ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಈ ವೇಳೆ ನೂರಾರು ಜನ ಮಾಲೀಕರು ಅಂಗಡಿ-ಮುಂಗಟ್ಟು ಕಳೆದುಕೊಂಡು ಕಣ್ಣೀರು ಹಾಕಿದ್ದಾರೆ.
ಭೂಮಿ ಕಳೆದುಕೊಂಡ ಸಾಕಷ್ಟು ಮಂದಿ ಮೂಲ ಮಾಲೀಕರಿಂದ ವಂಚನೆಗೊಳಗಾಗಿದ್ದು, ಒತ್ತುವರಿ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟರು.
ಜನವರಿ 16 ರಿಂದ 18 ರ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಪ್ರಾಧಿಕಾರವು 50 ಗ್ರಾನೈಟ್ ಕಾರ್ಖಾನೆ, ‘ಲೇಬರ್ ಶೆಡ್‌ಗಳು’ ಸೇರಿದಂತೆ 200 ಶೆಡ್‌ಗಳು, ಬೇಕರಿಗಳು ಮತ್ತು ಮಾಚೋಹಳ್ಳಿ ಪ್ರದೇಶದ ಮುಖ್ಯ ಆರ್ಟಿರಿಯಲ್ ರಸ್ತೆಯಲ್ಲಿ (ಎಂಎಆರ್) 1 ಕಿಮೀ ವ್ಯಾಪ್ತಿಯ ವಿವಿಧ ಅಂಗಡಿಗಳನ್ನು ನೆಲಸಮಗೊಳಿಸಿದೆ.
ಇದನ್ನೂ ಓದಿ: ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನ್ಯಾಯಾಂಗ ನಿಂದನೆ: ಹೈಕೋರ್ಟ್ ಎಚ್ಚರಿಕೆ
8-10 ವರ್ಷಗಳ ಹಿಂದೆ ಭೂಮಿಯನ್ನು ಅತಿಕ್ರಮಣ ಮಾಡಲಾಗಿತ್ತು. ದುಬಾರಿ ಉಪಕರಣಗಳನ್ನು ಬಳಸಿ ಅತಿಕ್ರಮಗಳನ್ನು ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಸ್ವಾಧೀನಕ್ಕೆ ಮುಂದಾಗುವಂತ ಬಿಡಿಎಗೆ ಹೈಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಕಾರ್ಖಾನೆ ಹಾಗೂ ಅಂಗಡಿ ಮಾಲೀಕರಿಗೆ 7 ದಿನಗಳ ಹಿಂದೆ ನೋಟಿಸ್ ನೀಡಿಲಾಗಿತ್ತು. ಇದನ್ನು ಒಪ್ಪದ ನಿವಾಸಿಗಳು ಹಾಗೂ ಮಾಲೀಕರು ಎಂದಿನಂತ ವ್ಯಾಪಾರ ಮುಂದುವರೆಸಿದ್ದರು. ಕಾರ್ಯಾಚರಣೆ ವೇಳೆ ಹಲವರು ತಮ್ಮ ಅಳಲು ತೋಡಿಕೊಂಡರು. ತಮ್ಮ ಲಕ್ಷಾಂತರ ರೂಪಾಯಿ ಬಂಡವಾಳ ಮಣ್ಣುಪಾಲಾಗುತ್ತಿರುವುದನ್ನು ಕಂಡು ಕಣ್ಣೀರಿಟ್ಟರು ಎಂದು ಬಿಡಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
16 ಎಕರೆ ವಿಸ್ತೀರ್ಣದಲ್ಲಿ ಪುಟ್ಟರಾಜು ಎಂಬಾತನನ್ನು ನಂಬಿ ಕಾರ್ಖಾನೆ ನಡೆಸುತ್ತಿದ್ದರು. 2015ರಲ್ಲಿ ಭೂಮಿ ಸ್ವಾಧೀನಕ್ಕೆ ಬಿಡಿಎ ಅಧಿಸೂಚನೆ ಹೊರಡಿಸಿತ್ತು. ನಂತರ ಕೆಲವರು ನ್ಯಾಯಾಲಯದ ಮೊರೆ ಹೋಗಿ ತಡೆ ತಂದಿದ್ದರು. ಕಾರ್ಖಾನೆ ನಡೆಸುತ್ತಿದ್ದವರು ಪುಟ್ಟರಾಜುಗ ಬಾಡಿಗೆ ನೀಡುತ್ತಿದ್ದರು. ಈತ ಸುಮಾರು 10 ವರ್ಷಗಳಿಂದ ಮಾಸಿಕ 1.5 ಕೋಟಿಗೂ ಹೆಚ್ಚು ಬಾಡಿಗೆ ಪಡೆಯುತ್ತಿದ್ದ.
ಈತನನ್ನು ನಂಬಿ ಗ್ರಾನೈಟ್ ಕಾರ್ಖಾನೆ ಸ್ಥಾಪಿಸಿ, ವಸತಿ ಸೌಲಭ್ಯಗಳೊಂಂದಿಗೆ 50 ಜನರನ್ನು ಇಟ್ಟುಕೊಂಡು ಕಾರ್ಖಾನೆ ನಡೆಸುತ್ತಿದ್ದರು. ಲಕ್ಷಗಟ್ಟಲೆ ಬಂಡವಾಳ ಹೂಡಿದ್ದರು. ಬಾಡಿಗೆ ಒಪ್ಪಂದಗಳಿಗೆ ಸಹಿಯನ್ನೂ ಹಾಕಿಸಿಕೊಂಡಿದ್ದರು. ಮುಂಗಡವಾಗಿ ದೊಡ್ಡ ಪ್ರಮಾಣದಲ್ಲಿ ಹಣ ನೀಡಿದ್ದರು. ತನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನ್ಯಾಯಾಲಯ ಕೂಡ ನನ್ನ ಪರವಾಗಿದೆ ಎಂದ ಆತ ಹೇಳಿಕೊಂಡಿದ್ದಾನೆ. ಇದನ್ನು ನಂಬಿ ಬಂಡವಾಳ ಹೂಡಿದ್ದಾರೆಂದು ತಿಳಿಸಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಪುಟ್ಟರಾಜು ಅವರು, ಬಿಡಿಎ ಹೊರಡಿಸಿದ ನೋಟಿಸ್ ಬಗ್ಗೆ ನನಗೆ ತಿಳಿದಿರಲಿಲ್ಲ. ಅದರ ಬಗ್ಗೆ ಯಾರೂ ನನಗೆ ಹೇಳಿರಲಿಲ್ಲ. ಭೂಮಿಯನ್ನು ಬಾಡಿಗೆಗೆ ನೀಡುವ ಸಮಯದಲ್ಲಿ ವಿವಾದದಲ್ಲಿದೆ ಎಂದು ನಾನು ಪ್ರತಿಯೊಬ್ಬ ಮಾಲೀಕರಿಗೂ ತಿಳಿಸಿದ್ದೆ. ಆದರೂ ಅವರು ಕಾರ್ಖಾನೆ ಸ್ಥಾಪಿಸಿ, ಕೆಲಸ ನಡೆಸುತ್ತಿದ್ದರು ಎಂದು ಹೇಳಿದ್ದಾರೆ.
ಏತನ್ಮಧ್ಯೆ ಬಿಡಿಎ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಲೇಔಟ್ ಸಂಪರ್ಕಿಸುವ 10.3-ಕಿಮೀ ಎಂಎಆರ್ ರಸ್ತೆಯಲ್ಲಿ 8 ಕಿಮೀವರೆಗೂ ಅತಿಕ್ರಮಣ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿದೆ.
ಇನ್ನು ಕಣ್ಮಿಣಿಕೆ ವಸತಿ ಯೋಜನೆಯ ಬಳಿ ಶನಿವಾರ ಬಿಡಿಎ ಆಯೋಜಿಸಿದ್ದವ ‘ಫ್ಲ್ಯಾಟ್ ಮೇಳ’ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 175 ಫ್ಲ್ಯಾಟ್‌ಗಳನ್ನು ಸ್ಥಳದಲ್ಲೇ ಕಾಯ್ದಿರಿಸಲಾಗಿದೆ.
500 ಕ್ಕೂ ಹೆಚ್ಚು ಜನರು ಮೇಳದಲ್ಲ ಭಾಗವಿಸಿದ್ದು, ಸಂಪೂರ್ಣವಾಗಿ 175 ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಈ ಪೈಕಿ 75 ಜನರು ತಮ್ಮ ಫ್ಲಾಟ್‌ಗಾಗಿ ಆರಂಭಿಕ ಠೇವಣಿ (ಶೇ,.12.5) ಅನ್ನು ಸ್ಥಳದಲ್ಲೇ ಪಾವತಿಸಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ನೋಡಿ: ಬಹುತ್ವ ಸಂಸ್ಕೃತಿ ಭಾರತೋತ್ಸವ – 2025 | ಸೌಹಾರ್ದ ಜಾಥಾ – ಬಹಿರಂಗ ಸಭೆ