ಸಂಸತ್‌ ಸದಸ್ಯರ ಸತತ 50 ಗಂಟೆ ಪ್ರತಿಭಟನೆ; ಅಮಾನತು ಹಿಂಪಡೆಯಲು ಆಗ್ರಹ

ನವದೆಹಲಿ: ಅಮಾನತುಗೊಂಡಿರುವ ಸಂಸದರು ಧರಣಿಯನ್ನು ಮುಂದುವರೆಸಿದ್ದು, ತಮ್ಮನ್ನು ರಾಜ್ಯಸಭಾ ಅಧ್ಯಕ್ಷರು ಅಮಾನತು ಮಾಡಿರುವುದನ್ನು ವಿರೋಧಿಸಿ ಸತತ 50 ಗಂಟೆಗಳ ಪ್ರತಿಭಟನೆಗೆ ಮುಂದಾಗಿದ್ದಾರೆ. ಅದರ ಭಾಗವಾಗಿ ಸಂಸತ್ತಿನ ಆವರಣದ ಹೊರಾಂಗಣದಲ್ಲಿ ನಿನ್ನೆ(ಜುಲೈ 27) ಮೊದಲ ರಾತ್ರಿಯನ್ನು ಕಳೆದಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಎದುರು ಯಾವುದೇ ಸೂರಿಲ್ಲದೆ, ನೆಲದ ಮೇಲೇ ಮಲಗಿದ್ದ ಸಂಸದರು ಇಂದು ಬೆಳಗ್ಗೆ ಧರಣಿಯನ್ನು ಮುಂದುವರೆಸಿದರು. ಧರಣಿ ವೇಳೆಯಲ್ಲಿ ಮಳೆ ಬರಬಹುದೆಂದು ಸಂಸದರು ಟೆಂಟ್‌ಗಾಗಿ ಮನವಿ ಮಾಡಿದರೂ ಆವರಣದೊಳಗೆ ಯಾವುದೇ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದರು. ಆದರೆ, ಸಂಸತ್ತಿನ ಗ್ರಂಥಾಲಯದ ಸ್ನಾನಗೃಹದ ಶೌಚಾಲಯವನ್ನು ಬಳಸಿಕೊಳ್ಳಬಹುದೆಂದು ತಿಳಿಸಿದರು.

ಲೋಕಸಭೆಯಿಂದ ನಾಲ್ವರು, ರಾಜ್ಯಸಭೆಯಿಂದ 20 ಮಂದಿಯನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭಾ ಕಲಾಪದಿಂದ ಸೋಮವಾರ ಮತ್ತು ಮಂಗಳವಾರ ಅಮಾನತುಗೊಂಡಿರುವ 20 ಸಂಸದರಲ್ಲಿ ಟಿಎಂಸಿಯಿಂದ 7, ಡಿಎಂಕೆಯಿಂದ 6, ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) 3, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) 2 ಮತ್ತು ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿಪಿಐ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ದ ತಲಾ ಒಬ್ಬರು ಸೇರಿದ್ದಾರೆ.

ಧರಣಿಯನ್ನು ಅಂತ್ಯಗೊಳಿಸಲು ನಿರಾಕರಿಸಿದ ಸಂಸದರು, ಶುಕ್ರವಾರ ಸಂಜೆ 5 ಗಂಟೆಯವರೆಗೆ ಮುಂದುವರಿಯಲಿದೆ ಎಂದು ರಾಜ್ಯಸಭೆ ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. ವಯಸ್ಸಾದ ಸಂಸದರು ಅಥವಾ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ಅಂತಹ ಸಹ ಸಂಸದರು ಕೂಡ ಧರಣಿ ನಡೆಸುತ್ತಾರೆ ಎಂದು ಅವರು ಹೇಳಿದರು.

ಕೆಲವು ಮಹಿಳಾ ಸಂಸದರು ಮತ್ತು ಹಿರಿಯ ಸಂಸದರು ಪಾಳಿ ಪ್ರಕಾರ ಕುಳಿತುಕೊಳ್ಳುತ್ತಾರೆ. ಎಎಪಿ ಸಂಸದ ಸಂಜಯ್ ಸಿಂಗ್ ಪಾಳಿಯಲ್ಲಿ ಕುಳಿತಿರುವ ಸಂಸದರ ವಯಸ್ಸು ಮತ್ತು ಆರೋಗ್ಯವನ್ನು ಉಲ್ಲೇಖಿಸಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಉಭಯ ಸದನಗಳ ಬಾವಿಗಳಿದು ಜಿಎಸ್‌ಟಿ, ಬೆಲೆ ಏರಿಕೆ, ಹಣದುಬ್ಬರ ಮತ್ತಿತರ ವಿಷಯಗಳ ಕುರಿತು ಚರ್ಚಿಸುವಂತೆ ಹಾಗೂ ಅದರ ವಿರುದ್ಧ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸಿದರು. ಅಧಿವೇಶನದಲ್ಲಿ ಗದ್ದಲ ಉಂಟಾದ ಪರಿಣಾಮ ಸಂಸದರನ್ನು ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಸಚಿವರ ಸ್ಪಷ್ಟನೆ

ಸಂಸದರ ಧರಣಿ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತಮ್ಮ ಟ್ವಿಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವೇಳೆ ಸಂಸದರ ಕ್ಷಮೆಯಾಚಿಸುವಂತೆ ಮನವಿ ಮಾಡಿದ್ದಾರೆ. ಸಂಸದರು ಸಂಸತ್ ಕಲಾಪದಲ್ಲಿ ಭಾಗವಹಿಸಬೇಕು ಎಂದಿರುವ ಅವರು, ನಡವಳಿಕೆ ಬಗ್ಗೆ ವಿಷಾದವಿದ್ದರೆ ಸಂಸತ್ತಿನ ಕಲಾಪಕ್ಕೆ ಹಾಜರಾಗಬೇಕು. ಆದರೆ ಅಮಾನತುಗೊಂಡ ಸಂಸದರು ಇಂತಹ ದುರಹಂಕಾರವನ್ನು ಪ್ರದರ್ಶಿಸಿದರೆ ನಾವು ಏನು ಹೇಳಬಹುದು? ಅವರು ಇಲ್ಲಿ ಕುಳಿತಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ ಎಂದು ನಾವು ಅವರಿಗೆ ಹೇಳಲು ಬಯಸುತ್ತೇವೆ” ಎಂದು ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *