ಮಣಿಪುರ ಹಿಂಸಾಚಾರ ಚರ್ಚೆಗೆ ಆಗ್ರಹ: ಸಂಸತ್ತಿನಲ್ಲಿ ವಿಪಕ್ಷ ನಾಯಕನ ಮೈಕ್ ಸ್ವಿಚ್ ಆಫ್!

ನವದೆಹಲಿ: ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೈಕ್ ಆಫ್ ಮಾಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಡೆರೆಕ್ ಓಬ್ರಿಯಾನ್ ಮಂಗಳವಾರ ಆರೋಪಿಸಿದ್ದಾರೆ. ಇದನ್ನು ವಿರೋಧಿಸಿ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್) ಒಕ್ಕೂಟದ ಪ್ರತಿಯೊಬ್ಬ ಸದಸ್ಯರು ಸಂಸತ್ತಿನಿಂದ ಹೊರನಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರ ವಿಷಯವನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಸದನವು ಮಧ್ಯಾಹ್ನ ಸಭೆ ಸೇರಿದಾಗ ಪ್ರಶ್ನೋತ್ತರ ಅವಧಿಯ ಆರಂಭದಿಂದ ಗದ್ದಲ ಉಂಟಾಗಿದೆ. ಕಾಂಗ್ರೆಸ್ ಮತ್ತು ಇತರ ಸಮಾನ ಮನಸ್ಕ ಪಕ್ಷಗಳ ಸದಸ್ಯರು “ಮಣಿಪುರ, ಮಣಿಪುರ” ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಪ್ರಕರಣ:14 ಆರೋಪಿಗಳ ಗುರುತು ಪತ್ತೆ

ಬಿಜೆಪಿ ಸಂಸದರು ಖರ್ಗೆ ಅವರನ್ನು ಮಾತನಾಡದಂತೆ ತಡೆದಿದ್ದಾರೆ ಎಂದು ಕಾಂಗ್ರೆಸ್ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. “ಸದನದ ನಾಯಕನೇ ಪದೇ ಪದೇ ಅಡ್ಡಿಪಡಿಸುವುದು ಮತ್ತು ಬಿಲ್‌ಗಳನ್ನು ಗದ್ದಲದಲ್ಲಿ ಅಂಗೀಕರಿಸಲು ಪ್ರಯತ್ನಿಸಿದಾಗ ಇಂಡಿಯಾ ಮೈತ್ರಿಕೂಟದ ಎಲ್ಲಾ ಸಂಸದರು ಸದನದಿಂದ ಹೊರನಡೆದರು” ಎಂದು ಅವರು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಿದ್ದಾಗ ಅವರ ಮೈಕ್ ಅನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಆಫ್ ಮಾಡಿದ್ದಾರೆ ಎಂದು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಆಮ್‌ ಆದ್ಮಿ ಸಂಸದ ರಾಘವ್ ಚಡ್ಡಾ ಅವರು, “ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಿದ್ದಾಗ ಬಿಜೆಪಿ ಸಂಸದರು ಬೊಬ್ಬೆ ಹಾಕಲು ಪ್ರಾರಂಭಿಸಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಅಡಗಿಸಲು ಹೇಗೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುವುದನ್ನು ಇದು ತೋರಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ: 7 ಕುಕಿ ಮಹಿಳೆಯರ ಮೇಲೆ ಅತ್ಯಾಚಾರ ಆರೋಪ, ನಿರಾಕರಿಸಿದ ಸಿಎಂ ಬಿರೇನ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಗೈರುಹಾಜರಾಗಿದ್ದನ್ನು ಪ್ರಶ್ನಿಸಿದ ಖರ್ಗೆ, ಮಣಿಪುರ ವಿಷಯದ ಕುರಿತು 267 ನೇ ನಿಯಮದ ಅಡಿಯಲ್ಲಿ ಚರ್ಚೆಗೆ 50 ಕ್ಕೂ ಹೆಚ್ಚು ಸದಸ್ಯರು ನೋಟಿಸ್ ನೀಡಿದ್ದಾರೆ, ಆದರೆ ಸರ್ಕಾರ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.

“ಇಷ್ಟೊಂದು ಜನರು ಈ ಬಗ್ಗೆ ಮಾತನಾಡಲು ಬಯಸಿದಾಗ ಅವರು ಏಕೆ ಮಾತನಾಡಲು ಸಿದ್ಧರಿಲ್ಲ? ಮೋದಿ ‘ಸಾಹಬ್’ ಏಕೆ ಇಲ್ಲಿಗೆ ಬಂದು ಪರಿಸ್ಥಿತಿಯನ್ನು ವಿವರಿಸುವುದಿಲ್ಲ? ಅವರು ಹೊರಗೆ, ಅವರು ಈಸ್ಟ್ ಇಂಡಿಯಾ ಕಂಪನಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಅವರು ಸದನದಲ್ಲಿ ಮಣಿಪುರದ ಬಗ್ಗೆ ಮಾತನಾಡಲು ಸಿದ್ಧರಿಲ್ಲ,” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಪ್ರಮುಖ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟವನ್ನು ಟೀಕಿಸಿದ್ದ ಪ್ರಧಾನಿ ಮೋದಿ, ಕೇವಲ ‘ಇಂಡಿಯಾ’ ಪದವನ್ನು ಬಳಸುವುದರಿಂದ ಕೆಲಸ ಸಾಧ್ಯವಿಲ್ಲ. ಏಕೆಂದರೆ “ಈಸ್ಟ್ ಇಂಡಿಯಾ ಕಂಪನಿಯು  ಮತ್ತು ಇಂಡಿಯನ್ ಮುಜಾಹಿದೀನ್ ಕೂಡಾ ಇಂಡಿಯಾ ಹೆಸರಿನಲ್ಲಿದೆ” ಎಂದು ಹೇಳಿದ್ದರು.

ವಿಡಿಯೊ ನೋಡಿ:  ಬ್ಯೂಗಲ್ ರಾಕ್ ಪಾರ್ಕ್‌ನಲ್ಲಿ ಸಮಸ್ಯೆಗಳದ್ದೆ ಆರ್ಭಟ Janashakthi Media

Donate Janashakthi Media

Leave a Reply

Your email address will not be published. Required fields are marked *