ಬೆಂಗಳೂರು | ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ: ರಿಜ್ವಾನ್ ಅರ್ಷದ್ ಆಗ್ರಹ

ಬೆಂಗಳೂರು : ಸರ್ಕಾರ ಬಂದು ಮೂರು ವರ್ಷ ಆಗಿದೆ. ಸಂಪುಟ ವಿಸ್ತರಣೆ ಆಗಲೇಬೇಕು. ಹೊಸಬರಿಗೆ ಅವಕಾಶ ಸಿಗಬೇಕು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.

ಈ ಕುರಿತು ಬೆಂಗಳೂರಲ್ಲಿ ಮಾತನಾಡಿದ ಅವರು,  ಬದಲಾವಣೆ ಒಳ್ಳೆಯದು ಎಂದಿದ್ದಾರೆ. ಸಿಎಂ ಬದಲಾವಣೆ, ಪವರ್ ಶೇರಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಮಾತನಾಡಿ ವಿವಾದ ದೊಡ್ಡದಾಗಿಸಲ್ಲ.  ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿವೆ. ಸಿದ್ದರಾಮಯ್ಯ ನಮ್ಮ ಲೀಡರ್, ಅವರ ಕೆಲಸಗಳು ಪಕ್ಷಕ್ಕೆ ಬಲ ತಂದಿವೆ. ಅವರಿಗೆ ನಾನೊಬ್ಬ ಸಪೋರ್ಟ್ ಮಾಡಿದರೆ ಏನೂ ಆಗಲ್ಲ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತ ನಿಗಮದ ಸಾಲಮನ್ನ ವಿಚಾರವಾಗಿ ಮಾತನಾಡಿದ ಅವರು, ಆ ನಿಗಮದವರು ಬೇಡಿಕೆ ಇಟ್ಟಿದ್ದಾರೆ‌. ಸಿಎಂ ಅದನ್ನು ಪರಿಶೀಲಿಸಿ ಮಾಫಿ ಮಾಡಿದ್ದಾರೇನೋ. ಬೇರೆ ಸಮುದಾಯದವರು ಬೇಡಿಕೆ ಇಟ್ರೆ ಅದಕ್ಕೆ ಅವರು ಒಪ್ಪಬಹುದೇನೋ‌. ಅಲ್ಪಸಂಖ್ಯಾತರ ವಿಚಾರ ಬಂದಾಗ ಈ ಪ್ರಶ್ನೆಗಳು ಉದ್ಭವಿಸುತ್ತವೆ. ಹೀಗ್ಯಾಕೆ?. ಅವರು ಭಾರತ ದೇಶದ ಪ್ರಜೆಗಳಲ್ವೇ? ಪದೇ ಪದೆ ಈ ರೀತಿ ಅವರನ್ನು ಭಿನ್ನವಾಗಿ ನೋಡೋದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ : ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ: ಉನ್ನತ ಶಿಕ್ಷಣದ ಸ್ವಾಯತ್ತತೆಗೆ ಬಂದಿರುವ ದೊಡ್ಡ ಸವಾಲು

ಬ್ರಿಟೀಷರ ಜೊತೆ ಕೈ ಜೋಡಿಸಿ, ಅವರ ಫೆನ್ಷನ್ ಮೇಲೆ ಬದುಕಿದವರಿಗೆ, ಕ್ಷಮಾಪಣೆ ಬರೆದವರಿಗೆ ಭಾರತ ರತ್ನ ಕೊಡಬೇಕೇ ಯೋಚಿಸಿ?. ಸಾವರ್ಕರ್​ಗೆ ಭಾರತರತ್ನ ಕೊಡಬೇಕು ಎನ್ನುವ ಭಾಗವತ್ ಹೇಳಿಕೆ ವಿಚಾರವಾಗಿ ಮಾತನಾಡಿ, ಭಾರತ ರತ್ನ ಗೌರವಕ್ಕೆ ಅವರು ಅರ್ಹರೇ ಅನ್ನೋದನ್ನೇ ಮೊದಲು ನೋಡಬೇಕು. ಅವರ ಸರ್ಕಾರ ಇರೋದು, ಬೇಕಾದವರಿಗೆ ಭಾರತ ರತ್ನ ಕೊಡಬಹುದು. ಅವರಿಗೆ ಒಂದು ವೇಳೆ ಆ ಗೌರವ ಕೊಟ್ರೆ, ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದವರಿಗೆ ಮಾಡೋ ಅಪಮಾನ ಇದು. ಗೋಡ್ಸೆ ಆರಾಧಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

‘ನಾನು ಸಿಎಂ ಆಗಬೇಕು ಎಂಬ ಹಂಬಲ ಜನರಿಗೂ ಇದೆ, ಶಾಸಕರಿಗೂ ಇದೆ, ಮಾಧ್ಯಮದವರಿಗೂ ಇದೆ‌. ಆದರೆ, ಪಕ್ಷ ಏನು ಹೇಳುತ್ತದೆ ಎಂದು ನೋಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್​ ಇತ್ತೀಚಿಗೆ ಪ್ರತಿಕ್ರಿಯಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸದಲ್ಲಿದ್ದ ಅವರು ಮಂಗಳೂರಿನಲ್ಲಿ ಮಾಧ್ಯದವರೊಂದಿಗೆ ಮಾತನಾಡುತ್ತ, ಕರಾವಳಿಯಲ್ಲಿ ಡಿಕೆಶಿ ಸಿಎಂ ಆಗಬೇಕು ಎಂಬ ಕೂಗು ಜೋರಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು. ಪರಮೇಶ್ವರ್ ಅವರು ಸಿಎಂ ಆಗಬೇಕು ಎಂಬ ಒತ್ತಾಯವೂ ಇದೆ ಎಂದು ಕೇಳಿದಾಗ, ”ತಪ್ಪೇನಿದೆ? ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದಕ್ಕೆಲ್ಲ ನಾನು ಬೇಡ ಎನ್ನುವುದಕ್ಕೆ ಆಗುವುದಿಲ್ಲ” ಎಂದಿದ್ದರು.

ಇದನ್ನೂ ನೋಡಿ : ಮುಚ್ಚುವ ಅಂಚಿನಿಂದ.. ನೂರರ ಸಂಭ್ರಮದವರೆಗೆ – ಸರಕಾರಿ ಶಾಲೆಯ ಕಥೆ Janashakthi Media

Donate Janashakthi Media