ಮೋದಿ ಸರ್ಕಾರದ `ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಚನೆ ದೇಶಕ್ಕೆ ವಿನಾಶಕಾರಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಸಂಸತ್ತು, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಕೋವಿಂದ್ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಮೋದಿ 

`ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಈ ಮಾದರಿಯನ್ನು ಜಾರಿಗೆ ತಂದರೆ ಅದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಒಕ್ಕೂಟ ರಚನೆಯನ್ನೇ ಹಾಳು ಮಾಡುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದನ್ನು ಬಲವಾಗಿ ವಿರೋಧಿಸಿದೆ.

ಈ ಪ್ರಸ್ತಾವನೆಗಳು ಲೋಕಸಭೆ ಚುನಾವಣೆಯೊಂದಿಗೆ ಹೊಂದಾಣಿಕೆ ಮಾಡಲು ಕೆಲವು ವಿಧಾನ ಸಭೆಗಳ ಕಾರ್ಯಾವಧಿಯನ್ನು ಮೊಟಕುಗೊಳಿಸುತ್ತವೆ. ಇದಲ್ಲದೆ, ಒಂದು ವೇಳೆ ರಾಜ್ಯ ಸರ್ಕಾರ ಪತನವಾದರೆ ಮತ್ತು ವಿಧಾನಸಭೆಯನ್ನು ವಿಸರ್ಜಿಸಬೇಕಾದರೆ, ಮಧ್ಯಂತರ ಚುನಾವಣೆಯು ವಿಧಾನಸಭೆಯ ಉಳಿದ ಅವಧಿಗೆ ಮಾತ್ರ ಇರುತ್ತದೆ. ಇವೆಲ್ಲವೂ ಸಂವಿಧಾನದಲ್ಲಿ ಕಲ್ಪಿಸಿದಂತೆ ಐದು ವರ್ಷಗಳ ಅವಧಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನರ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದಲ್ಲದೆ, ವಿಧಾನಸಭೆಯ ಉಳಿದ ಅವಧಿಗೆ ಮಾತ್ರ ಮಧ್ಯಂತರ ಚುನಾವಣೆಯನ್ನು ನಡೆಸಬೇಕೆಂಬ ಶಿಫಾರಸು ಈ ಹೊಸ ಯೋಜನೆಯ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಏಕೆಂದರೆ ಈ ಕ್ರಮ ಹಲವಾರು ಚುನಾವಣೆಗಳನ್ನು ತಪ್ಪಿಸಲಿಕ್ಕಾಗಿ ಎಂದೇ ಹೇಳಲಾಗಿದೆ. ಮಧ್ಯಂತರ ಚುನಾವಣೆಯ ನಂತರ, ಐದು ವರ್ಷಗಳ ಅವಧಿಯ ಕೊನೆಯಲ್ಲಿ ಮತ್ತೊಂದು ಚುನಾವಣೆಯನ್ನು ಮಾಡಬೇಕಾಗುತ್ತದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ. ಮೋದಿ 

ಇದನ್ನು ಓದಿ : ಉತ್ತರ ಪ್ರದೇಶ| ಜಾತಿ ದೌರ್ಜನ್ಯ – ದಲಿತ ಯುವಕನನ್ನು ಥಳಿಸಿ, ತಮ್ಮು ಶೂ ನೆಕ್ಕಿಸಿದ ಸವರ್ಣೀಯರು

ಎಲ್ಲಾ ಪಂಚಾಯತ್ ಮತ್ತು ಮುನ್ಸಿಪಲ್ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕ್ರಮ ಒಕ್ಕೂಟ ತತ್ವದ ಮೇಲಿನ ಮೇಲಿನ ವಂಚಕ ದಾಳಿ. ಇದು ಅತಿ-ಕೇಂದ್ರೀಕರಣವಾಗಿದೆ ಮತ್ತು ಸ್ಥಳೀಯ ಸಂಸ್ಥೆಗಳು ವಿಕೇಂದ್ರೀಕೃತ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡಬೇಕು ಎಂಬ ಉದ್ದೇಶಕ್ಕೆ ವಿರುದ್ಧವಾಗಿದೆ. ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವುದು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಇದನ್ನು ನಿರಾಕರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಭಾರತದ ಅಗಾಧ ವೈವಿಧ್ಯತೆ ಮತ್ತು ವಿವಿಧ ರಾಜ್ಯಗಳಲ್ಲಿನ ವಿಭಿನ್ನ ಪರಿಸ್ಥಿತಿಗಳನ್ನು ಗಮನಿಸಿದರೆ ಇದು ಅಸಂಬದ್ಧ ಪ್ರಸ್ತಾವನೆ ಕೂಡ ಆಗಿದೆ.

`ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯು ಆರ್‌ಎಸ್‌ಎಸ್-ಬಿಜೆಪಿಯ ಕಲ್ಪನೆಯ ಕೂಸು, ಇದು ಒಬ್ಬ ನಾಯಕನ ಚುಕ್ಕಾಣಿಯಲ್ಲಿ ಕೇಂದ್ರೀಕೃತ ಏಕಸ್ವರೂಪದ ಪ್ರಭುತ್ವವನ್ನು ರಚಿಸಲು ಬಯಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಅದರ ಈ ಉದ್ದೇಶಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಯಾವುದೇ ಕ್ರಮವನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸುತ್ತದೆ ಎನ್ನುತ್ತ ಪ್ರಜಾಪ್ರಭುತ್ವ, ಬಹುತ್ವ ಮತ್ತು ಒಕ್ಕೂಟ ತತ್ವವನ್ನು ಗೌರವಿಸುವ ಪ್ರತಿಯೊಂದು ಪಕ್ಷವೂ ಈ ಹಾನಿಕಾರಕ ನಡೆಯನ್ನು ದೃಢವಾಗಿ ವಿರೋಧಿಸಬೇಕು ಮತ್ತು ಈ ವಿನಾಶಕಾರಿ ಕ್ರಮವನ್ನು ಒಗ್ಗಟ್ಟಿನಿಂದ ತಡೆಯಲು ಮುಂದಾಗಬೇಕು ಎಂದು ಕರೆ ನೀಡಿದೆ.

ಇದನ್ನು ನೋಡಿ : ಸಿಜೆಐ ಮನೆಯ ಪೂಜೆಗೆ ಪ್ರಧಾನಿ ಮೋದಿ ಭಾಗವಹಿಸಿದ್ದು ಸರಿಯೇ? | ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *