ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ . ರೇವಣ್ಣಗೆ ಮಂಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಈಗಾಗಲೇ ಷರತ್ತುಬದ್ಧ ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಿರುವ ಹೆಚ್.ಡಿ . ರೇವಣ್ಣಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ನಾಳೆ ಮಧ್ಯಾಹ್ನ 3 ರವರೆಗೆ ಮಧ್ಯಂತರ ಜಾಮೀನು ನೀಡಿದೆ.
ಇದನ್ನು ಓದಿ : ಪೆನ್ಡ್ರೈವ್ ಲೈಂಗಿಕ ಹಗರಣ ಕುರಿತು ರಾಜ್ಯಮಟ್ಟದ ಸಮಾಲೋಚನಾ ಸಭೆ
ಕಿಡ್ನ್ಯಾಪ್ ಕೇಸಿನಿಂದ ಜಾಮೀನು ಪಡೆದ ಬಳಿಕ ಲೈಂಗಿಕ ದೌರ್ಜನ್ಯ ಕೇಸ್ನಿಂದ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಪರ ಎಸ್‌ಪಿಪಿ ಜಾಯ್ನಾ ಕೊಠಾರಿ ಜಾಮೀನು ನೀಡದಂತೆ ವಾದ ಮಂಡಿಸಿದರಾದರೂ, ರೇವಣ್ಣ ಪರ ವಕೀಲ ಅರುಣ್ ಪ್ರತಿವಾದಿಸಿದರು.
ಈ ಕೇಸ್ನಲ್ಲಿ ರೇವಣ್ಣ ಕಸ್ಟಡಿಗೆ ನೀಡಲು ಎಸ್ಐಟಿ ಮನವಿ ಮಾಡಿತ್ತು. ಪ್ರಕರಣದಲ್ಲಿ ರೇವಣ್ಣ A1 ಆರೋಪಿ ಆಗಿದ್ದು, ಇವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ 2ನೇ ಆರೋಪಿ ಎಂದು ಪರಿಗಣಿಸಲಾಗಿದೆ. ಅಶ್ಲೀಲ ವಿಡಿಯೋ ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಪ್ರಜ್ವಲ್ ನಾಪತ್ತೆಯಾಗಿದ್ದಾರೆ.
ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ ಎಂದ ಬಿಜೆಪಿ, ಇದು ಬಿಜೆಪಿ – ಜೆಡಿಎಸ್ ಷಡ್ಯಂತ್ರ ಎಂದ ಡಿಕೆಶಿ