UPS ಜಾರಿ: ರಾಜ್ಯ ಸರ್ಕಾರಗಳಿಗೆ ಆರ್ಥಿಕ ಹೊರೆ

ನವದೆಹಲಿ : ಈ ವರ್ಷ ಅಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು NPS ಸುಧಾರಿತ UPS ಜಾರಿ ಮಾಡುವುದಾಗಿ ಘೋಷಿಸಿದೆ.‌ ಕೇಂದ್ರ ಸರಕಾರದ ಘೋಷಣೆಯನ್ನು ಅನುಸರಿಸಿ ಹಲವು ರಾಜ್ಯ ಸರಕಾರಗಳು ತಮ್ಮ ನೌಕರರಿಗೂ ಕೂಡಾ UPS ಜಾರಿ ಮಾಡಲು ಮುಂದಾಗಿವೆಯೆಂದು ಹೇಳಲಾಗುತ್ತಿದೆ.‌ ಈಗಾಗಲೇ ಮಹಾರಾಷ್ಟ್ರ ರಾಜ್ಯ ಸರಕಾರವು ತನ್ನ ನೌಕರರಿಗೆ UPS ಜಾರಿ ಮಾಡುವುದಾಗಿ ಹೇಳಿ ತನ್ನ ಪ್ರಥಮ ಹೆಜ್ಜೆ ಇರಿಸಿದೆ. ಇನ್ನೂ ಕೆಲವು ರಾಜ್ಯ ಸರಕಾರಗಳು ಕೂಡಾ UPS ವಿಷಯದಲ್ಲಿ ಮಹಾರಾಷ್ಟ್ರದ ಹಾದಿಯನ್ನೇ ತುಳಿಯಲಿವೆ ಎನ್ನಲಾಗುತ್ತಿದೆ.‌ ಸರ್ಕಾರ

UPS ಘೋಷಣೆ ಆಗುವುದಕ್ಕೆ ಮೊದಲೇ ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್ ಸೇರಿದಂತೆ ಹಲವಾರು ರಾಜ್ಯ ಸರಕಾರಗಳು ತಮ್ಮ ರಾಜ್ಯಗಳಲ್ಲಿ ನೌಕರರಿಗೆ NPSಗೆ ಬದಲಾಗಿ ಪುನಃ OPS ಜಾರಿ ಮಾಡುವುದಾಗಿ ಘೋಷಿಸಿದ್ದವು.‌

UPS ಜಾರಿ ಮಾಡುವುದರಿಂದ ರಾಜ್ಯ ಸರ್ಕಾರಗಳ ಮೇಲೆ ಭಾರೀ ಪ್ರಮಾಣದ ಆರ್ಥಿಕ ಹೊರೆ ಬೀಳಲಿದೆ ಎನ್ನುವ ಆತಂಕವೂ ವ್ಯಕ್ತವಾಗಿತ್ತು.‌ ಅದೇ ಊಹೆಯಂತೆ UPS ಜಾರಿ ಮಾಡುವುದರಿಂದ ಆಯಾ ರಾಜ್ಯ ಸರಕಾರಗಳಿಗೆ ಖಂಡಿತವಾಗಿಯೂ ಆರ್ಥಿಕ ಹೊರೆ ಬೀಳಲಿದೆ ಎಂದು PRS ಲೆಜಿಸ್ಲೇಟಿವ್ ಸಂಶೋಧನಾ ವರದಿಯೊಂದು ಸ್ಪಷ್ಟವಾಗಿ ಹೇಳಿದೆ.‌

ಇದನ್ನೂ  ಓದಿ : ನೋಟು ಅಮಾನ್ಯೀಕರಣವೂ ನಕಲಿ ನೋಟು ಹಾವಳಿಯೂ 2016ರಲ್ಲೇ ನಕಲಿ ನೋಟು ಹಾವಳಿಗೆ ಅಂತ್ಯ ಹಾಡಿದರೂ ಇಂದಿಗೂ ಊರ್ಜಿತವಾಗಿರುವುದೇಕೆ?

