ನವದೆಹಲಿ: ಭಾರತೀಯ ಚುನಾವಣಾ ಆಯೋಗವು ದೇಶೀಯ ವಲಸಿಗರು, ವಲಸೆ ಕಾರ್ಮಿಕರು ಅವರು ಇರುವ ಸ್ಥಳಗಳಲ್ಲೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವ ಮಾಡಿಕೊಡುವ ನಿಟ್ಟಿನಲ್ಲಿ ರಿಮೋಟ್ ವಿದ್ಯುನ್ಮಾನ ಮತಯಂತ್ರ(ಆರ್‌ವಿಎಂ)ವನ್ನು ಅಭಿವೃದ್ಧಿಪಡಿಸಿದೆ.
ಚುನಾವಣಾ ಆಯೋಗದ ಈ ಹೊಸ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಲು ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ಕೋರಿದೆ. ಆಯೋಗದ ಪ್ರಕಾರ ಪ್ರೋಟೋಟೈಪ್ ಆರ್‌ವಿಎಂ ಒಂದು ರಿಮೋಟ್ ಮತಗಟ್ಟೆಯಿಂದ ಹೆಚ್ಚಿನ ಮತ ಕ್ಷೇತ್ರಗಳನ್ನು ನಿಭಾಯಿಸಲಿದೆ. ಸಾರ್ವಜನಿಕ ವಲಯದ ಉದ್ಯಮದಿಂದ ಅಭಿವೃದ್ಧಿಪಡಿಸಲಾಗಿರುವ ರಿಮೋಟ್ ವಿದ್ಯುನ್ಮಾನ ಮತಪೆಟ್ಟಿಗೆ ಇದಾಗಿದ್ದು, ಒಂದೇ ಮತಗಟ್ಟೆಯಿಂದ 72 ಕ್ಷೇತ್ರಗಳನ್ನು ನಿರ್ವಹಿಸಬಹುದಾಗಿದೆ.
ಇದನ್ನು ಓದಿ: ಆಗಬೇಕಿದೆ ಚುನಾವಣಾ ಆಯೋಗದ್ದೇ ಸುಧಾರಣೆ
2019ರ ಸಾರ್ವತ್ರಿಕ ಚುನಾವಣೆಯಲ್ಲಿ 67.4ರಷ್ಟು ಮತದಾನವಾಗಿದೆ ಮತ್ತು 30 ಕೋಟಿಗೂ ಹೆಚ್ಚಿನ ಮಂದಿ ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಈ ವಿಚಾರವಾಗಿ ಮತ್ತು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಭಿನ್ನ ಮತದಾನದ ಪ್ರಕ್ರಿಯೆಗಳ ಬಗ್ಗೆ ಚುನಾವಣಾ ಆಯೋಗ ಕಳವಳ ವ್ಯಕ್ತಪಡಿಸಿತು.
ವಲಸಿಗರು ತಮ್ಮ ಕಾರ್ಯಕ್ಷೇತ್ರದ ಹೊಸ ವಾಸಸ್ಥಳದಲ್ಲಿ ನೋಂದಾಯಿಸಲು ಆಯ್ಕೆ ಮಾಡದಿರಲು ಹಲವು ಕಾರಣಗಳಿದ್ದು ಮತದಾನದ ಹಕ್ಕನ್ನು ಚಲಾಯಿಸುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಆಂತರಿಕ ವಲಸೆಯಿಂದಾಗಿ ಮತ ಚಲಾಯಿಸಲು ಅಸಮರ್ಥತೆಯು ಮತದಾನದ ಪ್ರಮಾಣ ಸುಧಾರಿಸಲು ಮತ್ತು ಭಾಗವಹಿಸುವ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ತಿಳಿಸಬೇಕಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಈ ವ್ಯವಸ್ಥೆಯಿಂದಾಗಿ ವಲಸಿಗರು, ಮತದಾನ ಮಾಡಲು ತಮ್ಮ ಊರಿಗೆ ಹೋಗಬೇಕಾಗಿಲ್ಲ ಎಂದು ತಿಳಿಸಿರುವ ಕೇಂದ್ರ ಚುನಾವಣಾ ಆಯೋಗ, ರಿಮೋಟ್ ವಿದ್ಯುನ್ಮಾನ ಮತಯಂತ್ರ ಪ್ರಕ್ರಿಯೆಯಲ್ಲಿ ಕಾನೂನು, ಕಾರ್ಯಾಚರಣೆ, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ ಅಭಿಪ್ರಾಯಗಳನ್ನು ಮುಂದಿಡಲು ರಾಜಕೀಯ ಪಕ್ಷಗಳನ್ನು ಕೇಳಿದೆ. ಈ ಸಂಬಂಧ ಜನವರಿ 16ರಂದು ಇದರ ಪ್ರದರ್ಶನಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಆಹ್ವಾನಿಸಿದೆ.
ಇದನ್ನು ಓದಿ: ಚುನಾವಣೆ ವೇಳೆ ‘ಉಚಿತ ವಸ್ತುಗಳ ಆಶ್ವಾಸನೆ: ಕೇಂದ್ರ-ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರೊಂದಿಗೆ ಸಮಯ-ಪರೀಕ್ಷಿತ ಮಾದರಿಯ ಎಂ3 ವಿದ್ಯುನ್ಮಾನ ಮತಯಂತ್ರ ಪೆಟ್ಟಿಗೆಗಳ ಮಾರ್ಪಡಿಸಿದ ಹೊಸ ವಿಧಾನದಲ್ಲಿ ದೇಶೀಯ ವಲಸಿಗರಿಗೆ ತವರು ಕ್ಷೇತ್ರದ ಹೊರಗಿನ ಮತದಾನ ಕೇಂದ್ರಗಳನ್ನು ಒಳಗೊಂಡಿರುವ ದೂರದ ಮತಗಟ್ಟೆಗಳಲ್ಲಿ ಮತದಾನವನ್ನು ಬಳಸುವ ವಿಧಾನವನ್ನು ಅನ್ವೇಷಿಸಿತು.
ವಲಸೆ ಕಾರ್ಮಿಕರ ಸವಾಲುಗಳು, ಮಾದರಿ ನೀತಿ ಸಂಹಿತೆ ಜಾರಿ, ಮತದಾನದ ಗೌಪ್ಯತೆಯನ್ನು ಖಾತ್ರಿಪಡಿಸುವುದು, ಮತದಾರರನ್ನು ಗುರುತಿಸಲು ಮತಕೇಂದ್ರ ಏಜೆಂಟರುಗಳ ಸೌಲಭ್ಯ, ರಿಮೋಟ್ ಮತದಾನ ಮತ್ತು ಮತಗಳ ಎಣಿಕೆಯ ಪ್ರಕ್ರಿಯೆ ಮತ್ತು ಮತಗಳ ಎಣಿಕೆ ಸೇರಿದಂತೆ ಇತರ ಸಮಸ್ಯೆ ಎತ್ತಿ ತೋರಿಸುವ ಪರಿಕಲ್ಪನೆಯ ಟಿಪ್ಪಣಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