ನವದೆಹಲಿ : ಸಾರ್ವತ್ರಿಕಾ ಲೋಕಸಭಾ ಚುನಾವಣೆಗೆ 4ನೇ ಹಂತದ ಮತದಾನ ಆರಂಭವಾಗಿದ್ದು, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳ ಮತದಾತರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಜೊತೆ ಆಂಧ್ರಪ್ರದೇಶದ 175 ಮತ್ತು ಒಡಿಶಾದ 28 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತದಾನ
ಹೈದರಾಬಾದ್‍ನಲ್ಲಿ ಜುಬಿಲಿ ಹಿಲ್ಸ್‍ನಲ್ಲಿ ತೆಲುಗು ಸ್ಟಾರ್ ನಟರಾದ ಅಲ್ಲು ಅರ್ಜುನ್ ಹಾಗೂ ಜೂನಿಯರ್ ಎನ್‍ಟಿಆರ್ ಮತದಾನ ಮಾಡಿದರು. ಹೈದರಾಬಾದ್‍ನ ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಹಾಗೂ ಬಿಜೆಪಿ ಅಭ್ಯರ್ಥಿ ಮಧಾವಿ ಲತಾ ಕೂಡ ಮತ ಚಲಾಯಿಸಿದರು.
ಇದನ್ನು ಓದಿ : ಪ್ರಜ್ವಲ್‌ನನ್ನು ಪ್ರಧಾನಿ ನರೇಂದ್ರ ಮೋದಿಯೇ ರಕ್ಷಿಸುತ್ತಿದ್ದಾರೆ: ಕಾಂಗ್ರೆಸ್ ಟ್ವೀಟ್
ಹಾಗೆಯೇ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಪತ್ನಿ ಉಷಾ ಅವರೊಂದಿಗೆ ಹೈದರಾಬಾದ್‍ನ ಜುಬಿಲಿ ಹಿಲ್ಸ್‍ನಲ್ಲಿ ಮತದಾನ ಮಾಡಿದರು.
ಆಂಧ್ರ ಪ್ರದೇಶದ 25, ಬಿಹಾರ 5, ಜಮ್ಮು ಮತ್ತು ಕಾಶ್ಮೀರ 1, ಜಾರ್ಖಂಡ್ 4, ಮಧ್ಯ ಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಮತ್ತು ಪಶ್ಚಿಮ ಬಂಗಾಳದ 8 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಜೊತೆಗೆ ಆಂಧ್ರಪ್ರದೇಶ ಹಾಗೂ ಒಡಿಶಾ ವಿಧಾನಸಭಾ ಚುನಾವಣೆಗೆ ಇಂದೇ ಮತದಾನ ನಡೆಯುತ್ತಿದೆ. ಮತದಾನ
ಇದನ್ನು ನೋಡಿ : ಮೋದಿ ಅವರ ತೀರ್ಮಾನಗಳು ಕಾರ್ಪೊರೇಟ್ ಕಂಪನಿಗಳ ಪರ, ಕರ್ಮಿಕರ ಪರ ಅಲ್ಲ – ಬಾಬು ಮ್ಯಾಥ್ಯೂ ಆರೋಪ Janashakthi Media