ಪಾಟ್ನಾ | ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನ.20 ರಂದು ಮತ್ತೆ ಪ್ರಮಾಣವಚನ ಸಾಧ್ಯತೆ

ಪಾಟ್ನಾ: ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿ ರಾಜ್ಯ ಸರ್ಕಾರವನ್ನು ವಿಸರ್ಜಿಸಿದ್ದಾರೆ. ನವೆಂಬರ್ 20 ರಂದು ಅವರು 10 ನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಬೆಂಬಲಿತ ಹೊಸ ಸರ್ಕಾರವನ್ನು ಮುನ್ನಡೆಸಲಿದ್ದಾರೆ.

ಅಧಿಕಾರ ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಲು ಜನತಾದಳ (ಯುನೈಟೆಡ್) ಮತ್ತು ಬಿಜೆಪಿ ನಾಯಕರ ನಡುವಿನ ಬಿರುಸಿನ ಸಭೆಗಳ ನಂತರ ಈ ಬೆಳವಣಿಗೆಗಳು ನಡೆದಿವೆ. ಇತರ ಎನ್‌ಡಿಎ ಪಾಲುದಾರರು ಸಹ ಸಚಿವ ಸ್ಥಾನಗಳಿಗಾಗಿ ಮಾತುಕತೆ ನಡೆಸುತ್ತಿದ್ದಾರೆ.

ಈ ರಾಜೀನಾಮೆಯು 243 ಸದಸ್ಯ ಬಲದ ವಿಧಾನಸಭೆಯಲ್ಲಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಬಹುಮತವನ್ನು ಗಳಿಸಿದ ಎನ್‌ಡಿಎ ಬೆಂಬಲಿತ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ.

ಬಿಜೆಪಿ ಗರಿಷ್ಠ 89 ಸ್ಥಾನಗಳನ್ನು ಗೆದ್ದರೆ, ಜೆಡಿ(ಯು) 85 ಸ್ಥಾನಗಳನ್ನು ಗೆದ್ದಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ(ಆರ್ವಿ) 19 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಇನ್ನೂ ಒಂಬತ್ತು ಸ್ಥಾನಗಳನ್ನು ಸಣ್ಣ ಪಾಲುದಾರರಾದ ಎಚ್ಎಎಂ ಮತ್ತು ಆರ್ಎಲ್ಎಂ ಗೆದ್ದವು.

Donate Janashakthi Media

Leave a Reply

Your email address will not be published. Required fields are marked *