ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪ ಪಟ್ಟಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಎಡಿಜಿಪಿ ಅಮೃತ್ ಪಾಲ್ ಅರ್ಜಿಯನ್ನು ನ್ಯಾ. ಜೆ.ಎಂ ಖಾಜಿ ರಿದ್ದ ಹೈಕೋರ್ಟ್ ಪೀಠ ವಜಾಗೊಳಿಸಿದೆ.
ಅಮೃತ್ ಪಾಲ್ ಪಿಎಸ್‌ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದರು. ಸೇಫ್ ಲಾಕ್ ಕಿ ಅಮೃತ್ ಪಾಲ್ ಬಳಿಯೇ ಇತ್ತು. ಈ ಒಂದು ಕಿ ಯನ್ನು ಕಿರಿಯಾಧಿಕಾರಿಗಳಿಗೆ ಕೊಟ್ಟು ದುರುಪಯೋಗ ಮಾಡಲಾಗಿದೆ. ಕೃತ್ಯದ ಸಂಬಂಧ ಲಂಚದ ಹಣದ ಭಾಗವು ರಿಕವರಿಯಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ 5 ತಲೆಬುರಡೆ, 113 ಮೂಳೆಗಳು ಪತ್ತೆ
ಹಾಗಾಗಿ ಪ್ರಕರಣ ರದ್ದುಪಡಿಸಿಸದಂತೆ ಎಸ್ ಪಿ ಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು. ವಾದ ಪರಿಗಣಿಸಿ ಎಡಿಜಿಪಿ ಅಮೃತ್ ಪಾಲ್ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿತು.
ಇದನ್ನೂ ನೋಡಿ: ನಾಲ್ಕು ದಶಕಗಳಿಂದ ಧರ್ಮಸ್ಥಳದಲ್ಲಿ ಕೊಲೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆ – ಡಾ. ಕೆ.ಪ್ರಕಾಶ್ Janashakthi
