ಪ್ರಸ್ತುತ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅತ್ಯಧಿಕ ಸಾಧನೆಯನ್ನು ಮಾಡಿದ್ದು ಒಟ್ಟು 17 ಪದಕಗಳು ಗಳಿಸಿದ್ದಾರೆ. ಪದಕಗಳ ಪಟ್ಟಿಯಲ್ಲಿ ಭಾರತ 26ನೇ ಸ್ಥಾನದಲ್ಲಿದ್ದು ನಾಲ್ಕು ಚಿನ್ನ, ಏಳು ಬೆಳ್ಳಿ, ಆರು ಕಂಚು ಪದಕಗಳನ್ನು ಪಡೆದುಕೊಂಡಿದೆ.
ಆಗಸ್ಟ್ 24ರಿಂದ ಸೆಪ್ಟಂಬರ್ 5ರವರೆಗೆ ನಡೆಯಲಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಕ್ರೀಡಾಕೂಟಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಾರತದ ಕ್ರೀಡಾಪಟುಗಳ ಸಂಖ್ಯೆ 54 ಆಗಿದ್ದವು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 163 ದೇಶಗಳಿಂದ 4500 ಸ್ಪರ್ಧಿಗಳು ಭಾಗವಹಿಸಿದ್ದರು. 22 ಕ್ರೀಡೆಗಳಲ್ಲಿ 540 ವಿವಿಧ ವಿಭಾಗದ ಸ್ಪರ್ದೆಗಳು ಈ ಬಾರಿ ಇದ್ದವು. ಕಳೆದ ವರ್ಷವೇ ನಡೆಯಬೇಕಾಗಿದ್ದ ಕ್ರೀಡಾಕೂಟವು ಒಂದು ವರ್ಷ ತಡವಾಗಿ ಆಯೋಜಿಸಲಾಗಿತ್ತು. 1960ರಲ್ಲಿ ಮೊದಲ ಪ್ಯಾರಾಲಿಂಪಿಕ್ಸ್ ನಡೆದರೂ ಭಾರತ 1968ರ ಟೆಲ್ ಅವಿವ್ ನಡೆದ ಕ್ರೀಡಾಕೂಟದ ಮೂಲಕ ಭಾಗವಹಿಸಿತ್ತು.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ: 163 ರಾಷ್ಟ್ರಗಳ-4500 ಸ್ಪರ್ಧಿಗಳು ಭಾಗಿ
ಈ ಬಾರಿಯ ಕ್ರೀಡಾಕೂಟದಲ್ಲಿ ಮತ್ತೊಂದು ವಿಶೇಷವೆಂದರೆ, ಅವನಿ ಲೇಖರಾ ಅವರು ಎರಡು ಪದಕಗಳನ್ನು ಜಯಿಸಿದ್ದಾರೆ. ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಮಹಿಳೆಯರ 50 ಮೀ ಏರ್ ರೈಫಲ್ ಶೂಟಿಂಗ್ ನಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ.
ಸಿಂಗರಾಜ್ ಅಧಾನ ಅವರು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಕಂಚು ಹಾಗೂ ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಬೆಳ್ಳಿಯ ಪದಕವನ್ನು ಗಳಿಸಿಕೊಂಡಿದ್ದಾರೆ.
ಅದೇ ರೀತಿಯಲ್ಲಿ ಶೂಟಿಂಗ್ ವಿಭಾಗದಲ್ಲಿ ಒಟ್ಟು 5 ಪದಕಗಳು ಲಭಿಸಿದ್ದು, ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚು ಲಭಿಸಿದೆ. ಎತ್ತರ ಜಿಗಿತ ಸ್ಪರ್ಧೆಯಲ್ಲೂ 4 ಪದಕಗಳು ಲಭಿಸಿವೆ.
