ಪಿಎಚ್‌.ಡಿ. ಮತ್ತು ಎಂ.ಫಿಲ್. ರೀಸರ್ಚ್ ಫೆಲೋಶಿಪ್ ಆದೇಶ ಮರುಪರಿಶೀಲನೆ ಮಾಡಲು ಎಸ್‌ಎಫ್‌ಐ ಒತ್ತಾಯ

ಬೆಂಗಳೂರು: ಅಲ್ಪಸಂಖ್ಯಾತ ವಿದ್ಯಾರ್ಥಿಗಳ  ಪಿಎಚ್‌.ಡಿ. ಮತ್ತು ಎಂ.ಫಿಲ್. Research Fellowships ಆದೇಶ ಮರುಪರಿಶೀಲನೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯು ವಿಧಾನಸೌಧದಲ್ಲಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವರಾದ ಬಿ.ಜಡ್. ಜಮೀರ್ ಅಹ್ಮದ್ ಅವರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದೆ.

‌ನವೆಂಬರ್-07‌ ರಂದು ಸಚಿವರನ್ನು ಭೇಟಿ ಮಾಡಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇದುವರೆಗೂ ತಮ್ಮ ಸರ್ಕಾರದ ಅಧೀನ ಇಲಾಖೆಯು24/01/2017ರ ಸರ್ಕಾರದ ಆದೇಶದಂತೆ ಜಿ.ಆರ್.ಎಫ್ 1 ಮಾದರಿಯಲ್ಲಿ ತಿಂಗಳಿಗೆ 25,000 ರೂ.ಗಳಂತೆ ಪ್ರೋತ್ಸಾಹ ಧನವನ್ನು ಮತ್ತು ವಾರ್ಷಿಕ 10,000 ರೂ.ಗಳಂತೆ ನಿರ್ವಹಣಾ ವೆಚ್ಚವನ್ನು ನೀಡುತ್ತಿದ್ದು, ಇದು ನಮಗೆ ಸಂಶೋಧನೆ ಕೈಗೊಳ್ಳಲು ಸಹಾಯವಾಗಿತ್ತು. ಆದರೆ ಹಿಂದಿನ ಸರ್ಕಾರವು ಜಾರಿಗೆ ತಂದಿರುವ ಯೋಜನೆ ಹಾಗೂ ಅನುರಾಗದ ಕಡಿತದ ನೆಪವೂಡ್ಡಿ ದಿನಾಂಕ: 09-11-2020 ರಂದು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿಗಳ ಮುಖಾಂತರ ತಿದ್ದುಪಡಿ ಆದೇಶ ಜಾರಿಗೆ ತಂದು ಅಂದಿನ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾರ್ಥಿಗಳ ಅಧ್ಯಯನಕ್ಕೆ ಆತಂಕಕ್ಕೆ ಕಾರಣವಾಗಿತ್ತು ಎಂದು ಎಸ್‌ಎಫ್‌ಐ ತಿಳಿಸಿದೆ.

ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಎಸ್‌ಎಫ್‌ಐ ಅಖಿಲ ಭಾರತ ಸಮ್ಮೇಳನ: ʻಫ್ಲಾಗ್‌ ಮಾರ್ಚ್‌ʼಗೆ ಅದ್ಧೂರಿ ಸ್ವಾಗತ

ಆದರೆ ನಾಡಿನ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳ ಮನವಿ, ರಾಜಕೀಯ ಮುಖಂಡರ ವಿರೋಧ ಮತ್ತು ನಾಡಿನ ಬುದ್ಧಿಜೀವಿಗಳ ಒಾಡದಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಸರ್ಕಾರವು ಸರ್ಕಾರಿ ಆದೇಶ ಸಂಖ್ಯೆMWD LAL MDS 2021ಬೆಂಗಳೂರು, ದಿನಾಂಕ:15-04-021 ಪ್ರವಣೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ತಿದ್ದುಪಡಿ ಆದೇಶ ಸಂಖ್ಯೆ: MWD281MDS 2020, ದಿನಾಂಕ:09/10-11-2020ರನ್ನು ಹಿಂಪಡೆಯಲಾಗಿದೆ. ಹಾಗೂ ಅಲ್ಪಸಂಖ್ಯಾತರ ವಿಷಯಗಳ ಬಗ್ಗೆ ಪ್ರಥಮ ಆದ್ಯತೆ ನೀಡಿ ಇನ್ನುಳಿದ ವಿಷಯಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ, ಪಿಎಚ್.ಡಿ, ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್., ಮಾದರಿಯಲ್ಲಿ 2 ವರ್ಷ ಅವಧಿಗೆ ಮಾತ್ರ ಪ್ರತಿ ಮಾಹೆಯಾನ ರೂ.25,000/-ಗಳನ್ನು (ಇಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ಮತ್ತು ಪ್ರತಿ ವರ್ಷಕ್ಕೆ ಒಂದು ಬಾರಿಗೆ ರೂ.10,000/-ಗಳ (ಹತ್ತು ಸಾವಿರ ರೂಪಾಯಿಗಳು ಮಾತ್ರ ನಿರ್ವಹಣಾ ವೆಚ್ಚವನ್ನು (ಪ್ರತಿ ವರ್ಷಕ್ಕೆ ಒಟ್ಟು ಮೊತ್ತ ರೂ3.10ಲಕ್ಷಗಳು)ಫೆಲೋಶಿಫ್ ಮೂಲಕ ವೀಡಲು ಸರ್ಕಾರದ ಆದೇಶ ಸಂಖ್ಯೆ:ಒನ್ 462 ಒಳಖ 2016, ದಿನಾಂಕ:24-01-2017ರಲ್ಲಿನ ಮಂಜೂರಾತಿ ರಾಜ್ಯಪಾಲರ ಆದೇಶನದಾರ ಸರ್ಕಾರದ ಮತ್ತು ಷರತ್ತುಗಳನ್ನು ಮುಂದುವರೆಸಲಾಗಿದೆ ಉಪಕಾರ್ಯದರ್ಶಿ ಮುಖಾಂತರ ಜಾರಿಗೆ ತಂದು ಆತಂಕ್ಕೊಳಗಾದ ಅಲ್ಪಸಂಖ್ಯಾತ ಸಮುದಾಯದ ಸ೦ಶೋಧನಾರ್ಥಿಗಳಿಗೆ ಉಸಿರಾಡುವಂತೆ ಮಾಡಿತು ಎಂದರು.

ಆದರೆ 28/06/2022 ರಂದು ಕರ್ನಾಟಕ ರಾಜ್ಯಪಾಲರ ಸರ್ಕಾರದ ಆದೇಶನುಸಾರ ಸರ್ಕಾರದ ಉಪಕಾರ್ಯದರ್ಶಿಗಳ ಮುಖಾಂತರ ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರಿ ಆದೇಶ ಸಂಖ್ಯೆ : MWD 198 ಒಳಖ 2022, ಬೆಂಗಳೂರು. ಫೆಲೋಶಿಪ್‌ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಷರತ್ತುಗಳಿಗೊಳಪಟ್ಟು ಸರ್ಕಾರ ಮಂಜೂರಾತಿ ನೀಡಿದ ಆದೇಶವು ಸರ್ಕಾರದ ಆದೇಶ ಸಂಖ್ಯೆ:MWD462 MDS2016, ದಿನಾಂಕ:24-01- 2017ರಲ್ಲಿನ ಮಂಜೂರಾತಿ ಮತ್ತು ಷರತ್ತುಗಳನ್ನು ಮುಂದುವರಿಕೆಯ ತದ್ವಿರುದ್ಧವಾಗಿದೆ. ಈಗಾಗಲೇ ತಿದ್ದುಪಡಿ ಆದೇಶವನ್ನು ದಿನಾಂಕ : 15/04/2021ರಂದುಸರ್ಕಾರವು ಹಿಂಪಡೆದು ಈ ಯೋಜನೆಯು ಮುಂದುವರಿಕೆಯ ಭಾಗವೆಂದು ಪರಿಗಣಿಸಿ ಮಾನ್ಯ ಮಾಡಿತ್ತು. ಆದರೆ ಯಾವ ಕಾರಣಕ್ಕಾಗಿ ಮತ್ತೆ ಈ ಆದೇಶವನ್ನು ತಳ್ಳಿ ಹಾಕಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಶೋಧನಾ ಅಧ್ಯಯನಕ್ಕೆ ತೊಡಕಾಗುವಂತೆ ಮಾಡಿದೆ.

ಇದನ್ನೂ ಓದಿ:ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ವಿಸ್ತರಣೆಗೆ ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ

ಹಾಗೆಯೇ ದಿನಾಂಕ: 11/10/2023ರಂದು ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಂದ ತಮ್ಮ ಅಧೀನ ಇಲಾಖೆಯ ಅಲ್ಪಸಂಖ್ಯಾತ ನಿರ್ದೇಶನಾಲಯ, ನಿರ್ದೇಶಕರಿಗೆ ನಿರ್ದೇಶನ ಮಾಡಿರುವ ಮೂರು ಮುಖ್ಯಾಂಶಗಳಲ್ಲಿ 2 ಮತ್ತು 3ನೇ ಅಂಶವು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊರಕಬೇಕಾದ ಫೆಲೋಶಿಪ್ ನಿಂದ ವಂಚಿತರನ್ನಾಗಿ ಮಾಡುವಂತೆ ಕಂಡುಬರುತ್ತದೆ. ಜೊತೆಗೆ ದಿನಾಂಕ:19-02-2023 ಹಾಗೂ ದಿನಾಂಕ: 26/08/2023ರಂದು ಅರ್ಜಿ ಸಲ್ಲಿಸಿ ಇಲಾಖೆಯು ಸ್ವೀಕರಿಸಿ ಮಾನ್ಯ ಮಾಡಿರುವ ಸಂಶೋಧನಾರ್ಥಿಗಳಿಗೆ ಮತ್ತು ಅವರು ಈಗಾಗಲೇ ಇಲಾಖೆಯ ನಿರ್ದೇಶಕರ ಮುಖಾಂತರ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರದ ಗಮನಕ್ಕೆ ತಂದಿರುವ ಆಶಯಕ್ಕೆ ಸರ್ಕಾರದ ಕಾರ್ಯದರ್ಶಿಗಳ ನಿರ್ದೇಶನವು ವಿರೋಧ ನೀತಿಯಾಗಿ ಕಂಡುಬರುತ್ತದೆ ಅನಿಸುತ್ತದೆ. ಏಂದರೆ ತನ್ನ ಅಧೀನ ಇಲಾಖೆಗೆ ಪ್ರಶ್ನೆಯನ್ನು ಕೇಳುವುದಕ್ಕಿಂತ ಸಮಸ್ಯೆ ಬಗೆಹರಿಸಬೇಕೆಂದು ನಿರ್ದೇಶನ ಮಾಡಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದೆ.

