ಪೊಕ್ಸೋ: ಒಂದು ಕಠಿಣವಾದ ಕಾನೂನು ನಿಜ ಆದರೂ ನ್ಯಾಯದ ದಾರಿ ಗಾವುದ ದೂರವೇ….

– ವಿಮಲಾ.ಕೆ.ಎಸ್.

ಇಂದು ದಿನಾಂಕ 14-09-2024ರಂದು ಪತ್ರಿಕೆಗಳ ಎರಡು ಸುದ್ದಿಗಳು ಈ ಮೇಲಿನ ಶೀರ್ಷಿಕೆಗೆ ಕಾರಣ. ಯಾದಗಿರಿಯಲ್ಲಿ ಅಪ್ರಾಪ್ತಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿದರೆಂದು ಕುಟುಂಬಕ್ಕೆ ಊರಿನ ಜನ ಬಹಿಷ್ಕಾರ ಹಾಕಿದ್ದಾರೆ. ಅತ್ಯಾಚಾರಿಗೆ ಶಿಕ್ಷೆಯಾಗಬೇಕೆಂದು ಊರ ಮಂದಿಯೆಲ್ಲ ಒತ್ತಡ ಹಾಕಿದ್ದರೆ ಅಭಿನಂದನೀಯರಾಗುತ್ತಿದ್ದರು. ಆದರೆ ಮೊದಲ ಹಂತದಲ್ಲಿ ಅತ್ಯಾಚಾರವೇ ಅಪರಾಧ ಅದರ ಜೊತೆಗೇ ಬಹಿಷ್ಕಾರ ಕೂಡ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಆದರೆ ಯಾವ ಎಗ್ಗು ಸಿಗ್ಗಿಲ್ಲದೆಯೇ ಅತ್ಯಾಚಾರವೂ ಮತ್ತು ಅದರ ಪ್ರತ್ಯಕ್ಷ ಪರೋಕ್ಷ ಸಮರ್ಥನೆಯೂ ನಡೆಯುತ್ತಿದೆ ಎಂಬುದೇ….. ವೇದನೆಯ ಸಂಗತಿ.  ಪೊಕ್ಸೋ

ಇನ್ನೊಂದು 7 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣ ಮತ್ತೂ ಸಮಯ ಕೆಳುತ್ತಿರುವ ಆರೋಪಿ ಪರವಾದ ವಕೀಲರು. ಪೊಕ್ಸೋ ಕಾನೂನಿನ ಪ್ರಕಾರ ಪ್ರಕರಣದ ಒಂದು ವರ್ಷದೊಳಗೆ ಮುಗಿಯಬೇಕು, ಇಲ್ಲಿ ಈಗಾಗಲೇ 7 ವರ್ಷಗಳೇ ಕಳೆದಿವೆ. ಆರೋಪಿಗಳಲ್ಲಿ ಅತ್ಯಾಚಾರ ಎಸಗಿದ ಪುರುಷ ಮತ್ತು ನಂತರ ಬಾಲಕಿಗೆ ದೂರು ದಾಖಲಿಸದಂತೆ, ಯಾರಿಗೂ ವಿಷಯ ತಿಳಿಸದಂತೆ ಬೆದರಿಸಿದ ಮಹಿಳೆ. ಇಬ್ಬರಿದ್ದು 9 ಜನ ಸಾಕ್ಷಿಗಳನ್ನು ಹಾಜರು ಪಡಿಸಲಾಗಿದೆ. ಆದರೆ ಆರೋಪಿಗಳ ಪರವಾಗಿ ವಾದ ಮಾಡುವ ವಕೀಲರಿಂದ ಅವರು ಪಾಟಿ ಸವಾಲಿಗೆ ಒಳಗಾಗಿಲ್ಲ ಆದ್ದರಿಂದ ಇನ್ನಷ್ಟು ಸಮಯ ಕೊಡಬೇಕೆಂಬುದು. ಈ ಸಮಯದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಇದನ್ನು ಓದಿ : ಪೋಕ್ಸೊ ಪ್ರಕರಣಗಳ ವಿಳಂಬವು ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ದುಃಖದ ಪ್ರತಿಬಿಂಬವಾಗಿದೆ; ಕರ್ನಾಟಕ ಹೈಕೋರ್ಟ್

ನ್ಯಾಯದ ದಾರಿಯಲ್ಲಿ ಕಪ್ಪು ಚುಕ್ಕೆ ಇರಬಾರದೆಂಬ ಸದಾಶಯದ, ನೆಲೆಯಲ್ಲಿ 9 ಜನ ಸಾಕ್ಷಿಗಳನ್ನು ರೀಕಾಲ್ ಮಾಡಲು ಮತ್ತು ಮುಂದಿನ ಮೂರು ತಿಂಗಳ ಗಡುವು ನೀಡಿದೆ. ಆದರೆ ಮಹಿಳೆಯರಿಗೆ ಸಂಬಂಧಿಸಿದಂತೆ ಬಹುತೇಕ ಕೇವಲ ತೀರ್ಪುಗಳಾಗಿಯೇ ಬರುವುದೇ ಹೊರತು ನ್ಯಾಯವಲ್ಲ ಎಂಬುದು ನಮ್ಮ ಅನುಭವ. ಅತ್ಯಾಚಾರದಂತಹ ಹೀನ ಕೃತ್ಯವೊಂದು ಸಹಜ ಎಂಬಂತೆ ಮತ್ತು ಇತರ ಅಪರಾಧಗಳಂತೆಯೆ ಪರಿಗಣಿಸಲ್ಪಡುವ ಸ್ಥಿತಿ ಬಂದೊದಗಲು ಈ ರೀತಿಯ ಕಾನೂನಿನ ಚೌಕಟ್ಟಿದ್ದಾಗ್ಯೂ ಆಗುವ ವಿಳಂಬಗಳೂ ಕೊಡುಗೆ ನೀಡುತ್ತವೆ. ಇಂತಹ ಪ್ರಕರಣಗಳ ಬಗ್ಗೆ ತೀವ್ರವಾಗಿ ಪ್ರತಿಕ್ರಿಯೆ ಮಾಡಿದ ಉಚ್ಛನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತಲೇ, ನಿರ್ದಾಕ್ಷಿಣ್ಯವಾಗಿ ವಿಳಂಬ ನೀತಿ ಅನುಸರಿಸಿ, ನ್ಯಾಯದಾನಕ್ಕೆ ಅಡ್ಡಿ ಉಂಟು ಮಾಡುವ ಕ್ರಮಕ್ಕೊಂದು ಶಿಕ್ಷೆಯಾಗಬೇಕು ಎಂದೇಕೆ ಕೇಳಬಾರದು?

ಪೋಕ್ಸೋದಂಥಹ ಪ್ರಕರಣಗಳಲ್ಲೇ ಹೀಗಾಗುತ್ತಿರುವಾಗ ಅತ್ಯಾಚಾರ, ದೌರ್ಜನ್ಯಗಳ ಪ್ರಕರಣಗಳನ್ನು ತಡೆಯಲು ಕಾನೂನು ಬಿಗಿಗೊಳಿಸುವ ಮಾತುಗಳು, ಮಹಿಳೆಯರ ಘನೆತೆಗ ಕುಂದುಂಟು ಮಾಡುವ ಘಟನೆಗಳಿಗೆ  ಜ಼ೀರೋ ಟಾಲರೆನ್ಸ್ ಎಂಬ ಹುಸಿ ಘೋಷಣೆಗಳು ಹಾಸ್ಯಾಸ್ಪದವೆನಿಸುತ್ತವೆ. ಪೊಕ್ಸೋ

ಇದನ್ನು ನೋಡಿ : ಕರ್ನಾಟಕದ ಜನ ಚಳುವಳಿಯಲ್ಲಿ ಸೀತಾರಾಂ ಯೆಚೂರಿ Janashakthi Media

Donate Janashakthi Media

Leave a Reply

Your email address will not be published. Required fields are marked *