ಮಂಗಳೂರು: ಜಿಲ್ಲೆಯ ಜನ ಸಾಮಾನ್ಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ, ಜಿಲ್ಲೆಯ ಜನರ ಬದುಕಿನ ಮೌಲ್ಯಗಳ ಬಲವರ್ಧನೆಗಾಗಿ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಡಿಸೆಂಬರ್ 8ರಂದು “ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆ ಅಡಿಯಲ್ಲಿ ಬೃಹತ್ ಹೋರಾಟ ರೂಪಿಸಲಾಗಿದ್ದು, ಈ ಬೃಹತ್ ಹೋರಾಟದಲ್ಲಿ ಮಂಗಳೂರು ನಗರದ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಅಭಿವೃದ್ಧಿ
ಡಿಸೆಂಬರ್ 8ರಂದು ಬೆಳಿಗ್ಗೆ 10ಗಂಟೆಗೆ ನಗರದ ಡಾ| ಬಿ.ಆರ್ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಜನರು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಅಭಿವೃದ್ಧಿ
ಜಿಲ್ಲೆಯಲ್ಲಿ ಸತತವಾಗಿ ಗೆದ್ದು ಬರುತ್ತಿರುವ ಬಿಜೆಪಿ ಮತ್ತು ರಾಜ್ಯವನ್ನಾಳುವ ಕಾಂಗ್ರೆಸ್ ಜಿಲ್ಲೆಯ ಜನರ ಬದುಕಿನ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಜನರ ನೈಜ ಸಮಸ್ಯೆಗಳ ಪರಿಹಾರದ ಬದಲಾಗಿ ಉಳ್ಳವರ ಹಿತ ಕಾಯುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ಹಾಸನ| ಉಲ್ಕೆಗಳ ಸುರಿಮಳೆ ವೀಕ್ಷಣಾ ಕಾರ್ಯಕ್ರಮ ಆಯೋಜನೆ: ಕೆ.ವಿ. ಕವಿತ
ಜಿಲ್ಲೆಯ ಆರೋಗ್ಯ, ಶಿಕ್ಷಣ ವ್ಯವಸ್ಥೆ ಸಂಪೂರ್ಣ ವ್ಯಾಪಾರಿಕರಣಗೊಂಡಿದೆ ಆರ್ಥಿಕವಾಗಿ ಸಬಲರಾಗಿದ್ದವರಿಗೆ ಮಾತ್ರ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಿಗುತ್ತಿದೆ. ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ಖಾಸಗಿಯವರನ್ನು ನಿಯಂತ್ರಿಸಲಾಗದೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಮಾಫಿಯಾ ಆಗಿ ಬದಲಾಗಿ ಇಡೀ ಜಿಲ್ಲೆಯ ರಾಜಕಾರಣವನ್ನು ನಿಯಂತ್ರಿಸುತ್ತಿದೆ.
ಜಿಲ್ಲೆಯ ಜನರು ನಿರುದ್ಯೋಗ, ಕೈಗಾರಿಕೆಗಳ ಪರಿಸರ ಮಾಲಿನ್ಯ, ಮರಳು ಮತ್ತು ಕೆಂಪು ಕಲ್ಲು, ಮನೆ ನಿವೇಶನ, ರಾಷ್ಟೀಯ ಹೆದ್ದಾರಿ ಸಹಿತ ರಸ್ತೆ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದರೂ ಜನತೆಯ ಜೊತೆಗೆ ನಿಂತು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಿದ್ದ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತು ಪೈಪೋಟಿಗೆ ಬಿದ್ದಂತೆ ಜನರನ್ನು ಸಮೂಹ ಸನ್ನಿಗೊಳಪಡಿಸುವ ಕ್ರಿಯೆಯಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಜನರ ಬದುಕಿಗೆ ಬೇಕಾಗಿರುವ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಸಮಸ್ಯೆಗಳ ಪರಿಹಾರಕ್ಕೆ ಕನಿಷ್ಠ ಪ್ರಯತ್ನವನ್ನು ಮಾಡದ ಬಿಜೆಪಿ, ಕಾಂಗ್ರೆಸ್ ರಾಜಕೀಯಕ್ಕೆ ಪರ್ಯಾಯವಾಗಿ ಸಿಪಿಐ(ಎಂ) ಪಕ್ಷ ಜನರ ಬದುಕನ್ನು ಉತ್ತಮಪಡಿಸುವ ಸಲುವಾಗಿ ಈ ಹೋರಾಟವನ್ನು ಹಮ್ಮಿಕೊಂಡಿದ್ದು, ಈ ಹೋರಾಟದ ಯಶಸ್ವಿಗಾಗಿ ಸಿಪಿಐ(ಎಂ) ಕಾರ್ಯಕರ್ತರು ಕಳೆದ ಒಂದು ತಿಂಗಳಿಂದ ಮನೆ ಮನೆ ಪ್ರಚಾರ ಕೈಗೊಂಡಿದ್ದು ಜನರಿಂದ ವ್ಯಾಪಕ ಸಕಾರಾತ್ಮಕ ಬೆಂಬಲ ವ್ಯಕ್ತವಾಗುತ್ತಿದ್ದು, ಸಿಪಿಐ(ಎಂ) ಈ ಹೋರಾಟದಲ್ಲಿ ಎತ್ತಿಕೊಂಡಿರುವ ಬೇಡಿಕೆಗಳು ಎಲ್ಲಾ ಜನ ಸಮುದಾಯದ ಜನ ಬಾಧಿಸುತ್ತಿರುವ ಸಮಸ್ಯೆಗಳಾಗಿದ್ದು, ಈ ಹಿನ್ನೆಲೆಯಲ್ಲಿ ಡಿಸೆಂಬರ್ 8ರ ಹೋರಾಟ ಯಶಸ್ವಿಯಾಗಲಿದೆ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸುತ್ತೇವೆ ಮಾಧ್ಯಮದ ಗೆಳೆಯರಾದ ತಾವುಗಳು ಕೂಡ ಹೋರಾಟವನ್ನು ಬೆಂಬಲಿಸಬೇಕಾಗಿ ಕೋರುತ್ತೇವೆ
ಪತ್ರಿಕಾಗೋಷ್ಟಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಹಾಗೂ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ರವಿಚಂದ್ರ ಕೊಂಚಾಡಿ, ತಯ್ಯೂಬ್ ಬೆಂಗರೆ, ರಿಜ್ವಾನ್ ಬೆಂಗರೆ ಹಾಜರಿದ್ದರು.
ಇದನ್ನೂ ನೋಡಿ: ಕನಿಷ್ಠ ವೇತನ ನೀಡಿ, ನಮ್ಮನ್ನು ಖಾಯಂ ಮಾಡಿ | ಅಂಗನವಾಡಿ,ಆಶಾ, ಬಿಸಿಯೂಟ ನೌಕರರ ಪ್ರತಿಭಟನೆ | Janashakthi Media