ಗೌರವಾನ್ವಿತ ಮಂತ್ರಿಗಳಿಗೆ ಕೆಲವೊಂದು ಮನವರಿಕೆಗಳು:

ಪಿ.ಎಚ್‌ಡಿ. ಸಂಶೋಧಗಳು ಇತ್ತೀಚೆಗೆ ಈಗ ಜಾರಿಯಲ್ಲಿರುವ ಫೆಲೋಷಿಪ್ ಕುರಿತು ಹಲವು ಅನುಮಾನಿತ ಪ್ರಶ್ನೆಗಳು, ಯೋಜನೆಯ ಅವಶ್ಯಕತೆ, ಆರೋಪಗಳನ್ನು ಅಧಿಕಾರಿ ವೃಂದಗಳಲ್ಲಿ ಕೇಳುತ್ತಿದ್ದೇವೆ. ಇದು ನಿಜಕ್ಕೂ ನಮ್ಮನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ಭಾರತ ಬಹು ನಮುದಾಯ, ಸಂಸ್ಕೃತಿಗಳ ದೇಶ, ಈ ಸಮುದಾಯದಗಳ ಪೂರ್ಣ ಪ್ರಗತಿಯೇ, ರಾಜ್ಯಗಳ ಮೂಲಕ ರ್ಸವ್ಯವಾಗಿದೆ. ಸಂವಿಧಾನದ ಚೌಕಟ್ಟು, ಆಶಯಗಳಿಗೆ ಅನುಗುಣವಾಗಿ ಈಗ ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಕಾಲಕಾಲಕ್ಕೆ ಯಶಸ್ವಿಯಾಗಿ ಜಾರಿಗೆ ತಂದಿದೆ. ಇದರ ಪರಿಣಾಮ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಪ್ರಗತಿಯೂ ದೇಶಕ್ಕೆ ಮಾದರಿಯಾಗುವ ದಿಕ್ಕಿನಲ್ಲಿದೆ. ಈ ಚಾರಿತ್ರಿಕ ಸತ್ಯವನ್ನು ನಿರಂತರವಾಗಿ ಚಲನೆಯಲ್ಲಿರಲು ಉನ್ನತ ಶಿಕ್ಷಣದ ಬುನಾದಿ ಮಟ್ಟದಲ್ಲಿ ನೆರವಾಗಿರುವ ಎಂ.ಫಿಲ್ (ಪಿಎಚ್.ಡಿ., ಇತರ ಉನ್ನತ ಶಿಕ್ಷಣದ ಫೆಲೋಶಿಪ್ ಯೋಜನೆಗಳನ್ನು ಮುಂದುವರಿಸಬೇಕಾಗಿದೆ. ಇದರಿಂದ ರಾಜ್ಯದ ಯುವಪೀಳಿಗೆ ಅಂತರರಾಜ್ಯ  ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಾಮರ್ಥ್ಯ ಪಡೆಯಲಿದೆ. ಇದು ದೇಶದ ಅಭಿವೃದ್ಧಿಗೆ, ಕರ್ನಾಟಕ ಸರ್ಕಾರದಿಂದ ಅತ್ಯಂತ ಮಹತ್ವದ ಕಾಣಿಕೆ ಎಂದು ಹೇಳಿದೆ.

ಪ್ರಸ್ತುತ ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆಗಳ ದತ್ತಾಂಶಗಳ ಮೂಲಕ ಸರ್ಕಾರವು ಪಡೆದುಕೊಂಡಿದೆ. ನಿಟ್ಟಿನಲ್ಲಿ ಸಮುದಾಯಗಳಿಗೆ ಸಂಬಂಧಿಸಿದ ಇಲಾಖೆಗಳ ಮೂಲಕ ವಿವಿಧ ಯೋಜನೆಗಳಿಗೆ ಹಣಕಾಸಿನ ಸೌಲಭ್ಯವನ್ನು ಒದಗಿಸಲು ಹಣಕಾಸು ಇಲಾಖೆಗೆ ಶಿಫಾರಸ್ಸು ಮಾಡಿರುತ್ತದೆ. ಈ ಹಂಚಿಕೆಯ ಕಾರ್ಯವನ್ನು ಹಣಕಾಸು ಇಲಾಖೆ, ಸಕಾಲಕ್ಕೆ ಬಿಡುಗಡೆ ಮಾಡುತ್ತದೆ. ಇದರ ಕಾರ್ಯ ಸ್ವರೂಪವನ್ನು ಅರಿತಿದ್ದೇವೆ. ಆದರೆ, ಈ ವರ್ಷದಿಂದ ಹೊಸದಾಗಿ ಫೆಲೋಶಿಪ್‌ಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿ ಫೆಲೋಶಿಪ್ ಔಚಿತ್ಯವನ್ನು ಪ್ರಶ್ನಿಸಿರುವುದು ಅಲ್ಪಸಂಖ್ಯಾತ ಸಮುದಾಯಗಳಿಗೆ ಹೊಸ ಅನುಭವ. ಸರ್ಕಾರದಿಂದ ಕೊಡುವ ಹಣವನ್ನು ಪೋಲಾಗದಂತೆ ತಡೆಯುವ ನಿಟ್ಟಿನಲ್ಲಿ, ಹಣಕಾಸು ಇಲಾಖೆ ನಮಗೆ ಪ್ರಶ್ನೆ ಕೇಳಿದ್ದಲ್ಲಿ ಇದನ್ನು ನಾವು ನಿಜಕ್ಕೂ ಶ್ಲಾಘಿಸುತ್ತೇವೆ. ಒಂದು ವೇಳೆ ಫೆಲೋಶಿಪ್‌ಗೆ ಅಡ್ಡಿಯನ್ನು ಉಂಟು ಮಾಡುವ ಉದ್ದೇಶದಿಂದಲೇ ಈ ಪ್ರಶ್ನೆಗಳನ್ನು ಕೇಳಿದರೆ, ಮರುಕ ಪಡಬೇಕಾಗುತ್ತದೆ. ಹಾಗಾಗದೇ,… ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಲ್ಪಸಂಖ್ಯಾತ ಸಮುದಾಯಗಳ ಬೆಳವಣಿಗೆಗೆ ಪೂರಕವಾಗಿರುವ ಈ ಯೋಜನೆಯನ್ನು ಈ ಹಿಂದುಳಿದ ತಮ್ಮದೇ ಸರ್ಕಾರ ಜಾರಿಗೆ ತಂದಿದ್ದ ಎಂ.ಫಿಲ್/ಪಿಎಚ್.ಡಿ. ಫೆಲೋಶಿಪ್‌ನ್ನು ಮಂಜೂರು ಮಾಡಿ ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಅವು. ಕಾರ್ಯ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತದೆ. ಇದಕ್ಕೆ ಸಮುದಾಯದ ಪರವಾಗಿ ತಮ್ಮ ಕಾಳಜಿಗೆ ಮನಃಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.

