-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ವಿ.
ಬಿಜೆಪಿಯ ಮಟ್ಟಿಗೆ ಸಂಪತ್ತು ಮತ್ತು ಪಿತ್ರಾರ್ಜಿತ ತೆರಿಗೆಯ ವಿರುದ್ಧದ ವಾಗ್ದಾಳಿಯು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಕೊಲ್ಲುತ್ತದೆ. ಇದು ಅಲ್ಪ ಸಂಖ್ಯಾತರ ವಿರುದ್ಧ ಮತ್ತಷ್ಟು ದ್ವೇಷವನ್ನು ಉತ್ತೇಜಿಸುತ್ತದೆ; ಒಂದು ವಿರೋಧಿ ರಾಜಕೀಯ ಪಕ್ಷವನ್ನು ಕೆಡವಿ ಹಾಕುತ್ತದೆ; ಮತ್ತು ಪಿತ್ರಾರ್ಜಿತ ತೆರಿಗೆಯ ಕಲ್ಪನೆಯನ್ನು ಕೊಲ್ಲುತ್ತದೆ ಮತ್ತು ಆಮೂಲಕ ತನ್ನ ಮುಖ್ಯ ಪೋಷಕರಾಗಿರುವ ಅತಿ ಶ್ರೀಮಂತರನ್ನು ರಕ್ಷಿಸುತ್ತದೆ. ಇವೆಲ್ಲವನ್ನೂ ಕೋಮುವಾದಿ-ಫ್ಯಾಸಿಸ್ಟ್ ಮಾದರಿ ಸಂಘಟನೆಗಳಿಗೆ ಅಭ್ಯಾಸವಾಗಿ ಬಿಟ್ಟಿರುವ ಹೊಲಸು ಸುಳ್ಳುಗಳ ಮೂಲಕ ಸಾಧಿಸುವ ಪ್ರಯತ್ನ ಮಾಡಿದೆ.
ಪಿತ್ರಾರ್ಜಿತ ಆಸ್ತಿ ತೆರಿಗೆಯ ಬಗ್ಗೆ ಬಿಜೆಪಿಯ ಧೋರಣೆಯಿಂದ ಫ್ಯಾಸಿಸ್ಟ್ ಸಂಘಟನೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಒಂದು ಪಾಠಸಿಗುತ್ತದೆ. ನವ-ಉದಾರವಾದಿ ಯುಗದಲ್ಲಿ ದೇಶದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆಯಲ್ಲಿ ಅಪಾರ ಹೆಚ್ಚಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಿಜಕ್ಕೂ ಇದು ಭಾರತಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ; ಇದು ಅಂತರರಾಷ್ಟ್ರೀಯ ವಿದ್ಯಮಾನವಾಗಿದೆ, ಈ ಬಗ್ಗೆ ಸ್ವಲ್ಪ ಸಮಯದಿಂದ ಉನ್ನತ-ಬೂರ್ಜ್ವಾವಲಯಗಳಲ್ಲಿಯೂ ಸಹ ಹೆಚ್ಚು ಚರ್ಚೆ ನಡೆಯುತ್ತಿದೆ. ಉದಾಹರಣೆಗೆ ವರ್ಲ್ಡ್ ಎಕನಾಮಿಕ್ಫೋರಮ್**ನಲ್ಲಿ ಅದಕ್ಕೆ ಪ್ರತಿಯಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಪದೇ ಪದೇ ಪ್ರಸ್ತಾಪಿಸಲಾಯಿತು.
ಇದನ್ನೂ ಓದಿ: 5 ರಾಜ್ಯಗಳ 38 ಸ್ಥಾನಗಳಲ್ಲಿ ಬಿಜೆಪಿಗೆ ಸೋಲು: ರೈತರನ್ನು ಕಡೆಗಣಿಸಿದ್ದಕ್ಕೆ ತೆತ್ತ ಬೆಲೆ
ವಿಶ್ವದ ಶ್ರೀಮಂತರು ಸಹ ಸಂಪತ್ತು ಮತ್ತು ಆದಾಯದ ಅಸಮಾನತೆಯ ಅನಿಯಂತ್ರಿತ ಬೆಳವಣಿಗೆಯು ಬಂಡವಾಳ ಶಾಹಿಯ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಗುರುತಿಸುತ್ತಾರೆ. ಈ ರೀತಿ ಗುರುತಿಸಿದ್ದರಿಂದಲೇ ಕೆಲವು ಸಮಯದ ಹಿಂದೆ ಹಲವಾರು ಅಮೇರಿಕನ್ ಬಲಿಯಾಧಿಪತಿಗಳು ತಮ್ಮ ಮೇಲೆ ಮತ್ತು ಇತರ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸ ಬೇಕೆಂದು ಸೂಚಿಸುವ ಹೇಳಿಕೆಯನ್ನು ನೀಡಲು ಮುಂದಾಗಿದ್ದಾರೆ.
ಆದರೆ ಭಾರತೀಯ ಶ್ರೀಮಂತ ವಿಭಾಗಕ್ಕೆ ಸಮಕಾಲೀನ ಯುಗದಲ್ಲಿ ಕೂಡ ಅಂತಹ ಯಾವುದೇ ದೂರ ದೃಷ್ಟಿ ಇಲ್ಲವೇ ಇಲ್ಲ. ಧಾರ್ಮಿಕ-ಕೋಮುವಾದಿ ವಿಧಾನಗಳ ಮೂಲಕ ಚುನಾವಣೆಗಳನ್ನು ಗೆಲ್ಲುವ ಫ್ಯಾಸಿಸ್ಟ್ ಮಾದರಿ ಸಂಘಟನೆಯನ್ನು ಬೆಂಬಲಿಸಿ, ಅದರ ಪ್ರಾಬಲ್ಯಕ್ಕೆ ಯಾವುದೇ ಸವಾಲನ್ನು ಹತ್ತಿಕ್ಕಲು ತೀವ್ರ ನಿರಂಕುಶ ಕ್ರಮಗಳನ್ನು ಬಳಸಿದರೆ, ಅದೇ ತಮ್ಮ ಸಂಪತ್ತು ಮತ್ತು ಆದಾಯದ ಪಾಲನ್ನು ಅನಂತವಾಗಿ ಹೆಚ್ಚಿಸಲು ಸಾಕಾಗುತ್ತದೆ ಎಂದು ಅದು ನಂಬಿದೆ. ಜಿಡಿ ಬಿರ್ಲಾ ಅವರಂತಹ ಭಾರತೀಯ ಬೂರ್ಜ್ವಾಗಳ ಪ್ರಮುಖ ವ್ಯಕ್ತಿಗಳು ದೇಶದ ಬಂಡವಾಳ ಶಾಹಿಗಳಿಗೆ ತಮ್ಮ ಸಂಪತ್ತಿನ ಪ್ರದರ್ಶನಕ್ಕೆ ಮುಂದಾಗ ಬೇಡಿ ಎಂದು ಸಲಹೆ ನೀಡುತ್ತಿದ್ದ ಸಮಯವೊಂದಿತ್ತು.; ಅದಕ್ಕೆ ಜನತೆಯ ಪ್ರತಿಕ್ರಿಯೆ ತಿರುಗೇಟು ಕೊಡಬಹುದು ಎಂಬ ಭಯವು ಬೂರ್ಜ್ವಾಗಳನ್ನು ಕಾಡುತ್ತಿದ್ದಅವಧಿ.
ಆದರೆ ಈಗ ಹಾಗಿಲ್ಲ. ಇಂದು ಬೂರ್ಜ್ವನಾಯಕರಿಗೆ ಅಂತ ಭಯವೇನೂ ಕಾಡುತ್ತಿಲ್ಲ; ಹಿಂದುತ್ವದ ಮಂದಿಯೊಂದಿಗೆ ತಮ್ಮ ಮೈತ್ರಿಯು ತಮ್ಮ ಅಗಾಧವಾದ ಸಂಪತ್ತಿನಿಂದಾಗಿ ಉದ್ಭವಿಸುವ ತಮ್ಮ ಪ್ರಾಬಲ್ಯಕ್ಕೆ ಯಾವುದೇ ಸವಾಲನ್ನು ತಡೆಯುತ್ತದೆ ಎಂಬ ವಿಶ್ವಾಸ ಅವರಲ್ಲಿದೆ. ಹಿಂದುತ್ವದ ಮಂದಿ ಉತ್ತರಾಧಿಕಾರ ತೆರಿಗೆ ಪ್ರಸ್ತಾವನೆಯನ್ನು ನಿಭಾಯಿಸಿದ ರೀತಿಯು ಅವರು ಏಕೆ ಅಷ್ಟು ವಿಶ್ವಾಸ ಹೊಂದಿದ್ದಾರೆ ಎಂಬುದರ ಸುಳಿವು ನೀಡುತ್ತದೆ.
