ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ  ಕರವೇ ಸಿಂಹಸೇನೆ ಧರಣಿ

ಕೋಲಾರ : ದಿನೇದಿನೇ ಪೆಟ್ರೋಲ್ ಡೀಸೆಲ್  ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ  ಖಂಡಿಸಿ ಕರವೇ ಸಿಂಹಸೇನೆ ವತಿಯಿಂದ ನಗರದ ಗಾಂಧಿವನದಲ್ಲಿ ಗ್ಯಾಸ್‌ ಸಿಲಿಂಡರ್ ತರಕಾರಿಗಳೊಂದಿಗೆ ಶನಿವಾರ ಧರಣಿ ನಡೆಸಿದರು.

ನಗರದ ಗಾಂಧಿವನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ  ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಸಾಮಾನ್ಯರ ಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಭಾರತದಲ್ಲಿ ಜೀವನ ಮಾಡೋದೆ ಕಷ್ಟವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ಪೆಟ್ರೋಲ್, ಡೀಸೆಲ್,ಎಲ್‌ಪಿಜಿಗಳ ಅವಿರತ ಬೆಲೆಯೇರಿಕೆ ಈ ಲೂಟಿ ಕೊನೆಗೊಳ್ಳಬೇಕು

ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ರಾಜ್ಯ ಅಧ್ಯಕ್ಷ  ಜಯದೇವಪ್ರಸನ್ನ ಮಾತನಾಡಿ. ದೇಶದಲ್ಲಿ ಕೆಳದ ವರ್ಷ ಪ್ರಾರಂಭವಾದ  ಕೊರೊನಾ ದಿಂದ ಈಗಾಗಲೇ ಕಷ್ಟ ಅನುಭವಿಸುತ್ತಿರುವ ಜನರಿಗೆ ಇದು ಬರೆ ಎಳೆದಂತಾಗಿದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಬೇಕು, ಕೇಂದ್ರ ಸರ್ಕಾರ ಕಳೆದ 2 ತಿಂಗಳಿಂದ ನಿರಂತರವಾಗಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆಯಾದ್ರೂ ದೇಶದಲ್ಲಿ ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಪ್ರಧಾನಿ ನರೇಂದ್ರ ಮೋದಿ ಕೇವಲ ಸುಳ್ಳು ಹೇಳಿಕೊಂಡೇ ಜೀವನ ನಡೆಸುತ್ತಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಯಾವುದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕಿಡಿಕಾರಿದರು. ಇಂಧನ ದರ ಏರಿಕೆ ಕಂಡಿರುವುದರಿಂದ ದಿನನಿತ್ಯ ಬಳಕೆ ವಸ್ತುಗಳು ಬೆಲೆ ಕೈಗೆಟುಕುತ್ತಿಲ್ಲ. ತಕ್ಷಣ ಕೇಂದ್ರ ಸರ್ಕಾರ ಇದರ ಬಗ್ಗೆ ನಿಗಾವಹಿಸಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಈ ಪ್ರತಿಭಟನಾ ಧರಣಿಯಲ್ಲಿ ಸಂಘಟನೆಯ ರಾಜ್ಯ ಕಾರ್ಮಿಕ ಘಟಕ ಅಧ್ಯಕ್ಷ ಜಯಪ್ರಕಾಶ್, ಬೆಂಗಳೂರು ನಗರ ಘಟಕದ ಜಾನ್ಸನ್, ಮುಖಂಡರಾದ ಅಮ್ಮೇರಹಳ್ಳಿ ಅಸ್ಲಾಂ, ಜಹೀರ್, ಮುನಿರಾಜು, ಏಜಾಜ್, ಸರಸ್ವತಿ, ಪಾಷ ಮುಂತಾದವರು ಇದ್ದರು.

ಪೆಟ್ರೋಲ್ , ಡಿಸೈಲ್ ಬೆಲೆ ಶತಕದತ್ತ : ಮೋದಿ ಸಾರ್ವಕಾಲಿಕ ಸಾಧನೆ!

Donate Janashakthi Media

Leave a Reply

Your email address will not be published. Required fields are marked *