Room Couro e dos MWD462 MDS 2016, ದಿನಾಂಕ:24-01-2017 ರಲ್ಲಿನ ಮಂಜೂರಾತಿ ಷರತ್ತುಗಳನ್ನು ಮುಂದುವರಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸುತ್ತೇವೆ. ಹಾಗೆಯೇ ನಮ್ಮ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ ಎಂದು  ಹೇಳಿದ್ದಾರೆ.

ಇದನ್ನೂ ಓದಿ:ಬಿಜೆಪಿಯ ದ್ವೇಷ ರಾಜಕಾರಣ ಮುಂದುವರೆಸಿದ ಕಾಂಗ್ರೆಸ್ ಸರ್ಕಾರ | ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ

ಬೇಡಿಕೆಗಳು

  • ಪ್ರತಿ ತಿಂಗಳು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನೀಡಲಾಗುತ್ತಿದ್ದ ರೂ.25,000 ಗಳ ಪ್ರೋತ್ಸಾಹ ಧನ ಮತ್ತು ರೂ.10,000 ಗಳ ನಿರ್ವಹಣಾ ವೆಚ್ಚವನ್ನು ಮುಂದುವರೆಸಬೇಕು.
  • ಎಂ.ಫಿಲ್/ಪಿಎಚ್.ಡಿ ಸಂಶೋಧಗಳಿಗೆ ಫೆಲೋಪಿಲ್ ಯೋಜನೆಯ ಮುಂದುವರೆದ ಭಾಗವಾಗಿ ಹೊಳ ಅರ್ಜಿಗಳನ್ನು ಪಕ್ಷದಲ್ಲಿಯೇ ಕರೆದು 24/01/2017ರ ಸರ್ಕಾರದ ಆದೇಶಕ್ಕೆ ಹೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು.
  • ಈಗಾಗಲೇ ಪಿಎಚ್.ಡಿ, ಫಲೋಶಿ ಯ ಜಿಲ್ಲೆಯಲ್ಲಿ ಸಂಶೋಧನ ವಿದ್ಯಾರ್ಥಿಗಳ ಅರ್ಜಿಯನ್ನು ದಿನಾಂಕ 19/02/2021 ಹಾಗೂ 26/08/2022ರಂದು ಆನ್ಸನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ಅಂದರೆ 2018ರ ಶೈಕ್ಷಣಿಕ ಸಾಲಿಗೆ ಸರ್ವನ್ವಯವಾಗುವಂತೆ ಮಾನ್ಯತೆ ಮಾಡಿ ಕೂಡಲೇ 3 ವರ್ಷ ಪೂರ್ಣಾವಧಿಯ ಫೆಲೋರಿಕ್‌, ಬಿಡುಗಡೆ ಮಾಡಬೇಕು ಹಾಗೆಯೇ ಕೇವಲ 2 ವರ್ಷಗಳ ಅವಧಿಗೆ ಮಾತ್ರ ಪಿಎಚ್‌.ಡಿ. ಫೆಲೋಶಿಪ್ ಪಡೆಯಬಹುದೆಂದು ಸೂಚಿಸಲಾದ ವಿದ್ಯಾರ್ಥಿಗಳಿಗೂ ಯಾವುದೇ ಆಯಕ್ಕೆ ಒಳಪಡಿಸದೆ ಫೆಲೋಶಿಪ್ ಅವಧಿಯನ್ನು ಇವರ ವಿದ್ಯಾರ್ಥಿಗಳಿಗೆ ನಮಗಾಗಿ ವರ್ಷಗಳವರೆಗೆ ಫೆಲೋಶಿಪ್ ನೀಡಬೇಕು ಹಾಗೂ ಈಗಲೇ ಪಡೆಯುತ್ತಿರುವ ಅಭ್ಯರ್ಥಿಗಳ ಅವಾ‌ಡ್‌ ಲ್‌ಟರ್‌ಗಳಲ್ಲಿನ ತಾರತಮ್ಯದ ಅವಧಿಗಳ ಗೊಂದಲವನ್ನು ಪರಿಹರಿಸಿ, ಫೆಲೋಷಿಪ್ ಪಡೆಯಬಹುದಾದ ಮರ್ಕಟರಿಗೆ ಫೆಲೋಷಿಪ್, ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಬೇಕು.
  • ಇತ್ತೀಚೆಗೆ 2022ರ ಆದೇಶ ಸೂಚನೆ ಮತ್ತು ಷರತ್ತುಗಳನ್ನು ರದ್ದುಪಡಿಸಿ ಸರ್ಕಾರದ ಆದೇಶ ಸಂಖ್ಯೆ:ಎಂಡಬ್ಲೂಡಿ‌ 462 ಎಂಡಿಎಸ್ 2016, ದಿನಾಂಕ:24-01-2017ರಲ್ಲಿನ ಮಂಜೂರಾತಿ ಮತ್ತು ಷರತ್ತುಗಳನ್ನು ಮುಂದುವರಿಸುವಂತೆ ಆದೇಶಿಸಬೇಕು ಮತ್ತು 2023-245 ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳಿಗೂ ಸಹ ಮಾಸಿಕ 25000ರೂಗಳಂತೆ 3 ವರ್ಷಗಳು ನೀಡಬೇಕು ಎಂದು ಆಗ್ರಹಿಸುತ್ತೇವೆ.
  • ಈ ಸಂಶೋಧನಾ ಫೆಲೋಶಿಪ್ ಅಭ್ಯರ್ಥಿಗಳಿಗೆ ಸಕಾಲಕ್ಕೆ ತಲುಪದೇ ತಡವಾಗುತ್ತಿದ್ದು, ಕೆಲವು ಜಿಲ್ಲಾಧಿಕಾರಿಗಳ ನಿರ್ಲಕ್ಷವೂ ಅಥವಾ ಅವರು ನೀಡುವ ಕಾರಣವಾದ ಇನ್ನೂ ಸರ್ಕಾರವೇ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳುವ ನೆಪದಿಂದ ಸಂಶೋಧನೆಯಲ್ಲಿ ತೊಡಗಿರುವವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಆದ ಕಾರಣ ಕೂಡಲೇ ಎಲ್ಲಾ ಎಲ್ಲಾ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಶೀಘ್ರ ತಲುಪುವಂತೆ ಗಮನ ಹರಿಸಬೇಕು.
  • ಇತರ ಜಿಲ್ಲೆಗಳಿಗೂ ಹೋಲಿಸಿದರೆ ಬಳ್ಳಾರಿ ಜಿಲ್ಲೆ, ವಿಜಯನಗರ ಚಿಹ್ನೆ, ಧಾರವಾಡ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ 2018-19ರ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಅರ್ಜಿಗಳನ್ನು ಸ್ವೀಕೃತಗೊಳಿಸಿದರೂ ಕೂಡ ಯಾವುದೇ ಫಲೋಶಿಪ್ ನೀಡದ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಈ ಸಮಸ್ಯೆಯು ಕರ್ನಾಟಕದ ಹಲವು ಜಿಲ್ಲೆಗಳ ಸಂಶೋಧನಾ ವಿದ್ಯಾರ್ಥಿಗಳ ಸಮಸ್ಯೆಗಳು ಜೀವಂತವಾಗಿದ್ದು, ಅನೇಕ ಬಾರಿ ಇಲಾಖೆಯ ನಿರ್ದೇಶಕರಿಗೆ ಹಾಗೂ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರತಿಫಲ ಸಿಕ್ಕಿರುವುದಿಲ್ಲ. ಇದರಿಂದ ಸುಮಾರು 18 ವಿದ್ಯಾರ್ಥಿಗಳು ವಂಚಿತರನ್ನಾಗಿ ಮಾಡಿದ ಕಾರಣ ಅನೇಕ ವಿದ್ಯಾರ್ಥಿಗಳು ಆರ್ಥಿಕ ಸಾಲದ ಹೊರೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಯನ್ನು ಮನಗೊಂಡು ಅನುದಾನವನ್ನು ಸಕಾಲಕ್ಕೆ ಬಿಡುಗಡೆಗೊಳಿಸಬೇಕು.

