಮಧ್ಯಪ್ರದೇಶದ ರಾಜಗಡದಲ್ಲಿರುವ ತಮ್ಮ ಮನೆಯಲ್ಲಿ ಸೊಸೆಯನ್ನು ಮತ್ತೊಬ್ಬ ವ್ಯಕ್ತಿಯ ಜತೆ ನೋಡಿದ್ದಾಗಿ ಹೇಳಿರುವ ಅತ್ತೆ ಮಾವ, ಆ ಕಾರಣಕ್ಕಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ಅತ್ತೆ-ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ, ಅತ್ತೆ ಮತ್ತು ಮಾವ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಆಕೆಯನ್ನು ಬೆತ್ತಲು ಮಾಡಿ ಆಕೆಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿ, ಖಾಸಗಿ ಭಾಗಗಳು, ತೊಡೆಗಳು ಮತ್ತು ದೇಹದ ಇತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟು ಹಾಕಿದ್ದಾರೆ. ಮಾವ ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಾಕಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.
ಇದನ್ನೂ ಓದಿ : ಮನೆಗೆ ನುಗ್ಗಿ 9 ತಿಂಗಳ ಗರ್ಭಿಣಿ ಮಹಿಳೆಯ ಹತ್ಯೆ ಮಾಡಿದ ದುಷ್ಕರ್ಮಿಗಳು
ಡಿಸೆಂಬರ್ 13 ರಂದು ಈ ಘಟನೆ ನಡೆದಿದೆ. ಪತಿ ಮತ್ತು ಮಾವ ಸಂತ್ರಸ್ತೆಯನ್ನು ಬೈಕ್‌ನಲ್ಲಿ ಕರೆದೊಯ್ದು ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆ. ಸದ್ಯ ಮಹಿಳೆ ತನ್ನ ಪೋಷಕರ ಮನೆಯಲ್ಲಿ ಇದ್ದು, ಅಲ್ಲಿ ತನ್ನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ರೋಹಿತ್ ರುಹೇಲಾ ಎಂಬ ವ್ಯಕ್ತಿ ಮಹಿಳೆಯ ಮನೆಗೆ ಬಂದು ಸ್ಟ್ರೀಮ್ ಯಂತ್ರವನ್ನು ಕೇಳಿದ್ದಾನೆ. ಸಂತ್ರಸ್ತೆ ಗೇಟ್ ಬಳಿ ಕಾಯಲು ಹೇಳಿದಾಗ, ಅವನು ಬಾಗಿಲು ಮುಚ್ಚಿ, ಅವಳ ಕೋಣೆಗೆ ಪ್ರವೇಶಿಸಿ ಕಿರುಕುಳ ನೀಡಲು ಪ್ರಯತ್ನಿಸಿದ್ದ ಈ ವೇಳೆ ಆಕೆಯ ಅತ್ತಿಗೆ ಕೊಠಡಿ ಪ್ರವೇಶಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಅತ್ತಿಗೆ ನನ್ನ ಅತ್ತೆ ಮತ್ತು ಮಾವನನ್ನು ಕರೆದು ನನ್ನನ್ನು ದೂಷಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಮೂವರೂ ಚಳಿ ರಾತ್ರಿಯಲ್ಲಿ ನನ್ನನ್ನು ವಿವಸ್ತ್ರಗೊಳಿಸಿದರು ಹಲ್ಲೆ ನಡೆಸಿದರು ಹೀಗಾಗಿ ನಾನು ಪ್ರಜ್ಞಾಹೀನಳಾದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಮರುದಿನ ಬೆಳಿಗ್ಗೆ, ಅವರು ನನ್ನ ಮೇಲೆ ಹಲ್ಲೆ ನಡೆಸಿದರು, ನನ್ನನ್ನು ವಿವಸ್ತ್ರಗೊಳಿಸುವಾಗ, ನನ್ನ ಮಾವ ತನ್ನ ಕೈಯಿಂದ ನನ್ನ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಚ್ಚಿದರು, ಮತ್ತು ನನ್ನ ಅತ್ತೆ ನನ್ನ ತೊಡೆಗಳು ಸೇರಿದಂತೆ ಅನೇಕ ಕಡೆ ಬಿಸಿ ಕಬ್ಬಿಣದ ರಾಡ್‌ನಿಂದ ಸುಟ್ಟರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ : ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಕೊಲ್ಲಲ್ಪಡುತ್ತಿದ್ದಾಳೆ ; ಮನೆಯಲ್ಲೂ ಮಹಿಳೆಗೆ ಸುರಕ್ಷತೆ ಇಲ್ಲJanashakthi Media