ನವದೆಹಲಿ: ಪ್ರಸ್ತುತ ಲಸಿಕೆ ನೀತಿ ಬಗ್ಗೆ ತೃಪ್ತಿವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಕೋರ್ಟ್, ಸಂಪೂರ್ಣ ನೀತಿಯು ಅಸಮಂಜಸ ಮತ್ತು ಅನಿಯಂತ್ರಿತವಾಗಿದೆ. ಯಾವುದೇ ವ್ಯಕ್ತಿಯನ್ನು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬಲವಂತ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಎನ್.ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠ ಸಾರ್ವಜನಿಕ ಸ್ಥಳಗಳನ್ನು ಬಳಸಲು ಅವಕಾಶ ಸಿಗಬೇಕೆಂದರೆ ಕೊವಿಡ್ ಲಸಿಕೆ ಪಡೆದುಕೊಂಡಿರಲೇಬೇಕು ಎಂಬ ನಿಯಮಗಳನ್ನು ಕೆಲ ರಾಜ್ಯ ಸರ್ಕಾರಗಳು ವಿಧಿಸಿರುವ ಕುರಿತು ವಿಚಾರಣೆ ನಡೆಸಿದರು.
ಇದನ್ನು ಓದಿ: ಕೋವಿಡ್ ಲಸಿಕೆಗೆ ವಿರೋಧ ಎಷ್ಟು ಸರಿ?
ಸುಪ್ರೀಂ ಕೋರ್ಟ್ ಕಾನೂನಿನ ಪ್ರಕಾರ ವ್ಯಕ್ತಿಗತ ಹಕ್ಕುಗಳನ್ನು ನಾವು ಗೌರವಿಸಬೇಕಾಗುತ್ತದೆ. ಲಸಿಕೆ ಪಡೆಯಲೇಬೇಕೆಂದು ಯಾರನ್ನೂ ಒತ್ತಾಯಿಸಲು ಆಗುವುದಿಲ್ಲ. ಸಮುದಾಯ ಆರೋಗ್ಯ ಕಾಪಾಡುವ ಉದ್ದೇಶದಿಂದ ವ್ಯಕ್ತಿಗತ ಹಕ್ಕುಗಳ ಮೇಲೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲು ಅವಕಾಶವಿದೆ ಎಂದು ತಿಳಿಸಿತು.
ಇದೇ ಸಂದರ್ಭದಲ್ಲಿ ಲಸಿಕೆಗಳ ಪ್ರತಿಕೂಲ ಪರಿಣಾಮಗಳ ಕುರಿತು ಜನರು ಮತ್ತು ವೈದ್ಯರಿಂದ ವರದಿಗಳನ್ನು ಸಂಗ್ರಹಿಸಿ, ಕೋವಿಡ್-19 ಲಸಿಕೆಯಿಂದಾಗುವ ಅಡ್ಡ ಪರಿಣಾಮಗಳ ಕುರಿತ ದತ್ತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸೋಂಕಿತರ ಸಂಖ್ಯೆ ಕಡಿಮೆ ಇರುವುದರಿಂದ ವ್ಯಕ್ತಿಗತವಾಗಿ ಯಾವುದೇ ನಿರ್ಬಂಧಗಳನ್ನು ಹೇರುವುದು ಸರಿಯಲ್ಲ. ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು, ಸೇವೆಗಳನ್ನು ಪಡೆಯಲು ಮತ್ತು ಸಂಪನ್ಮೂಲಗಳನ್ನು ಬಳಸುವ ವಿಚಾರದಲ್ಲಿ ಎಲ್ಲ ಸಂದರ್ಭದಲ್ಲಿಯೂ ತಾರತಮ್ಯ ಮಾಡಕೂಡದು. ಒಂದು ವೇಳೆ ಇಂಥ ನಿಯಮಗಳು ಜಾರಿಯಲ್ಲಿದ್ದರೆ ರದ್ದುಪಡಿಸಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದನ್ನು ಓದಿ: ಕೋವಿಡ್ ಲಸಿಕೆಯ ರೋಗನಿರೋಧಕ ಶಕ್ತಿಗೆ ಎಷ್ಟು ದಿನದ ಸಮಯ ಎಂಬ ಆತಂಕಕ್ಕೆ ತೆರೆ ಎಳೆದ ಡಾ. ಸೌಮ್ಯ ಸ್ವಾಮಿನಾಥನ್
ಮಕ್ಕಳಿಗೆ ಲಸಿಕೆ ಹಾಕಿಸುವ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ತಜ್ಞರ ಅಭಿಪ್ರಾಯಕ್ಕೆ ವ್ಯತಿರಿಕ್ತವಾದುದನ್ನು ನಾವು ಹೇಳುವುದಿಲ್ಲ. ಜಾಗತಿಕ ಶಿಷ್ಟಾಚಾರಗಳನ್ನು ನಾವೂ ಅನುಸರಿಸಬೇಕಾಗುತ್ತದೆ. ಆದರೆ ಲಸಿಕೆ ಪಡೆದವರಲ್ಲಿ ಯಾವುದಾದರೂ ತೊಂದರೆ ಕಂಡುಬಂದಿದ್ದರೆ ಆ ಮಾಹಿತಿಯನ್ನು ಸರ್ಕಾರ ಮುಚ್ಚಿಡಬಾರದು ಎಂದು ಹೇಳಿದರು.
ದೇಶದಲ್ಲಿ ಕೋವಿಡ್-19 ಮತ್ತೆ ಏರಿಕೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಮತ್ತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸರ್ಕಾರಗಳು ಮುಂದಾಗಿವೆ. ದೆಹಲಿ ಸೇರಿದಂತೆ ಈಗಾಗಲೇ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಮಾಲ್ ಅಥವಾ ಇನ್ನಿತರ ತಾಣಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯ ಎಂದು ತಿಳಿಸಲಾಗಿದೆ.