ಪ್ರಸ್ತುತ ಫೆಲೋಶಿವನ್ನು ಮುಂದುವರೆಸಲು ಮತ್ತು 3 ವರ್ಷದಿಂದ 5 ವರ್ಷಕ್ಕೆ ಇದರ ಅವಧಿ ವಿಸ್ಮರಿಸಲು ಇರುವ ಅವಶ್ಯಕತೆಯನ್ನು ಈ ಕೆಳಗಿನ ಅಂಶಗಳು ಪ್ರತಿನಿಧಿಸುತ್ತವೆ:

  • ಸ್ವ- ಸಾಮರ್ಥ್ಯದಿಂದ ಸಂಶೋಧನೆ ಕೈಗೊಳ್ಳುವುದಕ್ಕೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಗಳಿಂದ ಸಾಧ್ಯವಿಲ್ಲ.
  • ಗಮನಿಸಿ: ಪ್ರಸ್ತುತ ಫೆಲೋಶಿಪ್ ಆದಾಯ ಮಿತಿ 6 ಲಕ್ಷ ರೂಪಾಯಿ ಇದ್ದರೂ, ಬಹುತೇಕ ಸಂಶೋಧನಾರ್ಥಿಗಳ ಕುಟುಂಬಗಳ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆಯಿದೆ.
  • ಎಂ.ಫೀಲ್. ಪಿ.ಎಚ್‌.ಡಿ. ಅಧ್ಯಯನ ಮಾಡುತ್ತಿರುವ ಬಹುತೇಕ ಅಭ್ಯರ್ಥಿಗಳ ವಯಸ್ಸು 28 ವರ್ಷ ದಾಟಿರುತ್ತದೆ. ಇದು ದುಡಿಯುವ ವಯಸ್ಸಾಗಿರುವುದರಿಂದ ಸಹಜವಾಗಿ ಬಡ ಕುಟುಂಬಗಳು, ಆಸರೆಗಾಗಿ ಇವರನ್ನು ಅವಲಂಬಿಸಬೇಕಾಗಿದೆ. ಇಲ್ಲಿ, ಅಧ್ಯಯನ, ಅಥವಾ ದುಡಿಮೆ ಎಂಬ ಒಂದರ ಆಯ್ಕೆಯ ಪ್ರಶ್ನೆ ಬಡತನದ ಹಿನ್ನಲೆಯ ಕುಟುಂಬಗಳಿಗೆ ತೀವ್ರವಾಗಿ ಬಾಧಿಸುತ್ತದೆ.
  • ಬಹುತೇಕ ಅಭ್ಯರ್ಥಿಗಳು ಫೆಲೋಶಿಪ್ ನಂಬಿಕೆಯಿಂದ ತಾವು ಈಗಾಗಲೇ ಮಾಡುತ್ತಿದ್ದ ಕೆಲಸ ಬಿಟ್ಟು ಸಂಶೋಧನೆಯ ಅಧ್ಯಯನಕ್ಕೆ ಬಂದಿರುತ್ತಾರೆ. ಮಾತ್ರವಲ್ಲದೇ, ಈ ಫೆಲೋಶಿಪ್ ಪಡೆಯುವವರು ಯಾವುದೇ ಕ್ಷೇತ್ರದಲ್ಲಿ ಪೂರ್ಣಕಾಲಿಕ ಅವಧಿಯಲ್ಲಿ ಕಾರ್ಯ ನಿರ್ವಹಿಸಬಾರದು ಎಂಬ ನಿಯಮವಿದೆ. ಆದರಿಂದ ಫೆಲೋಶಿಪ್ ನೆಚ್ಚಿಕೊಂಡು ಅಧ್ಯಯನ ಮಾಡುವ ಅಸಹಾಯಕತೆಯಿದೆ.
  • ಸಂಶೋಧನೆಯೂ ಇತರೆ ಶಿಕ್ಷಣದಂತೆ ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುವ ಹಂತ ಮಾತ್ರವಾಗಿರದೇ, ಇದಕ್ಕಾಗಿ ಸಂಶೋಧಕರೊಂದಿಗೆ ನಿರಂತರವಾದ ಚರ್ಚೆ, ಸಂವಾದ ಉಪನ್ಯಾಸ, ಕಮ್ಮಟ, ಸಮೀಕ್ಷೆ ಮುಂತಾದ ಹಂತಗಳನ್ನು ಅಮಸರಿಸಬೇಕಾಗುತ್ತದೆ. ಇದಕ್ಕೆ ಸರ್ಕಾರದ ಆರ್ಥಿಕ ನೆರವು ಇಲ್ಲದೆ ಸಾಧ್ಯವಾಗುವುದಿಲ್ಲ.
  • ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ವೆಚ್ಚಗಳನ್ನು ತೋರಿಸಬಹುದಾದರೂ, ಮಾನವಿಕ ಕ್ಷೇತ್ರದ ಸಂಶೋಧನೆಯಲ್ಲಿ ಕೈಗೊಳ್ಳಬೇಕಾದ ಎಲ್ಲಾ ವೆಚ್ಚಗಳನ್ನು ಪಟ್ಟಿ ಮಾಡುವುದು ಸಾಧ್ಯವಾಗುವುದಿಲ್ಲ. ಅಲ್ಲದೇ ಫೆಲೋಶಿಪ್ ಹೊರತಾಗಿ ಕೃಷಿ ವಿಜ್ಞಾನ, ರಸಾಯನಿಕ ವಿಜ್ಞಾನ ಮುಂತಾದ ಪ್ರಯೋಗಗಳಿಗೆ ಸರ್ಕಾರವೇ ಫೆಲೋಶಿಪ್ ಜೊತೆಗೆ ಪ್ರಾಯೋಗಿಕ ಅಧ್ಯಯನಕ್ಕೆ ಬೇಕಾದ ಸಲಕರಣೆಗಳನ್ನು ಉಚಿತವಾಗಿ ಒದಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ.
