ನ.3ಕ್ಕೆ ಆರ್.ಆರ್.ನಗರ, ಶಿರಾ ಉಪಚುನಾವಣೆ

– ಅ.28ಕ್ಕೆ 4 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ

ನವದೆಹಲಿ: ಜೆಡಿಎಸ್ ಸದಸ್ಯ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ತುಮಕೂರು ಜಿಲ್ಲೆಯ ಶಿರಾ ಮತ್ತು ಆಪರೇಷನ್ ಕಮಲಕ್ಕೆ ಒಳಗಾಗಿ ಮುನಿರತ್ನ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರಗಳಿಗೆ ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರ ಸೇರಿದಂತೆ ದೇಶಾದ್ಯಂತ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದ್ದು, ನವೆಂಬರ್ 3ಕ್ಕೆ ಮತದಾನ ಆಗಲಿದೆ. ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ನವೆಂಬರ್ 10ರಂದೇ ಈ ಉಪಚುನಾವಣೆಗಳ ಫಲಿತಾಂಶವೂ ಪ್ರಕಟವಾಗಲಿದೆ.

ಆರ್.ಆರ್. ನಗರ, ಶಿರಾ ಉಪಚುನಾವಣೆಗಳ ದಿನಾಂಕ

ನಾಮಪತ್ರ ಸಲ್ಲಿಕೆ ಆರಂಭ: ಅಕ್ಟೋಬರ್ 9

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 16

ನಾಮಪತ್ರ ಪರಿಶೀಲನೆ: ಅಕ್ಟೋಬರ್ 17

ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಅಕ್ಟೋಬರ್ 19

ಮತದಾನ ದಿನ: ನವೆಂಬರ್ 3

ಮತ ಎಣಿಕೆ: ನವೆಂಬರ್ 10

ರಾಜ್ಯದಲ್ಲಿ ಖಾಲಿ ಇರುವ ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ಈ ಪಟ್ಟಿಗೆ ಸೇರಿಸಿಲ್ಲ. ಸಂಸದ ಸುರೇಶ್ ಅಂಗಡಿ ನಿಧನದ ನಂತರ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೂ ದಿನ ನಿಗದಿಯಾಗಿಲ್ಲ.

ಆರ್.ಆರ್. ನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ವಿರುದ್ಧ ಚುನಾವಣಾ ನೀತಿ ಉಲ್ಲಂಘನೆ ಪ್ರಕರಣ ಇದ್ದರಿಂದ ಕಳೆದ ಬಾರಿಯ ಉಪಚುನಾವಣೆಯಲ್ಲಿ ಆರ್.ಆರ್. ನಗರ ಚುನಾವಣೆ ಇರಲಿಲ್ಲ. ಈಗ ಪ್ರಕರಣ ಹಿಂಪಡೆದಿರುವ ಹಿನ್ನೆಲೆಯಲ್ಲಿ ಉಪಚುನಾವಣೆಗೆ ದಾರಿ ಸಿಕ್ಕಿದೆ. ಇನ್ನು ಶಿರಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಸತ್ಯನಾರಾಯಣ ಅವರು ಆಗಸ್ಟ್ 5ರಂದು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಿದೆ.

ವಿಧಾನಪರಿಷತ್ ಗೆ ಅ.28ಕ್ಕೆ ಚುನಾವಣೆ

ಕರ್ನಾಟಕ ವಿಧಾನ ಪರಿಷತ್​ನಲ್ಲಿ ಮೂರು ತಿಂಗಳಿನಿಂದ ತೆರವಾಗಿರುವ ಎರಡು ಪದವೀಧರ ಹಾಗೂ ಎರಡು ಶಿಕ್ಷಕ ಕ್ಷೇತ್ರಗಳು ಸೇರಿ ನಾಲ್ಕು ಸ್ಥಾನಗಳಿಗೆ ಅಕ್ಟೋಬರ್ 28ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಪರಿಷತ್ ಚುನಾವಣೆಯಲ್ಲಿ ಅಕ್ಟೋಬರ್ 28ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಆರ್. ಚೌಡರೆಡ್ಡಿ ತೂಪಲ್ಲಿ, ಎಸ್.ವಿ. ಸಂಕನೂರ, ಶರಣಪ್ಪ ಮಟ್ಟೂರು ಮತ್ತು ಪುಟ್ಟಣ್ಣ ಅವರ ಅವಧಿ ಇದೇ ಜೂನ್​ಗೆ ಮುಗಿದ ಹಿನ್ನೆಲೆಯಲ್ಲಿ ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ ಕ್ಷೇತ್ರಗಳು ಹಾಗೂ ಈಶಾನ್ಯ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಈಗ ನಿಗದಿಯಾಗಿದೆ.

ಪರಿಷತ್ ಚುನಾವಣೆ ದಿನಾಂಕ

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ: ಅಕ್ಟೋಬರ್ 1ರಿಂದ

ನಾಮಪತ್ರ ಸಲ್ಲಿಕೆಗೆ ಕೊನೆ ದಿನ: ಅಕ್ಟೋಬರ್ 8

ನಾಮಪತ್ರ ಪರಿಶೀಲನೆ: ಅಕ್ಟೋಬರ್ 9

ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಅಕ್ಟೋಬರ್ 12

ಮತದಾನ: ಅಕ್ಟೋಬರ್ 28

ಮತದಾನ ಸಮಯ: ಬೆಳಗ್ಗೆ 8ರಿಂದ ಸಂಜೆ 5ರವರೆಗೆ

ಮತ ಎಣಿಕೆ: ನವೆಂಬರ್ 2

ರಾಜ್ಯದಲ್ಲಿ ಖಾಲಿ ಇರುವ ಮಸ್ಕಿ ವಿಧಾನಸಭಾ ಕ್ಷೇತ್ರವನ್ನು ಈ ಪಟ್ಟಿಗೆ ಸೇರಿಸಿಲ್ಲ. ಸಂಸದ ಸುರೇಶ್ ಅಂಗಡಿ ನಿಧನದ ನಂತರ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೂ ದಿನ ನಿಗದಿಯಾಗಿಲ್ಲ.

ಆರ್.ಆರ್. ನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ವಿರುದ್ಧ ಚುನಾವಣಾ ನೀತಿ ಉಲ್ಲಂಘನೆ ಪ್ರಕರಣ ಇದ್ದರಿಂದ ಕಳೆದ ಬಾರಿಯ ಉಪಚುನಾವಣೆಯಲ್ಲಿ ಆರ್.ಆರ್. ನಗರ ಚುನಾವಣೆ ಇರಲಿಲ್ಲ. ಈಗ ಪ್ರಕರಣ ಹಿಂಪಡೆದಿರುವ ಹಿನ್ನೆಲೆಯಲ್ಲಿ ಉಪಚುನಾವಣೆಗೆ ದಾರಿ ಸಿಕ್ಕಿದೆ. ಇನ್ನು ಶಿರಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಸತ್ಯನಾರಾಯಣ ಅವರು ಆಗಸ್ಟ್ 5ರಂದು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಿದೆ

ಈಗ ದೇಶಾದ್ಯಂತ ಉಪಚುನಾವಣೆ ನಡೆಯುವ 54 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಪ್ರದೇಶ ರಾಜ್ಯವೊಂದರಲ್ಲೇ 28 ಕ್ಷೇತ್ರಗಳಿವೆ. ಗುಜರಾತ್​ನ 8 ಮತ್ತು ಉತ್ತರ ಪ್ರದೇಶದ 7 ಕ್ಷೇತ್ರಗಳಿವೆ.

Donate Janashakthi Media

Leave a Reply

Your email address will not be published. Required fields are marked *