ಬೆಂಗಳೂರು: ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಬೇಡ, ಅದರಿಂದ ನಮ್ಮ ಸೈನಿಕರೇ ಸಾಯೋದು ಎಂದು ಮೇ 1 ಗುರುವಾರದಂದು ಮಾಧ್ಯಮಗಳ ಜೊತೆ ಮಾತನಾಡಿದ ನಟಿ ರಮ್ಯಾ, ಹೇಳಿದ್ದಾರೆ.
ಯುದ್ಧ ಮಾಡೋದ್ರಿಂದ ಯಾರೂ ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧನೇ ಉತ್ತರ ಅಲ್ಲ, ಇದರಿಂದ ನಮ್ಮ ಸೈನಿಕರೇ ಸಾಯೋದು. ನಾವು ನಾಯಕರನ್ನು ಎಲೆಕ್ಟ್ ಮಾಡೋದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ. ಇನ್ನೊಂದು ಸಲ ಈ ತರ ನಡೆಯದೇ ಇರೋ ಹಾಗೇ ನೋಡಿಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ದ.ಕ ಪ್ರಥಮ, ಕಲಬುರ್ಗಿ ಲಾಸ್ಟ್, 22 ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ
ಪಹಲ್ಗಾಮ್ ದಾಳಿಗೆ ಗುಪ್ತಚರ ವೈಫಲ್ಯ ಹಾಗೂ ಭದ್ರತಾ ಉಲ್ಲಂಘನೆನೇ ಕಾರಣ. ಉಗ್ರರು ಹೇಗೆ ಒಳಗೆ ಬಂದ್ರು, ಹೀಗೆಲ್ಲಾ ಆಗಲು ಏನು ಕಾರಣ ಅನ್ನೋದನ್ನು ತಿಳಿದುಕೊಳ್ಳಬೇಕು. ಈಗ ಸರ್ಕಾರದವರು ಏನು ಆಯಕ್ಷನ್ ತೆಗೆದುಕೊಳ್ತಾರೆ ಅಂತ ನೋಡಬೇಕು ಎಂದಿದ್ದಾರೆ.
ನರೇಂದ್ರ ಮೋದಿಯವರ ಮುಂದಿನ ನಿರ್ಧಾರ ಏನಿರಬಹುದು ಎಂದು ನಿಜವಾಗಲೂ ಗೊತ್ತಿಲ್ಲ. ನಾವು ಇಲ್ಲಿ ಇದ್ದೀವಿ, ಇದರ ಬಗ್ಗೆ ಕಾಮೆಂಟ್ ಮಾಡೋದು ಸುಲಭ. ಆದರೆ ಅಲ್ಲಿದ್ದವರಿಗೆ ಒಳಗೆ ಏನೆಲ್ಲಾ ರಾಜಕೀಯ ನಡೆಯುತ್ತಿದೆ ಎಂದು ಗೊತ್ತಿರುತ್ತದೆ. ಹಾಗಾಗಿ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು ಎಂದರು.
ಇದನ್ನೂ ನೋಡಿ: ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಯನ್ನು ರದ್ದುಗೊಳಿಸಬೇಡಿ Janashakthi Media