  • ಅಲ್ಪಸಂಖ್ಯಾತ ಸಮುದಾಯದ ಕಡುಬಡತನದ ಹಿನ್ನೆಲೆಯ ವಿದ್ಯಾರ್ಥಿಗಳು ಈಗ ತಾನೇ ಸಂಶೋಧನೆಯ ಕ್ಷೇತ್ರಕ್ಕೆ ತೆರೆದುಕೊಳ್ಳುತ್ತಿದ್ದು, ಆರಂಭದ ಫನ್ ಜನರೇಶನ್ ನಲ್ಲಿ, ಇಂಥವರು ಸಮಾಜ ವಿಜ್ಞಾನ, ಭಾಲ ಸಾಹಿತ್ಯ ವಿಷಯಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಇವರ ಪ್ರೋತ್ಸಾಹ, ವಿಶೇಷ ಆದ್ಯತೆ ನೀಡುವ ಅವಶ್ಯಕತೆ ಇದೆ. ಆದ್ದರಿಂದ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕ ಜ್ಞಾನಕ್ಷೇತ್ರಗಳ ಫೆಲೋಷಿಪ್ ಮೊತ್ತದ ನಡುವೆ ಅಸಮಾನತೆ ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ.
  • ಸಂಪ್ರದಾಯ, ಪದ್ಧತಿ, ಮೌಡ್ಯತೆಗಳ ಅರೆವಾಸ್ತವಿಕ ಮತ್ತು ಅಜ್ಞಾನದಿಂದಲೇ ನಾಲ್ಕು ಗೋಡೆಗಳ ಮಧ್ಯೆಯೇ ಬಂಧಿಯಾಗುತ್ತಿದ್ದ ಈ ಸಮುದಾಯಗಳ ಹೆಣ್ಣು ಮಕ್ಕಳು ಪ್ರಸ್ತುತ ಫೆಲೋಶಿಪ್ ನ ಕಾರಣದಿಂದ ಎಂ.ಫಿಲ್, ಪಿಎಚ್.ಡಿ., ಅಧ್ಯಯನ ಕೈಗೊಳ್ಳುವ ಅವಕಾಶದಿಂದ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿರುವುದನ್ನು, ಈಗಿನ ಮತ್ತು ಫೆಲೋಶಿಪ್ ಪೂರ್ವದ ಅಭ್ಯರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡುವುದರೊಂದಿಗೆ ಫೆಲೋಶಿಪ್ ನ ನಕಾರಾತ್ಮಕ ಪರಿಣಾಮವನ್ನು ತಾವು ಕಾಣಬಹುದು.
  • ಜನಸಂಖ್ಯೆಯ ಅನುಸಾರ ಶೇಕಡವಾರು ಪ್ರಮಾಣದಲ್ಲಿ ಅಲ್ಪಸಂಖ್ಯಾತರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಸಂಶೋಧನಾ ಕ್ಷೇತ್ರದಲ್ಲಿ ಬಿಡು ಬೇರೆ ಸಮುದಾಯದ ಸಂಶೋಧನಾರ್ಥಿಗಳೊಂದಿಗೆ ಹೋಲಿಸಿದಾಗ ಇವರ ಸಂಖ್ಯೆ ತುಂಬಾ ಕಡಿಮೆಯಿದೆ.ಕೆಲವು ಕಡೆ ಬೆರಳಣಿಕೆಯ ಸಂಖ್ಯೆಯಲ್ಲಿರುವುದನ್ನು ಕಾಣಬಹುದು. ಆದರ ಸಂವಿಧಾನದ ಆಶಯದಂತೆ ಉನ್ನತ ಶಿಕ್ಷಣದ ಅಧ್ಯಯನದಲ್ಲಿ ಎಲ್ಲಾ ಸಮುದಾಯಗಳ ಭಾಗವಹಿಸುವಿಕೆ ಬಹುಮುಖ್ಯ ಆಗಿರುವುದರಿಂದ ಹೆಚ್ಚಿನ ಉತ್ತೇಜನವನ್ನು ನೀಡಬೇಕಿದೆ.
  • ಎಲ್ಲಾ ವಿಷಯಗಳ ಸಂಶೋಧನಾ ಕ್ಷೇತ್ರವು ಸಂದರ್ಶನ, ಸರ್ವೆ, ಪ್ರಯಾಣ, ತಂತ್ರಜ್ಞಾನಗಳ ಅಳವಡಿಕೆ ಮುಂತಾದ ಅಪಾರ ಆರ್ಥಿಕ ಸಂಪನ್ಮೂಲಗಳನ್ನು ಬೇಡುವುದರಿಂದ ಮತ್ತು ಮಾನವಿಕ ವಿಷಯಗಳ ಅಧ್ಯಯನದಲ್ಲಿ ಪೂರ್ಣ ಪ್ರಮಾಣ ಕ್ಷೇತ್ರ ಕಾರ್ಯವನ್ನು ಬಯಸುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹಣಕಾಸಿನ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿದೆ.