ಅಂದರೆ, NPS ಅನುಷ್ಠಾನದ ಅವಧಿಯಲ್ಲಿ ನೌಕರರ ವೇತನದ 10% ಕಡಿತ ಮಾಡಿ ರಾಜ್ಯ ಸರಕಾರವು ತನ್ನ ಪಾಲಿನ 14% ಹಣ ಸೇರಿಸಿ ಅದನ್ನು PFRDA ಫಂಡ್ ಮ್ಯಾನೇಜ್ಮೆಂಟ್ ಗೆ ಜಾಮಾ ಮಾಡುತ್ತಿದ್ದವು. ಆದರೆ UPS ಜಾರಿರಿಂದಾಗಿ ಅದು ಜಾರಿ ಆಗುವ ರಾಜ್ಯಗಳಲ್ಲಿ ನೌಕರರ ವೇತನದಲ್ಲಿನ ಕಡಿತ ಯಾವುದೇ ವ್ಯತ್ಯಾಸ ಆಗದೇ ಅದೇ 10% ಇರುತ್ತದೆ. ಆದರೆ ರಾಜ್ಯ ಸರಕಾರಗಳು ತಮ್ಮ ಪಾಲಿನ 14%ಗೆ ಬದಲಾಗಿ 18.5% ಹಣವನ್ನು PFRDA ಫಂಡ್ ಮ್ಯಾನೇಜ್ಮೆಂಟ್ ಗೆ ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ರಾಜ್ಯ ಸರಕಾರಗಳ ಮೇಲೆ ಹೆಚ್ಚುವರಿಯಾಗಿ 4.5% ಆರ್ಥಿಕ ಹೊರೆ ಬೀಳಲಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.‌ NPS ಹಾಗೂ UPSಗಳಲ್ಲಿನಲ್ಲಿ ನೌಕರರಿಗೆ ಅವರ ಸಂಬಳದಲ್ಲಿ 10% ಕಡಿತ ಖಚಿತ.‌ ಆದರೆ ಯಾವುದೇ ರೀತಿಯ ನಿರ್ಧರಿತ ಪಿಂಚಣಿ ಇರುವುದಿಲ್ಲ. UPSನ ಅಡಿಯಲ್ಲಿ ನೌಕರನ ಕೊನೆಯ ಸಂಬಳದ ಮೂಲವೇತನದ 50% ಪಿಂಚಣಿ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, NPS ಅಡಿಯಲ್ಲಿ ನೌಕರರಿಂದ ಸಂಗ್ರಹ ಮಾಡಿದ 10% ಹಾಗೂ ಸರಕಾರದ ಪಾಲು 14% ಹಣವನ್ನು PFRDAಯ ಫಂಡ್ ಮ್ಯಾನೇಜ್ಮೆಂಟ್ ಗೆ ಹಾಕಲಾಗುತ್ತದೆ. UPS ಅಡಿಯಲ್ಲಿ ಕೂಡಾ ನೌಕರರ ಪಾಲಿನ 10% ಹಾಗೂ ಸರಕಾರದ ಪಾಲಿನ 18.5% ಸಂಗ್ರಹಿತ ಹಣವನ್ನು ಕೂಡಾ PFRDA ಫಂಡ್ ಮ್ಯಾನೇಜ್ಮೆಂಟ್ ಗೆ ಹಾಕಲಾಗುತ್ತಿದೆ. ಸರ್ಕಾರ

ಇತ್ತೀಚೆಗೆ ತಾವು ತಮ್ಮ ರಾಜ್ಯಗಳಲ್ಲಿ NPSಗೆ ಬದಲಾಗಿ OPS ಮರು ಜಾರಿ ಮಾಡುತ್ತೇವೆ ಈ ಸಂಬಂಧ ನಮ್ಮ ರಾಜ್ಯದಿಂದ ಸಂಗ್ರಹ ಮಾಡಿ ಕಳುಹಿಸಿರುವ ಹಣ ತಮಗೆ ಕೊಡುವಂತೆ ಕೆಲ ರಾಜ್ಯಗಳು ಕೇಂದ್ರ ಸರಕಾರವನ್ನು ಕೇಳಿದಾಗ ಆ ಹಣ ನಮ್ಮಲ್ಲಿ ಇಲ್ಲವೆಂದು ಕೇಂದ್ರ ಸರಕಾರ ಹೇಳಿದೆ. PFRDA ಫಂಡ್ ಮ್ಯಾನೇಜ್ಮೆಂಟನ್ನು ಕೇಳಿದಾಗ ಹಾಗೆ ಆ ಹಣ ತಮ್ಮಲ್ಲಿಯೂ ಇಲ್ಲವೆಂದು PFEDA ಫಂಡ್ ಮ್ಯಾನೇಜ್ಮೆಂಟ್ ಹೇಳಿದೆ. ಅಲ್ಲದೇ ಹಾಗೆ ಸಂಗ್ರಹವಾದ ಹಣವನ್ನು ತಾವು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ್ದೇವೆ ಅದನ್ನು ಕೊಡಲು ಬರುವುದಿಲ್ಲ ಎಂದು ಹೇಳಿದೆ.‌

