ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡರನ್ನು, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬಂಧಿಸದಂತೆ ಹೈಕೋರ್ಟ್ ಆದೇಶಿಸಿದೆ.ಅಶ್ಲೀಲ
ಪ್ರಕರಣದಲ್ಲಿ ಪ್ರೀತಂ ಗೌಡರನ್ನು ಬಂಧಿಸದಂತೆ ಕೋರ್ಟ್ ಆದೇಶ ನೀಡಿ ವಿಶೇಷ ತನಿಖಾ ತಂಡದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ಮೂಲಕ ಬಂಧನದ ಭೀತಿಯಿಂದ ಸದ್ಯ ಪ್ರೀತಂ ಹೊರಬಂದಿದ್ದಾರೆ.
ಇದನ್ನು ಓದಿ : ಕಲಾಪದ ಮಧ್ಯೆ ಕುಸಿದುಬಿದ್ದ ಕಾಂಗ್ರೆಸ್ ಸಂಸದೆ
ಈ ಪ್ರಕರಣದಲ್ಲಿ ಸಂತ್ರಸ್ತೆಯ ವಿಡಿಯೋ ಹಂಚಿಕೆ ಆರೋಪದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ, ಸೇರಿದಂತೆ ಇತರ ಮೂವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಪ್ರೀತಂ ಗೌಡ ವಿರುದ್ಧ ಪೆನ್‌ಡ್ರೈವ್ ಹಂಚಿಕೆ ಆರೋಪ ಕೇಳಿ ಬಂದಿತ್ತು.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋಗಳನ್ನ ಚಿತ್ರೀಕರಿಸಿದ್ದು ಅದನ್ನು ಪ್ರೀತಂಗೌಡ ಶೇರ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಪ್ರೀತಂಗೌಡ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಪ್ರೀತಂಗೌಡ ಇಬ್ಬರ ಆಪ್ತರನ್ನು ಈ ಹಿಂದೆ ಎಸ್‌ಐಟಿ ಬಂಧಿಸಿತ್ತು. ಎಸ್‌ಐಟಿ ತನ್ನನ್ನು ಬಂಧಿಸದಂತೆ ಪ್ರೀತಂ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ಅದರಂತೆಯೇ ಇಂದು ಪ್ರೀತಂರನ್ನು ಬಂಧಿಸದಂತೆ ಆದೇಶ ಹೊರಡಿಸಿದೆ. ಅಶ್ಲೀಲ
ಇದನ್ನು ನೋಡಿ : ಅಕಾಡೆಮಿಗಳ ಮೇಲೆ ರಾಜಕಾರಣದ ಕರಿ ನೆರಳು! Janashakthi Media