  • ನಾಚಾರ್ ಸಮಿತಿಯ ವರದಿಯ ಮೂಲಕ ಹೇಳುವುದಾದರೆ, ಭಾರತದಲ್ಲಿ ಮುಸ್ಲಿಮರ ಸ್ಥಿತಿಯು ದಲಿತರ ಸ್ಥಿತಿಗಿಂತ ಹೀನಾಯವಾಗಿದೆ. ಈ ಸಮುದಾಯವನ್ನು ಈ ಸ್ಥಿತಿಯಿಂದ ಹೊರತರಲು ಉತ್ಸಮ ಶಿಕ್ಷಣ ಸಿಗುವಂತೆ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ತಜ್ಞರ ವರದಿ ಕಾರಣಕ್ಕಾಗಿ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ.
  • ಅಲ್ಪಸಂಖ್ಯಾತ ಸಮುದಾಯದಲ್ಲಿ ಬಹುತೇಕ ಜನ ಅನಂಘಟಿತ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರು. ಭೂರಹಿತ ಕೃಷಿ ಕಾರ್ಮಿಕರು, ಪಂಚರ್ ಹಾಕುವವರು, ಬೀಡಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಮು೦ತಾದ ವಲಯದ ಅನಿಶ್ಚಿತ ಆದಾಯದಲ್ಲಿ ಜೀವನ ನಿರ್ವಹಿಸುವವರಾಗಿದ್ದಾರೆ. ಆದ ಕಾರಣ ಸಮುದಾಯಕ್ಕೆ ಶಿಕ್ಷಣ ದೊರಕಿಸುವಲ್ಲಿ, ಇಂತಹ ಫೆಲೋಶಿಪ್ ಯೋಜನೆಗಳು ಅವಶ್ಯಕವಾಗಿವೆ.
  • ಹಲವು ಅಭ್ಯರ್ಥಿಗಳ ಪ್ರಮಾಣ ಪತ್ರದಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯವು ಫೆಲೋಶಿಫನ್ ಅವಧಿಯನ್ನು 3 ವರ್ಷಕ್ಕೂ ಕಡಿಮೆ ಸೂಚಿಸಿರುವುದು ಗೊಂದಲ ಮೂಡಿಸಿದೆ. ಪ್ರಸ್ತುತ ಫೆಲೋಷಿಪ್ಪ ನೀಡಿಕೆಯ ದಿನಾಂಕವನ್ನು ಪರಿಗಣಿಸಿ ತಾರತಮ್ಯವನ್ನು ಸರಿಪಡಿಸಬೇಕು ಮತ್ತು ಅಧ್ಯಯನದ ಪದವಿ ಮುಗಿಸಲು ಇರುವ ಅವಧಿಯ కురితు ವಿಶ್ವವಿದ್ಯಾಲಯಗಳ ನಿಯಮಗಳನ್ನು ಪಾಲಿಸಬೇಕು. ಹಾಗೆಯೇ ಇಲಾಖೆಯು ಆದೇಶಿಸಿರುವ 3 ವರ್ಷಗಳ ಫೆಲೋಶಿಪ್‌ನ್ನು ಆ ಅವಧಿಯೊಳಗೆ ಸಂದಾಯ ಮಾಡಬೇಕು.
  • ಈಗ ನೀಡುತ್ತಿರುವ ನಂಶೋಧನಾ ಪ್ರೋತ್ಸಾಹ ಧನದ ಗರಿಷ್ಠ ಅವಧಿಯು 3 ವರ್ಷಗಳಾಗಿದೆ. ಆದರೆ, ಇದು ವಿಶ್ವವಿದ್ಯಾಲಯಗಳ ನಿಯಮದ ಪ್ರಕಾರ ಪಿಎಚ್.ಡಿ. ಪದವಿ ಪಡೆಯುವ ಕನಿಷ್ಠ ಸಮಯವಾಗಿದೆ. ವಾಸ್ತವದಲ್ಲಿ, ಪಿಎಚ್‌.ಡಿ., ಅಧ್ಯಯನ ಪೂರ್ಣಗೊಳಿಸಲು ರಿಂದ 5 ವರ್ಷಕ್ಕೂ ಹೆಚ್ಚಿನ ಅವಧಿ 4 ಬೇಕಾಗುತ್ತದೆ. ಪ್ರಸ್ತುತ ಫೆಲೋಶಿಪ್ ವಿಶ್ವವಿದ್ಯಾಲಯಗಳ ನಿಯಮದಂತೆ 5 ವರ್ಷಗಳವರೆಗೆ ವಿಸ್ತರಿಸಬೇಕು. ಹಾಗೇ ಆ ವರ್ಷದ ಫೆಲೋಶಿಪ್ ಅವಧಿಯೊಳಗೆ ಸಂಶೋಧನಾ ಪ್ರಬಂಧವನ್ನು ಇಲಾಖೆಗೆ ಸಲ್ಲಿಸುವ ನಿಯಮವೂ ವಿಶ್ವವಿದ್ಯಾಲಯಗಳ ನಡಾವಳಿಗಳಿಗೆ ವಿರುದ್ಧವಾಗಿದೆ. ಕೊನೆ ಘಟ್ಟದ ಪೂರ್ಣಪ್ರಮಾಣದ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಯಲಕ್ಕೆ ಸಲ್ಲಿಸಲಾಗುವ ದಿನವೇ ತಮ್ಮ ಇಲಾಖೆಗೂ ಪ್ರಬಂಧವನ್ನು ನಲ್ಲಿಸುತ್ತೇವೆ. ಅಲ್ಲಿಯವರೆಗೆ ತಮ್ಮ ಇಲಾಖೆಯೂ ಫೆಲೋಶಿಪ್ ಕೊನೆಯ ಮೂರು ತಿಂಗಳ ಹಣವನ್ನು ತಡೆ ಹಿಡಿಯುವುದನ್ನು ಕೈ ಬಿಡಬೇಕು. ಇದರಿಂದ ಅಭ್ಯರ್ಥಿಯು ನಂಶೋಧನೆಯ ತೊಂದರೆಯಿಂದ ಬಳಲುವುದು ತಪ್ಪುತ್ತದೆ. ಕೊನೆಯಲ್ಲಿ ಅರ್ಥಿಕ ತೊಂದರೆಯಿಂದ ಬಳಲುವುದು ತಪ್ಪುತ್ತದೆ.

