ಏಳು ಸಾಹಿತಿಗಳ ಪಾಠ-ಪದ್ಯ ಕೈಬಿಟ್ಟ ಶಿಕ್ಷಣ ಇಲಾಖೆ..!

ಕರ್ನಾಟಕದಲ್ಲಿ ಪಠ್ಯಪುಸ್ತಕ ವಿವಾದ ಸಾಕಷ್ಟು ಗದ್ದಲಕ್ಕೆ ಎಡೆ ಮಾಡಿಕೊಟ್ಟಿತ್ತು. ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮಾಡಿದ್ದ ಎಡವಟ್ಟುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪಠ್ಯದ ಕೇಸರಿಕರಣದ ಆರೋಪವೂ ಕೇಳಿಬಂದಿತ್ತು. ಈ ನಡುವೆ ದೇವನೂರು ಮಹದೇವರಂತ ಹಿರಿಯ ಸಾಹಿತಿಗಳು ತಮ್ಮ ಗದ್ಯವನ್ನು ಕೈಬಿಡುವಂತೆ ಆಗ್ರಹಿಸಿದ್ದರು.

2022-23ನೇ ಶೈಕ್ಷಣಿಕ ಸಾಲಿನ ‘ಪರಿಷ್ಕೃತ ಪಠ್ಯಕ್ರಮ’ದಲ್ಲಿ ತಮ್ಮ ಬರಹಗಳನ್ನು ಪರಿಗಣಿಸದಂತೆ ಕೋರಿದ್ದ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಏಳು ಜನ ಲೇಖಕರ ಗದ್ಯ-ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಪರೀಕ್ಷಾ ಚಟುವಟಿಕೆಯಿಂದ ಕೈಬಿಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿನ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ (ಗದ್ಯ), ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್, ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರು ರಚಿಸಿರುವ ಡಾ.ರಾಜ್‌ಕುಮಾರ್ (ಗದ್ಯ), ಕನ್ನಡ ತೃತೀಯ ಭಾಷಾ ಪಠ್ಯದಿಂದ ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಎಂ.ಕಂಬಳಿ ಅವರ ಹೀಗೊಂದು ಟಾಪ್ ಪ್ರಯಾಣ ಎಂಬ ಪೂರಕ ಗದ್ಯಭಾಗಗಳು, ಸತೀಶ್ ಕುಲರ್ಣಿ ಅವರ ಕಟ್ಟತೇವ ನಾವು (ಪದ್ಯ), ಕನ್ನಡ ದ್ವಿತೀಯ ಭಾಷಾ ಪಠ್ಯದಿಂದ ಸುಕನ್ಯ ಮಾರುತಿ ಅವರ ಏಣಿ (ಪದ್ಯ) ಪಾಠಗಳನ್ನು ಈ ವರ್ಷದ ಬೋಧನೆ, ಕಲಿಕೆ ಮತ್ತು ಪರೀಕ್ಷಾ ಚಟುವಟಿಕೆಯಿಂದ ಕೈಬಿಡಲು ಕ್ರಮ ವಹಿಸುವಂತೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಏನಿದು ಘಟನೆ : ಕರ್ನಾಟಕದಲ್ಲಿ ಪಠ್ಯಪುಸ್ತಕ ವಿವಾದ ಸಾಕಷ್ಟು ಗದ್ದಲಕ್ಕೆ ಎಡೆ ಮಾಡಿಕೊಟ್ಟಿತ್ತು. ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮಾಡಿದ್ದ ಎಡವಟ್ಟುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪಠ್ಯದ ಕೇಸರಿಕರಣದ ಆರೋಪವೂ ಕೇಳಿಬಂದಿತ್ತು. ಈ ನಡುವೆ ದೇವನೂರು ಮಹದೇವರಂತ ಹಿರಿಯ ಸಾಹಿತಿಗಳು ತಮ್ಮ ಗದ್ಯವನ್ನು ಕೈಬಿಡುವಂತೆ ಆಗ್ರಹಿಸಿದ್ದರು.

