ನವದೆಹಲಿ: ಕಳೆದ 5 ವರ್ಷಗಳಲ್ಲಿ ಸರ್ಕಾರದ ದಾಖಲೆಗಳಿಂದ ಲಕ್ಷಾಂತ್ರ ಕಂಪನಿಗಳನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಲಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಸರ್ಕಾರಿ ದಾಖಲೆಗಳಲ್ಲಿ 3.96 ಲಕ್ಷ ಕಂಪನಿಗಳಿಗೆ ಸಂಬಂಧಿಸಿದ ವಿವರಗಳನ್ನು ರದ್ದುಪಡಿಸಲಾಗಿದೆ.
ಸಂಸತ್ ಅಧಿವೇಶನದ ರಾಜ್ಯಸಭೆಯಲ್ಲಿನ ಕಲಾಪದ ವೇಳೆಯಲ್ಲಿ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ರಾವ್ ಇಂದರ್‌ಜಿತ್ ಸಿಂಗ್ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ವಿವರಗಳನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಹಲವು ಕಂಪನಿಗಳು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದ ಹಿನ್ನೆಲೆಯಲ್ಲಿ ಅವುಗಳನ್ನು ಮುಚ್ಚಲಾಗಿದೆ. ಕಂಪನಿಗಳ ಕಾಯಿದೆಯಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ ಕಾರಣ, ಕಳೆದ ಐದು ಹಣಕಾಸು ವರ್ಷಗಳಲ್ಲಿ 3.96 ಲಕ್ಷಕ್ಕೂ ಹೆಚ್ಚು ಕಂಪನಿಗಳನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಲಾಗಿದೆ. ಈ ಮಾಹಿತಿಯನ್ನು ಅಧಿಕೃತ ಅಂಕಿಅಂಶಗಳಲ್ಲಿ ನೀಡಲಾಗಿದೆ.
ಐದು ಹಣಕಾಸು ವರ್ಷದಲ್ಲಿ ಒಟ್ಟು 3,96,585 ಕಂಪನಿಗಳನ್ನು ಕಂಪನಿಗಳ ರಿಜಿಸ್ಟ್ರಾರ್‌ನಿಂದ ತೆಗೆದುಹಾಕಲಾಗಿದೆ. 2017-18ನೇ ಸಾಲಿನಲ್ಲಿ 2,34,371 ಮತ್ತು 2018-19ನೇ ಸಾಲಿನಲ್ಲಿ 1,38,446 ಮತ್ತು 2016-17ನೇ ಸಾಲಿನಲ್ಲಿ 7,943 ಕಂಪನಿಗಳನ್ನು ರಿಜಿಸ್ಟರ್‌ನಿಂದ ತೆಗೆದುಹಾಕಲಾಗಿದೆ.
ಕಂಪನಿಗಳ ಕಾಯಿದೆ-2013 ಅನ್ನು ಜಾರಿಗೊಳಿಸಿದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಕಳೆದ ಹಣಕಾಸು ವರ್ಷದಲ್ಲಿ 12,892 ಕಂಪನಿಗಳನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಿದೆ.
ಅನುಸರಣೆಯ ಕೊರತೆಯಿಂದಾಗಿ ಅನೇಕ ಕಂಪನಿಗಳನ್ನು ಮುಚ್ಚಲಾಗಿದೆಯೇ ಎಂದು ಕೇಳಿದಾಗ, ಸಚಿವರು ‘ಹೌದು’ ಎಂದು ಸಚಿವರು ಉತ್ತರಿಸಿದ್ದಾರೆ. ಕಂಪನಿಗಳ ಕಾಯಿದೆಯ ಸೆಕ್ಷನ್ 248 (1) ರ ನಿಬಂಧನೆಗಳ ಅನುಸಾರವಾಗಿ, ಕಾನೂನು ಪ್ರಕ್ರಿಯೆಯ ನಂತರ ಕೆಲವು ಷರತ್ತುಗಳಿಗೆ ಒಳಪಟ್ಟು ಕಂಪನಿಯ ಹೆಸರನ್ನು ರಿಜಿಸ್ಟರ್‌ನಿಂದ ತೆಗೆದುಹಾಕಬಹುದಾಗಿದೆ.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಚೌಕಟ್ಟು ಬಹಿರಂಗಪಡಿಸುವಿಕೆ ಆಧಾರಿತವಾಗಿದೆ ಮತ್ತು ಸಿಎಸ್‌ಆರ್ ಅಡಿಯಲ್ಲಿ ಒಳಗೊಂಡಿರುವ ಕಂಪನಿಗಳು ವಾರ್ಷಿಕ ಆಧಾರದ ಮೇಲೆ ಎಂಸಿಎ 21 ರಿಜಿಸ್ಟ್ರಿಯಲ್ಲಿ ಅಂತಹ ಚಟುವಟಿಕೆಗಳ ವಿವರಗಳನ್ನು ಸಲ್ಲಿಸಲಿದೆ.