ನವದೆಹಲಿ: ಭಾರತದಲ್ಲಿ ಕೋವಿಡ್ ‘ಕ್ಸಿ’ ರೂಪಾಂತರಿ ಕಂಡುಬಂದಿಲ್ಲವೆಂದು ಸರ್ಕಾರಿ ಮೂಲಗಳು ತಿಳಿಸಿದೆ. ಇದೇ ವೇಳೆ ರೂಪಾಂತರದ ಮೊದಲ ಪ್ರಕರಣವು ಪತ್ತೆಯಾಗಿದೆ ಎಂದು ಮಾಧ್ಯಮಗಳ ವರದಿಗಳನ್ನು ನಿರಾಕರಿಸಿದೆ. ʻಇದು ಕೋವಿಡ್ 19ರ ಕ್ಸಿ ರೂಪಾಂತರವಾಗಿದೆ ಎಂದು ಸೂಚಿಸುವುದಿಲ್ಲ’ ಎಂದು ಹೇಳಿದೆ.
ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹಿಂದಿನ ದಿನದಲ್ಲಿ ಮಾದರಿಗಳ ನಿಯಮಿತ ಪರೀಕ್ಷೆಯ ಆಧಾರದ ಮೇಲೆ ‘ಒಬ್ಬ ರೋಗಿಯು ‘ಕಪ್ಪಾ’ ರೂಪಾಂತರದಿಂದ ಮತ್ತು ಇನ್ನೊಬ್ಬರು ‘ಕ್ಸಿ’ ರೂಪಾಂತರದಿಂದ ಪ್ರಭಾವಿತರಾಗಿದ್ದಾರೆ’ ಎಂದು ಹೇಳಿತ್ತು. ಹೊಸ ರೂಪಾಂತರಿ ವೈರಾಣು ಓಮಿಕ್ರಾನ್‌ನ ಬಿಎ.1 ಮತ್ತು ಬಿಎ.2 ತಳಿಗಳ ಮಿಶ್ರಣದಿಂದ ಹುಟ್ಟಿಕೊಂಡಿರುವ ‘ಕ್ಸಿ’ ಸೋಂಕಿಗೆ ತುತ್ತಾಗಿರುವ ವ್ಯಕ್ತಿ ಪತ್ತೆಯಾಗಿದ್ದಾನೆ ಎಂದು ಎಂದು ಬೃಹತ್ ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಯುಕೆಯಲ್ಲಿ ಹೊಸ ಕೋವಿಡ್ ರೂಪಾಂತರಿತ ʻಕ್ಸಿ’ ಕಂಡುಬಂದಿದೆ ಮತ್ತು ಇದು ಕೋವಿಡ್-19ರ ಬಿಎ.2 ಉಪವರ್ಗಕ್ಕಿಂತ ಹೆಚ್ಚು ಹರಡಬಹುದು ಎಂದು ಹೇಳಿತ್ತು. ಭಾರತದಲ್ಲಿನ ವೈರಾಲಜಿಸ್ಟ್‌ಗಳು ದೇಶದಲ್ಲಿ ಮತ್ತೊಂದು ಕೋವಿಡ್ ತರಂಗವನ್ನು ಉಂಟುಮಾಡುವಷ್ಟು ಪ್ರಬಲವಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ, ಅವರು ಎಚ್ಚರಿಕೆಯನ್ನು ವಹಿಸಲು ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಲು ಸಲಹೆ ನೀಡಿದ್ದಾರೆ.
ಹೊಸ ಕೋವಿಡ್ 19 ವೈರಸ್ ಸೋಂಕುಗಳಿಗೆ ಒಳಗಾಗಿರುವ ರೋಗಿಗಳಲ್ಲಿ ಇದುವರೆಗೂ ಯಾವುದೇ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ಹೈಬ್ರಿಡ್ ತಳಿ ಎನ್ನಲಾಗಿರುವ ಕ್ಸಿ ರೂಪಾಂತರಿ ವೈರಸ್, ಹಿಂದಿನ ಎಲ್ಲ ಕೋವಿಡ್ ತಳಿಗಳಿಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ತಿಳಿಸಿತ್ತು.
‘ಕ್ಸಿ’ ರೂಪಾಂತರಿಯು ಮೊದಲ ಬಾರಿ (ಜ.19ರಂದು) ಪತ್ತೆಯಾಗಿದ್ದು ಸದ್ಯ ಬ್ರಿಟನ್‌ನಲ್ಲಿ ಒಟ್ಟಾರೆ 637 ಮಂದಿ ಕ್ಸಿ ರೂಪಾಂತರಿಯಿಂದ ಬಾಧಿತರಾಗಿದ್ದಾರೆ ಎಂದು ಬ್ರಿಟನ್ ಆರೋಗ್ಯ ಸುರಕ್ಷತೆ ಏಜೆನ್ಸಿ ಹೇಳಿದೆ.
ಓಮಿಕ್ರಾನ್ ತಳಿಯ ಬಿಎ.1 ಮತ್ತು ಬಿಎ.2 ಉಪತಳಿಗಳ ರೂಪಾಂತರವನ್ನು ಗುರುತಿಸಲಾಗಿದ್ದು, ಇದಕ್ಕೆ ಎಕ್ಸ್‌ಇ ವೇರಿಯಂಟ್ ಎಂದು ಹೆಸರಿಡಲಾಗಿತ್ತು. ಎಕ್ಸ್‌ಇ ರೂಪಾಂತರಿಯು ಬಿಎ.2 ತಳಿಗಿಂತಲೂ ಶೇ 9.8ರಷ್ಟು ಹೆಚ್ಚು ಬೆಳವಣಿಗೆ ದರ ಹೊಂದಿದೆ. ಇದಕ್ಕೆ ‘ಗುಪ್ತ ತಳಿ’ ಎಂದೂ ಕರೆಯಲಾಗುತ್ತಿದೆ. ಏಕೆಂದರೆ ಇದು ಪತ್ತೆ ಹಚ್ಚುವ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಯುಕೆ ಆರೋಗ್ಯ ಭದ್ರತಾ ಸಂಸ್ಥೆ(ಯುಕೆಎಚ್‌ಎಸ್‌ಸಿಎ) ತಿಳಿಸಿತ್ತು.
ಆರೋಗ್ಯ ಸಚಿವ ರಾಜೇಶ್ ಟೋಪೆ
ಆರೋಗ್ಯ ಇಲಾಖೆಯ ಹೊಸ ತಳಿ ಪತ್ತೆಯಾಗಿರುವ ಬಗ್ಗೆ ಯಾವುದೇ ದೃಢೀಕರಣವನ್ನು ಸ್ವೀಕರಿಸಿಲ್ಲ. ಆದ್ದರಿಂದ ಎಕ್ಸ್‍ಇ ಪತ್ತೆಯಾಗಿರುವುದು ಕಂಡುಬಂದಿಲ್ಲ. ಮಾಹಿತಿ ಪ್ರಕಾರ ಎಕ್ಸ್‍ಇ ತಳಿಯು ಕೊರೊನಾ ರೂಪಾಂತರಿ ಓಮಿಕ್ರಾನ್‍ಗಿಂತಲೂ ಶೇ.10 ರಷ್ಟು ಹೆಚ್ಚು ಸೋಂಕನ್ನು ಹರಡುತ್ತದೆ. ಹಾಗಾಗಿ ನಾವು ಎನ್‍ಐಬಿ ಯಿಂದ ಮಹಾರಾಷ್ಟ್ರ ವರದಿ ಪಡೆದ ನಂತರ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.