ಸಂಪತ್ತು ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆ
ಸಂಪತ್ತಿನ ಅಸಮಾನತೆಯ ಮೇಲೆ ದಾಳಿಯನ್ನು ಪ್ರಾರಂಭಿಸುವ ಅತ್ಯಂತ ಸ್ಪಷ್ಟವಾದ ಮಾರ್ಗವೆಂದರೆ ಕೆಲವು ಆರ್ಥಿಕ ಹಕ್ಕುಗಳನ್ನು ಸ್ಥಾಪಿಸಿ ಬಡವರಿಗೆ ಪ್ರಯೋಜನಕಾರಿಯಾದ ವೆಚ್ಚಗಳಿಗೆ ಹಣಕಾಸು ಒದಗಿಸಲು ಸಂಪತ್ತಿನ ಮೇಲೆ ಹೆಚ್ಚುತ್ತ ಹೋಗುವ ತೆರಿಗೆಯನ್ನು ವಿಧಿಸುವುದು ಎಂಬು ದುಸ್ವಯಂವೇದ್ಯ. ಇಂತಹ ಐದು ಹಕ್ಕುಗಳಿಗೆ ಸಂಪನ್ಮೂಲವನ್ನು ಒದಗಿಸಲು ಭಾರತದ ಅತ್ಯಂತ ಶ್ರೀಮಂತ 1% ವಿಭಾಗದ ಮೇಲೆ 2 ಶೇಕಡಾ ಸಂಪತ್ತು ತೆರಿಗೆ ಮತ್ತು ಮೂರನೇ ಒಂದು ಭಾಗದಷ್ಟು ಉತ್ತರಾಧಿಕಾರ ತೆರಿಗೆಯನ್ನು ವಿಧಿಸುವುದರಿಂದ ಸಂಗ್ರಹಿಸ ಬಹುದು ಎಂದು ನಾವು ಈಗಾಗಲೇ ಲೆಕ್ಕ ಹಾಕಿದ್ದೇವೆ. ಬೆಳೆಯುತ್ತಿರುವ ಅಸಮಾನತೆಯ ಅಪಾಯಗಳ ಕುರಿತು ಈ ಕೆಲವು ಸಮಯದಿಂದ ಬರೆಯುತ್ತಿರುವ ಥಾಮ ಸ್ಪಿಕೆಟ್ಟಿ ಮತ್ತುಅವರ ಸಹಚರರು ಕೂಡ ರೂ.10 ಕೋಟಿ ಗೂಮೀರಿದ ಭಾರತದ ಎಲ್ಲಾ ನಿವ್ವಳ ಸಂಪತ್ತಿನ ಮೇಲೆ ಶೇಕಡಾ 2 ರಷ್ಟು ಸಂಪತ್ತು ತೆರಿಗೆ ಮತ್ತು ಮೂರನೇ ಒಂದು ಭಾಗದ ಉತ್ತರಾಧಿಕಾರ ತೆರಿಗೆಯನ್ನು ಸೂಚಿಸಿದ್ದಾರೆ. ಅವರು ಸಂಪತ್ತು ತೆರಿಗೆಯೊಂದಿಗೆ ಉತ್ತರಾಧಿಕಾರ ತೆರಿಗೆಯನ್ನು ಸೇರಿಸಿರುವುದು ಒಂದು ಮಹತ್ವದ ಸಂಗತಿ. ಏಕೆಂದರೆ ಸಂಪತ್ತು ತೆರಿಗೆ ಅಸಮಾನತೆಯನ್ನು ಕಡಿಮೆ ಮಾಡುವುದರ ಮೇಲೆ ಯಾವುದೇ ಪರಿಣಾಮವನ್ನು ಬೀರ ಬೇಕಾದರೆ, ಸಂಪತ್ತು ತೆರಿಗೆಯಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಅದಕ್ಕೆ ಪೂರಕವಾಗಿ ಉತ್ತರಾಧಿಕಾರ ತೆರಿಗೆ ಅಗತ್ಯ.
ಇದನ್ನು ಬೂರ್ಜ್ವಾ ಸೈದ್ಧಾಂತಿಕ ಆಧಾರದ ಮೇಲೆ ಸಹ ಸಮರ್ಥಿಸ ಬಹುದು: ಏಕೆಂದರೆ ಸಂಪತ್ತು “ಗಳಿಕೆಯ” ಫಲವಾಗಿದೆ ಎಂದು ಬೂರ್ಜ್ವಾಮಂದಿ ಸಮರ್ಥಿಸಿ ಕೊಳ್ಳತ್ತಾರೆ. ಆದರೆ ಪಿತ್ರಾರ್ಜಿತ ಸಂಪತ್ತು “ಗಳಿಸಿದ” ಸಂಪತ್ತು ಎಂದು ಯಾವುದೇ ರೀತಿಯಲ್ಲಿ ಹೇಳಿಕೊಳ್ಳಲಾಗುವುದಿಲ್ಲ, ತಂದೆಯ ಸಂಪತ್ತನ್ನು ಆತ “ಗಳಿಸಿದ್ದು” ಎಂದು ಸಮರ್ಥಿಸಿ ಕೊಂಡರೆ, ಮಗ ಈ ಸಂಪತ್ತನ್ನು ಹೊಂದುವುದನ್ನು ಅದೇ ಆಧಾರದ ಮೇಲೆ ಸಮರ್ಥಿಸಲಾಗುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪಿತ್ರಾರ್ಜಿತ ಸಂಪತ್ತು ಒಬ್ಬ ವ್ಯಕ್ತಿಗೆ ಕೇವಲ ಅವನ ಜನ್ಮದ ಆಕಸ್ಮಿಕದಿಂದಾಗಿ ಸಿಗುವ ಮೊತ್ತವಾದ್ದರಿಂದ ಅದನ್ನು ಬೂರ್ಜ್ವಾ ಸಿದ್ಧಾಂತದ ದೃಷ್ಟಿಯಿಂದಲೂ ಸಮರ್ಥಿಸಲಾಗುವುದಿಲ್ಲ. ಈ ಕಾರಣದಿಂದಲೇ ಹೆಚ್ಚಿನ ಮುಂದುವರಿದ ಬಂಡವಾಳ ಶಾಹಿ ರಾಷ್ಟ್ರಗಳು ಮರಣ ಸುಂಕದ ರೂಪದಲ್ಲಿ ಗಣನೀಯ ಪ್ರಮಾಣದಲ್ಲಿ ಉತ್ತರಾಧಿಕಾರ ತೆರಿಗೆಗಳನ್ನು ವಿಧಿಸಿವೆ, ಉದಾಹರಣೆಗೆ ಜಪಾನಿನಲ್ಲಿ ಪಿತ್ರಾರ್ಜಿತ ತೆರಿಗೆ 55 ಶೇ. ದವರೆಗೂ ಹೋಗುತ್ತದೆ. ಆದರೆ ಆಘಾತಕಾರಿ ಅಂಶವೆಂದರೆ ಭಾರತದಲ್ಲಿ ಯಾವುದೇ ಪಿತ್ರಾರ್ಜಿತ ತೆರಿಗೆ ಇಲ್ಲ.
ಹುಸಿ, ಕೋಮುವಾದಿ-ಫ್ಯಾಸಿಸ್ಟ್ ಆಧಾರದ ಮೇಲೆ!
ಈ ಪರಿಸ್ಥಿತಿಯ ಅಸಂಬದ್ಧತೆಯನ್ನು ಯಾವುದೇ ರೀತಿಯಲ್ಲಿ ಎಡಪಂಥೀಯರು ಎನ್ನಲಾಗದ ಅಥವಾ ನವ ಉದಾರವಾದಿ ಕಾರ್ಯ ಸೂಚಿಯನ್ನು ವಿರೋಧಿಸದ ವ್ಯಕ್ತಿಗಳು ಸಹ ಅರಿತು ಕೊಂಡಿದ್ದಾರೆ. ವಾಸ್ತವವಾಗಿ ಇತ್ತೀಚೆಗೆ ಪಿತ್ರಾರ್ಜಿತ ತೆರಿಗೆಯನ್ನು ಹೊಂದುವ ಕಲ್ಪನೆಯನ್ನು ಪ್ರಸ್ತಾಪಿಸಿದ್ದು ಒಬ್ಬ ಅನಿವಾಸಿ ತಂತ್ರಜಾನ ಪ್ರೇಮಿ ಕಾಂಗ್ರೆಸ್ ವ್ಯಕ್ತಿ, ಸ್ಯಾಮ್ ಪಿತ್ರೋಡಾ; ಆಗ ಬಿಜೆಪಿ ನಾಯಕತ್ವವು ಅವರ ಮೇಲೆ ಒಂದು ಟನ್ ಇಟ್ಟಿಗೆಯಂತೆ ಎರಗಿತು.
ಭಾರತೀಯ ಅತಿ ಶ್ರೀಮಂತರು ನಿಸ್ಸಂಶಯವಾಗಿ ಈ ಕಲ್ಪನೆಯಿಂದ ಭಯ ಭೀತರಾಗುತ್ತಾರೆ; ಮತ್ತು ಬಿಜೆಪಿ, ಅತಿ ಶ್ರೀಮಂತರ ರಕ್ಷಕನಾಗಿ, ಈ ಕಲ್ಪನೆಯ ಮೇಲೆ ಎರಗುವ ಮೂಲಕ ಅವರ ರಕ್ಷಣೆಗೆ ಧಾವಿಸಿದ್ದು ನಿರೀಕ್ಷಿತವೇ. ಆದರೆ ಅದನ್ನು, ಅಂತಹ ತೆರಿಗೆಯನ್ನು ಕಾರ್ಯಗತಗೊಳಿಸಲು ಕಷ್ಟವಾಗುತ್ತದೆ, ಅಥವಾ ಅದು ಬಂಡವಾಳ ಶಾಹಿಗಳ ಉತ್ಸಾಹವನ್ನು ನಾಶಪಡಿಸುತ್ತದೆ ಅಥವಾ ಜಾಗತಿಕ ಹಣಕಾಸು ಭಯ ಭೀತರಾಗುವ ಮತ್ತು ಬಂಡವಾಳ ಹೂಡಲು ಹಿಂಜರಿಯುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಭಾರತದ, ಪಾವತಿ ಬಾಕಿ ಪರಿಸ್ಥಿತಿಯನ್ನು ಅನಿಶ್ಚಿತಗೊಳಿಸುತ್ತದೆ ಎಂಬಿತ್ಯಾದಿ ಹಲವಾರು ನಿರೀಕ್ಷಿತ ಆಧಾರಗಳ ಮೇಲೆ ಹಾಗೆ ಮಾಡಲಿಲ್ಲ, ಬದಲಿಗೆ, ಅದು ಹಾಗೆ ಮಾಡಿದ್ದು, ಈ ತೆರಿಗೆಯು ಹಿಂದೂಗಳಿಂದ ಹಣವನ್ನು ಕಸಿದು ಕೊಂಡು ಮುಸ್ಲಿಮರಿಗೆ ಹಸ್ತಾಂತರಿಸುತ್ತದೆ ಎಂಬ ಸಂಪೂರ್ಣ ಹುಸಿ ಮತ್ತು ಕೋಮುವಾದಿ-ಫ್ಯಾಸಿಸ್ಟ್ ಆಧಾರದ ಮೇಲೆ! ಈ ಹೊಲಸು ವಿಚಾರಕ್ಕೆ ಭಾವುಕತೆಯನ್ನು ತುಂಬುವ ಸಲುವಾಗಿ, ಅಂತಹ ತೆರಿಗೆಯು “ನುಸುಳು ಕೋರರ” ಪ್ರಯೋಜನಕ್ಕಾಗಿ ಹಿಂದೂ ಮಹಿಳೆಯರ ಮಂಗಳಸೂತ್ರಗಳನ್ನು ಕಸಿದುಕೊಳ್ಳುತ್ತದೆ ಎಂದೂ ಸೇರಿಸಿತು!
ಈ ಪ್ರಮಾಣದಲ್ಲಿ ತಪ್ಪು ಮಾಹಿತಿಯ ಈ ಪ್ರಚಾರವು ಸಾಕಷ್ಟು ಅಭೂತ ಪೂರ್ವವೇ ಸರಿ. ಉತ್ತರಾಧಿಕಾರ ತೆರಿಗೆಯನ್ನು ಖಂಡಿತಾ ಧರ್ಮದ ಆಧಾರದ ಮೇಲೆ ವಿಧಿಸಲಾಗುವುದಿಲ್ಲ. ಇದನ್ನು ಪಿತ್ರಾರ್ಜಿತವಾಗಿ ಬಂದ ಸಂಪತ್ತಿನ ಪ್ರಮಾಣದ ಮೇಲೆ ವಿಧಿಸಲಾಗುತ್ತದೆ. ಧಾರ್ಮಿಕ ಆಧಾರದ ಮೇಲೆ ವಿಧಿಸಲಾಗುವುದು ಎಂಬ ಬಿಜೆಪಿಯ ಮಾತು ಬೆರಗು ಹುಟ್ಟಿಸುವಂತಿದೆ. ಆದರೆ ಇದನ್ನು ತಪ್ಪು ಕಲ್ಪನೆಯಿಂದ ಬಿಜೆಪಿಯು ಹೇಳಿದೆ, ಅದ್ದರಿಂದ ನಂತರ ಅದರ ಬಗ್ಗೆ ಮೌನವಾಗಿರಲು ನಿರ್ಧರಿಸಿದೆ ಎಂಬ ಅನಿಸಿಕೆ ಬಂದರೆ, ಅಂತಹ ಯಾವುದೇ ಅನಿಸಿಕೆಗಳನ್ನು ಹೋಗಲಾಡಿಸಲು ಕೂಡ ಅದು ಕ್ರಮಗಳನ್ನು ತೆಗೆದು ಕೊಂಡಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯ ನಾಥ್, ಇತ್ತೀಚೆಗೆ ಉತ್ತರಾಧಿಕಾರ ತೆರಿಗೆ ಔರಂಗ ಜೇಬ್ ವಿಧಿಸಿದ ಜಜಿಯಾ ತೆರಿಗೆಯನ್ನು ಹೋಲುತ್ತದೆ ಎಂದು ಟೀಕಿಸಿದರು. ಜಜಿಯಾ ಧಾರ್ಮಿಕ ಆಧಾರದ ಮೇಲೆ ವಿಧಿಸಲಾದ ತೆರಿಗೆಯಾಗಿತ್ತು.
ಉತ್ತರಾಧಿಕಾರ ತೆರಿಗೆ ಎಂದರೆ ಏನು ಎಂಬುದರ ಬಗ್ಗೆ ನರೇಂದ್ರ ಮೋದಿಯವರಿಗಾಗಲಿ ಅಥವಾ ಆದಿತ್ಯನಾಥರವರಿಗಾಗಲಿ ತಿಳಿದಿಲ್ಲ ಎಂದೇನೂ ಅಲ್ಲ. ಮುಸ್ಲಿಮರಿಗೆ ಅನುಕೂಲವಾಗುವಂತೆ ಹಿಂದೂ ಸಂಪತ್ತಿಗೆ ತೆರಿಗೆ ವಿಧಿಸಲಾಗುತ್ತಿದೆ ಎಂಬ ಈ ವಿಷಯಕ್ಕೆ ಅವರು ಅಂಟಿ ಕೊಂಡಿರುವುದು ಒಂದು ಉದ್ದೇಶ ಪೂರ್ವಕ ಸುಳ್ಳಿನ ಪ್ರಚಾರಕ್ಕಾಗಿ. ಒಂದು ಸುಳ್ಳು ಧಾರ್ಮಿಕ ಕಥನದ ಮೂಲಕ ಸೂಪರ್-ಶ್ರೀಮಂತರನ್ನು ಹೇಗೆ ರಕ್ಷಿಸಲಾಗುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುವುದರೊಂದಿಗೇ ಇದು ಒಂದು ಧಾರ್ಮಿಕ ಅಲ್ಪ ಸಂಖ್ಯಾತ ಸಮುದಾಯದ ವಿರುದ್ಧ ದ್ವೇಷವನ್ನು ಬಡಿದೆಬ್ಬಿಸಲಿಕ್ಕಾಗಿ ಮತ್ತು ಒಂದು ವಿರೋಧಿ ರಾಜಕೀಯ ಪಕ್ಷದ ವಿರುದ್ಧ ಅದು ಅಲ್ಪ ಸಂಖ್ಯಾತರ ತುಷ್ಟೀಕರಣಲ್ಲಿ ತೊಡಗಿದೆ ಎಂಬ ಅಪ ಪ್ರಚಾರಕ್ಕಾಗಿ ಎಂಬುದನ್ನೂ ಕಾಣಬಹುದಾಗಿದೆ.
ಆದ್ದರಿಂದ ಬಿಜೆಪಿಯ ಮಟ್ಟಿಗೆ ಪಿತ್ರಾರ್ಜಿತ ತೆರಿಗೆಯ ವಿರುದ್ಧದ ವಾಗ್ದಾಳಿಯು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಕೊಲ್ಲುತ್ತದೆ. ಇದು ಈ ಅಲ್ಪ ಸಂಖ್ಯಾತರ ವಿರುದ್ಧ ಮತ್ತಷ್ಟು ದ್ವೇಷವನ್ನು ಉತ್ತೇಜಿಸುತ್ತದೆ; ಒಂದು ವಿರೋಧಿ ರಾಜಕೀಯ ಪಕ್ಷವನ್ನು ಕೆಡವಿ ಹಾಕುತ್ತದೆ; ಮತ್ತು ಪಿತ್ರಾರ್ಜಿತ ತೆರಿಗೆಯ ಕಲ್ಪನೆಯನ್ನು ಕೊಲ್ಲುತ್ತದೆ ಮತ್ತು ಆಮೂಲಕ ತನ್ನ ಮುಖ್ಯ ಪೋಷಕರಾಗಿರುವ ಅತಿ ಶ್ರೀಮಂತರನ್ನು ರಕ್ಷಿಸುತ್ತದೆ. ಇವೆಲ್ಲವನ್ನೂ ಕೋಮುವಾದಿ-ಫ್ಯಾಸಿಸ್ಟ್ ಮಾದರಿ ಸಂಘಟನೆಗಳಿಗೆ ಅಭ್ಯಾಸವಾಗಿ ಬಿಟ್ಟಿರುವ ಹೊಲಸು ಸುಳ್ಳುಗಳ ಮೂಲ ಕಸಾಧಿಸುವ ಪ್ರಯತ್ನ ಮಾಡಿದೆ.
ವರ್ಗ ಹೋರಾಟಗಳ ಮುನ್ಸೂಚನ
ಆದಾಗ್ಯೂ ಇದು ಮತ್ತೊಂದು ಪ್ರಶ್ನೆಯನ್ನು ಎತ್ತುತ್ತದೆ. ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಆಧಾರವಾಗಿರುವ ಪ್ರಮೇಯವೆಂದರೆ ಜನರು ಸಾರ್ವಜನಿಕವಾಗಿ ಇರುವ ಎಲ್ಲಾ ಸಮಸ್ಯೆಗಳನ್ನು ಗ್ರಹಿಸಲು ಮತ್ತು ಅವುಗಳಲ್ಲಿ ಪ್ರತಿಯೊಂದರ ಬಗ್ಗೆ ತಿಳುವಳಿಕೆಯುಳ್ಳ ಮತ್ತು ಬುದ್ಧಿವಂತ ನಿಲುವುಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ ಎಂಬುದು. ಆದರೆ ಜನರನ್ನು ಉದ್ದೇಶ ಪೂರ್ವಕವಾಗಿ ಅಜ್ಞಾನಿಯಾಗಿ ಇರಿಸಲಾಗುವ ಒಂದು ಶೋಷಣೆಯ ಸಮಾಜದಲ್ಲಿ ಇಂತಹ ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಮತ್ತು ಅವರಿಗೆ ವಿವರಿಸುವುದು ಮುಖ್ಯವಾಗುತ್ತದೆ. ಇದರಲ್ಲಿ ಮಾರ್ಕ್ಸವಾದಿ ಪರಂಪರೆಯ ಪ್ರಕಾರವಂತೂ ಒಂದು ಪ್ರಶ್ನೆಯನ್ನು ಸಿದ್ಧಾಂತೀಕರಿಸಿ ಅದನ್ನು ದುಡಿಯುವ ಜನರನಡುವೆ ಒಯ್ಯವುದು ತಮ್ಮ ವರ್ಗ ನೆಲೆಯಿಂದ ಹೊರ ಬಂದಿರುವ ಬುದ್ಧಿಜೀವಿಗಳು ವಹಿಸಬೇಕಾದ ಪ್ರಮುಖ ಪಾತ್ರವಾಗಿದೆ. ಆದರೆ ಯಾವುದನ್ನೇ ಅಗಲಿ ವರ್ಗ ದೃಷ್ಟಿಯಿಂದ ನೋಡದ ಅನೇಕ ಬೂರ್ಜ್ವಾಬರಹಗಾರರು ಕೂಡ, ಶಿಕ್ಷಿತ ಮತ್ತು ಪ್ರಜ್ಞಾವಂತ ಬುದ್ದಿಜೀವಿ ವಿಭಾಗ ಜನರ ಮುಂದೆ ಈ ಪ್ರಶ್ನೆಗಳನ್ನಿಟ್ಟು ಆಮೂಲಕ ಪ್ರಜಾ ಪ್ರಭುತ್ವ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ವಿಭಾಗ ಮಾಡ ಬೇಕಾದ ಅಗತ್ಯವನ್ನು ಗುರುತಿಸುತ್ತಾರೆ.
ಉದಾಹರಣೆಗೆ ಬೂರ್ಜ್ವಾ ಅರ್ಥಶಾಸ್ತ್ರಜ್ಞ ಜಾನ್ಮೇನಾರ್ಡ್ಕೇನ್ಸ ಪ್ರಜಾಪ್ರಭುತ್ವದ ಕಾರ್ಯ ಚಟುವಟಿಕೆಗೆ “ವಿದ್ಯಾವಂತ ಬೂರ್ಜ್ವಾ” ವರ್ಗದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ. ಕೇನ್ಸ್ ಪರಿಕಲ್ಪನೆಯ ಪ್ರಕಾರ, ಉತ್ತರಾಧಿಕಾರ ತೆರಿಗೆಯು ಧರ್ಮದ ಆಧಾರದ ಮೇಲೆ ವಿಧಿಸಲಾದ ತೆರಿಗೆಯಲ್ಲ ಎಂದು ಜನರಿಗೆ ನಿಖರವಾಗಿ ವಿವರಿಸುವುದು “ಶಿಕ್ಷಿತ ಬೂರ್ಜ್ವಾ” ವಿಭಾಗದ ಮುಂದಿರುವ ಕಾರ್ಯ ಭಾರ. ಆದ್ದರಿಂದ ರಾಜಕೀಯದಲ್ಲಿ ಫ್ಯಾಸಿಸ್ಟ್ ಮಾದರಿಯ ವ್ಯಕ್ತಿಗಳು ತಮ್ಮ ಉದ್ದೇಶ ಪೂರ್ವಕವಾದ ಸುಳ್ಳು ಕಥನಗಳೊಂದಿಗೆ ಮೇಲೆದ್ದು ಬಂದಿರುವುದು ಇಂತಹ “ಶಿಕ್ಷಿತ ಬೂರ್ಜ್ವಾ” ವಿಭಾಗ ಅಂಚಿಗೆ ತಳ್ಳಲ್ಪಟ್ಟಿರುವ ಅಥವ ಅದು ತನ್ನ ಜವಾಬ್ದಾರಿಯಿಂದ ನುಣಚಿಕೊಂಡಿರುವ ಪರಿಸ್ಥಿತಿಯನ್ನು ಸೂಚಿಸುತ್ತದೆ.
ಕೀನ್ಸ್ ಪರಿಕಲ್ಪನೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ, “ಶಿಕ್ಷಿತ ಬೂರ್ಜ್ವಾ” ವಿಭಾಗ ದುರ್ಬಲಗೊಂಡಿರುವುದು ಅಥವ ಕಾಣೆಯಾಗಿರುವುದು ವಾಸ್ತವದಲ್ಲಿ ಕಣ್ಣಿಗೆ ಕಾಣುವ ಒಂದು ವಿದ್ಯಮಾನ ಎಂಬುದನ್ನು ನಿರಾಕರಿಸಲಾಗದು. ಬಿಜೆಪಿಯ ಘಟಾನುಘಟಿಗಳು ಪಿತ್ರಾರ್ಜಿತ ತೆರಿಗೆಯನ್ನು ಧರ್ಮಾಧಾರಿತ ತೆರಿಗೆಯನ್ನಾಗಿ ಮಂಡಿಸಿದರೂ ಮಾಧ್ಯಮಗಳು ಇದರ ಬಗ್ಗೆ ಸದ್ದು ಮಾಡದೆ ಅವರು ಪಾರಾಗುವಂತಾಗಿರುವುದು ಈ ಕಣ್ಮರೆಯನ್ನು ಸೂಚಿಸುತ್ತದೆ; ವಾಸ್ತವವಾಗಿ “ಗೋದಿ” ಮಾಧ್ಯಮವೆಂಬುದು ಇಂತಹ ಕಣ್ಮರೆಯ ಸಂಕೇತವೇ ಆಗಿದೆ.
ಪ್ರಶ್ನೆ ಯೆಂದರೆ, ಇದು ಏಕೆ ಸಂಭವಿಸುತ್ತದೆ? “ಶಿಕ್ಷಿತ ಬೂರ್ಜ್ವಾ” ಎಂಬುದು ಬೂರ್ಜ್ವಾಗಳ ಒಂದುವಿ ಭಾಗ ತಾನೇ? ಪ್ರಜಾಸತ್ತಾತ್ಮಕ ರಾಜಕೀಯವನ್ನು ಹೊಂದಿರುವ ಬೂರ್ಜ್ವಾ ಸಮಾಜವು ತೆಗೆದುಕೊಳ್ಳಬೇಕಾದ ದಿಕ್ಕಿನ ಬಗ್ಗೆ ತನ್ನದೇ ಮನಸ್ಸಿನಲ್ಲಿ ಸ್ಪಷ್ಟತೆ ಪಡೆದಿರುವಾಗ ಮಾತ್ರವೇ ಅದು ಕೇನ್ಸ್ ಪರಿಭಾವಿಸಿದ ಪಾತ್ರವನ್ನು ವಹಿಸಬಲ್ಲದು. ಅದು ಪ್ರಜಾಪ್ರಭುತ್ವದ ಒಂದು ಸ್ತಂಭವಾಗಿ ದುರ್ಬಲಗೊಳ್ಳುವುದು ಮತ್ತು ಅದರಿಂದಾಗಿ ಫ್ಯಾಸಿಸ್ಟ್ ಮಾದರಿ ಯೋಜನೆಯನ್ನು ಒಪ್ಪಿಕೊಂಡಿರುವುದು, ನವ-ಉದಾರವಾದಿ ಬಂಡವಾಳ ಶಾಹಿ ಮುಂದೆ ದಾರಿಯಿಲ್ಲದಂತ ಸ್ಥಿತಿಯನ್ನು ತಲುಪಿದೆ ಎಂಬುದನ್ನು ಸೂಚಿಸುತ್ತದೆ. ಈ ಸ್ಥಿತಿಯನ್ನು ಬಂಡವಾಳ ಶಾಹಿ ತಪ್ಪಿಸಬೇಕಾಗಿದೆ ಎಂದು ಕೇನ್ಸ್ ಬಯಸಿದ್ದರು. ಇದ್ತು ಪ್ರಮುಖವರ್ಗ ಹೋರಾಟಗಳು ಮುಂಬರಲಿವೆ ಎಂಬುದರ ಸೂಚನೆಯೂ ಆಗಿದೆ.
ಇದನ್ನೂ ನೋಡಿ: ‘ಮೋದಿಸರ್ಕಾರ’ ಬೇಡ, ಎನ್‌ಡಿಎ ಸರ್ಕಾರ ಬೇಕಾದರೆ ಇರಲಿ- ಭಾರತದ ಮತದಾರರ ತೀರ್ಪು Janashakthi Media