ನವದೆಹಲಿ: ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಳಮರಂ ಕರೀಂ ಅವರು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಕೇಂದ್ರದ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಖರ್ಗೆ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸರ್ಕಾರದ ಪ್ರಯತ್ನಕ್ಕೆ ತಡೆ ನೀಡಬೇಕೆಂದೂ ಅವರು ಕೋರಿದ್ದಾರೆ.
ಇದನ್ನೂ ಓದಿ : ವಲಸಿಗ ಕಾರ್ಮಿಕರ ಶೋಷಣೆ – ಕಾರ್ಮಿಕ ಸಮಸ್ಯೆಗಳು ಹೆಚ್ಚಳ; ಪರಿಣಾಮಕಾರಿ ಕ್ರಮ ಅಗತ್ಯ: ವಿ. ಸಿವದಾಸನ್
ಈ ನಡೆ ಅತ್ಯಂತ ಕಳವಳಕಾರಿ ಹಾಗೂ ವಿಷಾದಕರ’ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೂಪಿಸಿದ ಜನ ವಿರೋಧಿ ನೀತಿಗಳನ್ನು ವಿರೋಧಿಸುವಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಿ ದೇಶದ ಕಾರ್ಮಿಕ ವಲಯದ ಪರವಾಗಿ ನಿಂತಿವೆ. ಆದರೆ, ರಾಜ್ಯ ಸರ್ಕಾರವು ಅದೇ ನೀತಿಗಳನ್ನು ಜಾರಿಗೊಳಿಸಲು ಕರಡು ನಿಯಮಗಳನ್ನು ಪ್ರಕಟಿಸಿದೆ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಜತೆಗೆ, ‘ರಾಜ್ಯದ ನಿರ್ಧಾರವು ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ವಿರುದ್ಧದ ನಡೆಯಾಗಿದೆ. ಕಾರ್ಮಿಕ ವರ್ಗವು ಇದನ್ನು ದ್ರೋಹವೆಂದೇ ಪರಿಗಣಿಸುತ್ತದೆ. ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಾವು ಮಧ್ಯಪ್ರವೇಶಿಸಿ ಕರಡು ನಿಯಮಗಳನ್ನು ರಾಜ್ಯ ಸರ್ಕಾರ ಹಿಂಪಡೆಯುವಂತೆ ಅಥವಾ ಸ್ಥಗಿತಗೊಳಿಸುವಂತೆ ಖಾತರಿಪಡಿಸಿಕೊಳ್ಳಬೇಕು’ ಎಂದೂ ಕರೀಂ ಮನವಿ ಮಾಡಿದ್ದಾರೆ.
ಇದನ್ನೂ ನೋಡಿ : ಫೆ12ರ ಮುಷ್ಕರ | ಕೃಷಿ ರೈತರದ್ದು, ಕಾರ್ಪರೇಟ್ ಕಂಪನಿಗಳದ್ದು ಅಲ್ಲ | ಸಿದ್ಧನಗೌಡ ಪಾಟೀಲ್ | ಗುರುರಾಜ ದೇಸಾಯಿ