ಇದನ್ನು ಓದಿ: ಅವನಿ ಲೇಖರಾಗೆ ಒಂದೇ ಕ್ರೀಡಾಕೂಟದಲ್ಲಿ 2 ಪದಕ: ಐತಿಹಾಸಿಕ ಸಾಧನೆಗೈದ ಭಾರತದ ಮಹಿಳೆ
- ಭಾವಿನ ಪಟೇಲ್ – ಬೆಳ್ಳಿ ಪದಕ – ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4
- ನಿಶಾದ್ ಕುಮಾರ್ – ಬೆಳ್ಳಿ ಪದಕ – ಪುರುಷರ ಎತ್ತರ ಜಿಗಿತ ಟಿ 47
- ಅವನಿ ಲೇಖರಾ – ಚಿನ್ನದ ಪದಕ – ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1
- ದೇವೇಂದ್ರ ಜಜಾರಿಯಾ – ಬೆಳ್ಳಿ ಪದಕ – ಪುರುಷರ ಜಾವೆಲಿನ್ ಥ್ರೋ ಎಫ್ 46
- ಸುಂದರ್ ಸಿಂಗ್ ಗುರ್ಜಾರ್ – ಕಂಚಿನ ಪದಕ – ಪುರುಷರ ಜಾವೆಲಿನ್ ಥ್ರೋ ಎಫ್ 46
- ಯೋಗೀಶ್ ಕಠುನಿಯಾ – ಬೆಳ್ಳಿ ಪದಕ – ಪುರುಷರ ಡಿಸ್ಕಸ್ ಥ್ರೋ ಎಫ್ 56
- ಸುಮಿತ್ ಆಂಟಿಲ್ – ಚಿನ್ನದ ಪದಕ – ಪುರುಷರ ಜಾವೆಲಿನ್ ಥ್ರೋ ಎಫ್ 64
- ಸಿಂಗರಾಜ್ ಅಧಾನ – ಕಂಚಿನ ಪದಕ – ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್ ಎಚ್ 1
- ಮರಿಯಪ್ಪನ್ ತಂಗವೇಲು – ಬೆಳ್ಳಿ ಪದಕ – ಪುರುಷರ ಎತ್ತರ ಜಿಗಿತ ಟಿ 42
- ಶರದ್ ಕುಮಾರ್ – ಕಂಚಿನ ಪದಕ – ಪುರುಷರ ಎತ್ತರ ಜಿಗಿತ ಟಿ 42
- ಪ್ರವೀಣ್ ಕುಮಾರ್ – ಬೆಳ್ಳಿ ಪದಕ – ಪುರುಷರ ಎತ್ತರ ಜಿಗಿತ ಟಿ 64
- ಅವನಿ ಲೇಖರ – ಕಂಚಿನ ಪದಕ – ಮಹಿಳೆಯರ 50 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್‌ಎಚ್ 1
- ಹರ್ವಿಂದರ್ ಸಿಂಗ್ – ಕಂಚಿನ ಪದಕ – ಪುರುಷರ ವೈಕ್ತಿಕ ರಿಕ್ಯೂರ್ವ್ ಸ್ಪರ್ಧೆ
- ಮನೀಷ್ ನರ್ವಾಲ್ – ಚಿನ್ನದ ಪದಕ – ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
- ಸಿಂಗ್‌ರಾಜ್ – ಬೆಳ್ಳಿ ಪದಕ – ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
- ಪ್ರಮೋದ್ ಭಗತ್ – ಚಿನ್ನದ ಪದಕ – ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್3
- ಮನೋಜ್ ಸರ್ಕಾರ್ – ಕಂಚಿನ ಪದಕ – ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗ ಎಸ್‌ಎಲ್3
ಪದಕಗಳು ಗೆಲ್ಲುವು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾ ದೇಶವು 200 ಪದಕಗಳನ್ನು ಜಯಿಸಿದ್ದು, ಅದರಲ್ಲಿ 93 ಚಿನ್ನ, 57 ಬೆಳ್ಳಿ ಹಾಗೂ 50 ಕಂಚಿನ ಪದಕಗಳನ್ನು ಗಳಿಸಿಕೊಂಡಿದೆ. ಅದೇ ರೀತಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗ್ರೇಟ್ ಬ್ರಿಟನ್ 122 ಪದಕಗಳನ್ನು ಜಯಿಸಿದ್ದು 41 ಚಿನ್ನ, 38 ಬೆಳ್ಳಿ ಹಾಗೂ 43 ಕಂಚಿನ ಪದಕಗಳನ್ನು ಪಡೆದುಕೊಂಡಿದೆ. ರಷ್ಯನ್ ಪ್ಯಾರಾಲಿಂಪಿಕ್ಸ್ ಸಮಿತಿಯು 117 ಪದಕಗಳನ್ನು ಪಡೆದಿದ್ದು 36 ಚಿನ್ನ, 32 ಬೆಳ್ಳಿ, 49 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿವೆ. ಯು.ಎಸ್.ಎ. ನಾಲ್ಕನೇ ಸ್ಥಾನದಲ್ಲಿದ್ದು 101 ಪದಕಗಳನ್ನು ಗಳಿಸಿದ್ದು 35 ಚಿನ್ನ, 36 ಬೆಳ್ಳಿ, 30 ಕಂಚಿನ ಪದಯಗಳನ್ನು ಜಯಿಸಿದೆ.
ವರದಿ: ವಿನೋದ ಶ್ರೀರಾಮಪುರ