ಶಿಕ್ಷಣ ಇಲಾಖೆಗೆ ಕೆಲವು ಕವಿಗಳು ಪತ್ರ ಬರೆದಿದ್ದ ತಡ ಸರಕಾರ ಇಂತಹ ನಿರ್ಧಾರಗಳಿಗೆ ಮುಂದಾಗಿದೆ. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವಂತೆ ವಿವಾದದ ಹಿನ್ನೆಲೆಯಲ್ಲಿ ವಿರೋಧಿಸಿದ್ದ ಕವಿಗಳ ಗದ್ಯ ಪದ್ಯಗಳು ಪಠ್ಯದಲ್ಲಿ ಮುದ್ರಣವಾಗಿದ್ದರಿಂದ ಮನವೊಲಿಸುವ ಕೆಲಸವನ್ನು ಮಾಡದೇ ಶಿಕ್ಷಣ ಇಲಾಖೆ ಕೆಲವು ಲೇಖಕರು ಬರೆದಿದ್ದ ಪತ್ರವನ್ನೇ ಮಾನದಂಡವಾಗಿಟ್ಟುಕೊಂಡು ಅವರು ಬರೆದಿದ್ದ ಗದ್ಯ ಪದ್ಯಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಆದೇಶವನ್ನು ಮಾಡಿದೆ. ಕವಿಗಳು ಯಾಕೆ ವಿರೋಧಿಸಿದ್ದು, ಅವರ ವಿರೋಧಕ್ಕೆ ಕಾರಣವಾಗಿದ್ದ ಬರಹಗಳನ್ನು ತೆಗೆದುಹಾಕಿ ಅವರ ಅಭಿಪ್ರಾಯಗಳನ್ನು ಗೌರವಿಸಬೇಕಿತ್ತು, ಆದರೆ ಸರಕಾರದ ಈ ನಡೆ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಪಠ್ಯ ಪುಸ್ತಕ ತಲುಪಿಲ್ಲ : ಅರ್ಧ ವರ್ಷ ಶಾಲೆ ಮುಗೀತಾ ಬಂದ್ರು ಶಾಲಾ ವಿದ್ಯಾರ್ಥಿಗಳಿಗೆ ಪರಿಷ್ಕೃತ ಪಠ್ಯ ಪುಸ್ತಕ ಸಿಕ್ಕಿಲ್ಲ.ಹೀಗಾಗಿ ಪಠ್ಯಪುಸ್ತಕ ಇಲ್ಲದೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಿಕ್ಷಕರು ಪರದಾಡುತ್ತಿದ್ದಾರೆ.

9 ಹಾಗೂ 10 ನೇ ತರಗತಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರಿಷ್ಕೃತ ಪಠ್ಯಪುಸ್ತಕ ದೊರೆತಿಲ್ಲ.ಪರಿಷ್ಕೃತ ಪಠ್ಯ ಪುಸ್ತಕ ಕಳುಹಿಸಿ ಕೊಡುವಂತೆ ಶಿಕ್ಷಣ ಇಲಾಖೆಗೆ ಖಾಸಗಿ ಶಾಲಾ ಒಕ್ಕೂಟಗಳು ಮನವಿ ಮಾಡಿದ್ದವು. ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಪಠ್ಯ ಪುಸ್ತಕ ಕೊಡದ ಶಿಕ್ಷಣ ‌ಇಲಾಖೆ ವಿರುದ್ಧ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

9ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 10ನೇ ತರಗತಿಯ ಕನ್ನಡ ಪಠ್ಯಪುಸ್ತಕ ಪುಸ್ತಕ ಸಿಕ್ಕಿಲ್ಲ. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದೆ.ಆದ್ರೆ ಶಿಕ್ಷಣ ಇಲಾಖೆ ಇದುವರೆಗೂ ಪರಿಷ್ಕೃತ ಪಠ್ಯಪುಸ್ತಕಗಳನ್ನ ಶಾಲೆಗಳಿಗೆ ಕೊಟ್ಟಿಲ್ಲ.ಈ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಭಾರಿ ಪತ್ರ ಬರೆದಿದ್ರು ಯಾವುದೇ ಪ್ರಯೋಜನವಾಗಿಲ್ಲ ಅಂತ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

ಕೊನೆಯದಾಗಿ ಶಿಕ್ಷಣ ಇಲಾಖೆ ಪಠ್ಯಪುಸ್ತಕ ಕೊಡದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದು ಪಠ್ಯಪುಸ್ತಕ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆಗೆ ಸಾಕಷ್ಟು ಭಾರಿ ಮನವಿ ಮಾಡಲಾಗಿದ್ರು ಪಠ್ಯಪುಸ್ತಕ ಕೊಟ್ಟಿಲ್ಲ ಪಠ್ಯ ಪುಸ್ತಕ ಸಿಗದೆ‌ ಮಕ್ಕಳಿಗೆ ಸಾಕಷ್ಟು ಸಮಸ್ಯೆ ಆಗ್ತಿದೆ.ಕೂಡಲೇ ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಂಡು ಪಠ್ಯಪುಸ್ತಕ ಸಮಸ್ಯೆ ಬಗೆಹರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ತೆಗೆದು ಹಾಕಿದ ಪಠ್ಯದಲ್ಲಿ ಏನಿದೆ

‘ಎದೆಗೆ ಬಿದ್ದ ಅಕ್ಷರ’ : ದಲಿತ ಕವಿ ದೇವನೂರು ಮಹದೇವರವರ ಎದೆಗೆ ಬಿದ್ದ ಅಕ್ಷರ ಎಂಬ ಗದ್ಯವನ್ನು ಹತ್ತನೇ ತರಗತಿಯ ಪ್ರಥಮ ಭಾಷೆಯ ಪಠ್ಯಪುಸ್ತಕದಿಂದ ಕೈಬಿಡದೇ ಉಳಿಸಿಕೊಳ್ಳಲಾಗಿತ್ತು. ಪಠ್ಯಪುಸ್ತಕ ವಿವಾದದಿಂದ ಬೇಸತ್ತಿದ್ದ ದೇವನೂರು ಮಹಾದೇವರವರು ತಮ್ಮ ಗದ್ಯವನ್ನು ಕೈಬಿಡುವಂತೆ ಆಗ್ರಹಿಸಿದ್ದಲ್ಲದೇ ಪಠ್ಯಪುಸ್ತಕ ಸಮಿತಿಗೆ ನೀಡಿದ್ದ ಹಕ್ಕನ್ನು ಹಿಂಪಡೆದಿದ್ದೇನೆ ಎಂದಿದ್ದರು. ಆದರೆ ಪಠ್ಯ ಪುಸ್ತಕ ಮುದ್ರಣವಾಗಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಇವೆಲ್ಲದರ ನಡುವೆ ಪಠ್ಯಪುಸ್ತಕದಲ್ಲಿನ ಕೆಲವು ಲೋಪದೋಷ ಸರಿಪಡಿಸುವುದಾಗಿ ಹೇಳಿದ ಬಳಿಕ ಸಣ್ಣಪುಟ್ಟ ಬದಲಾವಣೆಯ ಬಳಿಕ ಪಠ್ಯಪುಸ್ತಕ ವಿವಾದ ತಣ್ಣಗಾಗಿತ್ತು. ಇದೀಗ ದಲಿತ ಕವಿ ದೇವನೂರು ಮಹಾದೇವರವರ ಎದೆಗೆ ಬಿದ್ದ ಅಕ್ಷರ ಗದ್ಯವನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.

ಭಗತ್‌ ಸಿಂಗ್ ಪಾಠಕ್ಕೆ ಕತ್ತರಿ : ಹತ್ತನೇ ತರಗತಿಯ ಪ್ರಥಮ ಭಾಷೆ ಕನ್ನಡದ ಪೂರಕ ಪಾಠದಲ್ಲಿ ವಿಚಾರವಾದಿ ಚಿಂತನೆಯುಳ್ಳ ಡಾ. ಜಿ ರಾಮಕೃಷ್ಣರವರು ಬರೆದಿದ್ದ ಭಗತ್ ಸಿಂಗ್ ಎಂಬ ಪಾಠ ಮೊದಲಿನಿಂದಲೂ ಇತ್ತು. ಆದರೆ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಭಾರತಿಯ ಅಮರ ಪುತ್ರರು ಎಂಬ ಗದ್ಯವನ್ನು ಸೇರಿಸಲಾಗಿತ್ತು. ಈ ಪಾಠವೂ ಭಗತ್ ಸಿಂಗ್‌ ಜೀವನ ಬಗ್ಗೆಯೇ ಇತ್ತು. ಇದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುತ್ತಿತ್ತು. ಇದೀಗ ಭಗತ್ ಸಿಂಗ್ ಎಂಬ ಪೂರಕ ಗದ್ಯವನ್ನು ಮೌಲ್ಯ ಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.

ಮೇರುನಟನ ಬಗ್ಗೆ ಇದ್ದ ಪಾಠ ಔಟ್ : 6ನೇ ತರಗತಿಯ ಪ್ರಥಮ ಭಾಷೆ ಕನ್ನಡದಲ್ಲಿ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯನ್ನುಯ ಆಯ್ದಭಾಗವನ್ನು ಪಠ್ಯದಲ್ಲಿ ಅಳವಡಿಸಲಾಗಿತ್ತು. ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಬರೆದಿದ್ದ ಡಾ. ರಾಜ್‌ ಕುಮಾರ್ ಎಂಬ ಗದ್ಯವನ್ನು ಸಹ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ಆ ಮೂಲಕ ಮೇರುನಟ ಡಾ. ರಾಜ್‌ ಕುಮಾರ್ ಜೀವನದ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ಇದ್ದ ಗದ್ಯ ಮೌಲ್ಯಮಾಪನಕ್ಕೆ ಪರಿಗಣಿಸುತ್ತಿಲ್ಲ.

ಹೀಗೊಂದು ಟಾಪ್ ಪ್ರಯಾಣ : 9ನೇ ತರಗತಿಯ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿರುವ ರೂಪ ಹಾಸನರವವರು ಬರೆದಿರುವ ಅಮ್ಮನಾಗುವುದೆಂದರೆ ‍ಎಂಬ ಪದ್ಯವನನ್ನುಕೈಬಿಡಲಾಗಿದೆ. ಹತ್ತನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿನ ಈರಪ್ಪ ಎಂ ಕಂಬಳಿ ಬರೆದಿರುವ ಹೀಗೊಂದು ಟಾಪ್ ಪ್ರಯಾಣ ಎಂಬ ಗದ್ಯವನ್ನು ಮತ್ತು ಸತೀಶ್ ಕುಲಕರ್ಣಿ ಬರೆದಿರುವ ಕಟ್ಟತೇವ ನಾವು ಎಂಬ ಪದ್ಯವನ್ನು ಮೌಲ್ಯಮಾಪನಕ್ಕೆ ಪರಿಗಣಿಸುವಂತಿಲ್ಲ. ಇನ್ನು 10ನೇ ತರಗತಿಯ ದ್ವಿತೀಯ ಭಾಷೆ ಕನ್ನಡದ ಸುಕನ್ಯ ಮಾರುತಿ ಬರೆದಿರುವ ಏಣಿ ಎಂಬ ಪದ್ಯವನ್ನು ಕೈಬಿಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *