ಒಂದು ರಾಷ್ಟ್ರ ಒಂದು ಚುನಾವಣೆ ಅಂಗೀಕರ: ಲೋಕಸಭೆಯಲ್ಲಿ ಪರವಾಗಿ 269 ಮತಗಳು, ವಿರುದ್ಧವಾಗಿ 198 ಮತಗಳು ಚಲಾವಣೆ

ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಕೇಂದ್ರ ಸರ್ಕಾರ ಸಿದ್ಧವಿರುವುದಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಸಿದರು.

ಈ ಮಸೂದೆ ಮಂಡಿಸುವುದನ್ನು ತಡೆಯುವ ವಿಪಕ್ಷಗಳ ಪ್ರಯತ್ನ ವಿಫಲವಾಗಿದ್ದು, ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಮಸೂದೆಗಳನ್ನು ಮತಕ್ಕೆ ಹಾಕಿದಾಗ 543 ಸದಸ್ಯ ಬಲದ ಲೋಕಸಭೆಯಲ್ಲಿ ಮಸೂದೆಗಳ ಪರವಾಗಿ 269 ಮತಗಳು ಮತ್ತು ವಿರುದ್ಧವಾಗಿ 198 ಮತಗಳು ವಿರುದ್ಧವಾಗಿ ಬಿದ್ದವು. ಹೀಗಾಗಿ ಮಸೂದೆ ಮಂಡನೆ ತಡೆಯುವ ವಿಪಕ್ಷಗಳ ಪ್ರಯತ್ನವನ್ನು ಕೇಂದ್ರ ಸರ್ಕಾರ ವಿಫಲಗೊಳಿಸಿದೆ. ಎನ್‌ಡಿಎ ಸದಸ್ಯರಿಂದ 298 ಮತ್ತು ವಿರುದ್ಧವಾಗಿ ಇಂಡಿಯಾ ಬ್ಲಾಕ್‌ನ 233 ಮತಗಳಿದ್ದು 11 ಇತರೆ ಸದಸ್ಯರಿದ್ದಾರೆ.

ಲೋಕಸಭೆಯಲ್ಲಿ ಮಂಡನೆಯಾಗಿರುವ ಒಂದು ದೇಶ ಒಂದು ಚುನಾವಣೆ ಮಸೂದೆಗಳನ್ನು ವಿಸ್ತ್ರತ ಸಮಾಲೋಚನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಸರ್ಕಾರ ಸಿದ್ಧವಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರೇ ತಿಳಿಸಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಷಾ ಕೂಡ ಲೋಕಸಭೆಗೆ ತಿಳಿಸಿದರು.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಏಕಕಾಲಕ್ಕೆ ಚುನಾವಣೆ ನಡೆಸಲು ಸಂವಿಧಾನ (ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2024 ಅನ್ನು ಮಂಡಿಸುತ್ತಿದ್ದಂತೆ ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಶಾ ಅವರು ಈ ಹೇಳಿಕೆ ನೀಡಿದರು. ಅಂತಿಮವಾಗಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ಇದನ್ನೂ ಓದಿ : 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಎಂದ ಭರವಸೆ ಎಲ್ಲಿ ಹೋಯಿತು: ಮೋದಿ ನಂ.1 ಸುಳ್ಳುಗಾರ ಎಂದ ಮಲ್ಲಿಕಾರ್ಜುನ ಖರ್ಗೆ

ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆಯ ಮಂಡನೆಯು ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಯಿತು. ಎನ್‌ಸಿಪಿ (ಶರದ್ ಪವಾರ್ ಬಣ), ಕಾಂಗ್ರೆಸ್‌ನ ಮನೀಶ್‌ ತಿವಾರಿ, ತೃಣಮೂಲದ ಕಲ್ಯಾಣ್ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್‌ ಮತ್ತು ಡಿಎಂಕೆಯ ಟಿಆರ್ ಬಾಲು ಅವರಂತಹ ನಾಯಕರು ಈ ಮಸೂದೆ ಮಂಡಿಸಬಾರದು ಎಂದು ತೀವ್ರ ವಿರೋಧ ವ್ಯಕ್ತಪಡಿಸಿರು. ಒಂದು ದೇಶ ಒಂದು ಚುನಾಔಣೆ ಮಸೂದೆಯು ದೇಶದ ಸಂವಿಧಾನದ ಮೂಲ ರಚನೆಗೆ ಸವಾಲು ಒಡ್ಡುವಂಥದ್ದಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪ್ರತಿಪಾದಿಸಿದರು.

ಸರ್ವಾಧಿಕಾರದ ಧೋರಣೆಯನ್ನು ಬಿಜೆಪಿ ಸರ್ಕಾರ ತೋರುತ್ತಿದೆ. ಮಸೂದೆಯು ಭಾರತದ ವೈವಿಧ್ಯತೆ ಮತ್ತು ಅದರ ಒಕ್ಕೂಟ ರಚನೆಯನ್ನು ಕೊನೆಗೊಳಿಸುತ್ತದೆ ಎಂದು ಆರೋಪಿಸಿ ಆರೋಪಿಸಿ ಅಖಿಲೇಶ್ ಯಾದವ್ ಪರವಾಗಿ ಸಮಾಜವಾದಿ ಸಂಸದ ಧರ್ಮೇಂದ್ರ ಯಾದವ್ ಅವರು ಈ ಮಸೂದೆಯನ್ನು ವಿರೋಧಿಸಿದರು.

ಪ್ರತಿಪಕ್ಷ ನಾಯಕರು ಒಂದು ದೇಶ ಒಂದು ಚುನಾವಣೆ ಮಸೂದೆಗಳಿಗೆ ಸಂಬಂಧಿಸಿ ವ್ಯಕ್ತಪಡಿಸುತ್ತಿರುವ ಆಕ್ಷೇಪಣೆಗಳು ರಾಜಕೀಯ ಸ್ವರೂಪದಲ್ಲಿವೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ, ಸಲಹೆಗಳು ವ್ಯಕ್ತವಾದರೆ ಉತ್ತಮ ಎಂದು ಕಾನೂನು ಸಚಿವ ಅರ್ಜುನ್ ಮೇಫ್ಲಾಲ್ ಹೇಳಿದರು.

ಒಂದು ದೇಶ ಒಂದು ಚುನಾವಣೆ ಮಸೂದೆ ಮಂಗಳವಾರ ಲೋಕಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮತ್ತು ಇಂಡಿಯಾ ಬ್ಲಾಕ್ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಬೆಂಬಲಿಸಿದರೆ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ ಹಲವು ವಿರೋಧ ಪಕ್ಷಗಳು ಅದನ್ನು ವಿರೋಧಿಸಿವೆ.

ಒಟ್ಟು 32 ಪಕ್ಷಗಳು ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಬೆಂಬಲ ನೀಡಿದರೆ, 15 ಪಕ್ಷಗಳು ವಿರೋಧಿಸುತ್ತಿವೆ. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿಯಂತಹ ಸ್ವತಂತ್ರ ಚಿಂತನೆಯ ಪಕ್ಷಗಳು ಕೂಡ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಸಕ್ರಿಯಗೊಳಿಸುವ ಶಾಸನವನ್ನು ಬೆಂಬಲಿಸಿರುವುದು ಗಮನಸೆಳೆದಿದೆ.

ಇದನ್ನೂ ನೋಡಿ : ಒಂದು ದೇಶ ಒಂದು ಚುನಾವಣೆ ಸರ್ವಾಧಿಕಾರಕ್ಕೆ ಮುನ್ನುಡಿಯೇ? – ಕೃಷ್ಣ ಪ್ರಸಾದ್ Janashakthi Media

Donate Janashakthi Media

Leave a Reply

Your email address will not be published. Required fields are marked *