ಸಂಸತ್ ಕಲಾಪ ಜುಲೈ 1ಕ್ಕೆ ಮುಂದೂಡಿಕೆ

ನವದೆಹಲಿ:ಅಧಿವೇಶನದಲ್ಲಿ ನೀಟ್ ಅಕ್ರಮ ಸರ್ಕಾರದ ಸದಸ್ಯರು ಹಾಗೂ ವಿಪಕ್ಷದ ಸದಸ್ಯರ ನಡುವೆ ಗದ್ದಲ ಏರ್ಪಡಿಸಿದ ಕಾರಣ ಕಲಾಪ ಮೊಟಕುಗೊಂಡು ಜುಲೈ 1ಕ್ಕೆ ಮುಂದೂಡಿಕೆಯಾಗಿದೆ.ಸಂಸತ್ 

ಕಲಾಪದಲ್ಲಿ ವಿರೋಧ ಪಕ್ಷಗಳು ನೀಟ್ ಪರಿಕ್ಷಾ ಅಕ್ರಮದ ಬಗ್ಗೆ ಗಲಾಟೆ ಆರಂಭಿಸಿದವು. ಪ್ರಶ್ನೋತ್ತರ ವೇಳೆಗೆ ತೀವ್ರಗೊಡ ಗದ್ದಲವನ್ನು ನಿಯಂತ್ರಿಸಲು ಪ್ರಯತ್ನಿಸಿದ ಸ್ಪೀಕರ್‌ ಈ ಕಲಾಪ ರಾಷ್ಟ್ರಪತಿಗಳ ಭಾಷಣ ಮತ್ತು ಅದಕ್ಕೆ ಸಂಬಂಧಪಟ್ಟ ಚರ್ಚೆಗೆ ಸೀಮಿತವಾಗಿದೆ. ನೀಟ್ ‌ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ ಎಂದರು. ಸಂಸತ್ 

ನಂತರ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ನೀಟ್ ಪರೀಕ್ಷಾ ಆಕ್ರಮದ ಬಗ್ಗೆ ಮಾತನಾಡಬೇಕಾದುದು ನಮ್ಮ ಜವಾಬ್ದಾರಿ. ಸರ್ಕಾರ ಮತ್ತು ವಿರೋಧ ಪಕ್ಷಗಳು ಈ ಬಗ್ಗೆ ಜಂಟಿ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದರು.

ಇದನ್ನು ಓದಿ : ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಸಿ.ಟಿ.ರವಿ ಆಗ್ರಹ

ಶುಕ್ರವಾರ ಬೆಳಗ್ಗೆ ಅಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಕೈಗೊಂಡಾಗ ವಿರೋಧ ಪಕ್ಷದ ಸದಸ್ಯರು ನೀಟ್ ಪರಿಕ್ಷಾ ಅಕ್ರಮದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲೆತ್ನಿಸಿದರು. ಈ ವೇಳೆ ಆಡಳಿತಾರೂಢ ಸದಸ್ಯರಿಗೂ ವಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ಇದರಿಂದ ಸದನದಲ್ಲಿ ಗಲಾಟೆ ಆರಂಭಿಸಿತು. ತೀವ್ರಗೊಡ ಗದ್ದಲವನ್ನು ನಿಯಂತ್ರಿಸಲು ಪ್ರಯತ್ನಿಸಿದ ಸ್ಪೀಕರ್‌ ಓಂ ಬಿರ್ಲಾ, ಈ ಕಲಾಪ ರಾಷ್ಟ್ರಪತಿಗಳ ಭಾಷಣ ಮತ್ತು ಅದಕ್ಕೆ ಸಂಬಂಧಪಟ್ಟ ಚರ್ಚೆಗೆ ಸೀಮಿತವಾಗಿದೆ. ನೀಟ್ ‌ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ ಎಂದರು. ಆಗ ಎದ್ದುನಿಂತ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ನೀಟ್ ಪರೀಕ್ಷಾ ಆಕ್ರಮದ ಬಗ್ಗೆ ಮಾತನಾಡಬೇಕಾದುದು ನಮ್ಮ ಜವಾಬ್ದಾರಿ. ಸರ್ಕಾರ ಮತ್ತು ವಿರೋಧ ಪಕ್ಷಗಳು ಈ ಬಗ್ಗೆ ಜಂಟಿ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದರು.ಸಂಸತ್ 

ಆಗ ಸರ್ಕಾರದ ಪರವಾಗಿ ಸಚಿವ ಕಿರಣ್ ರಿಜಿಜು ಸರ್ಕಾರ ಈ ಬಗ್ಗೆ ಕ್ರಮ ವಹಿಸಿದೆ ಎಂದು ಸಭೆಗೆ ತಿಳಿಸುವ ಪ್ರಯತ್ನ ಮಾಡಿದರಾದರೂ ಈ ಉತ್ತರದಿಂದ ಪ್ರತಿಪಕ್ಷದ ಸದಸ್ಯರು ತೃಪ್ತರಾಗಲಿಲ್ಲ. ಸದನದಲ್ಲಿ ಗದ್ದಲ ಮುಂದುವರೆಯಿತು. ಈ ವೇಳೆ ಸಭಾಪತಿ ಬಿರ್ಲಾ ನೀಟ್ ಬಗೆಗಿನ ಎಲ್ಲ ಪ್ರಶ್ನೆಗಳನ್ನು ರದ್ದುಗೊಳಿಸಿ ಕಲಾಪವನ್ನು ಜುಲೈ 1 ರವರೆಗೆ ಮುಂದೂಡಿದರು.ಸಂಸತ್ 

ಇದನ್ನು ನೋಡಿ : 100 ರೂಪಾಯಿ ಘನತ್ಯಾಜ್ಯ ಸೇವಾ ಶುಲ್ಕ : ಕಸ ಮಾಫಿಯಾದ ಕೈವಾಡ Janashakthi Media

Donate Janashakthi Media

Leave a Reply

Your email address will not be published. Required fields are marked *