ಅತಿಥಿ ಶಿಕ್ಷಕರ ಅಕ್ರಮ ನೇಮಕ ದಾಖಲೆ ಬಹಿರಂಗಪಡಿಸಿದರೂ ಪ್ರಿನ್ಸಿಪಾಲ್ ಮೇಲೆ ಕ್ರಮವಿಲ್ಲ: SFI ಆಕ್ರೋಶ

ಕೊಪ್ಪಳ: ಅತಿಥಿ ಶಿಕ್ಷಕರ ನೇಮಕಾತಿ ಮಾಡುವಾಗ ಸರಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮ ನೇಮಕಾತಿ ಮಾಡಿದ ಗಂಗಾವತಿ ನಗರದ ಸರಕಾರಿ ಬಾಲಕಿಯರ ಶಾಲೆಯ ತಪಿತಸ್ಥ ಉಪ ಪ್ರಾಚಾರ್ಯರನ್ನು ಅಮಾನತು ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್(SFI) ಕಲ್ಬುರ್ಗಿಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಅಪರ ಆಯುಕ್ತರಿಗೆ ಶನಿವಾರ ಆಗ್ರಹಿಸಿದೆ.ಅತಿಥಿ ಶಿಕ್ಷಕ

ಈ ಬಗ್ಗೆ ಪ್ರತಿಕಾ ಹೇಳಿಕೆ ನೀಡಿರುವ ಎಸ್‌ಎಫ್‌ಐ ರಾಜ್ಯ ಸಮಿತಿಯ ಅಧ್ಯಕ್ಷ ಅಮರೇಶ ಕಡಗದ ಅವರು, 2023 ನವೆಂಬರ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸರಕಾರಿ (MNM) ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಚಾರ್ಯರರು ಅತಿಥಿ ಶಿಕ್ಷಕರ ನೇಮಕಾತಿ ವೇಳೆ ಸರ್ಕಾರಿ ನಿಯಮಗಳ ಉಲ್ಲಂಘನೆ ಮಾಡಿ, ಅಕ್ರಮ ನೇಮಕಾತಿ ಮಾಡಿಕೊಂಡು ಗೌರವಧನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಅತಿಥಿ ಶಿಕ್ಷಕ

ಇದನ್ನೂ ಓದಿ: ಇಸ್ಲಾಂಗೆ ಮತಾಂತರಗೊಂಡವರಿಗೂ ಮೀಸಲಾತಿ ವಿಸ್ತರಣೆ ಬಗ್ಗೆ ಚಿಂತನೆ – ತಮಿಳುನಾಡು ಸಿಎಂ

ಈ ಅಕ್ರಮವನ್ನು ಎಸ್‌ಎಫ್ಐ ದಾಖಲೆ ಸಮೇತ ಬಹಿರಂಗ ಮಾಡಿತ್ತು. ಉಪ ಪ್ರಾಚಾರ್ಯರು B.ED ಓದುತ್ತಿರುವ ವಿದ್ಯಾರ್ಥಿನಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದ SFI ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಿತ್ತು. ಈ ಪ್ರತಿಭಟನೆಯ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ದಾಖಲೆ ಸಹಿತ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಸಲ್ಲಿಸಿದ್ದರು.

ಅದಾಗ್ಯೂ, ಈ ವರದಿ ಸಲ್ಲಿಸಿ 4 ತಿಂಗಳಾದರೂ ಆಪಾದಿತ ಉಪ ಪ್ರಾಚಾರ್ಯರ ಮೇಲೆ DDPI ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್‌ಎಫ್‌ಐ ಹೇಳಿದೆ. “ಉಪ ಪ್ರಾಚಾರ್ಯರಿಂದ ಹಣಪಡೆದು DDPI ಸುಮ್ಮನೆ ಕೂತಿರಬಹುದು” ಎಂದು ಅನುಮಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಇಡಿ ಸಮನ್ಸ್ ಪ್ರಕರಣ | ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅರವಿಂದ್ ಕೇಜ್ರಿವಾಲ್

ಕಲಬುರಗಿ ವಿಭಾಗ ಹಾಗೂ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ, ಈ ಹಿಂದೆ ಶಾಲೆಗೆ ಸಮಯಕ್ಕೆ ಸರಿಯಾಗಿ ಬರದ, ಶಾಲೆಯ ಬಿಸಿಯೂಟದ ತಯಾರಿಗೆ ಕಳೆಪ ತರಕಾರಿ ತಂದಿರುವ ಎಷ್ಟೊ ಮುಖ್ಯ ಶಿಕ್ಷಕರರನ್ನು ಶಿಕ್ಷಣ ಇಲಾಖೆ ಅನೇಕ ಬಾರಿ ಇಲಾಖೆಯಿಂದ ಅಮಾನತ್ತು ಮಾಡಿತ್ತು ಎಂದು ಎಂದು ಉಲ್ಲೇಖಿಸಿರುವ ಎಸ್‌ಎಫ್‌ಐ ಗಂಗಾವತಿ ಪ್ರಕರಣದ ಉಪ ಪ್ರಾಚಾರ್ಯರ ಮೇಲೆ ಕ್ರಮ ಕೈಗೊಳ್ಳದೆ ಇರಲು ಕಾರಣವೇನು ಎಂದು ಪ್ರಶ್ನಿಸಿದೆ.

“ಮಕ್ಕಳಿಗೆ ನೀಡುವ ಹಾಲಿನ ಪೌಡರ್ ಮಾರಾಟ ಮಾಡಿದವರನ್ನು ಅಮಾನತು ಮಾಡಿ ಪ್ರಕರಣ ದಾಖಲು ಮಾಡಿರುವ ಘಟನೆ ನಮ್ಮ ಮುಂದಿದೆ. ಆದರೆ, ಈ ಪ್ರಕಾರಣದಲ್ಲಿ ಕೊಪ್ಪಳ ಜಿಲ್ಲೆಯ DDPI ರವರು ಉಪ ಪ್ರಾಚಾರ್ಯರನ್ನು ರಕ್ಷಣೆ ಮಾಡವು ಉದ್ದೇಶದಿಂದ ವಿಳಂಬ ಮಾಡುತ್ತಿದ್ದಾರೆ” ಎಂದು ಎಸ್‌ಎಫ್‌ಐ ಆರೋಪಿಸಿದೆ. ಹೀಗಾಗಿ ಈ ಪ್ರಕರಣವನ್ನು ಕೂಡಲೇ ಪರಿಶೀಲನೆ ಮಾಡಿ ತಪ್ಪಿತಸ್ಥ ಉಪ ಪ್ರಾಚಾರ್ಯರರನ್ನು ಅಮಾನತ್ತು ಮಾಡಬೇಕು ಎಂದು ಕಲ್ಬುರ್ಗಿಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಅಪರ ಆಯುಕ್ತರಿಗೆ ಒತ್ತಾಯಿಸಿದೆ.

ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *