- ಕೊರೊನಾ ಕಾಲದಲ್ಲಿ, ಮೊದಲು ಮತ್ತು ನಂತರ
- ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆಯ ವೆಬಿನಾರ್ ಸರಣಿ
ಬೆಂಗಳೂರು : ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆ ಮತ್ತು ವೆಬಿನಾರ್ ನ ಸರಣಿ “ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ” ಈ ಥೀಮ್ ಅಡಿಯಲ್ಲಿ ‘ಪರ್ಯಾಯ ಮಾಧ್ಯಮ ಏಕೆ? ಹೇಗೆ?ಎಂಬ ವಿಷಯದ ಕುರಿತು ಅಕ್ಟೋಬರ್ 17ರಂದು ಸಂಜೆ 5 ಗಂಟೆಗೆ ವೆಬಿನಾರ್ ನಡೆಯಲಿದೆ.
ಈ ವೆಬಿನಾರ್ ನ ದಿಕ್ಸೂಚಿ ಭಾಷಣವನ್ನು PARI ನ ಸ್ಥಾಪಕ ಮತ್ತು ಸಂಪಾದಕಾರದ ಪಿ.ಸಾಯಿನಾಥ್ ರವರು ಮಾಡಲಿದ್ದು, ವೆಬಿನಾರ್ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಡಿ.ಉಮಾಪತಿಯವರು ವಹಿಸಲಿದ್ದಾರೆ.
ಈ ಸರಣಿ ವೆಬಿನಾರ್ ನಲ್ಲಿ ಸಂವಾದ ನಡೆಯಲಿದ್ದು ಈ ಸಂವಾದದಲ್ಲಿ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮ, ಸಂವಾದ ಸಂಪಾದಕರಾದ ಇಂದೂರ ಹೊನ್ನಾಪುರ, ಗೌರಿ ಮೀಡಿಯಾದ ಸಂಪಾದಕರಾದ ಹೆಚ್.ವಿ.ವಾಸು, ಹಿರಿಯ ಪತ್ರಕರ್ತರಾದ ಗೌರೀಶ್ ಅಕ್ಕಿ, ಭಾಗವಹಿಸಲಿದ್ದಾರೆ. ಈ ಸಂವಾದದ ನಿರ್ವಹಣೆಯನ್ನು ಸಂವಹನ ಸಮಾಲೋಚಕರಾದ ಸತ್ಯಾ ಎಸ್. ರವರು ನಿರ್ವಹಿಸಲಿದ್ದಾರೆ.
ಈ ವೆಬಿನಾರ್ ಜನಶಕ್ತಿ ಮೀಡಿಯಾದ ಯುಟ್ಯೂಬ್ , ಫೇಸ್ ಬುಕ್ ಮೂಲಕವು ವಿಕ್ಷಿಸಬಹುದಾಗಿದೆ.
ವೆಬಿನಾರ್ ಐಡಿ : 83559982994
ಪಾಸ್ ವರ್ಡ್ : 720532
ಸಮಯ : ಅಕ್ಟೋಬರ್ 17 ರಂದು, ಸಂಜೆ 5.00ಕ್ಕೆ
ಈ ಲೋಕಾರ್ಪಣೆ ಸರಣಿ ಕಾರ್ಯಕ್ರಮಗಳ ಸಾಮಾನ್ಯ ಥೀಮ್ ಆಗಿರುತ್ತದೆ. ಈ ಸಾಮಾನ್ಯ ಥೀಮ್ ಅಡಿಯಲ್ಲಿ ಹಲವು ಉಪಥೀಮ್ ಗಳ ಕುರಿತು ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳ ಮತ್ತು ವೆಬಿನಾರ್ ನ ಮೂಲಕ ಸಂವಾದ ನಡೆಸಲಾಗುತ್ತದೆ. ಸಾರ್ವಜನಿಕ ಆರೋಗ್ಯ, ಮಾನವ ಹಕ್ಕುಗಳು, ಸಾಮಾಜಿಕ ಭದ್ರತೆ, ವೈಜ್ಞಾನಿಕ ಮನೋವೃತ್ತಿ, ಪ್ರದರ್ಶನ ಕಲೆಗಳು, ಪರ್ಯಾಯ ಮಾಧ್ಯಮ – ಇವು ಉಪಥೀಮ್ ಗಳಾಗಿರುತ್ತವೆ. ಈ ವಿಷಯಗಳ ಕುರಿತು ಈಗಾಗಲೇ ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳು ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿವೆ.
ಈ ಕೆಳಗಿನ ಲಿಂಕ್ ಒತ್ತಿ ಕಾರ್ಯಕ್ರಮಕ್ಕೆ ಜೊತೆಯಾಗಿ.
Join Zoom Meeting
ಲಿಂಕ್ ಕ್ಲಿಕ್ ಮಾಡಿ : ಪರ್ಯಾಯ ಮಾಧ್ಯಮ ಏಕೆ? ಹೇಗೆ? ವೆಬಿನಾರ್