ಮೇಲಿನ ಈ ಅಂಶಗಳಿಂದ ಅಲ್ಪಸಂಖ್ಯಾತ ಸಂಶೋಧನ ವಿದ್ಯಾರ್ಥಿಗಳಿಗೆ ಈ ಯೋಜನೆ ಅವಶ್ಯವಾಗಿದೆ. ಮಾತ್ರವಲ್ಲದೇ, ಫೆಲೋಶಿಪ್‌ನ ಅವಧಿ ಹೆಚ್ಚಿಸುವುದು ಕೂಡ ಅತ್ಯವಶ್ಯಕವಾಗಿದ್ದು, ನೀತಿ ನಿರೂಪಣೆ ಮುಖಾಂತರ ಅಲ್ಪಸಂಖ್ಯಾತ ವರ್ಗದ ಕಲ್ಯಾಣ ಪಾಲಕರಾದ ತಾವು ಕಾರ್ಯಪ್ರವೃತ್ತರಾಗಬೇಕೆಂದು ಎಸ್‌ಎಫ್‌ಐ  ಮನವಿ ಮಾಡಿಕೊಂಡಿದೆ.

ಈ ಸಂದರ್ಭದಲ್ಲಿ ಎಸ್.ಎಫ್.ಐ ರಾಜ್ಯ ಅಧ್ಯಕ್ಷರು ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾರ, ರಾಜ್ಯ ಉಪಾಧ್ಯಕ್ಷರು ಶಿವಕುಮಾರ ಮ್ಯಾಗಳಮನಿ ಇದ್ದರು.

ವಿಡಿಯೋ ನೋಡಿ:ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್‌ ವೇಣುಗೋಪಾಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *