ಜನ ಸಾಯುತ್ತಿದ್ದರೂ ನಿಮಗೆ ಅನುಕಂಪವಿಲ್ಲವೆ: ಕೇಂದ್ರದ ವಿರುದ್ಧ ದೆಹಲಿ ಹೈಕೋರ್ಟ್‌ ಅಸಮಾಧಾನ

ನವದೆಹಲಿ: ದೆಹಲಿ: ಕೋವಿಡ್‌ ಸಂಕಷ್ಟದ ಸಮಯದಲ್ಲೂ ಸರಕಾರಕ್ಕೆ ಜನರ ಜೀವದ ಬಗ್ಗೆ ಅನುಕಂಪವಿಲ್ಲದೆ ಇರುವುದರ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್‌ ಅಘಾತ ವ್ಯಕ್ತಪಡಿಸಿದೆ.

ವೈದ್ಯಕೀಯ ಆಮ್ಲಜನಕದ ಅತ್ಯಂತ ತುರ್ತು ಅಗತ್ಯತೆಯ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಎಂಬುದು ನ್ಯಾಯಾಲಯ ಹೇಳಿದೆ.

ದೆಹಲಿಯ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ 1,400ಕ್ಕೂ ಅಧಿಕ ಕೋವಿಡ್‌ ಸೋಂಕಿತರು ಇದ್ದು, ಅವರಿಗೆ ತುರ್ತಾಗಿ ಆಮ್ಲಜನಕ ಲಭ್ಯವಾಗುವುದನ್ನು ಖಾತರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ. ಯಾವುದೇ ವಿಧಾನವನ್ನಾದರೂ ಅನುಸರಿಸಿ, ಭಿಕ್ಷೆ ಬೇಡಿ, ಕಡ ತನ್ನಿ, ಕದ್ದು ತನ್ನಿ ಒಟ್ಟಿನಲ್ಲಿ ಅಮ್ಲಜನಕ ಪೂರೈಸಬೇಕೆಂದು ನ್ಯಾಯಾಲಯ ಅತ್ಯಂತ ತೀಕ್ಷ್ಣವಾಗಿ ಕೇಂದ್ರಕ್ಕೆ ಚಾಟಿ ಬೀಸಿದೆ.

ಇದನ್ನು ಓದಿ: ಪತ್ರಕರ್ತ ಆಶೀಸ್ ಯೆಚೂರಿ ಕೋವಿಡ್ನಿಂದ ನಿಧನ

‘ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಮ್ಯಾಕ್ಸ್​ ಗ್ರೂಪ್​ ಆಸ್ಪತ್ರೆಯ ಆಡಳಿತ ಮಂಡಳಿಯ ಕ್ರಮದ ಬಗ್ಗೆ ಕೇಂದ್ರ ಸರಕಾರದ ವಾದಕ್ಕೆ ನ್ಯಾಯಾಧೀಶರು ಮತ್ತಷ್ಟು ಸಿಟ್ಟಿಗೇಳುವಂತೆ ಮಾಡಿತು.

ಇಡೀ ಕೈಗಾರಿಕಾ ಉತ್ಪಾದನೆಯನ್ನು ವೈದ್ಯಕೀಯ ಬಳಕೆ ವರ್ಗಾಯಿಸಿಕೊಂಡಾದರೂ ಸರಿಯೇ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವುದನ್ನು ಖಾತರಿಪಡಿಸಬೇಕು ಎಂದು ನೆನ್ನೆ ರಾತ್ರಿ 8 ಗಂಟೆಯಲ್ಲಿ ನಡೆಸಿದ ತುರ್ತು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿಪಿನ್ಸಾಂಘಿ ಮತ್ತು ರೇಖಾ ಪಳ್ಳಿ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.

ಕಾರ್ಖಾನೆಗಳಿಂದ ಅದರಲ್ಲೂ ಉಕ್ಕು ಮತ್ತು ಪೆಟ್ರೋಲಿಯಂ ಸಂಸ್ಥೆಗಳಿಂದ ಇಡೀ ಪೂರೈಕೆಯನ್ನು ಕೇಂದ್ರ ಸರ್ಕಾರ ವರ್ಗಾಯಿಸಬೇಕು. ಉತ್ಪಾದನೆಯ ಸ್ಥಳದಿಂದ ಬಳಕೆಯ ಸ್ಥಳಕ್ಕೆ ರವಾನಿಸುವುದೂ ಸಹ ಸವಾಲು ಎಂದಿರುವ ನ್ಯಾಯಾಲಯ ಹೇಳಿದೆ. ಇದೇ ವೇಳೆ, ರೈಲು ಮಾರ್ಗ, ವಾಯು ಮಾರ್ಗ ಎಲ್ಲವನ್ನೂ ತುರ್ತಾಗಿ ಆಮ್ಲಜನಕ ಪೂರೈಕೆಗೆ ಬಳಸಿಕೊಳ್ಳಲು ಸೂಚಿಸಿದೆ.

ನ್ಯಾಯಾಲಯ ನೀಡಿದ ಕೆಲವು ಟಿಪ್ಪಣಿಗಳು:

1) ಸರಕಾರವನ್ನು ನಡೆಸುವವರಿಗೆ ವಾಸ್ತವೇಕೆ ಅರಿವಾಗುತ್ತಿಲ್ಲವೇ? ಆಮ್ಲಜನಕ ಇಲ್ಲವೆಂಬ ಕಾರಣಕ್ಕೆ ಜನರನ್ನು ಸಾಯಲು ಬಿಡಬಾರದು.

2) ಸರ್ಕಾರವಿರುವುದೇ ಜನರಿಗಾಗಿ ಜನತೆಯೂ ಸರಕಾರದ ಮೇಲೆಯೇ ಅವಲಂಬಿತರಾಗಿದ್ದಾರೆ. ನೀವು ಭಿಕ್ಷೆ ಬೇಡುತ್ತೀರೋ, ಕದಿಯುತ್ತೀರೋ, ಸಾಲ ತರುತ್ತೀರೋ. ಜನರನ್ನು ಬದುಕಿಸುವುದು ನಿಮ್ಮ ಹೊಣೆ.

3) ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾಗಿದೆ. ನಮಗೆ ಕೇವಲ ದೆಹಲಿಯೊಂದೇ ಕಾಳಜಿಯಲ್ಲ. ಇಡೀ ದೇಶದಲ್ಲಿ ಆಮ್ಲಜನಕ ಸರಬರಾಜು ಉತ್ತಮ ಪಡಿಸಲು ಏನು ಮಾಡಿದ್ದೀರಿ ತಿಳಿಸಿ ಎಂದು ಪ್ರಶ್ನಿಸಿದೆ.

4) ವೈದ್ಯಕೀಯ ಆಮ್ಲಜನಕ ತೀವ್ರವಾದ ಕೊರತೆ ಎದುರಿಸುತ್ತಿದೆ. ಅದೇನು ಮಾಡ್ತೀರೋ ಮಾಡಿ ಜನರ ಬದುಕುವ ಹಕ್ಕು ಕಾಪಾಡಲೇಬೇಕು.

5) ಟಾಟಾ ಕಂಪನಿಯು ತಮ್ಮ ಉಕ್ಕು ಘಟಕಗಳಿಂದ ಆಮ್ಲಜನಕವನ್ನು ಬೇರೆಡೆಗೆ ರವಾನಿಸಲು ಮುಂದೆ ಬರಲು ಸಾಧ್ಯವಾಗುತ್ತದೆ ಎಂದಾದರೆ ಉಳಿದವರಿಗೆ ಏಕೆ ಆಗುವುದಿಲ್ಲ? ಇದು ಮನುಷ್ಯತ್ವದ ಪ್ರಶ್ನೆ ಅಲ್ಲವೇ?

ಇದನ್ನು ಓದಿ: ಪಿಎಂ ಕೇರ್ಸ್ ವೆಂಟಿಲೇಟರ್ ಗಳು ನಕಲಿ ವೆಂಟಿಲೇಟರ್ ಗಳು

6) ಕೈಗಾರಿಕೆಗಳು ಸಹಾಯ ಮಾಡಲು ಸಿದ್ಧರಿರುವಾಗ ನೀವೇಕೆ ಒಂದು ಆದೇಶವನ್ನು ಹೊರಡಿಸಬಾರದು. ಅವರ ಸಹಾಯ ಕೂಡಲೇ ಪಡೆದುಕೊಳ್ಳಿ. ಸರಕಾರಿ ಸೌಮ್ಯದ ಎಷ್ಟೋ ಕೈಗಾರಿಗಳು ಇವೆ. ಅವುಗಳನ್ನು ಬಳಸಿಕೊಳ್ಳಿ.

7) ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿ ಏಕೆ ಅರ್ಥವಾಗುತ್ತಿಲ್ಲ? ನೀವೀಗ ಎಚ್ಚೆತ್ತುಕೊಳ್ಳದಿದ್ದರೆ ಭೂಮಿಯ ಮೇಲಿನ ನರಕ ಇಲ್ಲಿ ಸೃಷ್ಟಿಯಾಗುತ್ತೆ.

ಪ್ರಕರಣದ ವಿಚಾರಣೆ ವೇಳೆ ಒಂದು ದಿನದ ಕಾಲಾವಕಾಶ ಕೋರಿದ ಸರ್ಕಾರದ ಪರ ವಕೀಲರಿಗೆ ನಾಳೆಗೆ ಮುಂದೂಡುವುದು ಸಾಧ್ಯವೇ ಇಲ್ಲ ಎಂದ ಪೀಠವು, 30 ನಿಮಿಷಗಳೊಳಗೆ ನಿಮ್ಮ ಕಾರ್ಯದರ್ಶಿಗಳು ಹಾಜರಾಗಬಹುದು. ಅಷ್ಟು ಸಮಯವನ್ನು ಮಾತ್ರವೇ ನಾವು ನೀಡುವುದು ಎಂದು ಕಟ್ಟುನಿಟ್ಟಾಗಿ ಹೇಳಿತು.

ಇದನ್ನು ಓದಿ: ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ

‘ಆಮ್ಲಜನಕ ಆಮದು ಮಾಡಿಕೊಳ್ಳಲು ಟೆಂಡರ್ ಕರೆದಿದ್ದೇವೆ’ ಎಂಬ ಕೇಂದ್ರ ಸರ್ಕಾರದ ವಾದಕ್ಕೆ ನ್ಯಾಯಾಧೀಶರ ಆಕ್ರೋಶಗೊಂಡು ‘ನೀವು ನಿಮ್ಮದೇ ಆದ ರೀತಿಯಲ್ಲಿ ಸಿಹಿ ಸಮಯ ಕಳೆಯಿರಿ. ಜನರು ಸಾಯುತ್ತಾರೆ. ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನೀವು ಏನಾದರೂ ಮಾಡಿಕೊಳ್ಳಿ, ಜನರಿಗೆ ಸಂವಿಧಾನ ಕೊಟ್ಟಿರುವ ಬದುಕುವ ಹಕ್ಕನ್ನು ಕಾಪಾಡಿ. ಅಗತ್ಯಬಿದ್ದರೆ ಕೈಗಾರಿಕೆಗಳ ಆಮ್ಲಜನಕವನ್ನು ವೈದ್ಯಕೀಯ ಕ್ಷೇತ್ರಕ್ಕೆ ಒದಗಿಸಿ’ ಎಂದು ನ್ಯಾಯಾಲಯವು ಮತ್ತೊಮ್ಮೆ ಕಠಿಣ ನಿರ್ದೇಶನ ನೀಡಿತು.

‘ಸರ್ಕಾರದ ವಿವಿಧ ಇಲಾಖೆಗಳ ನಡುವೆ ಕಡತಗಳ ಚಲನೆ ಆರಂಭವಾಗಿದೆ’ ಎಂದ ಕೇಂದ್ರ ಆರೋಗ್ಯ ಇಲಾಖೆಯ ಉತ್ತರಕ್ಕೆ ನ್ಯಾಯಾಧೀಶರು ‘ಅದರಿಂದ ಪ್ರಯೋಜನವೇನಾಯ್ತು? ನಿಮ್ಮ ಕಡತಗಳ ಚಲನೆ ಕಟ್ಟಿಕೊಂಡು ನಮಗೇನಾಗಬೇಕು’ ಎಂದು ಪ್ರತಿಕ್ರಿಯಿಸಿತು.

Donate Janashakthi Media

Leave a Reply

Your email address will not be published. Required fields are marked *