ಪರಿಹಾರವಾಗದ ಅಂಗನವಾಡಿ ಅಕ್ಕಂದಿರ ಬೇಡಿಕೆಗಳು: ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಶ್ರಮವಹಿಸಿ ಜನತೆ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ದುಡಿಮೆ ಮಾಡಿದ್ದಾರೆ. ಆದರೂ ಸಹ ಅಂಗನವಾಡಿ ನೌಕರರು ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಮಾತ್ರ ಇವರ ಕಡೆ ಗಮನಹರಿಸುತ್ತಿಲ್ಲ.

ಅಂಗನವಾಡಿ ಕೆಲಸವಲ್ಲದೆ, ಹೆಚ್ಚುವರಿ ಕೆಲಸಗಳನ್ನು ಇವರಿಂದ ಮಾಡಿಸಲಾಗುತ್ತಿದೆ. ಸಮಸ್ಯೆಗಳ ಪರಿಹಾರಿಸಬೇಕೆಂದು ಬೇಡಿಕೆಗಳನ್ನು ಮುಂದುಟ್ಟಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ವು ತಮ್ಮ ಬೇಡಿಕೆಗಳನ್ನು ಪರಿಹರಿಸುವಂತೆ ಸರ್ಕಾರಕ್ಕೆ ತಿಳಿಸಿದರು.

ಇಲಾಖೆಯ ಪ್ರದಾನ ಕಾರ್ಯದರ್ಶಿ ಉಮಾ ಮಹದೇವನ್ ರವರ ಅದ್ಯಕ್ಷತೆಯಲ್ಲಿ ಇಲಾಖೆಯ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ರಾಜ್ಯ ಮುಖಂಡರು ಭಾಗವಹಿಸಿದ್ದರು ಮತ್ತು ಬೇಡಿಕೆಗಳನ್ನು ವಿವರಿಸಿದರು.

ಇದನ್ನೂ ಓದಿ : ಸವರ್ಣೀಯರ ಪಕ್ಕದಲ್ಲಿನ ಮನೆ ಖರೀದಿಸಿದ್ದಕ್ಕೆ ದಲಿತನ ಮೇಲೆ ಸಚಿವರ ಬೆಂಬಲಿಗರಿಂದ ಹಲ್ಲೆ

ಪ್ರಮುಖವಾಗಿ 54 ಬೇಡಿಕೆಯ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲಿ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡುವುದು ಇದಕ್ಕಾಗಿ ತರಬೇತಿ ನೀಡಿ ಸರ್ಟಿಫಿಕೇಟ್ ನೀಡುವುದು. ಬಾಕಿ ಇರುವ 1456 ಕಾರ್ಯಕರ್ತೆ 546 ಸಹಾಯಕಿಯರ ಬಾಕಿ ಇಡುಗಂಟಿಗಾಗಿ.5.26 ಕೋಟಿ ಬಿಡುಗಡೆ ಮಾಡುವ ಬಗ್ಗೆ, ಮೊಬೈಲ್ ರಿಪೇರಿ ವೆಚ್ಚವನ್ನು ಇಲಾಖೆಯೇ ಭರಿಸಬೇಕೆಂದು, ಪೋಷಣ್ ಟ್ರ್ಯಾಕರ್ ಕೆಲಸಕ್ಕಾಗಿ ಕಾರ್ಯಕರ್ತೆಗೆ ಹೆಚ್ಚುವರಿ 500 ಸಹಾಯಕಿಗೆ 250 ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆದಿವೆ.

ಅಂಗನವಾಡಿ ನೌಕರರು ಮತ್ತು ಸಹಾಯಕಿಯರಿಗೆ ಗೌರವ ಧನ ಹೆಚ್ಚಳದ ಬಗ್ಗೆ ಮೂಲಭೂತ ಸೌಕರ್ಯಗಳಿಗಾಗಿ ಅಮೃತ ಅಂಗನವಾಡಿ ಯೋಜನೆಯಿಂದ 1 ಲಕ್ಷ ಮೀಸಲು ಇಡಬೇಕು. ಅನುಕಂಪದ ಆಧಾರ ಅದೇಶಕ್ಕೆ ಸೊಸೆ ಹೆಸರನ್ನು ಪರಿಗಣಿಸಬೇಕು. ಆಯುಷ್ಮಾನ್ ಭಾರತ ಅಡಿಯಲ್ಲಿ ಆರೋಗ್ಯ ಕರ್ನಾಟಕ ಕಾರ್ಡು ಎಲ್ಲಾ ಕಾರ್ಯಕರ್ತೆ ಮತ್ತು ಸಹಾಯಕಿಗೆ ವಿತರಣೆ ಮಾಡುವುದು. ಇ-ಶ್ರಮ್ ಕಾರ್ಡ್ ಸೌಲಭ್ಯವನ್ನು ವಿತರಿಸುವುದು. ಇಲಾಖೆಯ ವತಿಯಿಂದ ಮೊಟ್ಟೆ ವಿತರಣೆ ಮಾಡುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ವು ಸಭೆಯಲ್ಲಿ ಪ್ರಸ್ತಾಪಿಸಿದೆ.

ಸಭೆಯಲ್ಲಿ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಸಂಘಟನೆಯು ಕೂಡಲೇ ಪರಿಹರಿಸುವಂತೆ ತಿಳಿಸಿದೆ. ಸಭೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ಸುನಂದಾ, ಮುಖಂಡರಾದ ಕಮಲ, ಗುಲ್ಜಾರ್  ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *