ನವದೆಹಲಿ: ಡಿಸೆಂಬರ್ 13ರ ಬುಧವಾರ ಸಂಸತ್ತಿನ ಮೇಲೆ ನಡೆದ ಭದ್ರತಾ ಉಲ್ಲಂಘನೆಯು ಕನಿಷ್ಠ 18 ತಿಂಗಳ ಯೋಜನೆ ಮತ್ತು ಆರೋಪಿಗಳ ನಡುವೆ ಹಲವು ಸಭೆಗಳ ನಂತರ ಸಂಭವಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ. ಆರೋಪಿಗಳು ಬೇರೆ ಬೇರೆ ರಾಜ್ಯದವರಾಗಿದ್ದು, ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಹೆಸರಿನ ಸಾಮಾಜಿಕ ಮಾಧ್ಯಮ ಫೇಜ್ ಮೂಲಕ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿ ಹೇಳಿವೆ. ಭದ್ರತಾ ಲೋಪ
ಆರೋಪಿಗಳ ವಿರುದ್ಧ ದೆಹಲಿ ಪೊಲೀಸ್ ವಿಶೇಷ ಕೋಶವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B (ಅಪರಾಧದ ಪಿತೂರಿ) ಮತ್ತು 452 (ಗಾಯ, ಹಲ್ಲೆ ಅಥವಾ ತಪ್ಪಾದ ನಿರ್ಬಂಧಕ್ಕೆ ತಯಾರಿ ಮಾಡಿದ ನಂತರ ಸದನ ಅತಿಕ್ರಮಣ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದೆ. ಭದ್ರತಾ ಲೋಪ
ಇದನ್ನೂ ಓದಿ: ಗುಜರಾತ್ | ಎಎಪಿ ಶಾಸಕ ರಾಜೀನಾಮೆ; ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ!
ಇಬ್ಬರು ಆರೋಪಿಗಳಾದ ಮನೋರಂಜನ್ ಡಿ. ಮತ್ತು ಸಾಗರ್ ಶರ್ಮಾ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸಭಾಂಗಣವನ್ನು ಯಶಸ್ವಿಯಾಗಿ ಪ್ರವೇಶಿಸಿದ್ದಾರೆ. ಬಣ್ಣದ ಹೊಗೆ ಸೂಸುವ ಬಾಂಬ್‌ನೊಂದಿಗೆ ಸಂಸತ್ತಿನ ಹೊರಗೆ ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನು ನೀಲಂ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಐದನೇ ಶಂಕಿತ ಆರೋಪಿ ವಿಶಾಲ್ ಶರ್ಮಾ ಎಂಬಾತನನ್ನು ಗುರುಗ್ರಾಮ್‌ನಲ್ಲಿ ಬಂಧಿಸಲಾಗಿದ್ದು, ಯೋಜನೆಯಲ್ಲಿ ತೊಡಗಿರುವ ನಾಲ್ವರು ವ್ಯಕ್ತಿಗಳಿಗೆ ಆಶ್ರಯ ನೀಡಿದ ಆರೋಪವಿದೆ.
ಆರನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಬಿಹಾರದ ಲಲಿತ್ ಝಾ ಎಂದು ಗುರುತಿಸಲಾಗಿದ್ದು, ಆತ ಸಂಸತ್ತಿನ ಹೊರಗೆ ಬಣ್ಣದ ಹೊಗೆ ಸೂಸುವ ಬಾಂಬ್ ಬಳಸಿದ ನೀಲಂ ಮತ್ತು ಶಿಂಧೆ ಅವರ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ ಹಾಗೂ ನಂತರ ತನ್ನ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಮನೋರಂಜನ್ ಡಿ. ಮೈಸೂರಿನ ನಿವಾಸಿಯಾಗಿದ್ದು, ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ. “ನನ್ನ ಮಗ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗ” ಎಂದು ಅವನ ತಂದೆ ದೇವರಾಜೇಗೌಡ ಅವರು ಹೇಳಿದ್ದಾರೆ. ಈ ಘಟನೆಯ ಮೊದಲು ಮನೋರಂಜನ್ ತನ್ನ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿದ್ದ ಎಂದು ವರದಿಯಾಗಿದೆ.
ಇದನ್ನೂ ಓದಿ: ಡಿಸೆಂಬರ್ 14 ವರೆಗೆ ಆಧಾರ್ ಕಾರ್ಡ್ ಅಪ್ಡೇಟ್ಗೆ ಗಡವು ವಿಸ್ತಾರಣೆ
ಅದಕ್ಕೂ ಹಿಂದೆ ಮನೋರಂಜನ್ ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೆ ಆಗಾಗ್ಗೆ ಬೆಂಗಳೂರು ಮತ್ತು ದೆಹಲಿ ನಡುವೆ ಪ್ರಯಾಣಿಸುತ್ತಿದ್ದನು ಎಂದು. ಆರೋಪಿಯ ಕುಟುಂಬವು ಬಿಜೆಪಿಯೊಂದಿಗೆ ಸಹಾನುಭೂತಿ ಹೊಂದಿದ್ದು, ಸ್ಥಳೀಯ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂದು ವರದಿಗಳ ಹೇಳಿವೆ. ಅಲ್ಲದೆ, ಪ್ರತಾಪ್ ಸಿಂಹ ಅವರ ಕಚೇರಿಯೆ ಅವರಿಗೆ ಸಂಸತ್ ಪ್ರವೇಶಿಸಲು ಪಾಸ್‌ಗಳನ್ನು ನೀಡಿದೆ ಎಂದು ಆರೋಪಿಯ ತಂದೆ ಹೇಳಿದ್ದಾರೆ.
ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಎಂಬಾತ ರೋಷನ್ ಶರ್ಮಾ ಎಂಬ ಬಡಗಿಯ ಪುತ್ರನಾಗಿದ್ದಾರೆ. ಆರ್ಥಿಕ ತೊಂದರೆ ಕಾರಣಕ್ಕೆ ಶಿಕ್ಷಣವನ್ನು ನಿಲ್ಲಿಸಿದ್ದ ಆರೋಪಿ 12 ನೇ ತರಗತಿಯವರೆಗೆ ಅಲಂಬಾಗ್‌ನಲ್ಲಿರುವ ಭೂಪತಿ ಸ್ಮಾರಕ ಅಂತರ-ಕಾಲೇಜಿಗೆ ವ್ಯಾಸಂಗ ಮಾಡಿದ್ದನು. 2021 ರಲ್ಲಿ ಅವರು ಬೆಂಗಳೂರಿಗೆ ಬಂದಿದ್ದ ಆತ, ನಂತರ ಲಕ್ನೋಗೆ ಮರಳಿ ಅಲ್ಲಿ ಇ-ರಿಕ್ಷಾ ಚಾಲನೆ ಮಾಡುವ ಮೂಲಕ ಜೀವನೋಪಾಯ ಮಾಡುತ್ತಿದ್ದ ಎಂದು ವರದಿಗಳು ಉಲ್ಲೇಖಿಸಿವೆ. ಭದ್ರತಾ ಲೋಪ
37 ವರ್ಷ ವಯಸ್ಸಿನ ಮಹಿಳೆ ನೀಲಂ ಹರಿಯಾಣದ ಜಿಂದ್ ಜಿಲ್ಲೆಯ ಘಾಸೊ ಖುರ್ದ್ ಗ್ರಾಮದ ನಿವಾಸಿಯಾಗಿದ್ದು, ಹರಿಯಾಣ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ, ಹಿಸಾರ್‌ನಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸಿಸುತ್ತಿದ್ದ ಆಕೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆ ಮತ್ತು ಹರಿಯಾಣ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಹತೆ ಪಡೆದರೂ ಉದ್ಯೋಗ ಪಡೆಯಲು ಹೆಣಗಾಡಿದ್ದರು ಎಂದು ವರದಿ ಉಲ್ಲೆಖಿಸಿದೆ. ಸಿಹಿ ತಿಂಡಿ ತಯಾರಿಸುವವರ ಮಗಳಾದ ನೀಲಂ, ಇಬ್ಬರು ಸಹೋದರರನ್ನು ಹೊಂದಿದ್ದಾಳೆ. ಅವರ ಸಹೋದರರು ಹಾಲು ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನೀಲಂ ಮೇ ವೇಳೆಗೆ ದೆಹಲಿಯಲ್ಲಿ ನಡೆದ ರೈತರ ಆಂದೋಲನ ಮತ್ತು ಕುಸ್ತಿಪಟುಗಳ ಆಂದೋಲನ ಸೇರಿದಂತೆ ವಿವಿಧ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಳು, ಜೊತೆಗೆ ಹರಿಯಾಣದಲ್ಲಿ ಕೂಡಾ ಹಲವಾರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಳು. ಭದ್ರತಾ ಲೋಪ
ಇದನ್ನೂ ಓದಿ: ರಾಜ್ಯದಲ್ಲಿ 2.55 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ: ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಯಲ್ಲೇ ಹೆಚ್ಚು!
