ಕಾಬೂಲ್: ಪಾಕಿಸ್ತಾನ ವಾಯುಪಡೆ (ಪಿಎಎಫ್)ಯು ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಫೆಬ್ರವರಿ 22ರ ಬೆಳಗಿನ ಜಾವ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದು ಕೆಲವರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನ
ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿಯಲ್ಲಿ ವೈಮಾನಿಕ ದಾಳಿಯಲ್ಲಿ 17 ನಾಗರಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಲ್ಲಿ ಇತ್ತೀಚಿನ ಆತ್ಮಹತ್ಯಾ ದಾಳಿಗಳಿಗೆ ಅಫ್ಘಾನ್ ಮೂಲದ ಭಯೋತ್ಪಾದಕರ ಕೈವಾಡವಿದೆ ಎಂಬ ಕಾರಣದಿಂದ ಈ ದಾಳಿ ನಡೆಸಲಾಗಿದೆ.
ಪಾಕಿಸ್ತಾನವು ಅಫ್ಘಾನಿಸ್ತಾನದೊಳಗಿನ ಡುರಾಂಡ್ ರೇಖೆಯ ಉದ್ದಕ್ಕೂ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಪಾಕಿಸ್ತಾನದ ಯುದ್ಧ ವಿಮಾನಗಳು ಶಂಕಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಡಗುತಾಣಗಳ ಮೇಲೆ ದಾಳಿ ಮಾಡಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ಭಗವಂತನ ಮರಣʼ ಬೆಂಗಳೂರು ಸಮುದಾಯದ ಹೊಸ ನಾಟಕ
ಪಾಕಿಸ್ತಾನಿ ವಿಮಾನಗಳು ಪಕ್ತಿಕಾ ಪ್ರಾಂತ್ಯದ ಬರ್ಮಲ್ ಜಿಲ್ಲೆಯ ಮೇಲೆ ದಾಳಿ ಮಾಡಿದವು, ಅಲ್ಲಿ ಅನೇಕ ಸ್ಫೋಟಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ. ಮಾರ್ಗ ಪ್ರದೇಶದಲ್ಲಿ ಹಲವಾರು ಸ್ಫೋಟಗಳ ಶಬ್ದಗಳು ತ್ವರಿತವಾಗಿ ಕೇಳಿಬಂದವು, ಇದು ಸಂಘಟಿತ ಕಾರ್ಯಾಚರಣೆಯನ್ನು ಸೂಚಿಸುತ್ತದೆ. ಬರ್ಮಲ್‌ನ ಬನುಸಿ ಮದರಸಾದ ಮೇಲೆಯೂ ವೈಮಾನಿಕ ದಾಳಿ ನಡೆದಿದ್ದು, ಸಾವು ನೋವುಗಳ ಕುರಿತು ಮಾಹಿತಿ ಹೊರಬಿದ್ದಿಲ್ಲ.
ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದಾಳಿಯ ವ್ಯಾಪ್ತಿಯು ಪಕ್ಟಿಕಾವನ್ನು ಮೀರಿ, ಖೋಸ್ಟ್, ಪಕ್ಟಿಯಾ ಮತ್ತು ನಂಗರ್ಹಾರ್ ಸೇರಿದಂತೆ ಗಡಿಯುದ್ದಕ್ಕೂ ಇತರ ಪ್ರಾಂತ್ಯಗಳಿಗೆ ವಿಸ್ತರಿಸಿದೆ. ಹೊಸ ವರದಿಗಳು ಪಕ್ಟಿಕಾದ ಅರ್ಗುನ್ ಪ್ರದೇಶದಲ್ಲಿ ಮತ್ತೊಂದು ದಾಳಿ ನಡೆದಿರುವುದನ್ನು ಸೂಚಿಸುತ್ತವೆ.
ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನ ವಾಯುಪಡೆಯು ಎಫ್ -16 ಯುದ್ಧ ವಿಮಾನಗಳು ಮತ್ತು ಜೆಎಫ್ -17 ಥಂಡರ್ ವಿಮಾನಗಳನ್ನು ನಿಯೋಜಿಸಿತ್ತು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ದಾಳಿ ವಿಚಾರವನ್ನು ದೃಢಪಡಿಸಿದ್ದಾರೆ. ಕಳೆದ ವಾರ ರಂಜಾನ್ ಆರಂಭವಾದಾಗಿನಿಂದ ಮೂರು ದಾಳಿಗಳನ್ನು ಉಲ್ಲೇಖಿಸಿದ್ದಾರೆ. ಪಾಕಿಸ್ತಾನವು ಗುಪ್ತಚರ ಮಾಹಿತಿ ಆಧಾರಿಸಿ ಪಾಕಿಸ್ತಾನಿ ತಾಲಿಬಾನ್ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದ ಏಳು ಭಯೋತ್ಪಾದಕ ಶಿಬಿರಗಳು ಮತ್ತು ಅಡಗುತಾಣಗಳನ್ನು ಗಡಿ ಪ್ರದೇಶದಲ್ಲಿ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಡಾ. ರಾಮ ಮನೋಹರ ಲೋಹಿಯಾ ವಿಚಾರಧಾರೆ |ಪ್ರೊ. ಗಂಗಾಧರ ಬಿ.ಎಂ Janashakthi Media
