ಬೆಂಗಳೂರು : ಕೇಂದ್ರ ಮಂತ್ರಿ ಎಚ್ಡಿ ಕುಮಾರಸ್ವಾಮಿಯವರಿಗೆ ಅಕ್ರಮ ಗಣಿಗಾರಿಗೆ ಅನುಮತಿ ನೀಡಿದ್ದು, ಅಕ್ರಮ ಗಣಿಗಾರಿಗೆ ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟದ್ದಾರೆ ಎಂವ ಆರೋಪ ಕೇಳಿಬಂದಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಅಕ್ರಮ ಸೈಟ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಇದರ ಮದ್ಯೆ ಕೇಂದ್ರ ಮಂತ್ರಿ ಹೆಚ್ಡಿ ಯವರಿಗೆ ಅಕ್ರಮ ಗಣಿಗಾರಿಗೆ ಅನುಮತಿ ನೀಡಿರುವ ಸಂಕಷ್ಟಗಳು ಎದುರಾಗಿದೆ.
ಇದನ್ನು ಓದಿ : ವಕ್ಫ್ ಮಂಡಳಿ ಅಧಿಕಾರ ಮೊಟಕುಗೊಳಿಸುವ ತಿದ್ದುಪಡಿ ಮಸೂದೆ ಮಂಡನೆ: ಪ್ರತಿಪಕ್ಷಗಳಿಂದ ಪ್ರತಿಭಟನೆ
ಕೇಂದ್ರ ಮಂತ್ರಿ ಕುಮಾರಸ್ವಾಮಿ 12 ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 550 ಎಕರೆಗಳಷ್ಟು ಅಕ್ರಮ ಗಣಿಗಾರಿಗೆ ಕಾನೂನು ಬಾಹಿರವಾಗಿ ಅವಕಾಶ ನೀಡಿದ್ದರು. ಮತ್ತು ಇದಕ್ಕೆ ಸಾಕ್ಷಿಎಂಬಂತೆ ಅನುಮತಿಗೆ ಎಚ್ಡಿಕೆಯವರೇ ಸಹಿ ಮಾಡಿದ್ದಾರೆ ಎಂದು FSL ವರದಿಯಿಂದ ಸಾಬೀತಾಗಿತ್ತು.
ಈ ಪ್ರಕರಣ ನಡೆದು 12 ವರ್ಷಗಳಾದರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹೆಚ್ಡಿಕೆ ವಿರುದ್ದ ಕ್ರಮಕ್ಕೆ ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನು ನೋಡಿ : ರಾಜಭವನ,ಪಕ್ಷಾತೀತವಾಗಿರಬೇಕು,ಬಿಜೆಪಿಯ ಕಚೇರಿ ಆಗಬಾರದುJanashakthi Media