ಮತ್ತೊಬ್ಬ ಆರೋಪಿ ಮಹಾರಾಷ್ಟ್ರದ ಲಾತೂರ್‌ನ ಝರಿ ಗ್ರಾಮದ ನಿವಾಸಿಯಾದ ಅಮೋಲ್ ಶಿಂಧೆ 12ನೇ ತರಗತಿವರೆಗೆ ಶಿಕ್ಷಣ ಮುಗಿಸಿ ಸೇನೆ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು. ರಾಜ್ಯ ಪೊಲೀಸ್ ಸೇವೆಗಳಿಗೆ ದೈಹಿಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದರೂ, ಅವರು ಲಿಖಿತ ಪರೀಕ್ಷೆಯಲ್ಲಿ ವಿಫಲನಾಗಿದ್ದನು. ಅಮೋಲ್ ಪೋಷಕರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಸಂಸತ್ತಿನ ದಾಳಿಯ 22 ನೇ ವರ್ಷದ ದಿನವಾದ ಡಿಸೆಂಬರ್ 13 ರ ಬುಧವಾರದಂದು ಸಂಸತ್ತಿನ ಭದ್ರತಾ ಉಲ್ಲಂಘನೆ ನಡೆದಿದೆ. ಸಂದರ್ಶಕರ ಗ್ಯಾಲರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಸದನಕ್ಕೆ ಜಿಗಿದು ಹಳದಿ ಹೊಗೆ ಸೂಸುವ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯ ಮೈಸೂರು ಸಂಸದ ಪ್ರತಾಪ್ ಸಿಂಹ ನೀಡಿದ ಸಂದರ್ಶಕರ ಪಾಸ್‌ಗಳನ್ನು ಅವರು ಪಡೆದುಕೊಂಡಿದ್ದರು. ಸಂಸತ್ತಿನಲ್ಲಿನ ಸಂಸದರು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಒಬ್ಬ ವ್ಯಕ್ತಿ ಸ್ಪೀಕರ್ ಕುರ್ಚಿಯ ಕಡೆಗೆ ಓಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಇಬ್ಬರು “ಸರ್ವಾಧಿಕಾರಕ್ಕೆ ಧಿಕ್ಕಾರ” ಎಂದು ಕೂಗಿದ್ದರು ಎಂದು ವರದಿಗಳು ಉಲ್ಲೇಖಿಸಿದೆ. ಅಲ್ಲಿ ಅವರನ್ನು ತಕ್ಷಣವೇ ಬಂಧಿಸಲಾಗಿತ್ತು. ಭದ್ರತಾ ಲೋಪ
ಅದೇ ಸಮಯದಲ್ಲಿ, ಸಂಸತ್ ಭವನದ ಹೊರಗೆ ಇನ್ನೂ ಇಬ್ಬರನ್ನು ಬಂಧಿಸಲಾಯಿತು. ಅವರು ಹಳದಿ ಬಣ್ಣದ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಹೊತ್ತುಕೊಂಡು “ಭಾರತ್ ಮಾತಾ ಕಿ ಜೈ, ತನಾಶಾಹಿ ಬಂದ್ ಕರೋ (ಸರ್ವಾಧಿಕಾರ ನಿಲ್ಲಿಸಿ), ತನಾಶಾಹಿ ನಹೀ ಚಲೇಗಿ (ಸರ್ವಾಧಿಕಾರ ನಡೆಯುವುದಿಲ್ಲ) ಮತ್ತು “ಜೈ ಭೀಮ್, ಜೈ ಭಾರತ್, ಸಂವಿಧಾನ ಉಳಿಸಿ” ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಗಳು ಹೇಳಿವೆ. ಭದ್ರತಾ ಲೋಪ
ವಿಡಿಯೊ ನೋಡಿ: ಲೋಕಸಭೆಗೆ ನುಗ್ಗಿದ ಇಬ್ಬರು ಅಪರಿಚಿತರು! ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದ ಆರೋಪ #ParliamentAttack