ಹೀಗಿರುವಾಗ PFRDA ಕಾಯಿದೆಯ 12ನೇ ಅಧ್ಯಾಯದ F ಅಂಶದಲ್ಲಿ ಪ್ರಸ್ತಾಪಿಸಿರುವ “Benefit based only on market (Share market) fluctuation” ಎಂಬುದನ್ನು ಎಲ್ಲಾ NPS/UPS/OPS ನೌಕರರೂ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು, ಯೋಚಿಸಿ ಹೋರಾಟದ ಹಾದಿ ತುಳಿಯಲು ಇದು ಸಕಾಲ. ಸರ್ಕಾರ

ಯಾವುದೇ ರಾಜ್ಯ ಸರಕಾರವೂ ಸ್ವತಂತ್ರವಾಗಿ NPS ರದ್ದುಮಾಡಲು ಬರುವುದಿಲ್ಲ. ರಾಜ್ಯ ಸರಕಾರಗಳೇ “NPS ರದ್ದು ಮಾಡಲು ಬರುತ್ತದೆ ಎನ್ನುವುದು ಭ್ರಮೆ ಮಾತ್ರ”. ಭ್ರಮೆಯ ಗುಳ್ಳೆಯ ಒಡೆದು ನೌಕರರು ಹೊರ ಬರಬೇಕಾಗಿದೆ.‌

ಹಾಗಾಗಿ ರಾಜ್ಯಗಳಲ್ಲಿ NPS ರದ್ದತಿಗೆ ಆಗ್ರಹಿಸುವುದಕ್ಕಿಂತ, ಕೇಂದ್ರ ಸರಕಾರವೇ PFRDA ಕಾಯಿದೆ ರದ್ದತಿ ಮಾಡಲು ಅಗ್ರಹಿಸಿ ದಿಟ್ಟ ಹೋರಾಟಗಳು ಆಗಬೇಕಾದ ಅಗತ್ಯವಿದೆ.‌ ಸರ್ಕಾರ

PFRDA ಕಾಯಿದೆ ರದ್ದತಿ ಮೂಲಕ NPS ರದ್ದು ಮಾಡಬೇಕೆಂದು ಹೋರಾಡುವ ನೌಕರರ ಒಕ್ಕೂಟಗಳ ಜೊತೆ ದೇಶದ ಹಾಗೂ ಎಲ್ಲ ರಾಜ್ಯಗಳ ಸರಕಾರಿ ನೌಕರರು ಹಾಗೂ ಕೇಂದ್ರ ಸರಕಾರಿ ನೌಕರರು ಜೊತೆಯಾಗಿ ನಿಂತು ಹೋರಾಡಬೇಕಾದುದು ಇಂದಿನ ತುರ್ತು ಕೆಲಸ ಎಂದು ಸರ್ಕಾರಿ ನೌಕರರ ಒಕ್ಕೂಟದ ಮುಖಂಡ ರಂಗನಾಥ್ ಹವಲ್ದಾರ್ ತಿಳಿಸಿದ್ದಾರೆ.ಸರ್ಕಾರ

ಇದನ್ನೂ ನೋಡಿ : ಶೈಲಜಾ ಟೀಚರ್‌ ಆತ್ಮಕತೆ ಅನುವಾದಿಸುವಾಗ ಅವರೊಟ್ಟಿಗೆ ಹೆಜ್ಜೆ ಹಾಕಿದ ಅನುಭವವಾಯಿತು Janashakthi Media

Donate Janashakthi Media

Leave a Reply

Your email address will not be published. Required fields are marked *