ರಾಂಚಿ| 7,930 ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕ: ರಾಮದಾಸ್ ಸೊರೆನ್

ರಾಂಚಿ: ಇಂದು ಮಂಗಳವಾರ, ಜಾರ್ಖಂಡ್‌ನಲ್ಲಿ ಸುಮಾರು 7,930 ಸರ್ಕಾರಿ ಶಾಲೆಗಳು ತಲಾ ಒಬ್ಬ ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಶಿಕ್ಷಣ ಸಚಿವ ರಾಮದಾಸ್ ಸೊರೆನ್ ತಿಳಿಸಿದ್ದಾರೆ. ರಾಂಚಿ

ವಿಧಾನಸಭೆಯಲ್ಲಿ ಶಿಕ್ಷಕರ ಬಿಕ್ಕಟ್ಟಿನ ಕುರಿತು ಬಿಜೆಪಿ ಶಾಸಕ ರಾಜ್ ಸಿನ್ಹಾ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸೊರೆನ್, ಈ ಏಕ ಶಿಕ್ಷಕ ಶಾಲೆಗಳಲ್ಲಿ 3.81 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಎರಡು ಬೈಕ್ ಮುಖಾಮುಖಿ ಡಿಕ್ಕಿ: ಮೂವರು ಸವಾರರು ಸಾವು

103 ಶಾಲೆಗಳು ಯಾವುದೇ ವಿದ್ಯಾರ್ಥಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಮತ್ತುಅವುಗಳಲ್ಲಿ 17 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ ಎಂದು ನಂತರ ಜಾರ್ಖಂಡ್ ಶಿಕ್ಷಣ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

“ವಿದ್ಯಾರ್ಥಿಗಳನ್ನು ಮರಳಿ ಕರೆತರಲು ನಾವು ಆಯಾ ಪ್ರದೇಶಗಳಲ್ಲಿ ‘ಶಾಲಾ ಚಲೋ ಅಭಿಯಾನ’ದ ಮಾದರಿಯಲ್ಲಿ ಅಭಿಯಾನ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದರು.

26,000 ಸಹಾಯಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಹಂತದಲ್ಲಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ನೋಡಿ: ವಿಶ್ವವಿದ್ಯಾಲಯಗಳ‌ ಸ್ಥಾಪನೆ, ಮುಚ್ಚುವಿಕೆಯ‌ ರಾಜಕೀಯ ಮೇಲಾಟ, ಬಲಿಪಶುಗಳಾದ ವಿದ್ಯಾರ್ಥಿಗಳು….

Donate Janashakthi Media

Leave a Reply

Your email address will not be published. Required fields are marked *